Sunday, December 22, 2024
No menu items!
HomeAgricultureSheep farming loan Subsidy-ಕುರಿ ಸಾಕಾಣಿಕೆ ಆರಂಭಿಸಲು ಶೇ 50% ರಷ್ಟು ಸಬ್ಸಿಡಿ ಪಡೆಯಲು ಆನ್ಲೈನ್...

Sheep farming loan Subsidy-ಕುರಿ ಸಾಕಾಣಿಕೆ ಆರಂಭಿಸಲು ಶೇ 50% ರಷ್ಟು ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಡಾ. ಬಿಆರ್ ಅಂಬೇಡ್ಕರ್ ನಿಗಮದಿಂದ ಬ್ಯಾಂಕ್ ಸಹಾಯಯೋಗದೊಂದಿಗೆ ಕುರಿ ಸಾಕಾಣಿಕೆ ಮಾಡಲು ಸಹಾಯಧನ ಪಡೆಯಲು ಸ್ವಯಂ ಉದ್ಯೋಗ ಸಾಲದ ಯೋಜನೆ(Employment Subsidy Loan Scheme)ಅಡಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಸರ್ಕಾರದ ಡಾ. ಬಿಆರ್ ಅಂಬೇಡ್ಕರ್ ನಿಗಮದಿಂದ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಅಡಿಯಲ್ಲಿ ಶೇಕಡ 50% ರಷ್ಟು ಸಬ್ಸಿಡಿಯೊಂದಿಗೆ ಕುರಿ ಸಾಕಾಣಿಕೆಯನ್ನು(Sheep farming subsidy) ಪ್ರಾರಂಭಿಸಲು ಆನ್ಲೈನ್ ಮೂಲಕ ಸೇವಾ ಸಿಂಧು ತಂತ್ರಾಂಶದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Best Insurance Plan-2024: ಸಾರ್ವಜನಿಕರಿಗೆ ಭರ್ಜರಿ ಆಫರ್! ಕೇವಲ ₹599ರೂಗೆ ₹5 ಲಕ್ಷ ವಿಮೆ ಪಡೆಯಲು ಅರ್ಜಿ!

ಕುರಿ ಸಾಕಾಣಿಕೆ ಇದು ಬಡಜನಗಳ ಕಸುಬಾಗಿದ್ದು ಕಡಿಮೆ ಬಂಡವಾಳದ ರೂಪದಲ್ಲಿ ಉತ್ತಮ ಲಾಭವನ್ನು ಪಡೆಯಲು ಜನರಿಗೆ ಸಹಾಯಕ ಉದ್ಯಮವಾಗಿದೆ ಹಾಗೆಯೇ ಕುರಿಗಳಿಂದ ಹಾಲು, ಮಾಂಸ, ಮತ್ತು ಕಂಬಳಿ ತಯಾರಿಕೆಗೆ ಬಳಸುತ್ತಾರೆ. ಇದಲ್ಲದೆ ಪ್ರಸ್ತುತ ದಿನಗಳಲ್ಲಿ ಕುರಿ ಗೊಬ್ಬರಕ್ಕೂ ಸಹ ಹೆಚ್ಚು ಬೇಡಿಕೆ ಇದೆ.

ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಕುರಿ ಸಾಕಾಣಿಕೆಗೆ(Sheep farming subsidy loan scheme) ಎಷ್ಟು ಸಬ್ಸಿಡಿ ನೀಡಲಾಗುತ್ತದೆ? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅಗತ್ಯ ದಾಖಲಾತಿಗಳಾವುವು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!

Sheep farming subsidy- ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಕುರಿ ಸಾಕಾಣಿಕೆಗೆ ಎಷ್ಟು ಸಾಲ ಮತ್ತು ಸಬ್ಸಿಡಿ ನೀಡಲಾಗುತ್ತದೆ?

ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಜಿದಾರರಿಗೆ ಒಟ್ಟು ₹1 ಲಕ್ಷ ಬ್ಯಾಂಕ್ ಸಾಲ ಮತ್ತು ಇದಕ್ಕೆ ನಿಗಮದಿಂದ ₹50 ಸಾವಿರ ಸಬ್ಸಿಡಿ ನೀಡಲಾಗುತ್ತದೆ.

Self Employment Subsidy Loan Scheme Online Application-ಅರ್ಜಿ ಸಲ್ಲಿಸುವ ವಿಧಾನ:

ಸ್ವಯಂ ಉದ್ಯೋಗ ನೇರಸಾಲ ಯೋಜನೆಯಡಿ ಸಬ್ಸಿಡಿಯನ್ನು ಪಡೆಯಲು ಅರ್ಜಿದಾರರು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Digital Ration Card-ಅಧಿಕೃತ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಅಪ್ಲಿಕೇಶನ್ ಬಿಡುಗಡೆ!

Sheep farming

Step-1: ಮೊದಲಿಗೆ link ಮೇಲೆ ಕ್ಲಿಕ್ ಮಾಡಿ Self Employment Subsidy Loan online application ಸೇವಾ ಸಿಂಧು ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ಮೇಲಿನ ಲಿಂಕ್ ಒತ್ತಿ ಸೇವಾ ಸಿಂಧು ವೆಬ್ಸೈಟ್ ಅನ್ನು ಭೇಟಿ ಮಾಡಿದ ನಂತರ ಈ ವೆಬ್ಸೈಟ್ ಗೆ ಪ್ರಥಮ ಬಾರಿಗೆ ಪ್ರವೇಶ ಮಾಡುತ್ತಿರುವವರು USER ID ಮತ್ತು PASSWORD ಅನ್ನು ರಚನೆ ಮಾಡಿಕೊಂಡು LOGIN ಅಗಬೇಕು.

Step-3: LOGIN ಅದ ಬಳಿಕ ಇಲ್ಲಿ “ಬಿ. ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ” ಎಂದು ಆಯ್ಕೆ ಮಾಡಿಕೊಂಡು “ಸ್ವಯಂ ಉದ್ಯೋಗ ನೇರಸಾಲ ಯೋಜನೆ” ಮೇಲೆ ಕ್ಲಿಕ್ ಮಾಡಿ “ಅರ್ಜಿ ಸಲ್ಲಿಸಿ/Apply Now” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರ ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: New Recharge plan-2024: ನೀವು Airtel ಮತ್ತು Jio ಸಿಮ್ ಬಳಸುತ್ತಿದ್ದೀರಾ ಹಾಗಾದ್ರೆ ತಪ್ಪದೇ ಈ ಮಾಹಿತಿ ಓದಿ! ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ!

ಅಥವಾ ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ನಿಮ್ಮ ಹತ್ತಿರದ ಬೆಂಗಳೂರು ಒನ್/ಗ್ರಾಮ ಒನ್/ಕಂಪ್ಯೂಟರ್ ಸೆಂಟರ್ ಅನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Last Date-ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29-12-2024

Documents to apply online- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ದಾಖಲೆಗಳು:

(1) ಅರ್ಜಿದಾರರ ಆಧಾರ್ ಕಾರ್ಡಪ್ರತಿ/Aadhaar card copy of the applicant
(2) ಬ್ಯಾಂಕ್ ಅಕೌಂಟ್ ಡಿಟೈಲ್ಸ್/Bank Account Details
(3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ/Caste and Income Certificate
(4) ಜಮೀನಿನ ಪಹಣಿ/A land plot
(5) ಪೋಟೋ/Photo copy
(6) ರೇಶನ್ ಕಾರ್ಡ/Ration Card

ಇದನ್ನೂ ಓದಿ: Free Scooty Yojana Fact Check-ಕೇಂದ್ರದಿಂದ ಹೆಣ್ಣು ಮಕ್ಕಳಿಗೆ ಸ್ಕೂಟಿ ಯೋಜನೆ! ಇಲ್ಲಿದೆ ಅಧಿಕೃತ ಮಾಹಿತಿ!

Who Can Apply For Self Employment Subsidy Loan Scheme- ಯಾರೆಲ್ಲ ಅರ್ಜಿ ಸಲ್ಲಿಸಬಹುದು:

ಅರ್ಜಿದಾರರಿಗೆ 18 ವರ್ಷ ತುಂಬಿರಬೇಕು.

ಅರ್ಹ ಅರ್ಜಿದಾರರು ಪರಿಶಿಷ್ಟ ಜಾತಿಯ ವರ್ಗಕ್ಕೆ ಸೇರಿದವರಾಗಿರಬೇಕು.

ಕಳೆದ ವರ್ಷ ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದವರು ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

For more information-ಹೆಚ್ಚಿನ ಮಾಹಿತಿಗಾಗಿ:

Helpline number-ಸಹಾಯವಾಣಿ ಸಂಖ್ಯೆ: 9482300400
Dr.B.R Ambedkar Development Corporation Website-ನಿಗಮದ ವೆಬ್ಸೈಟ್- Click here

RELATED ARTICLES
- Advertisment -

Most Popular

Recent Comments