Friday, October 10, 2025
No menu items!
HomeNewsUdyam Certificate-ಬ್ಯಾಂಕ್ ಸಾಲ ಪಡೆಯಲು ಈ ದಾಖಲೆ ಕಡ್ಡಾಯ! ಯಾವುದು ಈ ದಾಖಲೆ ಇಲ್ಲಿದೆ ಮಾಹಿತಿ!

Udyam Certificate-ಬ್ಯಾಂಕ್ ಸಾಲ ಪಡೆಯಲು ಈ ದಾಖಲೆ ಕಡ್ಡಾಯ! ಯಾವುದು ಈ ದಾಖಲೆ ಇಲ್ಲಿದೆ ಮಾಹಿತಿ!

ಪ್ರಸ್ತುತ ಇಂದಿನ ದಿನಗಳಲ್ಲಿ ಸ್ವಂತ ವ್ಯವಹಾರ ಪ್ರಾರಂಭಮಾಡಲು ಹಾಗೂ ಮುಂಚಿತವಾಗಿಯೇ ಉದ್ಯಮವನ್ನು ನೆಡೆಸುತ್ತಿರುವವರು ಸರ್ಕಾರದಿಂದ ಹಲವು ಯೋಜನೆಗಳು ಹಾಗೂ ಸಹಾಯ ಪಡೆಯಲು ಅವಕಾಶವಿದ್ದು, ಈ ಸೌಲಭ್ಯವನ್ನು ಪಡೆಯಲು ಉದ್ಯಮ್ ಸರ್ಟಿಫಿಕೇಟ್ (Udyam Certificate) ಒಂದು ಪ್ರಮುಖ ದಾಖಲೆಯಾಗಿದ್ದು ಇದನ್ನು ಪಡೆಯುವ ವಿಧಾನವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಉದ್ಯಮ್ ಸರ್ಟಿಫಿಕೇಟ್ ಇದನ್ನು MSME ನೋಂದಣಿ ಪ್ರಮಾಣಪತ್ರ(MSME registration benefits)ಎಂದೂ ಸಹ ಕರೆಯುತ್ತಾರೆ. ಇದು ಕೇಂದ್ರ ಸರ್ಕಾರದ ಮೈಕ್ರೋ, ಸ್ಮಾಲ್ ಮತ್ತು ಮೀಡಿಯಂ ಎಂಟರ್‌ಪ್ರೈಸಸ್ (MSME) ಇಲಾಖೆಯಿಂದ ನೀಡಲಾಗುವ ಪ್ರಮಾಣಪತ್ರವಾಗಿದ್ದು, ನಿಮ್ಮ ವ್ಯವಹಾರವನ್ನು ಅಧಿಕೃತವಾಗಿ ಗುರುತಿಸಲು ಸಹಾಯಕವಾಗುತ್ತದೆ.

ಇದನ್ನೂ ಓದಿ: Bharti Airtel Scholarship-ಭಾರ್ತಿ ಏರ್‌ಟೆಲ್ ಫೌಂಡೇಶನ್‌ ಅಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

MSME ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಉದ್ಯಮಿಗಳಿಗೆ ಇದನ್ನು ನೀಡಲಾಗುತ್ತದೆ . ಈ ಪ್ರಮಾಣಪತ್ರವು MSME ಗಳನ್ನು ಬೆಂಬಲಿಸುವ ವಿವಿಧ ಸರ್ಕಾರಿ ಯೋಜನೆಗಳು, ಸಬ್ಸಿಡಿಗಳು ಮತ್ತು ಪ್ರಯೋಜನಗಳನ್ನು ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.

ಈ ಅಂಕಣದಲ್ಲಿ ಅಭ್ಯರ್ಥಿಗಳು ಉದ್ಯಮ್ ಸರ್ಟಿಫಿಕೇಟ್(Udyam Certificate Application) ಅನ್ನು ಪಡೆಯಲು ಯಾರ‍ೆಲ್ಲ ಅರ್ಹರು? ಉದ್ಯಮ್ ಸರ್ಟಿಫಿಕೇಟ್ ಪಡೆಯುವುದರಿಂದ ಅಗುವ ಪ್ರಯೋಜನಗಳೇನು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಇತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Caste Survey 2025-ಮನೆಯಿಂದಲೇ ನಿಮ್ಮ ಮೊಬೈಲ್ ಮೂಲಕವೇ ಜಾತಿಗಣತಿ ಸಮೀಕ್ಷೆ ಮಾಡಲು ಅವಕಾಶ!

Udyam Certificate-ಉದ್ಯಮ್ ನೋಂದಣಿ ಪ್ರಮಾಣಪತ್ರ ಎಂದರೇನು?

MSME ಸಚಿವಾಲಯವು ಭಾರತದಲ್ಲಿ MSME ಗಳಿಗೆ ಉದ್ಯಮ ನೋಂದಣಿ ಪ್ರಮಾಣಪತ್ರ ಎಂದು ಕರೆಯಲ್ಪಡುವ ಇ-ಪ್ರಮಾಣಪತ್ರವನ್ನು ನೀಡುತ್ತದೆ . ಈ ಪ್ರಮಾಣಪತ್ರವು ಒಂದು ಉದ್ಯಮ ಅಥವಾ ವ್ಯವಹಾರವು MSME ವರ್ಗದ ಅಡಿಯಲ್ಲಿ ಬರುತ್ತದೆ ಮತ್ತು ಸರ್ಕಾರದಿಂದ MSME ಗಳಿಗೆ ಒದಗಿಸುವ ಪ್ರಯೋಜನಗಳಿಗೆ ಅರ್ಜಿ ಸಲ್ಲಿಸಲು ಅರ್ಹವಾಗಿದೆ ಎಂಬುದಕ್ಕೆ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ.

ಉದ್ಯಮಿಗಳು ಉದ್ಯಮ ಪೋರ್ಟಲ್ ಮೂಲಕ ಉದ್ಯಮ ನೋಂದಣಿ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದು . ಬ್ಯಾಂಕುಗಳಿಂದ ಸಾಲ ಪಡೆಯಲು ಮತ್ತು MSME ಗಳಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಪ್ರಯೋಜನಗಳನ್ನು ಪಡೆಯಲು ಉದ್ಯಮ ನೋಂದಣಿ ಪ್ರಮಾಣಪತ್ರವು ಅವಶ್ಯಕವಾಗಿದೆ.

ಇದನ್ನೂ ಓದಿ: Azim Premji Foundation-ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ ₹30,000 ಸ್ಕಾಲರ್ಶಿಪ್ ಪಡೆಯಲು ಅರ್ಜಿ!

Documents Required-ಉದ್ಯಮ್ ಸರ್ಟಿಫಿಕೇಟ್ ಪಡೆಯಲು ಅವಶ್ಯಕ ದಾಖಲಾತಿಗಳು?

ಆಧಾರ್ ಕಾರ್ಡ/Aadhar Card

ಬ್ಯಾಂಕ್ ಪಾಸ್ ಬುಕ್/Bank Passbook

ಪೋಟೋ/Photocopy

ಮೊಬೈಲ್ ನಂಬರ್(ಒಟಿಪಿ ಪಡೆಯಲು)Mobile Number

How To Apply-ಉದ್ಯಮ್ ಸರ್ಟಿಫಿಕೇಟ್ ಪಡೆಯಲು ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉದ್ಯಮ್ ಸರ್ಟಿಫಿಕೇಟ್ ಅನ್ನು ಪಡೆಯಲು ಅವಶ್ಯಕವಿರುವ ಅಭ್ಯರ್ಥಿಗಳು ಅವಶ್ಯಕ ದಾಖಲಾತಿಗಳನ್ನು ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ ಅಥವಾ ಕಂಪ್ಯೂಟರ್ ಸೆಂಟರ್ ಗೆ ನೇರವಾಗಿ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Udyogini Scheme-ಸ್ವಂತ ವ್ಯವಹಾರ ಆರಂಭಿಸಲು ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಲು ಅರ್ಜಿ!

Udyam Registration Certificate Sample, Apply Online For Udyog Aadhaar

ಇದನ್ನೂ ಓದಿ: IDFC First Bank Scholarship-IDFC First ಬ್ಯಾಂಕ್ ನಿಂದ ₹1ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಉದ್ಯಮ ನೋಂದಣಿ ಪ್ರಮಾಣಪತ್ರದ ಪ್ರಯೋಜನಗಳಾವುವು?

  • ಭಾರತದಲ್ಲಿ MSME ನೋಂದಣಿ ಮಾಡಿದರೆ ಉದ್ಯಮಿಗಳಿಗೆ ಹಲವು ಲಾಭಗಳು ಸಿಗುತ್ತವೆ. MSME ಆಗಿ ನೋಂದಾಯಿಸಿದ ಬಳಿಕ ಬ್ಯಾಂಕ್ ಸಾಲಗಳನ್ನು ಕಡಿಮೆ ಬಡ್ಡಿದರದಲ್ಲಿ (1%–1.5%) ಪಡೆಯಬಹುದು.
  • ಕನಿಷ್ಠ ಪರ್ಯಾಯ ತೆರಿಗೆ (MAT) ಕ್ರೆಡಿಟ್‌ನ್ನು 10 ವರ್ಷಗಳ ಬದಲು 15 ವರ್ಷಗಳವರೆಗೆ ಮುಂದೂಡಬಹುದು. ಪೇಟೆಂಟ್ ಅಥವಾ ಉದ್ಯಮ ಸ್ಥಾಪನೆಗೆ ಬೇಕಾಗುವ ವೆಚ್ಚವೂ ಕಡಿಮೆಯಾಗುತ್ತದೆ, ಏಕೆಂದರೆ ಸರ್ಕಾರದಿಂದ ವಿವಿಧ ರಿಯಾಯಿತಿಗಳು ಮತ್ತು ಸಬ್ಸಿಡಿಗಳು ಸಿಗುತ್ತವೆ.
  • MSME ನೋಂದಣಿಯು ಸರ್ಕಾರಿ ಇ-ಮಾರುಕಟ್ಟೆ (GeM) ಮತ್ತು ರಾಜ್ಯ ಪೋರ್ಟಲ್‌ಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ, ಸರ್ಕಾರಿ ಟೆಂಡರ್‌ಗಳು ಹಾಗೂ ಇ-ಟೆಂಡರ್‌ಗಳಲ್ಲಿ ಭಾಗವಹಿಸುವುದು ಸುಲಭವಾಗುತ್ತದೆ.
  • ಇದೇ ರೀತಿ MSME ನೋಂದಣಿಯು ವಿಳಂಬಿತ ಪಾವತಿಗಳ ರಕ್ಷಣೆ, ಕ್ರೆಡಿಟ್ ಗ್ಯಾರಂಟಿ ಸ್ಕೀಮ್, ಸಬ್ಸಿಡಿ ಯೋಜನೆಗಳು ಮುಂತಾದ ಹಲವು ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ.
  • MSMEಗಳು ಬ್ಯಾಂಕುಗಳಿಂದ ಆದ್ಯತೆಯ ವಲಯದ ಸಾಲ ಪಡೆಯಲು ಅರ್ಹರಾಗುತ್ತವೆ ಮತ್ತು ಭದ್ರತಾ ಠೇವಣಿ ಮನ್ನಾ ಸೌಲಭ್ಯವೂ ಸಿಗುತ್ತದೆ.
  • ಒಂದೇ ನೋಂದಣಿಯಲ್ಲಿ ಸೇವೆ ಮತ್ತು ಉತ್ಪಾದನೆ ಎರಡನ್ನೂ ಸೇರಿಸಬಹುದು. ಜೊತೆಗೆ ತೆರಿಗೆ ವಿನಾಯಿತಿ ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಮೇಳಗಳಲ್ಲಿ ವಿಶೇಷ ಅವಕಾಶ ಸಹ MSMEಗಳಿಗೆ ಲಭ್ಯ.

ಇದನ್ನೂ ಓದಿ: Solar Power Subsidy-ಸೋಲಾರ್ ಪವರ್ ಜನರೇಟರ್ ಅಳವಡಿಕೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Under which scheme is it necessary-ಯಾವ ಯಾವ ಯೋಜನೆಯ ಸಬ್ಸಿಡಿ ಪಡೆಯಲು ಅವಶ್ಯಕ?

PMFME-ಪ್ರಧಾನ ಮಂತ್ರಿ ಕಿರು ಆಹಾರ ನಿಯಮಬದ್ಧಗೊಳಿಸುವಿಕೆ ಯೋಜನೆ

PMEGP-ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ

NLM-ರಾಷ್ಟ್ರಿಯ ಜಾನುವಾರು ಮಿಷನ್

ರಾಜ್ಯ ಸರಕಾರದಡಿ ಕಾರ್ಯನಿರ್ವಹಿಸುವ ವಿವಿಧ ನಿಗಮಗಳ ಮೂಲಕ ಅನುಷ್ಥಾನ ಮಾಡುವ ಸ್ವಾವಲಂಬಿ ಸಾರಥಿ(Swalambi Sarati Yojane),ಉದ್ಯೋಗಿನಿ ಯೋಜನೆ(Udyogini),ಸ್ವಯಂ ಉದ್ಯೋಗ ನೇರ ಸಾಲ ಯೋಜನೆ(Swayam Udyoga Sala Yojane) ಅಡಿಯಲ್ಲಿ ಸೌಲಭ್ಯ ಪಡೆಯಲು ಈ ದಾಖಲೆ ಅವಶ್ಯಕ.

ಇದನ್ನೂ ಓದಿ: Scholorship Application-DXC ಟೆಕ್ನಾಲಜಿಯ ವತಿಯಿಂದ ₹50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Online Application-ಉದ್ಯಮ್ ಸರ್ಟಿಫಿಕೇಟ್ ಅನ್ನು ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?

Step-1: ಅರ್ಜಿದಾರರು ಮೊದಲಿಗೆ ಈ ಲಿಂಕ್ “Apply Now” ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ID ಮತ್ತು Password ಅನ್ನು ಸಿದ್ದ ಮಾಡಿಕೊಂಡು ಲಾಗಿನ್ ಆಗಬೇಕು.

Step-3: ಲಾಗಿನ್ ಆದ ನಂತರ ಅರ್ಜಿ ನಮೂನೆ ಒಪನ್ ಆಗುತ್ತದೆ. ಬಳಿಕ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ನಿಮ್ಮ ಪೋಟೋ ವನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ ಉದ್ಯಮ್ ಸರ್ಟಿಫಿಕೇಟ್ ಅನ್ನು ಪಡೆಯಬಹುದು.

RELATED ARTICLES
- Advertisment -

Most Popular

Recent Comments