ಪಡಿತರ ಚೀಟಿಯನ್ನು ಹೊಂದಿರುವ ಗ್ರಾಹಕರು ತಮ್ಮ ರೇಶನ್ ಕಾರ್ಡನಲ್ಲಿ(Ration Correction)ವಿವಿಧ ಬಗ್ಗೆಯ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅವಕಾಶ ನೀಡಲಾಗಿದ್ದು ಇದರ ಕುರಿತು ಸಂಪೂರ್ಣ ಅವಶ್ಯಕ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪ್ರಸ್ತುತ ಜಾರಿಯಲ್ಲಿರುವ ವಿವಿಧ ಯೋಜನೆಯಡಿ ಯಾವುದೇ ಬಗ್ಗೆಯ ಸೌಲಭ್ಯವನ್ನು ಪಡೆಯಲು ಪಡಿತರ ಚೀಟಿಯನ್ನು(Ration Correction Application)ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಒಂದೊಮ್ಮೆ ಈ ದಾಖಲೆಯಲ್ಲಿ ನಿಮ್ಮ ವೈಯಕ್ತಿಕ ವಿವರ ತಪ್ಪಾಗಿ ದಾಖಲಾಗಿದ್ದರೆ ಅಂತಹ ಅರ್ಜಿಗಳು ತಿರಸ್ಕಾರಗೊಳ್ಳುತ್ತವೆ. ಅದ್ದರಿಂದ ನಾಗರಿಕರು ತಮ್ಮ ರೇಶನ್ ಕಾರ್ಡನಲ್ಲಿರುವ ಎಲ್ಲಾ ವಿವರವನ್ನು ಸರಿಯಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ.
ಇದನ್ನೂ ಓದಿ: Muskaan Scholarship-ಪ್ರೌಢ ಶಾಲಾ & ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!
ಪ್ರಸ್ತುತ ಈ ಲೇಖನದಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ(Ration Card)ಅರ್ಜಿ ಸಲ್ಲಿಸಲು ಎಲ್ಲಿಯವರೆಗೆ ಅವಕಾಶ ಇರುತ್ತದೆ? ಪಡಿತರ ಚೀಟಿಯಲ್ಲಿ ಯಾವೆಲ್ಲ ವಿವರವನ್ನು ತಿದ್ದುಪಡಿ ಮಾಡಲು ಅವಕಾಶವಿರುತ್ತದೆ? ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳೇನು? ರೇಶನ್ ಕಾರ್ಡ ತಿದ್ದುಪಡಿ ಅರ್ಜಿ ಸ್ಥಿತಿಯನ್ನು ಆನ್ಲೈನ್ ನಲ್ಲಿ ಚೆಕ್ ಮಾಡುವ ವಿಧಾನ ಸೇರಿದಂತೆ ಇನ್ನಿತರೆ ಅಗತ್ಯ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.
Ration card correction-ಪಡಿತರ ಚೀಟಿಯಲ್ಲಿ ಯಾವೆಲ್ಲ ಬಗ್ಗೆಯ ತಿದ್ದುಪಡಿಯನ್ನು ಮಾಡಲು ಅವಕಾಶ ನೀಡಲಾಗಿದೆ?
ನಾಗರಿಕರು ಪಡಿತರ ಚೀಟಿಯಲ್ಲಿ ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ತಿದ್ದುಪಡಿಯನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ.
- ಪಡಿತರ ಚೀಟಿಯಲ್ಲಿನ ಸದಸ್ಯರ ಹೆಸರಿನ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು.
- ರೇಶನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅವಕಾಶವಿರುತ್ತದೆ.
- ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬದಲಾವಣೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ನ್ಯಾಯಬೆಲೆ ಅಂಗಡಿ ಬದಲಾವಣೆ.
- ಪಡಿತರ ಚೀಟಿಯಲ್ಲಿನ ವಿಳಾಸ ಬದಲಾವಣೆ.
- ಸದಸ್ಯರ ಇ-ಕೆವೈಸಿ ಮಾಡಿಕೊಳ್ಳಲು ಸಹ ಅವಕಾಶವಿರುತ್ತದೆ.
- ಮರಣ ಹೊಂದಿದ ಸದಸ್ಯರನ್ನು ಕಾರ್ಡನಿಂದ ತೆಗೆದುಹಾಕಲು ಸಹ ಅರ್ಜಿ ಸಲ್ಲಿಸಬಹುದು.
- ಸದಸ್ಯರ ಪೋಟೋ ಬದಲಾವಣೆಗೆ ಅರ್ಜಿ ಸಲ್ಲಿಸಿ ತಿದ್ದುಪಡಿಯನ್ನು ಮಾಡಿಕೊಳ್ಳಲು ಅವಕಾಶವಿರುತ್ತದೆ.
ಇದನ್ನೂ ಓದಿ: Kuri Sakanike-ಉಚಿತ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!
How to apply-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸುವುದು ಹೇಗೆ?
ಸಾರ್ವಜನಿಕರು ತಮ್ಮ ರೇಶನ್ ಕಾರ್ಡನಲ್ಲಿ ದಾಖಲಾಗಿರುವ ವಿವರವನ್ನು ತಿದ್ದುಪಡಿಗೆ ಮತ್ತು ಇನ್ನಿತರೆ ಸೇವೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಗ್ರಾಹಕರು ತಮ್ಮ ಹತ್ತಿರದ ಗ್ರಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬಹುದು.
Documents For Ration Card Application-ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲೆಗಳು:
ಪಡಿತರ ಚೀಟಿಗೆ ಹೊಸ ಸದಸ್ಯರನ್ನು ಸೇರಿಸಲು ಅರ್ಜಿದಾರರ ಆಧಾರ್ ಕಾರ್ಡ ಪ್ರತಿ ಮತ್ತು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಮೊಬೈಲ್ ಸಂಖ್ಯೆ, ಕುಟುಂಬದ ರೇಶನ್ ಕಾರ್ಡ ಪ್ರತಿ ಸಲ್ಲಿಸಬೇಕಾಗುತ್ತದೆ.
ಮಕ್ಕಳನ್ನು ಪಡಿತರ ಚೀಟಿಗೆ ಸೇರಿಸಲು 6 ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ ಮತ್ತು ಆಧಾರ್ ಕಾರ್ಡ ಪ್ರತಿ ಒದಗಿಸಬೇಕು. 6 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
ಈ ಮೇಲಿ ತಿಳಿಸಿರುವ ತಿದ್ದುಪಡಿಗಳನ್ನು ಹೊರತುಪಡಿಸಿ ಇನ್ನಿತರೆ ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಲು ಅರ್ಜಿದಾರರ ಆಧಾರ್ ಕಾರ್ಡ ಪ್ರತಿ ಮತ್ತು ಕುಟುಂಬ ರೇಶನ್ ಕಾರ್ಡ ಮತ್ತು ಮೊಬೈಲ್ ನಂಬರ್ ಅನ್ನು ಒದಗಿಸಬೇಕು.
ಇದನ್ನೂ ಓದಿ: Mohan T Advani Scholorship-ಬ್ಲೂ ಸ್ಟಾರ್ ಫೌಂಡೇಶನ್‌ನ ವತಿಯಿಂದ 1ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!
Ration Card Application Status-ಆನ್ಲೈನ್ ನಲ್ಲಿ ಪಡಿತರ ಚೀಟಿಯ ತಿದ್ದುಪಡಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳುವ ವಿಧಾನ ಹೀಗಿದೆ:
ಪಡಿತರ ಚೀಟಿ ಹೊಂದಿರುವ ಗ್ರಾಹಕರು ಒಮ್ಮೆ ಗ್ರಾಮ ಒನ್ ಇನ್ನಿತರೆ ಕೇಂದ್ರಗಳನ್ನು ಭೇಟಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಳಿಕ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಆಹಾರ ಇಲಾಖೆಯ ಜಾಲತಾಣವನ್ನು ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.
Step-1: ಮೊದಲಿಗೆ ಇಲ್ಲಿ ಕ್ಲಿಕ್ Ration Card Status ಮಾಡಿ ಅಧಿಕೃತ ಆಹಾರ ಇಲಾಖೆಯ ತಂತ್ರಾಂಶವನ್ನು ಭೇಟಿ ಮಾಡಬೇಕು.
ಇದನ್ನೂ ಓದಿ: PMMVY Yojana-ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ₹11,000 ರೂ ಸಹಾಯಧನ!

Step-2: ಇದಾದ ಬಳಿಕ ಈ ಪುಟದಲ್ಲಿ ಎಡಬದಿಯಲ್ಲಿ ಕಾಣುವ “menu” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “e-status” ಬಟನ್ ಮೇಲೆ ಕ್ಲಿಕ್ ಮಾಡಿ “Amendment Requests Status” ಆಯ್ಕೆ ವಿಭಾಗದಲ್ಲಿ ನಿಮ್ಮ ಜಿಲ್ಲೆಯು ಬರುವ ವಿಭಾದ “Bangalore Region/Mysore Region/Kalaburagi Region” ಮೇಲೆ ಕ್ಲಿಕ್ ಮಾಡಬೇಕು.
Step-3: ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಬಳಿಕ “Ration Card Amendment Request Status/ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕುಟುಂಬದ ಪಡಿತರ ಚೀಟಿಯ RC ನಂಬರ್ ಅನ್ನು ಹಾಕಿ ಕೆಳಗಿನ ಕಾಲಂ ನಲ್ಲಿ ನಿಮ್ಮ ಅರ್ಜಿಯ “Akcnowledgment No/ Akcnowledgment ನಂ” ಅನ್ನು ನಮೂದಿಸಿ “Go” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಪಡಿತರ ಚೀಟಿಯ ತಿದ್ದುಪಡಿ ಅರ್ಜಿಯು ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಪಡೆದುಕೊಳ್ಳಬಹುದು.