ರೇಷನ್ ಕಾರ್ಡ ಹೊಂದಿರುವ ಗ್ರಾಹಕರಿಗೆ ಆಹಾರ ಇಲಾಖೆಯಿಂದ ಸಿಹಿ ಸುದ್ದಿ ಪ್ರಕಟವಾಗಿದ್ದು ತಮ್ಮ ಮನೆಯಲ್ಲಿರುವ ಹೊಸ ಸದಸ್ಯರನ್ನು ಅಥವಾ ರೇಶನ್ ಕಾರ್ಡನಲ್ಲಿ(Ration card application) ಬಿಟ್ಟು ಹೋದವರನ್ನು ಪಡಿತರ ಚೀಟಿಗೆ ಸೇರ್ಪಡೆ ಮಾಡಲು ಇಲಾಖೆಯಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ನಮ್ಮ ರಾಜ್ಯದಲ್ಲಿ ಪಡಿತರ ಚೀಟಿ ಒಂದು ಬಹುಮುಖ್ಯ ದಾಖಲೆಯಲ್ಲಿ ಒಂದಾಗಿದ್ದು ಉಚಿತವಾಗಿ ಪ್ರತಿ ತಿಂಗಳು ಆಹಾರ ಧಾನ್ಯಗಳನ್ನು ಪಡೆಯಲು ಈ ಕಾರ್ಡ(Ahara ilake) ಸಾರ್ವಜನಿಕರಿಗೆ ತುಂಬಾ ಉಪಕಾರಿಯಾಗಿದೆ. ಈ ಕಾರ್ಡನಲ್ಲಿ ನಮೂದಿಸಿರುವ ಸಾರ್ವಜನಿಕರ ವಿವರವು ಸರಿಯಾಗಿದ್ದಲ್ಲಿ ಮಾತ್ರ ಸರಕಾರದಿಂದ ವಿವಿಧ ಯೋಜನೆಯಡಿ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.
ಪಡಿತರ ಚೀಟಿಯಲ್ಲಿ ಹೊಸ ಸದಸ್ಯರನ್ನು(Ration card new member add) ಸೇರ್ಪಡೆ ಮಾಡಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲೆಗಳೇನು? ಈ ಕುರಿತು ಇಲಾಖೆಯಿಂದ ನಿಗದಿಪಡಿಸಿರುವ ಮಾರ್ಗಸೂಚಿ ವಿವರ ಹಾಗೂ ಒಮ್ಮೆ ಅರ್ಜಿ ಸಲ್ಲಿಸಿದ ಬಳಿಕ ಆ ಅರ್ಜಿಯ ಸ್ಥಿತಿಯನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಇಲ್ಲಿ ತಿಳಿಸಲಾಗಿದೆ.
Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಹಾಗೂ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ:
ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ರಾಜ್ಯದಲ್ಲಿ ಎಲ್ಲಾ ಅರ್ಹ ಅರ್ಜಿದಾರರಿಗೆ ರೇಶನ್ ಕಾರ್ಡ ಅನ್ನು ವಿತರಣೆ ಮಾಡಲಾಗುತ್ತದೆ ಒಮ್ಮೆ ರೇಷನ್ ಕಾರ್ಡ ಅನ್ನು ಪಡೆದ ಬಳಿಕ ಈ ಕಾರ್ಡಗೆ ಹೊಸ ಸದಸ್ಯರನ್ನು ಸೇರಿಸಲು ಹಾಗೂ ಕಾರ್ಡನಲ್ಲಿ ನಮೂದಿಸಿರುವ ವಿವರವನ್ನು ತಿದ್ದುಪಡಿ ಮಾಡಲು ಪ್ರಸ್ತುತ ಸಾರ್ವಜನಿಕರಿಗೆ ಅರ್ಜಿ ಸಲ್ಲಿಸಲು ಇಲಾಖೆಯಿಂದ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Gold Rate-ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ!
How to apply for ration card-ಹೊಸ ಸದಸ್ಯರನ್ನು ಸೇರ್ಪಡೆ/ತಿದ್ದುಪಡಿಗೆ ಅರ್ಜಿಯಲ್ಲಿ ಎಲ್ಲಿ ಸಲ್ಲಿಸಬೇಕು?
ಈಗಾಗಲೇ ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರು ತಮ್ಮ ಕಾರ್ಡಗೆ ಹೊಸ ಸದಸ್ಯರನ್ನು ಸೇರಿಸಲು ಹಾಗೂ ಕಾರ್ಡಿನಲ್ಲಿ ನಮೂದಿಸಿರುವ ವಿಳಾಸ ವಿವರ, ನ್ಯಾಯಬೆಲೆ ಅಂಗಡಿಯನ್ನು ಬದಲಾವಣೆ ಮಾಡಿಕೊಳ್ಳಲು ತಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಅಗತ್ಯ ದಾಖಲಾತಿ ಸಮೇತ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.
Ration card correction application-ಯಾವೆಲ್ಲ ಸೇವೆಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ?
(A) ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು.
(B) ಮರಣ ಹೊಂದಿರುವ ಸದಸ್ಯರನ್ನು ತೆಗೆದುಹಾಕಲು ಅರ್ಜಿ ಸಲ್ಲಿಸಬಹುದು.
(C) ಪಡಿತರ ಚೀಟಿಯಲ್ಲಿ ದಾಖಲಿಸಿರುವ ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸಲು ಅವಕಾಶ.
(D) ನ್ಯಾಯಬೆಲೆ ಅಂಗಡಿ ಬದಲಾವಣೆ.
(E) ಇ-ಕೆವೈಸಿ ಮಾಡಲು ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: KMF Milk Subsidy-ಹಾಲಿನ ಪ್ರೋತ್ಸಾಹಧನ ಬಿಡುಗಡೆ! ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿ?
Documents for ration card correction-ಅರ್ಜಿ ಸಲ್ಲಿಸಲು ದಾಖಲೆಗಳು:
(A) ಹೊಸ ಸದಸ್ಯರ ಸೇರ್ಪಡೆಗೆ:
ಅರ್ಜಿದಾರರ ಅಧಾರ್ ಕಾರ್ಡ
ಕುಟುಂಬದ ರೇಷನ್ ಕಾರ್ಡ
ಮೊಬೈಲ್ ಸಂಖ್ಯೆ
ಜನನ ಪ್ರಮಾಣ ಪತ್ರ(ಮಕ್ಕಳಿಗೆ ಮಾತ್ರ)
ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
(B) ವಿಳಾಸ ಮತ್ತು ನ್ಯಾಯಬೆಲೆ ಅಂಗಡಿ, ಇ-ಕೆವೈಸಿ ಮಾಡಿಸಲು:
ಅರ್ಜಿದಾರರ ಆಧಾರ್ ಕಾರ್ಡ
ಕುಟುಂಬದ ಪಡಿತರ ಚೀಟಿ
ಖುದ್ದು ಸದಸ್ಯರು ಹಾಜರಿರಬೇಕು(ಇ-ಕೆವೈಸಿಗೆ ಮಾತ್ರ)
ವಿಳಾಸ ದೃಡೀಕರಣ ಪ್ರಮಾಣ ಪತ್ರ(ವಿಳಾಸ ಬದಲಾವಣೆಗೆ ಮಾತ್ರ)
ಮೊಬೈಲ್ ಸಂಖ್ಯೆ.
ಇದನ್ನೂ ಓದಿ: Best Insurance Plan-2024: ಸಾರ್ವಜನಿಕರಿಗೆ ಭರ್ಜರಿ ಆಫರ್! ಕೇವಲ ₹599ರೂಗೆ ₹5 ಲಕ್ಷ ವಿಮೆ ಪಡೆಯಲು ಅರ್ಜಿ!
(C) ರೇಶನ್ ಕಾರ್ಡನಿಂದ ಸದಸ್ಯರನ್ನು ತೆಗೆದುಹಾಕಲು:
ಅರ್ಜಿದಾರರು ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ.
ಕುಟುಂಬದ ಪಡಿತರ ಚೀಟಿ ಪ್ರತಿ.
Last Date for ration card correction-ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ:
ಅರ್ಜಿದಾರರು ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು 31 ಡಿಸೆಂಬರ್ 2024ರ ವರೆಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!
Ration application status check- ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸ್ಥಿತಿ ಚೆಕ್ ಮಾಡಬಹುದು:
ಸಾರ್ವಜನಿಕರು ರೇಶನ್ ಕಾರ್ಡ ಕುರಿತು ಯಾವುದೇ ಬಗ್ಗೆಯ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಿದ ಬಳಿಕ ಸ್ವೀಕೃತಿ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಂಡು ಅದರಲ್ಲಿ ನಮೂದಿಸಿರುವ ಸಂಖ್ಯೆಯನ್ನು ಹಾಕಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ನಿಮ್ಮ ಮೊಬೈಲ್ ನಲ್ಲೇ ರೇಷನ್ ಕಾರ್ಡ ಅರ್ಜಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.
ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸ್ಥಿತಿ ಚೆಕ್ ಮಾಡಲು ವೆಬ್ಸೈಟ್ ಲಿಂಕ್ ಮೊದಲಿಗೆ ಇಲ್ಲಿ ಕ್ಲಿಕ್ Ration Card Status ಮಾಡಿ ಆಹಾರ ಇಲಾಖೆಯ ಜಾಲತಾಣವನ್ನು ಪ್ರವೇಶ ಮಾಡಿ “ಇ-ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.