Saturday, October 11, 2025
No menu items!
HomeNewsSolar Power Subsidy-ಸೋಲಾರ್ ಪವರ್ ಜನರೇಟರ್ ಅಳವಡಿಕೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Solar Power Subsidy-ಸೋಲಾರ್ ಪವರ್ ಜನರೇಟರ್ ಅಳವಡಿಕೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ರೇಷ್ಮೆ ಇಲಾಖೆಯ ವತಿಯಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ) ಸಕಾಲ ಮಿಷನ್ ಕಾಯ್ದೆಯ(Solar Power Generator Subsidy) ಅಡಿಯಲ್ಲಿ ಸೋಲಾರ್ ಪವರ್ ಜನರೇಟರ್ ಅಳವಡಿಕೆಗೆ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದ್ದು,ಸೇವೆಯನ್ನು 30 ಕೆಲಸದ ದಿನಗಳಲ್ಲಿ ಪಡೆಯಲು ಅವಕಾಶವಿರುತ್ತದೆ.

ಕರ್ನಾಟಕ ಸರ್ಕಾರವು ಸಕಾಲ ಮಿಷನ್ ಸೋಲಾರ್ ಪವರ್ ಜನರೇಟರ್ ಅಳವಡಿಕೆಯ  ಯೋಜನೆಯನ್ನು(Renewable Energy Scheme) ಜಾರಿಗೆ ತಂದಿದ್ದು, ಈ ಯೋಜನೆಯು ರಾಜ್ಯದಲ್ಲಿ ಶುದ್ದ ಶಕ್ತಿ ಉತ್ಪಾದನೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಇದು ಕರ್ನಾಟಕ ಗ್ಯಾರಂಟಿ ಆಫ್ ಸರ್ವಿಸಸ್ ಟು ಸಿಟಿಜನ್ಸ್ ಕಾಯ್ದೆ, 2011 ರ ಭಾಗವಾಗಿದ್ದು, ಸ್ಥಳೀಯ ಮಟ್ಟದಲ್ಲಿ ಶಕ್ತಿ ಸ್ವಾವಲಂಬನೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Godown Subsidy Scheme-ಕೃಷಿಕರಿಗೆ ಸಿಹಿ ಸುದ್ದಿ!ಗೋಡೌನ್ ನಿರ್ಮಾಣಕ್ಕೆ ಶೇ 33% ಸಹಾಯಧನ ಪಡೆಯಲು ಅರ್ಜಿ!

ಈ ಲೇಖನದಲ್ಲಿ ಸೋಲಾರ್ ಅಳವಡಿಕೆಗೆ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸುವ ವಿಧಾನ? ಈ ಯೋಜನೆಯ ಉದ್ದೇಶವೇನು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Uses Of This Scheme-ಯೋಜನೆಯ ಪ್ರಯೋಜನಗಳಾವುವು?

ಸರ್ಕಾರವು ಸೋಲಾರ್ ಪ್ಯಾನಲ್ ಅಳವಡಿಕೆಯ ವೆಚ್ಚದ ಶೇಕದ 40 ರಷ್ಟು ಸಬ್ಸಿಡಿ ಒದಗಿಸುತ್ತದೆ.

ಪ್ರತಿ ವರ್ಷ ₹15,000 ರಿಂದ ₹18,000 ರಷ್ಟು ವಿದ್ಯುತ್ ಚಾರ್ಜ್‌ನಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

ಅತಿಯಾದ ವಿದ್ಯುತ್ ಉತ್ಪಾದನೆಯನ್ನು ವಿದ್ಯುತ್ ವಿತರಣಾ ಕಂಪನಿಗಳಿಗೆ ಮಾರಾಟ ಮಾಡಿ ಆದಾಯ ಗಳಿಸುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Scholorship Application-DXC ಟೆಕ್ನಾಲಜಿಯ ವತಿಯಿಂದ ₹50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Who Can Apply This Scheme-ಈ ಯೋಜನೆಯಡಿ ಸಹಾಯಧನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಶಾಲೆಗಳು, ಕಾಲೇಜುಗಳು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳು ಸಹ ಅರ್ಜಿ ಸಲ್ಲಿಸಬಹುದು

ಗ್ರಾಮೀಣ ಹಾಗೂ ನಗರ ಪ್ರದೇಶದ ಮನೆಮಾಲೀಕರು ಹಾಗೂ ಕೃಷಿಕರು ಸಹ ಅರ್ಜಿ ಸಲ್ಲಿಸಬಹುದು

ಸಣ್ಣ ಉದ್ಯಮಿಗಳು ಹಾಗೂ ಅಂಗಡಿಮಾಲೀಕರಿಗೆ ಅವಕಾಶವಿರುತ್ತದೆ.

ಲಾಭರಹಿತ ಸಂಸ್ಥೆಗಳು (NGOಗಳು, ಸಹಕಾರಿ ಸಂಘಗಳು) ಸರ್ಕಾರಿ/ಅರ್ಧ ಸರ್ಕಾರಿ ಕಚೇರಿಗಳು ಮತ್ತು ಸಂಸ್ಥೆಗಳಿಗೂ ಸಹ ಅವಕಾಶವಿರುತ್ತದೆ.

What Are The Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು?

ಆಧಾರ್ ಕಾರ್ಡ್

ವಿದ್ಯುತ್ ಚಾಲನೆ ಗುರುತುಪತ್ರ

ರೇಷನ್ ಕಾರ್ಡ್

ಆದಾಯ ಪ್ರಮಾಣಪತ್ರ

ಆಸ್ತಿ ತೆರಿಗೆ ಪತ್ರ

ಇದನ್ನೂ ಓದಿ: Karmika Card Benefits-ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯಡಿ ಪ್ರಯೋಜನ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

ವಿದ್ಯುತ್ ಸಂಪರ್ಕ ಸಂಖ್ಯೆ ಮತ್ತು ಮೀಟರ್ ಸಂಖ್ಯೆ

ಬ್ಯಾಂಕ ಪಾಸ್ ಬುಕ್

ಫೋಟೊ

ಮೊಬೈಲ್ ನಂಬರ್

Where To Apply-ಸಹಾಯಧನ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಆಸಕ್ತಿ ಇರುವ ಫಲಾನುಭವಿಗಳು ನಿಮ್ಮ ಹತ್ತಿರದ ಸಕಾಲ ಸೇವಾ ಕೇಂದ್ರಕ್ಕೆ ಭೇಟಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಈ ಲಿಂಕ್ ಮೇಲೆ “Apply Now” ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ! ಪ್ರತಿ ಕ್ವಿಂಟಾಲ್‌ಗೆ ₹8,110/- ರಂತೆ ಹತ್ತಿ ಖರೀದಿಗೆ ನೋಂದಣಿ ಆರಂಭ!

Image

ಇದನ್ನೂ ಓದಿ: U-Go Scholarship-ಯು-ಗೋ ವಿದ್ಯಾರ್ಥಿವೇತನ ಅಡಿಯಲ್ಲಿ ₹60,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

For More Information: ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ:

ವೆಬ್ಸೈಟ್ ಲಿಂಕ್: https://sakalaservices.karnataka.gov.in/
ಸಹಾಯವಾಣಿ: 080-4555-4555

 

RELATED ARTICLES
- Advertisment -

Most Popular

Recent Comments