Wednesday, July 2, 2025
No menu items!
HomeAgricultureಯುಪಿಎಸ್‌ಸಿ ಎನ್‌ಡಿಎ, ಎನ್‌ಎ ನೋಟಿಪಿಕೆಶನ್ : ಪಿಯುಸಿ ಪಾಸಾದವರಿಗೆ ರಕ್ಷಣಾ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗಾವಕಾಶ

ಯುಪಿಎಸ್‌ಸಿ ಎನ್‌ಡಿಎ, ಎನ್‌ಎ ನೋಟಿಪಿಕೆಶನ್ : ಪಿಯುಸಿ ಪಾಸಾದವರಿಗೆ ರಕ್ಷಣಾ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗಾವಕಾಶ

ಯುಪಿಎಸ್‌ಸಿ ಜಾಬ್ಸ್‌2024: ರಕ್ಷಣಾ ಇಲಾಖೆಯ ಉದ್ಯೋಗಕ್ಕೆ ಸೇರುವ ಆಸೆ ನಿಮಗಿದೆಯೇ.. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿದವರಿಗೆ ಭರ್ಜರಿ ಜಾಬ್ ಆಫರ್‌‌ ಇಲ್ಲಿದೆ. ಯುಪಿಎಸ್‌ಸಿ ಎನ್‌ಡಿಎ, ಎನ್‌ಎ ಅಕಾಡೆಮಿಗಳಿಗೆ ಸೇರುವವರು ಈಗ ಅರ್ಜಿ ಸಲ್ಲಿಸಬಹುದು.

ಹೆಡ್ಡಿಂಗ್ಸ್
⦁ ಎನ್‌ಡಿಎ, ಎನ್‌ಎ ಜಾಬ್ಸ್‌ನೋಟಿಪಿಕೆಶನ್ ಪ್ರಕಟಿಸಲಾಗಿದೆ.
⦁ ಯುಪಿಎಸ್‌ಸಿ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ.
⦁ ಒಟ್ಟು 400 ಅಭ್ಯರ್ಥಿಗಳ ಆಯ್ಕೆಗೆ ನೇಮಕ ಪ್ರಕ್ರಿಯೆ.


ಯೂನಿಯನ್ ಪಬ್ಲಿಕ್ ಸರ್ವೀಸ್‌ ಕಮಿಷನ್ ರಕ್ಷಣಾ ಇಲಾಖೆ ಅಧೀನದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ನೇವಿ ಅಕಾಡೆಮಿಗಳ ಹುದ್ದೆಗಳಿಗೆ ಪರೀಕ್ಷಾ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 400 ಅಭ್ಯರ್ಥಿಗಳ ಆಯ್ಕೆಗೆ 2024ರ ಮೊದಲನೇ ಪರೀಕ್ಷಾ ಸೆಷನ್‌ ಮೂಲಕ ಪ್ರಕ್ರಿಯೆ ನಡೆಸಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.


ಪರೀಕ್ಷಾ ಪ್ರಾಧಿಕಾರ : ಕೇಂದ್ರ ಲೋಕಸೇವಾ ಆಯೋಗ
ಎನ್‌ಡಿಎ, ಎನ್‌ಎ ಅಕಾಡೆಮಿಗಳ ಒಟ್ಟು ಹುದ್ದೆ ಸಂಖ್ಯೆ : 400
ಹುದ್ದೆಗಳ ವಿವರ
ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಮಿಲಿಟರಿ) ಹುದ್ದೆಗಳ ಸಂಖ್ಯೆ : 370
ನೌಕಾ ಅಕಾಡೆಮಿ ಹುದ್ದೆಗಳ ಸಂಖ್ಯೆ : 30

ಎನ್‌ಡಿಎ, ಎನ್‌ಎ ಪರೀಕ್ಷೆಗಳಿಗೆ ಅರ್ಜಿ ಹಾಕಲು ವಿದ್ಯಾರ್ಹತೆಗಳು
ನ್ಯಾಷನಲ್ ಡಿಫೆನ್ಸ್‌ ಅಕಾಡೆಮಿ (NDA) : ದ್ವಿತೀಯ ಪಿಯುಸಿ (10+2) ಅನ್ನು ಸ್ಕೂಲ್‌ ಎಜುಕೇಷನ್‌ ಬೋರ್ಡ್‌ ಅಥವಾ ಯಾವುದೇ ರಾಜ್ಯ ಶಿಕ್ಷಣ ಇಲಾಖೆ ಅಥವಾ ವಿವಿ ನಡೆಸುವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ನೇವಲ್ ಅಕಾಡೆಮಿ(NA) : ದ್ವಿತೀಯ ಪಿಯುಸಿ (10+2) ವಿದ್ಯಾರ್ಹತೆಯನ್ನು ವಿಜ್ಞಾನ ವಿಭಾಗದಲ್ಲಿ ಗಣಿತ ಮತ್ತು ಭೌತಶಾಸ್ತ್ರ ವಿಷಯಗಳೊಂದಿಗೆ ಪಾಸ್‌ ಮಾಡಿರಬೇಕು.

ವಯಸ್ಸು ಈ ದಿನಾಂಕದಂತೆರಬೇಕು: ಅಭ್ಯರ್ಥಿಗಳು 2005 ರ ಜುಲೈ 02 ಕ್ಕಿಂತ ಮೊದಲು ಜನಿಸಿರಬಾರದು. ಹಾಗೂ 2008 ರ ಜುಲೈ 01 ರ ನಂತರದಲ್ಲಿ ಜನಿಸಿರಬಾರದು. ಎರಡು ದಿನಾಂಕಗಳನ್ನು ಗಮನಿಸಿಕೊಂಡು, ಅರ್ಜಿ ಸಲ್ಲಿಸಿ.
ಪ್ರಮುಖ ದಿನಾಂಕಗಳು
ಎನ್‌ಡಿಎ, ಎನ್‌ಎ 1, 2024 ಪರೀಕ್ಷೆಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 21-12-2023
ಎನ್‌ಡಿಎ, ಎನ್‌ಎ 1, 2024 ಪರೀಕ್ಷೆ ಅರ್ಜಿಗೆ ಸಲ್ಲಿಸಲು ಕೊನೆಯ ದಿನಾಂಕ: 09-01-2024 ಸಂಜೆ 6 ಗಂಟೆವರೆಗೆ.
ಆಫ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 08-01-2024
ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 09-01-2024 ರ ಸಂಜೆ 6 ಗಂಟೆವರೆಗೆ.
ಅರ್ಜಿ ತಿದ್ದುಪಡಿಗೆ ಅವಕಾಶ : 2024 ರ ಜನವರಿ 10 ರಿಂದ 16 ರ ಸಂಜೆ 6 ಗಂಟೆವರೆಗೆ.
ಎನ್‌ಡಿಎ, ಎನ್‌ಎ 1, 2024 ಪರೀಕ್ಷೆಯ ದಿನಾಂಕ: 21-04-2024

ಎನ್‌ಡಿಎ, ಎನ್‌ಎ ಅಕಾಡೆಮಿಗಳಿಗೆ ಅಭ್ಯರ್ಥಿಗಳ ಆಯ್ಕೆ ವಿಧಾನ ಹೇಗಿರುತ್ತದೆ?
2 ಹಂತದ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ. ಏರ್‌ ಫೋರ್ಸ್‌ ಬೋರ್ಡ್‌ / ನೇವಲ್‌ ಸೆಲೆಕ್ಷನ್ ಬೋರ್ಡ್‌ಗಳು, ಸೈಕಾಲಜಿಕಲ್ ಆಪ್ಟಿಟ್ಯೂಡ್ ಟೆಸ್ಟ್ ಮತ್ತು ಇಂಟೆಲಿಜೆನ್ಸ್ ಟೆಸ್ಟ್‌ ಅನ್ನು ಪರಿಚಯಿಸಿವೆ. ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಈ 2 ಹಂತಗಳ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ. ಎರಡು ಹಂತಗಳ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮೂಲದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು. ನಂತರದಲ್ಲಿ ಎಲ್ಲಾ ಹಂತಗಳಲ್ಲಿ ಅರ್ಹತೆ ಪಡೆದವರನ್ನು ಮೆರಿಟ್‌ ಕಮ್‌ ಮೀಸಲಾತಿ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ ಅಂತಿಮ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಅಜಿ೯ ಶುಲ್ಕ ರೂ.100.
ಶುಲ್ಕವನ್ನು ಎಸ್‌ಬಿಐ ಬ್ಯಾಂಕ್‌ ಚಲನ್‌ ಪಡೆದು ಅಥವಾ ಆನ್‌ಲೈನ್‌ ಮೂಲಕ ಪಾವತಿಸಬಹುದು.

ಕೇಂದ್ರ ಲೋಕಸೇವಾ ಆಯೋಗದಿಂದ ಅಧಿಸೂಚನೆ.
ವೆಬ್‌ಸೈಟ್‌ ವಿಳಾಸ: https://www.upsc.gov.in/
ಉದ್ಯೋಗ : ಸ್ಥಳ ದೆಹಲಿ
ಅಂಚೆ ಸಂಖ್ಯೆ : 110069
ದೇಶ : ಭಾರತ

RELATED ARTICLES
- Advertisment -

Most Popular

Recent Comments