ಕಳೆದ 2-3 ದಿನದಿಂದ ರಾಜ್ಯದಲ್ಲಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಮಳೆಯು ತಗ್ಗಿದ್ದು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ರೈತರಿಗೆ ಮಳೆ ಯಾವಾಗ ಬರುತ್ತದೆ(Male munsuchane) ಎಂದು ಆಕಾಶವನ್ನು ನೋಡುವಂತಾಗಿದೆ ಮುಂಗಾರು ಮಳೆ ಮುನ್ಸೂಚನೆಯ ಕುರಿತು ಹವಾಮಾನ ಇಲಾಖೆಯ ಮುನ್ಸೂಚನೆ ಮತ್ತು ಹವಾಮಾನ ಮುನ್ಸೂಚನೆ ತಜ್ಞರು ಹಂಚಿಕೊಂಡಿರುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ನಾಳೆವರೆಗಿನ ಹವಾಮಾನ ಮುನ್ಸೂಚನೆ(Rain Forecast) ಮಾಹಿತಿ ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಹಗುರದಿಂದ ಸಾದಾರಣ ಮಳೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Free Tailoring Machine-ಉಚಿತ ಟೈಲರಿಂಗ್ ಯಂತ್ರ ಪಡೆಯಲು ಅರ್ಜಿ ಆಹ್ವಾನ!
ಪ್ರಸ್ತುತ ಈ ಅಂಕಣದಲ್ಲಿ ಮುಂದಿನ 7 ದಿನಗಳ ಮಳೆ ಮುನ್ಸೂಚನೆ(Karnataka Weather Update) ಸೇರಿದಂತೆ ಜಿಲ್ಲಾವಾರು ಮಳೆ ಮುನ್ಸೂಚನೆ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ ಜೊತೆಗೆ ರೈತರು ತಮ್ಮ ಗ್ರಾಮ ವ್ಯಾಪ್ತಿಯ ಮುಂದಿನ ಮೂರು ದಿನದ ಮಳೆ ಮುನ್ಸೂಚನೆಯನ್ನು ಉಚಿತವಾಗಿ ವರುಣ ಮಿತ್ರ ಸಹಾಯವಾಣಿಗೆ ಕರೆ ಮಾಡಿ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವ ವಿವರವನ್ನು ಸಹ ಇಲ್ಲಿ ಹಂಚಿಕೊಳ್ಳಲಾಗಿದೆ.
Next 7 Days Rain Forecast-ಮುಂದಿನ 7 ದಿನಗಳ ಮಳೆ ಮುನ್ಸೂಚನೆ (ಮೂಲ: IMD):
ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಮಾಹಿತಿಯ ಪ್ರಕಾರ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆ. ಒಳನಾಡು ಜಿಲ್ಲೆಗಳಲ್ಲಿ ಹಗುರದಿಂದ ಸಾದಾರಣ ಮಳೆ. ಜೂನ್ 11 ರಿಂದ ರಾಜ್ಯದಾದ್ಯಂತ ಅಲ್ಲಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
Varunamitra Helpline-ಉಚಿತವಾಗಿ ನಿಮ್ಮ ಹಳ್ಳಿಯ ಮಳೆ ಮುನ್ಸೂಚನೆ ಪಡೆಯಿರಿ:
ರೈತರು ಈ ವರುಣ ಮಿತ್ರ ಸಹಾಯವಾಣಿಗೆ “9243345433” ದಿನದ 24 ಗಂಟೆಯು ಯಾವುದೇ ಸಮಯದಲ್ಲಿ ಕರೆ ಮಾಡಿ ನಿಮ್ಮ ಜಿಲ್ಲೆ,ತಾಲ್ಲೂಕು,ಗ್ರಾಮ ಪಂಚಾಯತಿಯ ಹೆಸರನ್ನು ಹೇಳಿ ಮನೆಯಲ್ಲೇ ಇದ್ದು ನಿಮ್ಮ ಗ್ರಾಮದ ಮುಂದಿನ 3 ದಿನದ ಮಳೆ ಮುನ್ಸೂಚನೆ ಮಾಹಿತಿಯನ್ನು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ: Scholorship Application-ಮಿರೇ ಅಸೆಟ್ ಫೌಂಡೇಶನ್ ನಿಂದ ₹50,000 ಸ್ಕಾಲರ್‌ಶಿಪ್ ಪಡೆಯಲು ಅರ್ಜಿ!

Karnataka Male Musuchane-ಕರ್ನಾಟಕದ ಹವಾಮಾನ ಮುನ್ಸೂಚನೆ(09 ಜೂನ್ 2025ರ ಬೆಳಿಗ್ಗೆ 8-0 ಗಂಟೆವರೆಗೆ):
ಕರಾವಳಿ ಜಿಲ್ಲೆಗಳಲ್ಲಿ:
ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಇರಲಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಅಲ್ಲಲ್ಲಿ ಅಲ್ಪ ಅವಧಿಯ ತುಂತುರು ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಜೂನ್ 9ರಂದು ಅಲ್ಲಲ್ಲಿ ತುಂತುರು ಹಾಗೂ 10ರಿಂದ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಜೂನ್ 11ರಿಂದ ಕರಾವಳಿ ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆ ಆರಂಭವಾಗುವ ಲಕ್ಷಣಗಳಿವೆ.
ಇದನ್ನೂ ಓದಿ: Ration Card List-ಪರಿಷ್ಕೃತ ಅನರ್ಹ ರೇಷನ್ ಕಾರ್ಡ್‌ದಾರರ ಪಟ್ಟಿ ಬಿಡುಗಡೆ!
ಮಲೆನಾಡು ಜಿಲ್ಲೆಗಳಲ್ಲಿ:
ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚೆನೆ ಇದ್ದು, ಹಾಸನ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆಗಳಿವೆ. ಚಿಕ್ಕಮಗಳೂರು ಜಿಲ್ಲೆಯ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.
ಈಗಿನಂತೆ ಜೂನ್ 10ರ ತನಕ ಮಲೆನಾಡು ಭಾಗಗಳಲ್ಲಿ ಸಾಮಾನ್ಯ ಮಳೆಯ ಸಾಧ್ಯತೆಗಳಿದ್ದು, 11ರಿಂದ ಉತ್ತಮ ಮಳೆಯ ಮುನ್ಸೂಚೆನೆ ಇದೆ.
ಇದನ್ನೂ ಓದಿ: Karnataka Dam Water Level-ಪ್ರಸ್ತುತ ರಾಜ್ಯದ ಡ್ಯಾಂ ಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ?
ಒಳನಾಡು ಜಿಲ್ಲೆಗಳಲ್ಲಿ:
ಉತ್ತರ ಒಳನಾಡಿನ ಬೆಳಗಾವಿ, ರಾಯಚೂರು, ಯಾದಗಿರಿ ಜಿಲ್ಲೆಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು,
ದಕ್ಷಿಣ ಒಳನಾಡಿನ ಮೈಸೂರು, ಚಾಮರಾಜನಗರ ಜಿಲ್ಲೆಗಳ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ಉಳಿದ ಭಾಗಗಳಲ್ಲಿ ಅಲ್ಲಲ್ಲಿ ಮೋಡದ ವಾತಾವರಣ ಇರಬಹುದು.
ಈಗಿನಂತೆ ಜೂನ್ 8ರಿಂದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ಜೂನ್ 11ರಿಂದ ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಹೆಚ್ಚಾಗುವ ನಿರೀಕ್ಷೆ ಇದೆ.
Mungaru Male mahiti-ಮುಂಗಾರು ಮಳೆ ಮಾಹಿತಿ:
ರಾಜ್ಯದಲ್ಲಿ ಕಳೆದ 2-3 ದಿನದಿಂದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ಮಳೆಯು ತಗ್ಗಿದ್ದು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದ್ದು, ಇದರ ಪ್ರಭಾವದಿಂದ ಕರ್ನಾಟಕದಲ್ಲಿ ಜೂನ್ 11ರಿಂದ ಮುಂಗಾರು ಸ್ವಲ್ಪ ಮಟ್ಟಿಗೆ ಚುರುಕಾಗುವ ಲಕ್ಷಣಗಳಿವೆ ಎಂದು ಹವಾಮಾನ ಮುನ್ಸೂಚನೆ ತಜ್ಞರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರಾಜ್ಯದ ಮಳೆ ಮುನ್ಸೂಚನೆಯ ಕುರಿತು ದಿನನಿತ್ಯ ಮಾಹಿತಿಯನ್ನು ಪಡೆಯಲು ಅಧಿಕೃತ ಟ್ವಿಟರ್/ಎಕ್ಸ್ ಖಾತೆ- Click Here