Thursday, December 12, 2024
HomeJobಯುನೈಟೆಡ್‌ ಇಂಡಿಯಾ ಇನ್ಸುರೆನ್ಸ್‌ ಕಂಪನಿ ಅಸಿಸ್ಟಂಟ್‌ ಹುದ್ದೆಗೆ ಅಜಿ೯ ಆಹ್ವಾನಿಸಲಾಗಿದೆ

ಯುನೈಟೆಡ್‌ ಇಂಡಿಯಾ ಇನ್ಸುರೆನ್ಸ್‌ ಕಂಪನಿ ಅಸಿಸ್ಟಂಟ್‌ ಹುದ್ದೆಗೆ ಅಜಿ೯ ಆಹ್ವಾನಿಸಲಾಗಿದೆ

UIIC Assistant Recruitment 2023-24 Notification : 300 ಅಸಿಸ್ಟಂಟ್‌ ಹುದ್ದೆಗಳಿಗೆ ಯುನೈಟೆಡ್‌ ಇಂಡಿಯಾ ಇನ್ಸುರೆನ್ಸ್‌ ಕಂಪನಿ ಲಿಮಿಟೆಡ್‌ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಹುದ್ದೆಗಳ ಅರ್ಜಿಗೆ ಬೇಕಾದ ಮಾಹಿತಿಗಳು ಇಲ್ಲಿವೆ.

ಯುನೈಟೆಡ್‌ ಇಂಡಿಯಾ ಇನ್ಸುರೆನ್ಸ್‌ ಕಂಪನಿ ಲಿಮಿಟೆಡ್‌ ಯಾವುದೇ ಪದವಿ ಪಾಸಾದವರಿಗೆ ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. 300 ಅಸಿಸ್ಟಂಟ್ ಪೋಸ್ಟ್‌ಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ್ದು, ಈ ಶೈಕ್ಷಣಿಕ ಅರ್ಹತೆ ಇರುವವರು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ನೇಮಕಾತಿ ಪ್ರಾಧಿಕಾರ : ಯುನೈಟೆಡ್‌ ಇಂಡಿಯಾ ಇನ್ಸುರೆನ್ಸ್‌ ಕಂಪನಿ ಲಿಮಿಟೆಡ್‌
ಹುದ್ದೆಯ ಹೆಸರು : ಅಸಿಸ್ಟಂಟ್ (ಸಹಾಯಕರು)
ಹುದ್ದೆಗಳ ಸಂಖ್ಯೆ : 300
ವಿದ್ಯಾರ್ಹತೆ : ಯಾವುದೇ ಪದವಿ ಪಾಸ್‌ ಮಾಡಿರಬೇಕು.

ಯುನೈಟೆಡ್‌ ಇಂಡಿಯಾ ಇನ್ಸುರೆನ್ಸ್‌ ಕಂಪನಿ ಲಿಮಿಟೆಡ್‌’ನ ಸಹಾಯಕರ ಹುದ್ದೆಗೆ ವೇತನ ಶ್ರೇಣಿ ರೂ.37,000.

ವಯಸ್ಸಿನ ಅರ್ಹತೆಗಳು
ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಆರಂಭಿಕ ದಿನಾಂಕ : 16-12-2023
ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 06-01-2024
ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್‌ಗೆ ಅವಕಾಶ : ಪರೀಕ್ಷೆಗೆ 10 ದಿನ ಮುಂಚಿತವಾಗಿ.

ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ರೂ.1000.
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.1000.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.250.
ಅಪ್ಲಿಕೇಶನ್‌ ಶುಲ್ಕವನ್ನು ಡೆಬಿಟ್‌ ಕಾರ್ಡ್‌ ಮೂಲಕ ಪಾವತಿ ಮಾಡಬಹುದು.

ಅಜಿ೯ ಸಲ್ಲಿಸುವ ವಿಳಾಸ : https://uiic.co.in/en/home

RELATED ARTICLES
- Advertisment -
Google search engine

Most Popular

Recent Comments