Wednesday, March 12, 2025
No menu items!
HomeNewsProperty Devision- ಪಿತ್ರಾರ್ಜಿತ ಆಸ್ತಿಯ ಮಾರಾಟ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು!

Property Devision- ಪಿತ್ರಾರ್ಜಿತ ಆಸ್ತಿಯ ಮಾರಾಟ ಆಧಾರದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು!

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಅಡಿಯಲ್ಲಿ ಪಿತ್ರಾರ್ಜಿತ ಆಸ್ತಿ ಮಾರಾಟ(Property Devision) ಆಧಾರದ ಮೇಲೆ ಆಸ್ತಿ ಮಾಲೀಕತ್ವ ಮತ್ತು ಕಾಗದಪತ್ರಗಳು ನೋಂದಣಿ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುನ್ನು ನೀಡಿದೆ.

ಹಿಂದೂ ಧರ್ಮದ ಸಂಸ್ಕೃತಿಯಲ್ಲಿ ಪಿತ್ರಾರ್ಜಿತ ಆಸ್ತಿ ಎಂದರೆ ಪೂರ್ವಜರಿಂದ ಬಂದ ಆಸ್ತಿ, ಇಲ್ಲಿ ಕುಟುಂಬದ ಸದಸ್ಯರಿಗೆ(Property transfer rules) ಅಂದರೆ ಹಕ್ಕುದಾರರು ಮತ್ತು ಮಾರಾಟದ ನಿಯಮಗಳನ್ನು ನಿರ್ಧರಿಸುವುದರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಈ ತೀರ್ಪಿನಿಂದ ಆಸ್ತಿಯ ಭದ್ರತೆ ಮತ್ತು ಮುಂದಿನ ಪೀಳಿಗೆಗೆ ಆಸ್ತಿಯ ವರ್ಗಾವಣೆಯನ್ನು ಸುಗಮಗೊಳಿಸಲು ಮಹತ್ವಪೂರ್ಣ ಹೆಜ್ಜೆಯಾಗಿದೆ.

ಇದನ್ನೂ ಓದಿ: Annabhagya Scheme- ಜನವರಿ ತಿಂಗಳ ಅನ್ನಭಾಗ್ಯ ಹಣ ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡುವುದು ಹೇಗೆ!

ಕುಟುಂಬಗಳಲ್ಲಿನ ಸದಸ್ಯರಿಗೆ ಮೊದಲ ಆದ್ಯತೆಯನ್ನು(Sale of family property)ನೀಡುವ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ಈಗಾಗಲೆ ಪ್ರಕಟಿಸಿದ್ದು, ಕುಟುಂಬದ ಆಸ್ತಿಯ ಭದ್ರತೆ ಮೇಲೆ ನಿಂತಿದೆ. ಸುಪ್ರೀಂ ಕೋರ್ಟ್ ತೀರ್ಪಿನ ಮುಂಖ್ಯ ಅಂಶಗಳಾವುವು? ತೀರ್ಪಿನ ಇಂದಿನ ಹಿನ್ನಲೆ ಏನು? ತೀರ್ಪಿನ ಪರಿಣಾಮಗಳೇನು? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

What is the judgment given by the Supreme Court-ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆ ಏನು:

ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಿಂದ ಇದು ಪಿತ್ರಾರ್ಜಿತ ಆಸ್ತಿ ಮಾರಾಟ ವಿಚಾರಕ್ಕೆ ಸಂಬಂಧಿಸಿದ್ದು, ಈ ತೀರ್ಪು ಹಿಮಾಚಲ ಪ್ರದೇಶದ ಲಜಪತ್ ಎಂಬುವವರ ಕೃಷಿ ಭೂಮಿಯ ಮಾರಾಟದ ಹಿಂದಿನ ಪ್ರಕರಣದಿಂದ ಉದ್ಭವಿಸಿತು. ಈ ಪ್ರಕರಣದಲ್ಲಿ, ಹಕ್ಕುದಾರರಾದ ನಾಥು ಮತ್ತು ಸಂತೋಷ್ ಅವರ ಆಸ್ತಿಯ ಪಾಲನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: Ayushman Bharat- ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಆಹ್ವಾನ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು!

ಆದರೆ ನಂತರ ಸಂತೋಷ್ ಅವರ ಭಾಗವನ್ನು ತೃತೀಯ ವ್ಯಕ್ತಿಗೆ ಮಾರಾಟ ಮಾಡಿದರು. ಇದಕ್ಕೆ ನಾಥು ವಿರೋಧಿಸಿ, ಹಿಂದೂ ಉತ್ತರಾಧಿಕಾರ ಕಾನೂನಿನ ಸೆಕ್ಷನ್ 22 ರ ಅಡಿಯಲ್ಲಿ ಆಸ್ತಿಯ ಮೇಲೆ ತಮ್ಮ ಆದ್ಯತೆಯ ಹಕ್ಕುಗಳನ್ನು ತಳ್ಳಿದರು. ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್, ಇಲ್ಲಿ ನಾಥು ಅವರ ಪರವಾಗಿ ತೀರ್ಪುನ್ನು ನೀಡಲಾಗಿದ್ದು, ಆದ್ದರಿಂದ ಸುಪ್ರೀಂಕೋರ್ಟ್ ಕೂಡ ಅದೇ ತೀರ್ಪನ್ನು ಸ್ವೀಕರಿಸಲಾಗಿದೆ.

property papers

Key points of the Supreme Court judgment- ಸುಪ್ರೀಂಕೋರ್ಟ್ ತೀರ್ಪಿನ ಮುಖ್ಯ ಅಂಶಗಳು:

ಕುಟುಂಬದಲ್ಲಿ ಆಸ್ತಿಯ ಆದ್ಯತೆ: ಹಿಂದೂ ಉತ್ತರಾಧಿಕಾರ ಕಾನೂನಿನ ಸೆಕ್ಷನ್ 22 ಮೇರೆಗೆ, ಯಾವುದೇ ಹಿಂದೂ ವಾರಸುದಾರನು ತನ್ನ ಭಾಗದ ಆಸ್ತಿಯನ್ನು ಮಾರಾಟ ಮಾಡಲು ಇಚ್ಛಿಸುವುದಾದರೆ, ಅದನ್ನು ಮೊದಲು ಕುಟುಂಬದ ಇತರ ಸದಸ್ಯರಿಗೆ ಮಾರಾಟ ಮಾಡಲು ಅವಕಾಶ ನೀಡಬೇಕಾಗಿದೆ. ಈ ನಿಯಮವು ಕುಟುಂಬದ ಆಸ್ತಿಯ ಹಕ್ಕುಗಳನ್ನು ಕಾಪಾಡಿ, ಅದನ್ನು ಹೊರಗಿನ ವ್ಯಕ್ತಿಗಳಿಂದ ಉಳಿಯಲು ಖಚಿತಪಡಿಸುತ್ತದೆ.

ಇದನ್ನೂ ಓದಿ: Milk Rate- ಭರ್ಜರಿ ಗುಡ್ ನ್ಯೂಸ್! ಹಾಲಿನ ದರ ಹೆಚ್ಚಳ ಮಾಡಿದ KMF!

ಕೃಷಿ ಭೂಮಿಯ ಮಾರಾಟ : ಸುಪ್ರೀಂ ಕೋರ್ಟ್ ಕೃಷಿ ಭೂಮಿಯ ಮಾರಾಟವನ್ನು ಕೂಡ ಸೆಕ್ಷನ್ 22 ಅಡಿಯಲ್ಲಿ ಬರುವುದಾಗಿ ಸ್ಪಷ್ಟಪಡಿಸಿದೆ. ಷೇರು ಹಂಚಿಕೆ ಅಥವಾ ಆಸ್ತಿ ಹಸ್ತಾಂತರಕ್ಕೆ ಸಂಬಂಧಿಸಿದ ಯಾವುದೇ ವ್ಯವಹಾರಗಳಲ್ಲಿ ಮೊದಲ ಆದ್ಯತೆ ಕುಟುಂಬದ ಸದಸ್ಯರಿಗೆ ನೀಡಬೇಕಾಗಿದ್ದು, ಇದು ಕುಟುಂಬ ಆಸ್ತಿಯ ಹಕ್ಕುಗಳನ್ನು ಉಳಿಸುವಲ್ಲಿ ಮಹತ್ವಪೂರ್ಣವಾಗಿದೆ.

ಹಿಂದೂ ಉತ್ತರಾಧಿಕಾರ ಕಾನೂನಿನ ಸಿದ್ಧಾಂತ: ಈ ಕಾನೂನಿನ ಉದ್ದೇಶವು ಕುಟುಂಬ ಆಸ್ತಿಯ ಸಂರಕ್ಷಣೆ ಮತ್ತು ಆಸ್ತಿಯನ್ನು ಪೀಳಿಗೆಯಿಂದ ಪೀಳಿಗೆ ಸ್ವತಃ ಪ್ರಾಪ್ತಿಗೊಳಿಸಲು ವ್ಯವಸ್ಥೆಯನ್ನು ಒದಗಿಸುವುದಾಗಿದೆ. ಪರಿವಾರದ ಆಸ್ತಿಯನ್ನು ಅನ್ಯಾಯದ ಅಕ್ರಮ ಮಾರಾಟದಿಂದ ರಕ್ಷಿಸುವ ದೃಷ್ಟಿಯಿಂದ, ಸುಪ್ರೀಂ ಕೋರ್ಟ್ ನೀಡಿದ ಈ ತೀರ್ಪು ಅತ್ಯಂತ ಮಹತ್ವಪೂರ್ಣವಾಗಿದೆ. ಇದರಿಂದ, ಕುಟುಂಬದ ಆಸ್ತಿ ಕುಟುಂಬದೊಳಗೆ ಉಳಿದು, ಮುಂದಿನ ಪೀಳಿಗೆಗಳಿಗೆ ಉತ್ತಮವಾಗಿ ಹಸ್ತಾಂತರವಾಗಲು ಅನುಕೂಲವಾಗುತ್ತದೆ.

ಇದನ್ನೂ ಓದಿ: Ration shop- ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ!

What are the consequences-ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮಗಳೇನು?

ಕುಟುಂಬದ ಆಸ್ತಿಯ ಭದ್ರತೆ: ಹಿಂದೂ ಕುಟುಂಬಗಳಲ್ಲಿ ಪೂರ್ವಿಕರಿಂದ ಬಂದ ಆಸ್ತಿಯ ರಕ್ಷಣೆ ಹೆಚ್ಚಾಗುತ್ತದೆ. ಕುಟುಂಬದ ಆಸ್ತಿ ಪೀಳಿಗೆಯಿಂದ ಪೀಳಿಗೆಗೆ ಸರಳವಾಗಿ ವರ್ಗಾವಣೆ ಮಾಡಲು ಸಹಾಯಕಾರಿಯಾಗಿದೆ.

ಆರ್ಥಿಕ ಸುರಕ್ಷತೆ: ಕುಟುಂಬಗಳಲ್ಲಿ ಆರ್ಥಿಕ ಭದ್ರತೆಯನ್ನು ಹೆಚ್ಚಿಸುವಂತೆ ಈ ತೀರ್ಪು ಸಹಾಯವಾಗಿದ್ದು,ಇದರ ಮೂಲಕ ಆಸ್ತಿಯ ಪುನಃವ್ಯವಸ್ಥೆ ಪ್ರಕ್ರಿಯೆ ಸರಳವಾಗಿ ನಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: LPG Gas- ಇಳಿಕೆಯತ್ತ LPG ಸಿಲಿಂಡರ್ ಬೆಲೆ! ಇಲ್ಲಿದೆ ಬೆಲೆ ವಿವರ!

RELATED ARTICLES
- Advertisment -

Most Popular

Recent Comments