Sunday, June 15, 2025
No menu items!
HomeNewsStudent Scholorship-NMMSS ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Student Scholorship-NMMSS ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ರಾಜ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ!ರಾಜ್ಯದ ಆರ್ಥಿಕವಾಗಿ ಹಿಂದುಳಿದ ಮತ್ತು ಪ್ರತಿಭಾವಂತ(NMMSS Online Application)ವಿದ್ಯಾರ್ಥಿಗಳಿಗೆ 2025-2026 ನೇ ಸಾಲಿನ ರಾಷ್ಟ್ರೀಯ ಮಧ್ಯಮಿಕ ಮಟ್ಟದ ವಿದ್ಯಾರ್ಥಿವೇತನ ಯೋಜನೆ(NMMSS) ವಿದ್ಯಾರ್ಥಿವೇತನಕ್ಕಾಗಿ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯು ನಡೆಸುವ ಯೋಜನೆಯಾಗಿದ್ದು,(Student Scholarship Scheme)ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಮುಂದುವರಿಸಿಕೊಳ್ಳಲು ಪ್ರೇರೇಪಿಸುವ ಉದ್ದೇಶವಾಗಿದೆ. ಪ್ರತಿ ವರ್ಷವೂ ಈ ಯೋಜನೆಯ ಅಡಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ರಷ್ಟು ನಗದು ಸಹಾಯಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Borewell Subsidy-₹4.25 ಲಕ್ಷ ಸಬ್ಸಿಡಿಯಲ್ಲಿ ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ಅರ್ಜಿ!

ಪ್ರಸ್ತುತ ಈ ಲೇಖನದಲ್ಲಿ ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಲು ಯಾರೆಲ್ಲ ವಿದ್ಯಾರ್ಥಿಗಳು ಅರ್ಹರು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ? ಅಗತ್ಯ ದಾಖಲಾತಿಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Information about this scheme-ಈ ಯೋಜನೆಯ ವಿವರಗಳು ಈ ಕೆಳಗಿನಂತಿದೆ:

ರಾಷ್ಟ್ರೀಯ ಪ್ರತಿಭಾ ಶಿಕ್ಷಣ ವಿದ್ಯಾರ್ಥಿವೇತನ ಯೋಜನೆ (NMMSS) ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಜಾರಿಗೊಳಿಸಲಾಗಿದ್ದು,ಇದು ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ಯೋಜನೆಯ ಅಡಿಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಲಾಗುತ್ತದೆ. ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಪ್ರತಿವರ್ಷವೂ ₹12,000 ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.

Uses of this scheme-ವಿದ್ಯಾರ್ಥಿವೇತನದ ಪ್ರಯೋಜನಗಳು:

1) ಆಯ್ಕೆಯಾದ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ 12ನೇ ತರಗತಿಯವರೆಗೆ ಪ್ರತಿ ವರ್ಷವೂ ₹12,000 ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

2) ವ್ಯಾಸಂಗ ಮಾಡುತ್ತಿರುವ ಶಾಲೆಯ ಶಿಕ್ಷಣದ ವೆಚ್ಚವನ್ನು ಭರಿಸಲು ಆರ್ಥಿಕ ನೆರವನ್ನು ನೀಡಲು ಸಹಾಯವಾಗುತ್ತದೆ.

3) ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುತ್ತದೆ.

ಇದನ್ನೂ ಓದಿ: Gruhalakshmi Yojana-ಗೃಹಲಕ್ಷ್ಮಿ 20ನೇ ಕಂತಿನ ಹಣ ಬಿಡುಗಡೆ!ಮೊಬೈಲ್ ನಲ್ಲೇ ಜಮಾ ವಿವರ ತಿಳಿಯಿರಿ!

Information about exam-ವಿದ್ಯಾರ್ಥಿವೇತನ ಪಡೆದುಕೊಳ್ಳಲು ಪರೀಕ್ಷೆಯ ವಿವರಗಳು:

ಪರೀಕ್ಷೆ ದಿನಾಂಕ: ಸೆಪ್ಟೆಂಬರ್ 2025 (ನಿಖರ ದಿನಾಂಕವನ್ನು ಶೀಘ್ರದಲ್ಲಿ ಪ್ರಕಟಿಸಲಾಗುವುದು)

ಪರೀಕ್ಷೆಯ ಸ್ಥಳ: ರಾಜ್ಯದಾದ್ಯಂತ ನಿಗದಿತ ಕೇಂದ್ರಗಳಲ್ಲಿ ಲಭ್ಯವಿರುತ್ತದೆ.

ಪರೀಕ್ಷೆಯ ವಿಷಯಗಳು: ಮಾನಸಿಕ ಸಾಮರ್ಥ್ಯ (MAT) ಮತ್ತು ಶೈಕ್ಷಣಿಕ ಸಾಮರ್ಥ್ಯ (SAT)

Exam Selection Process-ಪರೀಕ್ಷೆಯ ಆಯ್ಕೆ ಪ್ರಕ್ರಿಯೆ:

ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಲು, ವಿದ್ಯಾರ್ಥಿಗಳು ಎರಡು ಹಂತದ ಲಿಖಿತ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು:

ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT): ತಾರ್ಕಿಕ ಚಿಂತನೆ, ವಿಶ್ಲೇಷಣೆ ಮತ್ತು ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ.

ಶೈಕ್ಷಣಿಕ ಸಾಮರ್ಥ್ಯ ಪರೀಕ್ಷೆ (SAT): ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತದಂತಹ ವಿಷಯಗಳಲ್ಲಿ ವಿದ್ಯಾರ್ಥಿಯ ಜ್ಞಾನವನ್ನು ಮೌಲ್ಯಮಾಪನ ಮಾಡುತ್ತದೆ.

ಇದನ್ನೂ ಓದಿ: Car Subsidy- ಕಾರು ಖರೀದಿ ಮಾಡಲು ಶೇ.50% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

Who Can Apply For This Scheme-ವಿದ್ಯಾರ್ಥಿ ವೇತನ ಪಡೆಯಲು ಯಾರೆಲ್ಲ ಅರ್ಹರು:

ಅರ್ಜಿದಾರ ವಿದ್ಯಾರ್ಥಿಯು 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ವಿದ್ಯಾರ್ಥಿಯು 7ನೇ ತರಗತಿಯಲ್ಲಿ ಕನಿಷ್ಠ ಶೇ 55% ಅಂಕಗಳನ್ನು ಪಡೆದಿರಬೇಕು.

SC/ST ವಿದ್ಯಾರ್ಥಿಗಳಿಗೆ ಶೇ 50% ಅಂಕಗಳನ್ನು ಪಡೆದಿರಬೇಕು.

ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹3.5 ಲಕ್ಷ ಮೀರಿರಬಾರದು.

ವಿದ್ಯಾರ್ಥಿಯು ಸರ್ಕಾರಿ, ಸರ್ಕಾರಿ ನೆರವಿನ ಅಥವಾ ಸ್ಥಳೀಯ ಸಂಸ್ಥೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಇದನ್ನೂ ಓದಿ: MSP Price list-2025: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೇಂದ್ರದಿಂದ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!

nmms scholorship

ಇದನ್ನೂ ಓದಿ: Rain Forecast-ರಾಜ್ಯದಲ್ಲಿ ಈ ದಿನದಿಂದ ಮತ್ತೆ ಮುಂಗಾರು ಚುರುಕು ಸಾಧ್ಯತೆ!

Important Dates For Exam-ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ: 15 ಜೂನ್ 2025

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2025

What are the Documents-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು:

ವಿದ್ಯಾರ್ಥಿಯ ಆಧಾರ್ ಕಾರ್ಡ/Aadhar card

ವಿದ್ಯಾರ್ಥಿಯ 7ನೇ ತರಗತಿಯ ಅಂಕಪಟ್ಟಿ/7th marks card

ಆದಾಯ ಪ್ರಮಾಣಪತ್ರ/Income Certificate

ಜಾತಿ ಪ್ರಮಾಣಪತ್ರ ಅಗತ್ಯವಿದ್ದಲ್ಲಿ/Cast Certificate

ಬ್ಯಾಂಕ್ ಪಾಸ್ ಬುಕ್/Bank Passbook

ಶಾಲೆಯಿಂದ ದೃಢೀಕರಣ ಪತ್ರ/School Certificate

ಮೊಬೈಲ್ ನಂಬರ್/Mobile number

ಇದನ್ನೂ ಓದಿ: Free Tailoring Machine-ಉಚಿತ ಟೈಲರಿಂಗ್ ಯಂತ್ರ ಪಡೆಯಲು ಅರ್ಜಿ ಆಹ್ವಾನ!

How To Apply- ವಿದ್ಯಾರ್ಥಿವೇತನ ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿರುವ ವಿಧಾನ:

ವಿದ್ಯಾರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್‌ ಅನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ NSP Portal ಮಾಡಿ ಅಧಿಕೃತ ರಾಷ್ಟ್ರೀಯ ವಿದ್ಯಾರ್ಥಿವೇತನದ(NSP) ಜಾಲತಾಣವನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: Scholorship Application-ಮಿರೇ ಅಸೆಟ್ ಫೌಂಡೇಶನ್ ನಿಂದ ₹50,000 ಸ್ಕಾಲರ್‌ಶಿಪ್ ಪಡೆಯಲು ಅರ್ಜಿ!

scholorship

Step-2: ಬಳಿಕ ಇಲ್ಲಿ ನೋಂದಣಿ ಪುಟ ತೆರೆದುಕೊಳ್ಳುತ್ತದೆ ಈ ಪೇಜ್ ನಲ್ಲಿ Register Yourself ಬಟನ್ ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿಕೊಂಡು ಬಳಿಕ ಬಳಕೆದಾರ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

RELATED ARTICLES
- Advertisment -

Most Popular

Recent Comments