Wednesday, December 11, 2024
HomeNewsSSP scholarship 2024-ವಿದ್ಯಾರ್ಥಿ ವೇತನ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

SSP scholarship 2024-ವಿದ್ಯಾರ್ಥಿ ವೇತನ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವಾಗಲು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಪ್ರತಿ ವರ್ಷವೂ ಸಹ ವಿದ್ಯಾರ್ಥಿ ವೇತನಕ್ಕೆ(SSP scholarship) ಅರ್ಜಿ ಆಹ್ವಾನಿಸಲಾಗುತ್ತದೆ ಈ ವರ್ಷ ಅರ್ಜಿ ಸಲ್ಲಿಸಿದವರು ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ತಪ್ಪದೆ ತಿಳಿಯಿರಿ.

SSP ತಂತ್ರಾಂಶವು ಕರ್ನಾಟಕ ಸರ್ಕಾರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅಭಿವೃದ್ಧಿಪಡಿಸಿರುವ ಡಿಜಿಟಲ್ ವೇದಿಕೆಯಾಗಿದ್ದು ಸರ್ಕಾರದ ವಿವಿಧ ಇಲಾಖೆಗಳ ವಿದ್ಯಾರ್ಥಿ ವೇತನ(scholarship) ಯೋಜನೆಯ ಪ್ರಯೋಜನ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಹಾಕಬಹುದು.

ಇದನ್ನೂ ಓದಿ: Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್!

ಸರ್ಕಾರದಿಂದ ವಿವಿಧ ಇಲಾಖೆಗಳ ಮೂಲಕ ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿದ್ದು, ಈ ಕುರಿತು ಹೊಸದಾಗಿ ಸಮಾಜ ಕಲ್ಯಾಣ ಇಲಾಖೆಯಿಂದ(Department of Social Welfare) ಹೊರಡಿಸಿರುವ ನೂತನ ಪ್ರಕಟಣೆ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

SSP Scholarship e-KYC-ವಿದ್ಯಾರ್ಥಿ ವೇತನವನ್ನು ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ವಿದ್ಯಾರ್ಥಿ ವೇತನವನ್ನು ಪಡೆಯಲು ವಿದ್ಯಾರ್ಥಿಗಳು ತಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ /ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ತಪ್ಪದೇ ಈ ಕೆವೈಸಿಯನ್ನು ಮಾಡಿಕೊಳ್ಳಬೇಕೆಂದು ಸಮಾಜ ಕಲ್ಯಾಣ ಇಲಾಖೆಯಿಂದ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್!

ಈ ಲೇಖನದಲ್ಲಿ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು? ಇನ್ನು ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Application dates-ಇಲಾಖಾವಾರು ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಗಳು:

1) ಹಿಂದುಳಿದ ಕಲ್ಯಾಣ ಇಲಾಖೆಯ(Department of Backward Welfare) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 December 2024

2) ತಾಂತ್ರಿಕ ಶಿಕ್ಷಣ ಇಲಾಖೆಯ(Department of Technical Education) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31December 2024

ಇದನ್ನೂ ಓದಿ: Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!

3) ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ(Karnataka State Brahmin Development Board) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 December 2024

4) ಕಾರ್ಮಿಕ ಇಲಾಖೆಯ(Department of Labour) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 December 2024

5) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ(Minorities Welfare Department) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 December 2024

6) ಕೃಷಿ ಇಲಾಖೆಯ(Department of Agriculture) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 January 2025

7) ಸಮಾಜ ಕಲ್ಯಾಣ ಇಲಾಖೆಯ(Social Welfare Department) ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25 February 2025

ಇದನ್ನೂ ಓದಿ: Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

scholarship

Who can apply for the scholarship-ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ಒಂದ ರಿಂದ ಹತ್ತನೇ ತರಗತಿ ವಿದ್ಯಾರ್ಥಿಗಳು, ಪಿಯುಸಿ ವಿದ್ಯಾರ್ಥಿಗಳು, ಐಟಿಐ, ಡಿಪ್ಲೋಮೋ ಮತ್ತು ಸಾಮಾನ್ಯ ಪದವಿ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಹಾಗೂ ಸ್ನಾತಕೋತ್ತರ ಪದವಿ ವೃತ್ತಿಪರ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನರ್ಸಿಂಗ್ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವವರು ಸಹ ಅರ್ಜಿ ಸಲ್ಲಿಸಲು ಅರ್ಹರು.

ಇದನ್ನೂ ಓದಿ: Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000!

Where to apply for scholarship-ವಿದ್ಯಾರ್ಥಿ ವೇತನಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ವಿದ್ಯಾರ್ಥಿಗಳು ಎರಡು ವಿಧಾನ ಅನುಸರಿಸಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಬಹುದು, ನೇರವಾಗಿ SSP ಜಾಲತಾಣವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳ ಸಮೇತ ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

How to apply for scholarship-ವಿದ್ಯಾರ್ಥಿ ವೇತನಕ್ಕೆ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನದ ಮಾಹಿತಿ ಹೀಗಿದೆ:

ವಿದ್ಯಾರ್ಥಿಗಳು ತಮ್ಮ ಮೊಬೈಲ್ನಲ್ಲೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದ್ದು ರಾಜ್ಯ ಸರ್ಕಾರದ SSP ವೆಬ್ಸೈಟ್ ಅನ್ನು ಭೇಟಿ ಮಾಡಿ ಕೆಳಗಿನ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Step:1 ಈ ಲಿಂಕ್ Scholarship Application ಮೇಲೆ ಕ್ಲಿಕ್ ಮಾಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ಅಧಿಕೃತ ತಂತ್ರಾಂಶವನ್ನು ಭೇಟಿ ಮಾಡಿ.

Step:2 ಪ್ರಥಮ ಬಾರಿಗೆ ಈ ಜಾಲತಾಣಕ್ಕೆ ಭೇಟಿ ಮಾಡುತ್ತಿರುವವರು ಮೊದಲನೇದಾಗಿ ಖಾತೆಯನ್ನು ರಚನೆ ಮಾಡಿಕೊಳ್ಳಬೇಕು. ಖಾತೆಯನ್ನು ರಚನೆ ಮಾಡಿಕೊಂಡ ಬಳಿಕ Log in ಆಯ್ಕೆ ಮೇಲೆ ಕ್ಲಿಕ್ ಮಾಡಿ ರಚನೆ ಮಾಡಿಕೊಂಡಿರುವ User ID ಮತ್ತು Password fill ಮಾಡಿ ಲಾಗಿನ್ ಮಾಡಿಕೊಳ್ಳಿ.

ಇದನ್ನೂ ಓದಿ: Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!

Step:3 Log in ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಖಾತೆಗೆ ಪ್ರವೇಶ ಮಾಡಿದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

Required documents to apply-ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು:

ವಿದ್ಯಾರ್ಥಿಯ ಆಧಾರ್ ಕಾರ್ಡ್/ Student’s Aadhaar Card
ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರ/ Bank account details of the student
ವಿದ್ಯಾರ್ಥಿಯ ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿ/ Student’s phone number and email id
ವಿದ್ಯಾರ್ಥಿಯ ಐಡಿ ಕಾರ್ಡ್/Student’s ID Card
ವಿದ್ಯಾರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Student’s caste and income certificate
ವಿದ್ಯಾರ್ಥಿಯ ಕಾಲೇಜು ದಾಖಲಾತಿ ಸಂಖ್ಯೆ ಅಥವಾ ನೋಂದಣಿ ಸಂಖ್ಯೆ/Student’s College Enrollment Number or Registration Number

RELATED ARTICLES
- Advertisment -
Google search engine

Most Popular

Recent Comments