Thursday, July 31, 2025
No menu items!
HomeAgricultureRTC Aadhar Link Status-ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ!ಲಿಂಕ್ ಅಗಿರುವುದನ್ನು ಈಗಲೇ ಪರಿಶೀಲಿಸಿ!

RTC Aadhar Link Status-ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ!ಲಿಂಕ್ ಅಗಿರುವುದನ್ನು ಈಗಲೇ ಪರಿಶೀಲಿಸಿ!

ಕರ್ನಾಟಕ ರಾಜ್ಯ ಸರ್ಕಾರವುಜಮೀನಿನ ಮಾಲೀಕರಿಗೆ ಮುನ್ನೆಚ್ಚರಿಕೆಯನ್ನು ನೀಡಿದೆ(RTC Aadhar Link Status Check)ಕಂದಾಯ ಇಲಾಖೆಯ ವತಿಯಿಂದ ಜಮೀನಿನ ದಾಖಲೆ ವ್ಯವಸ್ಥೆಯ ಸುಧಾರಣೆಗಾಗಿ ಪಹಣಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದ್ದು, ರೈತರು ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ? ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಪಹಣಿಯ ದಾಖಲೆಗಳಿಗೆ ಆಧಾರ್ ಲಿಂಕ್(RTC Aadhar Link Status) ಮಾಡುವುದನ್ನು ಕಡ್ಡಾಯ ಮಾಡಿದ್ದು, ರೈತರು ಹಾಗೂ ಭೂಮಿಯ ಹಕ್ಕುದಾರರು ತಮ್ಮ ಆಧಾರ್ ಕಾರ್ಡ್ ಅನ್ನು ಜಮೀನಿನ ದಾಖಲೆಗಳೊಂದಿಗೆ ಲಿಂಕ್ ಮಾಡದೇ ಇದ್ದರೆ, ಮುಂದಿನ ದಿನಗಳಲ್ಲಿ ಸರಕಾರಿ ಸೌಲಭ್ಯಗಳು, ಭೂಮಿಯ ದಾಖಲೆ ಪರಿಶೀಲನೆಗೆ ಸಂಬಂದಿಸಿದ ತೊಂದರೆಗಳು ಉಂಟಾಗಬಹುದು.

ಇದನ್ನೂ ಓದಿ: Family tree certificate-ವಂಶವೃಕ್ಷ ಪ್ರಮಾಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ!

ಪ್ರಸ್ತುತ ಇಂದಿನ ಲೇಖನದಲ್ಲಿ ತಮ್ಮ ಜಮೀನಿ ಪಹಣಿಗೆ ಆಧಾರ್ ಲಿಂಕ್ ಆಗಿರುವ ಸ್ಥಿತಿಯನ್ನು ತಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡುವುದು ಹೇಗೆ? ಆಧಾರ್ ಲಿಂಕ್ ಅನ್ನು ಏಕೆ ಮಾಡಬೇಕು? ಆಧಾರ್ ಲಿಂಕ್ ಮಾಡಲು ಬೇಕಾದ ದಾಖಲೆಗಳಾವುವು? ಆಧಾರ್ ಲಿಂಕ್ ಮಾಡದಿದ್ದರೆ ಏನು ಸಮಸ್ಯೆ? ಆಧಾರ್ ಲಿಂಕ್ ಮಾಡದಿದ್ದರೆ ಯಾವೆಲ್ಲ ಸಮಸ್ಯೆಗಳು ಉಂಟಾಗುತ್ತದೆ? ಆಧಾರ್ ಲಿಂಕ್ ಪರಿಶೀಲನೆ ಹೇಗೆ ಮಾಡುವುದು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Aadhar Card with Land RTC-ಆಧಾರ್ ಲಿಂಕ್ ಏಕೆ ಮಾಡಬೇಕು?

ಮಾಲಿಕರಿಗೆ ಭೂಮಿಯ ಹಕ್ಕು ದಾಖಲೆಗಳ ದೃಢೀಕರಣಕ್ಕೆ ಸಹಾಯ ಮಾಡುತ್ತದೆ.

ರೈತರು ಸರ್ಕಾರಿ ಯೋಜನೆಗಳ ಸಹಾಯಧನವನ್ನು ಪಡೆಯಲು ಅಂದರೆ ಪಿಎಂ ಕಿಸಾನ್, ಕೃಷಿ ಸಾಲಮನ್ನಾ, ಸಬ್ಸಿಡಿಗಳನ್ನು ಪಡೆಯಲು ಸಹಾಯ ಮಾಡುತ್ತದೆ.

ರೈತರ ತಮ್ಮ ಜಮೀನಿನ ಅಧಿಕೃತ ದಾಖಲೆಗಳನ್ನು ಸುರಕ್ಷಿತವಾಗಿಡಲು ಈ ಆದೇಶವನ್ನು ಜಾರಿಗೆ ತರಲಾಗಿದೆ.

ನಕಲು ದಾಖಲಾಗಿರುವುದನ್ನು ತಡೆಯಲು ಸಹಾಯಕಾರಿಯಾಗಿದೆ.

ಕಂದಾಯ ಇಲಾಖೆಯ ಮೂಲಕ ಯಾವುದೇ ಆನ್ಲೈನ್ ಸೇವೆಯನ್ನು ರೈತರು ಪಡೆಯಲು ಆಧಾರ್ ಲಿಂಕ್ ಅನ್ನು ಮಾಡುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 8 ದಿನ ಬಾಕಿ!

Required Documents-ಪಹಣಿಗೆ ಆಧಾರ್ ಲಿಂಕ್ ಮಾಡಲು ಅಗತ್ಯ ದಾಖಲಾತಿಗಳಾವುವು?

ಮಾಲೀಕರ ಆಧಾರ್ ಕಾರ್ಡ್/Aadhar card

ಎಲ್ಲಾ ಜಮೀನಿನ ಸರ್ವೆ ನಂಬರ್/Survey Number

ಮೊಬೈಲ್ ಸಂಖ್ಯೆ (ಆಧಾರ್‌ಗೆ ಲಿಂಕ್ ಆಗಿರಬೇಕು)/Mobile Number

ಪಹಣಿ ಪ್ರತಿ/RTC

Aadhaar Link with Land Records-ಇದರಿಂದ ರೈತರಿಗೆ ಆಗುವ ಪ್ರಯೋಜನಗಳೇನು?

ರೈತರು ತಮ್ಮ ಜಮೀನಿನ ಎಲ್ಲಾ ಸರ್ವ ನಂಬರಿನ ಪಹಣಿ/ಊತಾರ್/RTC ದಾಖಲೆಗಳಿಗೆ ಆಧಾರ್ ಕಾರ್ಡ ಅನ್ನು ಲಿಂಕ್ ಮಾಡುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಲು ಅವಕಾಶವಿದ್ದು ಅವುಗಳ ಪಟ್ಟಿ ಹೀಗಿದೆ:

  • ಕಾಲ ಕಾಲಕ್ಕೆ ಪಹಣಿಯಲ್ಲಿ ಅಗುವ ಮಾಲೀಕತ್ವದ ಬದಲಾವಣೆ ಮಾಹಿತಿಯನ್ನು ನೇರವಾಗಿ ಮೊಬೈಲ್ ಸಂಖ್ಯೆಗೆ ಪಡೆಯಲು ಸಹಕರಿಯಾಗಿದೆ.
  • ಕಂದಾಯ ಇಲಾಖೆಯ ಎಲ್ಲಾ ಬಗ್ಗೆಯ ಆನ್ಲೈನ್ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಸಹಕರಿಯಾಗುತ್ತದೆ.
  • ಜಮೀನಿಗೆ ಸಂಬಂಧಪಟ್ಟ ದಾಖಲೆಗಳ ಡಿಜಿಟಲೀಕರಣಕ್ಕೆ ಆಧಾರ್ ಕಾರ್ಡ ಲಿಂಕ್ ಮಾಡುವುದು ಕಡ್ಡಾಯ.
  • ರೈತರ ಜಮೀನಿನ ಮೇಲೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾಲೀಕತ್ವದ ಬದಲಾವಣೆಗೆ ಪ್ರಯತ್ನಿಸುವವರಿಗೆ ಕಡಿವಾಣ ಹಾಕಲು ಈ ಕ್ರಮ ಸಹಕಾರಿಯಾಗಿದೆ.

ಇದನ್ನೂ ಓದಿ: Karnataka Labour Scheme-ಕಾರ್ಮಿಕ ಮಂಡಳಿಯಿಂದ ಪರಿಹಾರ ಧನ 8 ಲಕ್ಷಕ್ಕೆ ಏರಿಕೆ!

RTC Adhar link

How To Check Aadhar Link Status-ಜಮೀನಿನ ಪಹಣಿಗೆ ಆಧಾರ್ ಅಗಿದಿಯೋ?ಇಲ್ಲವೋ? ಎಂದು ಚೆಕ್ ಮಾಡುವ ವಿಧಾನ:

ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಈಗ ಬಹಳ ಸುಲಭವಾಗಿದೆ. ಮಾಡಿಸಿದ್ದವರೂ, ಮಾಡಿಸದವರೂ ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ಕಂದಾಯ ಇಲಾಖೆಯ ಅಧಿಕೃತ ‘ಭೂಮಿ’ ವೆಬ್‌ಸೈಟ್‌ಗೆ ಭೇಟಿ ನೀಡಿ, ಪರಿಶೀಲನೆ ಮಾಡಬಹುದು.

ಪಹಣಿಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ, ಮೇಲೆ ತಿಳಿಸಿರುವ ವೆಬ್ಸೈಟ್ ಸಹಾಯದಿಂದ ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸುವ ಅವಕಾಶವಿದೆ.

ಇದನ್ನೂ ಓದಿ: Karnataka Weather-ಜು.27 ರವರೆಗೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ! ಇಲ್ಲಿದೆ ರಾಜ್ಯ ಮಳೆ ಮುನ್ಸೂಚನೆ!

ಹೀಗಾಗಿ, ಈಗಲೇ ನಿಮ್ಮ ಜಮೀನಿನ ದಾಖಲೆಗಳ ಸುರಕ್ಷತೆಗಾಗಿ ಆಧಾರ್ ಲಿಂಕ್ ಸ್ಥಿತಿಯನ್ನು ಪರಿಶೀಲಿಸಿ!

Step-1: ಮೊದಲು ಈ ಲಿಂಕ್ “Check Status” ಮೇಲೆ ಕ್ಲಿಕ್ ಮಾಡಿ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಅದೇ ಪೇಜ್ ನಲ್ಲಿ ಕೆಳಗೆ 2 ಆಯ್ಕೆಗಳು ಕಾಣಿಸುತ್ತವೆ OTP Login ಮತ್ತು Aadhar Login ಎಂಬ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು.

Step-3: ತದನಂತರ ನಿಮ್ಮ ಆಧಾರ್ ನಂಬರ್ ಅಥವಾ ಮೊಬೈಲ್ ನಂಬರ್ ಅನ್ನು ಹಾಕಿದಾಗ ಮೊಬೈಲ್ ನಂಬರ್ ಗೆ ಬರುವ OTP ಅನ್ನು ನಮೂದಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಯಾವ ಯಾವ Survey Number ನ RTC ಗೆ ಆಧಾರ್ ಲಿಂಕ್ ಆಗಿದೆ ಎನ್ನುವ ಸ್ಥಿತಿಯನ್ನು ಚೆಕ್ ಮಾಡಬಹುದು.

RELATED ARTICLES
- Advertisment -

Most Popular

Recent Comments