Friday, August 22, 2025
No menu items!
HomeNewsScholorship Application-SSLC-PUC ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಈಗಲೇ ಅರ್ಜಿ ಹಾಕಿ!

Scholorship Application-SSLC-PUC ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಈಗಲೇ ಅರ್ಜಿ ಹಾಕಿ!

ಕರ್ನಾಟಕ ಕಟ್ಟಡ ಹಾಗೂ ಇತರೆ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ 2024-2025 ನೇ ಸಾಲಿನಲ್ಲಿ SSLC ಮತ್ತು PUC (PUC Scholarship/SSLC Scholarship) ಅಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ನೋಂದಾಯಿತ ಕಟ್ಟಡ ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳನ್ನು ಪ್ರೋತ್ಸಾಹಿಸಲು ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶಿಕ್ಷಣ ಎಂಬುದು ಕೇವಲ ಪುಸ್ತಕದ ಜ್ಞಾನ ಅಷ್ಟೇ ಅಲ್ಲ ಶಿಕ್ಷಣ ಎಂಬುದು ಜೀವನದ ಬದುಕನ್ನು(Karnataka Labour Department) ಅರ್ಥಮಾಡಿಕೊಳ್ಳುವ, ಸರಿಯಾದ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯುವ ಶಕ್ತಿಯಾಗಿದೆ. ಪ್ರತಿಯೊಬ್ಬರ ಜೀವನದಲ್ಲು ಶಿಕ್ಷಣ ಎಂಬುದು ಅತೀ ಮುಖ್ಯ ಭಾಗವಾಗಿದೆ.

ಇದನ್ನೂ ಓದಿ: Cattle Subsidy scheme-ಹಸು-ಎಮ್ಮೆ ಖರೀದಿ ಮಾಡಲು ಶೇ 50 ರಷ್ಟು ಸಹಾಯಧನಕ್ಕೆ ಅರ್ಜಿ!

ಹಾಗಾಗಿ ಇದರ ಉದ್ದೇಶದಿಂದ ಈ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳ ಮುಂದಿನ(academic toppers reward)ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗಲು SSLC ಮತ್ತು PUC ಅಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಇಂದಿನ ಲೇಖನದಲ್ಲಿ ಪ್ರತಿಭಾ ಪುರಸ್ಕಾರವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸಲು ಪಾಲಿಸಬೇಕಾದ ಹಂತಗಳಾವುವು? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಇನ್ನೂ ಹೆಚ್ಚಿನ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Police Constable Training-ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ!

Last Date-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 15 ಸೆಪ್ಟೆಂಬರ್ 2025

Scholarship Amount-ವಿದ್ಯಾರ್ಥಿಗಳು ಎಷ್ಟು ವೇತನವನ್ನು ಪಡೆಯಬಹುದು?

ಈ ಯೋಜನೆಯಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ಅನುಗುಣವಾಗಿ ವರ್ಷಕ್ಕೆ ಸುಮಾರು ₹5,000 ರಿಂದ ₹10,000 ದ ವರೆಗೆ ವೇತನವನ್ನು ಪಡೆಯಬಹುದು.

Who Can Apply this Scheme-ಯಾರು ಅರ್ಜಿಯನ್ನು ಸಲ್ಲಿಸಲು ಅರ್ಹರು?

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿಯ ಪೋಷಕರು ಕಾರ್ಮಿಕ ಮಂಡಳಿಯ ನೋಂದಾಯಿತ ಸದಸ್ಯರಾಗಿರಬೇಕು.

ವಿದ್ಯಾರ್ಥಿಯು 2024-25 ಸಾಲಿನ SSLC ಅಥವಾ PUC ಪರೀಕ್ಷೆಯಲ್ಲಿ ಶೇ 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು.

ಅರ್ಜಿದಾರರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾಗಿರುವ ಕಾರ್ಮಿಕರ ಮಕ್ಕಳು ಅರ್ಜಿಯನ್ನು ಸಲ್ಲಿಸಬಹುದು.

ಈ ಯೋಜನೆಯು ಕೇವಲ ಎರಡು ಮಕ್ಕಳಿ ಮಾತ್ರ ಅನುಗುಣವಾಗುತ್ತದೆ, ಆದ್ದರಿಂದ ಕಾರ್ಮಿಕ ಕುಟುಂಬದ ಮೊದಲ ಎರಡು ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಇದನ್ನೂ ಓದಿ: Land Ownership Scheme-ಭೂಮಿ ಖರೀದಿಸಲು 25 ಲಕ್ಷ ರೂ ಸಹಾಯಧನ! ಇಲ್ಲಿದೆ ಸಂಪೂರ್ಣ ಮಾಹಿತಿ!

Required Documents-ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳಾವುವು?

ಪೋಷಕರ ಕಾರ್ಮಿಕರ ಗುರುತಿನ ಚೀಟಿ/Labour card

ವಿದ್ಯಾರ್ಥಿಯ SSLC/PUC ಮಾರ್ಕ್ಸ್ ಕಾರ್ಡ್/Marks card

ಆಧಾರ್ ಕಾರ್ಡ್/Aadhar Card

ಪೋಷಕರ ಆಧಾರ್ ಕಾರ್ಡ/Parents Aadhar Card

ಫೋಟೊ/Photocopy

ಜಾತಿ ಪ್ರಮಾಣ ಪತ್ರ/Caste Certificate

ಆದಾಯ ಪ್ರಮಾಣ ಪತ್ರ/Income Certificate

ಬ್ಯಾಂಕ್ ಪಾಸ್ ಬುಕ್/Bank Passbook

ಮೊಬೈಲ್ ನಂಬರ್/Mobile Number

ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯಾ? ಚೆಕ್ ಮಾಡಿ!

Online Application-ಅರ್ಜಿಯನ್ನು ಸಲ್ಲಿಸುವ ವಿಧಾನಗಳಾವುವು?

ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳು ಪ್ರತಿಭಾ ಪುರಸ್ಕಾರ ವನ್ನು ಪಡೆಯಲು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಆನ್ಲೈನ್ ಮೂಲಕ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

scholorhship application

ಇದನ್ನೂ ಓದಿ: PMSBY Scheme-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ ₹12 ರೂ ಗೆ ₹2 ಲಕ್ಷ ವಿಮೆ!

Step-1: ಪ್ರಥಮದಲ್ಲಿ ಈ ಲಿಂಕ್ Read Now ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಾರ್ಮಿಕ ಮಂಡಳಿಯ ಜಾಲತಾಣವನ್ನು ಭೇಟಿ ಮಾಡಬೇಕು.

Step-2: ಬಳಿಕ ಬಲಬದಿಯಲ್ಲಿ ಕಾಣುವ “ಶೈಕ್ಷಣಿಕ ಧನಸಹಾಯಕ್ಕಾಗಿ ಅರ್ಜಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇಲ್ಲಿ ಸಂಬಂದಪಟ್ಟ ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: Labour Scholorship-ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Step-3: ನಂತರ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

RELATED ARTICLES
- Advertisment -

Most Popular

Recent Comments