ಸಾರ್ವಜನಿಕರು ಕಡಿಮೆ ಪ್ರಿಮೀಯಂ ಪಾವತಿ ಮಾಡಿ ಹೆಚ್ಚು ಮೊತ್ತದ ವಿಮಾ ಸೌಲಭ್ಯವನ್ನು(Best Accident Insurance Plans) ಪಡೆಯಲು ಈ ಯೋಜನೆಯಲ್ಲಿ ಅವಕಾಶವಿದ್ದು ಒಂದು ವರ್ಷಕ್ಕೆ ₹299 ರೂ ಪ್ರೀಮಿಯಂ ಪಾವತಿ ಮಾಡಿ ₹5 ಲಕ್ಷ ವಿಮಾ ಕವರೇಜ್ ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅರ್ಹರು ಯಾರು? ಇತ್ಯಾದಿ ಮಾಹಿತಿಯನ್ನಿ ಇಲ್ಲಿ ವಿವರಿಸಲಾಗಿದೆ.
ಪುರತನ ಮಾತಿನಂತೆ ವ್ಯಕ್ತಿಯ ಆರೋಗ್ಯವೇ ಅವರ ಸಂಪತ್ತು ಈ ಕಾರಣಕ್ಕಾಗಿ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳನ್ನು(Accident Coverage) ಸರಿದೂಗಿಸಲು ಆರೋಗ್ಯ ವಿಮೆ ಅಗತ್ಯವಾಗಿದೆ ಅನಾರೋಗ್ಯದ ಕಾರಣದಿಂದಾಗಿ ಆದಾಯ ನಷ್ಟವು ಆರ್ಥಿಕ ಮತ್ತು ಭಾವನಾತ್ಮಕ ಒತ್ತಡಕ್ಕೆ ಮತ್ತೊಂದು ಕಾರಣವಾಗುತ್ತದೆ ಎನ್ನಬಹುದು. ನೀವು ಆರೋಗ್ಯ ವಿಮೆಯನ್ನು ಖರೀದಿಸಿದರೆ ನಿಮ್ಮ ವಿಮೆಯು ಯಾವುದೇ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!
ವಿಮೆ ಅಗತ್ಯವಿದೆಯೇ? ವಿಮಾ ಯೋಜನೆ ಏಕೆ ಮಾಡಿಸಬೇಕು? ಆರೋಗ್ಯ ರಕ್ಷಣೆಯು ಪ್ರಸ್ತುತವಾಗಿ ಅತಿಯಾದ ವೆಚ್ಚದಾಯಕವಾಗಿದೆ(Accidental Insurance Policy) ಮುಂಬರುವ ವರ್ಷಗಳಲ್ಲಿ ಅಥವಾ ಮುಂಬರುವ ದಿನಗಳಲ್ಲಿ ತೀವ್ರವಾಗಿ ಆರೋಗ್ಯ ಸಮಸ್ಯೆಗಳು ಎದುರಿಸಬಹುದು. ಖಾಸಗಿ ವೈದ್ಯಕೀಯ ಚಿಕಿತ್ಸೆಯು ಯಾವಾಗಲೂ ದುಬಾರಿ ವೆಚ್ಚದಾಯಕವಾಗಿದ್ದು ಇದರ ನಿಟ್ಟಿನಲ್ಲಿ ಆರೋಗ್ಯ ವಿಮೆಯನ್ನು ಹೊಂದಿರುವುದು ಉತ್ತಮ. ಆಸ್ಪತ್ರೆಯ ಚಿಕಿತ್ಸಾ ವೆಚ್ಚದಿಂದ ನಿಮ್ಮ ಜೀವನ ಮತ್ತು ಹಣಕಾಸಿನಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗುವುದನ್ನು ತಡೆಗಟ್ಟಬಹುದು.
Grama one Insurance plan-ಕಡಿಮೆ ಪ್ರೀಮಿಯಂ ಅನ್ನು ಪಾವತಿಸಿ 5 ಲಕ್ಷದವರೆಗೂ ಕವರೇಜ್ ಇರುವ ಪಾಲಿಸಿಯನ್ನು ಪಡೆಯಿರಿ:
ಆಕ್ಸಿಡೆಂಟ್ ಕೇಸ್ ಪ್ಲಾನ್ ಯೋಜನೆಯಲ್ಲಿ ಗ್ರಾಮ್ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಸಾರ್ವಜನಿಕರು ಈ ಅಪಘಾತ ವಿಮಯ ಸೌಲಭ್ಯವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಈ ಒಂದು ಯೋಜನೆ ಅಡಿಯಲ್ಲಿ ₹599(+ GST)ರೂ ಅನ್ನು ಪಾವತಿಸಿ ₹ 5.00 ಲಕ್ಷಗಳವರೆಗೆ ಅಪಘಾತದ ವಿಮೆಯನ್ನು ಪಡೆಯಬಹುದು.
ಇತ್ತೀಚಿನ ದಿನಗಳಲ್ಲಿ ಯಾವ ಸಮಯದಲ್ಲಿ ಏನಾಗುತ್ತದೆ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ ದ್ವಿಚಕ್ರ ವಾಹನ ಇತರೆ ವಾಹನಗಳಲ್ಲಿ ಓಡಾಡುವವರು ತಪ್ಪದೇ ಈ ವಿಮೆಯನ್ನು ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.
ಇದನ್ನೂ ಓದಿ: Digital Ration Card-ಅಧಿಕೃತ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಅಪ್ಲಿಕೇಶನ್ ಬಿಡುಗಡೆ!
Insurance plan details- ಇನ್ಸೂರೆನ್ಸ್ ಪ್ಲಾನ್ ಡಿಟೇಲ್ಸ್:
ಒಮ್ಮೆ ವಿಮೆಯನ್ನು ಖರೀದಿಸಿದ ನಂತರ ಪ್ರೀಮಿಯಂ ಅನ್ನು ಪಾವತಿ ಮಾಡಿ ಆ ಒಂದು ವರ್ಷದಲ್ಲಿ ಪಾಲಿಸಿದಾರರು ಅಪಘಾತದಿಂದ ಆಸ್ಪತ್ರೆಗೆ ದಾಖಲಾದರೆ ದಿನಕ್ಕೆ 500 ರೂ ಗಳಂತೆ ಒಂದು ವರ್ಷಕ್ಕೆ 30 ದಿನಗಳ ವರೆಗೂ ಅಂದರೆ ಕೇವಲ 30 ದಿನಕ್ಕೆ ಮಾತ್ರ ಹಣವನ್ನು ಪಾವತಿಸಲಾಗುತ್ತದೆ.
ಪಾಲಿಸಿದಾರ ಅಪಘಾತದಿಂದ ಮರಣ ಹೊಂದಿದರೆ ಅಥವಾ ಅಂಗವಿಕಲ ವೈಫಲ್ಯಕ್ಕೆ ತುತ್ತಾದರೆ ₹ 5.00 ಲಕ್ಷಗಳವರೆಗೆ ವಿಮೆಯನ್ನು ಪಡೆಯಬಹುದು ಹಾಗೂ ಆರೋಗ್ಯ ತೊಂದರೆ ಕುರಿತು ವೈದ್ಯರೊಂದಿಗೆ ಕರೆ(calls) ಮತ್ತು ಚಾಟ್ (chat)ಮೂಲಕ ಸಂಭಾಷಣೆಯನ್ನು ನಡೆಸಲು ಅವಕಾಶವಿರುತ್ತದೆ.
Accidental Insurance Application-ಅರ್ಜಿ ಸಲ್ಲಿಸುವ ವಿಧಾನ?
ಈ ವಿಮೆಯನ್ನು ಖರೀದಿಸಲು ಆಸಕ್ತಿ ಇರುವವರು ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರವನ್ನು ಭೇಟಿ ಮಾಡಿ ಪ್ರೀಮಿಯಂ ಮೊತ್ತವನ್ನು ಪಾವತಿಸಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.
Required documents- ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
1) ಆಧಾರ್ ಕಾರ್ಡ್ ಜೆರಾಕ್ಸ ಪ್ರತಿ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಅರ್ಜಿದಾರರ ಫೋಟೋ
4) ಮೊಬೈಲ್ ಸಂಖ್ಯೆ