ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ವಿಧವಾ ವೇತನ ಯೋಜನೆಯ(Widow Pension Scheme) ಅಡಿಯಲ್ಲಿ ವಿಧವೆಯರಿಗೆ ವಿಧವಾ ವೇತನವನ್ನು 2200/- ರೂ ಗೆ ಹೆಚ್ಚಳ ಸರ್ಕಾರವು ಚಿಂತನೆಯನ್ನು ನಡೆಸಿದೆ
ಸರ್ಕಾರದ ಆದೇಶದ ಮೇರೆಗೆ 1ನೇ ಏಪ್ರಿಲ್ 1984 ರಲ್ಲಿ ಜಾರಿಗೆ ತಂದಿರುವ ಇಂದಿರಾ ಗಾಂಧಿ ರಾಷ್ಟ್ರೀಯ ವಿಧವೆ ಪಿಂಚಣಿ ಯೋಜನೆ (IGNWPS) ಅಡಿಯಲ್ಲಿ 18 ರಿಂದ 64 ವರ್ಷ ವಯಸ್ಸಿನಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಈ ವೇತನವನ್ನು ನೀಡಲಾಗುತ್ತದೆ. ಈ ಯೋಜನೆಯು ವಿಧವೆಯವರಿಗೆ ಅವರ ದಿನನಿತ್ಯದ ಜೀವನವನ್ನು ಸುಲಭಗೊಳಿಸಲು ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ(Pension Benefits) ಬದುಕಲು ಮಹತ್ವ ಪೂರ್ಣ ಹೆಜ್ಜೆಯಾಗಿದೆ.
ಇದನ್ನೂ ಓದಿ: Sprinkler set subsidy- ಶೇ 90% ಸಬ್ಸಿಡಿಯಲ್ಲಿ ಕೃಷಿ ಇಲಾಖೆಯಿಂದ ಸ್ಪಿಂಕ್ಲರ್ ಸೆಟ್ ಪಡೆಯಲು ಅರ್ಜಿ ಆಹ್ವಾನ!
ಸರ್ಕಾರವು ವಿಧವಾ ಪಿಂಚಣಿಯ ಮೊತ್ತವನ್ನು 2200/- ರೂ ಗಳಿಗೆ ಏರಿಕೆ ಮಾಡಿದ್ದು, ಪಿಂಚಣಿ ಹೆಚ್ಚಳ ಮಾಡಲು ಕಾರಣವೇನು? ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅವಶ್ಯಕ ದಾಖಲೆಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
How Can Apply- ವಿಧವಾ ವೇತನ ಪಡೆಯಲು ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು?
1. ಪತಿಯು ಮೃತಪಟ್ಟಿರುವ ಮಹಿಳೆಯರು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
2. ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ರೂ. 32,000/- ಕ್ಕಿಂತ ಕಡಿಮೆ ಹೊಂದಿರಬೇಕು.
3. ಪುನರ್ವಿವಾಹವಾಗುವವರೆಗೆ ಸಹ ವಿಧವೆಯ ವಿಧವಾ ವೇತನವನ್ನು ಪಡೆಯಬಹುದು.
4. ಅರ್ಜಿಯನ್ನು ಸಲ್ಲಿಸಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತು ಪತ್ರ ಕಡ್ಡಾಯವಾಗಿರಬೇಕು.
ಇದನ್ನೂ ಓದಿ: B-Khata- ಏನಿದು ಬಿ-ಖಾತಾ! ಬಿ-ಖಾತಾ ಪಡೆಯಲು ಯಾವೆಲ್ಲ ದಾಖಲೆಗಳು ಕಡ್ಡಾಯ!
What are the Documents- ವಿಧವಾ ವೇತನ ಪಡೆಯಲು ಸಲ್ಲಿಸಬೇಕಾದ ಅಗತ್ಯ ದಾಖಲೆಗಳು?
A) ಅರ್ಜಿದಾರರ ಆಧಾರ್ ಕಾರ್ಡ್
B) ವಯಸ್ಸಿನ ದೃಢೀಕರಣ ಪತ್ರ
C) ವಾಸಸ್ಥಳ ದೃಡೀಕರಣ ಪತ್ರ
D) ಬ್ಯಾಂಕ್ ಖಾತೆ ವಿವರಗಳು
E) ವಿಧವಾ ಪಿಂಚಣಿ ಅರ್ಜಿ ಫಾರ್ಮ್
F) ಪೋಟೊ

Where to apply for widow pension- ವಿಧವಾ ವೇತನ ಪಡೆಯಲು ಅರ್ಜಿಯನ್ನುಎಲ್ಲಿ ಸಲ್ಲಿಸಬೇಕು?
ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಸಮೀಪದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಮತ್ತು ನಿಮ್ಮ ಗ್ರಾಮ ಲೆಕ್ಕಾಧಿಕಾರಿ/ಗ್ರಾಮ ಆಡಳಿತಾಧಿಕಾರಿ ಕಚೇರಿಯಲ್ಲಿಯೂ ಸಹ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: Postal Recruitment 2025- ಅಂಚೆ ಇಲಾಖೆಯಿಂದ 21,413 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!
How to apply for widow pension- ವಿವಿಧ ಬಗ್ಗೆಯ ಪಿಂಚಣಿಯನ್ನು ಪಡೆಯಲು ಅರ್ಹರಿರುವ ಫಲಾನುಭವಿ ಪಟ್ಟಿಯನ್ನು ಪಡೆಯುವ ವಿಧಾನ:
ಹಂತ-1: ಮೊದಲು ಈ ಲಿಂಕ್ Pension Beneficiary List ಮೇಲೆ ಕ್ಲಿಕ್ ಮಾಡಿ ಅಧಿಕೃತ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ವೆಬೈಟ್ ಗೆ ಭೇಟಿ ಮಾಡಬೇಕು.
ಹಂತ-2: ನಂತರ ಇಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು ಪ್ರದೇಶ- ಗ್ರಾಮೀಣ/ನಗರ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ನಿಮ್ಮ ಹೋಬಳಿ ಹಾಗೂ ಹಳ್ಳಿಯ ಹೆಸರನ್ನು ಸೆಲೆಕ್ಟ್ ಮಾಡಬೇಕು.
ಇದನ್ನೂ ಓದಿ: Krushi Honda – ಶೇ 80% ರಷ್ಟು ಸಹಾಯಧನದಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ!
ಹಂತ-3: ಪ್ರದೇಶದ ವಿವರ ಆಯ್ಕೆ ಮಾಡಿಕೊಂಡ ಬಳಿಕ ಕ್ಯಾಪ್ಚರ್ ಕೋಡ್ ಕಾಣಿಸುತ್ತದೆ ಇದನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ವಿವಿಧ ಯೋಜನೆಯಡಿ ಪಿಂಚಣಿಯನ್ನು ಪಡೆಯಲು ಅರ್ಹರಿರುವ ಫಲಾನುಭವಿಗಳ ಪಟ್ಟಿ ತೋರಿಸುತ್ತದೆ.
ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ: Click Here
ಇದನ್ನೂ ಓದಿ: Life Insurance Plan – ₹20 ರೂ ಪಾವತಿ ಮಾಡಿ 2 ಲಕ್ಷ ವಿಮೆ ಪಡೆಯಿರಿ!