ಇಂದಿರಾ ಗಾಂಧಿ ವೃತ್ತಿ ಅಭಿವೃದ್ದಿ ಕೇಂದ್ರ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ(Social Wellfare Department) ವತಿಯಿಂದ ಪೂರ್ವ ನೇಮಕಾತಿ ವಸತಿಯುತ ಪೊಲೀಸ್ ಕಾನ್ಸ್-ಟೇಬಲ್ ತರಬೇತಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರದ ಅಡಿಯಲ್ಲಿ ನೆಡೆಸಲಾದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಇದಾಗಲೆ ಆರಂಭವಾಗಿದ್ದು, ಅರ್ಜಿದಾರ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷಾ(Pre-Examination Training) ಪೂರ್ವ ತರಬೇತಿಯನ್ನು ಪಡೆಯಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗೆ ಅರ್ಜಿಯನ್ನು ಸಲ್ಲಿಸಲು ಕೋರಿದೆ.
ಇದನ್ನೂ ಓದಿ: Land Ownership Scheme-ಭೂಮಿ ಖರೀದಿಸಲು 25 ಲಕ್ಷ ರೂ ಸಹಾಯಧನ! ಇಲ್ಲಿದೆ ಸಂಪೂರ್ಣ ಮಾಹಿತಿ!
ಈ ತರಬೇತಿಯನ್ನು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರು, ಹಿಂದುಳಿದ ವರ್ಗದವರು, ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಹಾಗೂ ಮೊದಲ ಬಾರಿಗೆ ಪರೀಕ್ಷೆ(Police Exam Coaching) ಬರೆಯುತ್ತಿರುವವರಿಗೆ ಸಹಾಯವಾಗಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಈ ಲೇಖನದಲ್ಲಿ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಈ ಯೋಜನೆಯ ಉದ್ದೇಶವೇನು? ಅರ್ಜಿಯನ್ನು ಸಲ್ಲಿಸಲು ಅನುಸರಿಸ ಬೇಕಾದ ಹಂತಗಳಾವುವು? ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುವು? ಅರ್ಜಿಯನ್ನು ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಇನ್ನಿತರ ಹೆಚ್ಚಿನ ಉಪಯುಕ್ತ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯಾ? ಚೆಕ್ ಮಾಡಿ!
Last Date For Apply-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2025
Who Can Apply-ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?
ಅಭ್ಯರ್ಥಿಯು ಮಾನ್ಯತೆ ಪಡೆದ ಅಂಗೀಕೃತ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.
ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರ ಅಭ್ಯರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
ಅಭ್ಯರ್ಥಿಯು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ₹5.00 ಲಕ್ಷದ ಒಳಗಿರಬೇಕು.
ದೈಹಿಕ ಸಾಮರ್ಥ್ಯವು ಪುರುಷರಿಗೆ ಕನಿಷ್ಠ 168 ಸೆಂ.ಮೀ ಎತ್ತರ ಮತ್ತು ಮಹಿಳೆಯರಿಗೆ 157 ಸೆಂ.ಮೀ ಇರಬೇಕು.
ಅಲ್ಲದೇ, ಇನ್ನಿತರ ನಿಯಮಗಳ ಅನುಸಾರ ದೈಹಿಕ ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ: PMSBY Scheme-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ ₹12 ರೂ ಗೆ ₹2 ಲಕ್ಷ ವಿಮೆ!
Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?
ಜಾತಿ ಪ್ರಮಾಣಪತ್ರ (Caste Certificate)
ಆದಾಯ ಪ್ರಮಾಣಪತ್ರ (Income Certificate):
ದ್ವಿತೀಯ ಪಿಯುಸಿ ಮಾರ್ಕ್ಸ್ ಕಾರ್ಡ್ (Second PUC Marks Card)
ನಿವಾಸಿ ಪ್ರಮಾಣಪತ್ರ (Residence Certificate)
ಫೋಟೋ ಮತ್ತು ಸಹಿ (Photograph and Signature)
ದೈಹಿಕ ಅರ್ಹತೆಯ ಪರೀಕ್ಷೆಗೆ ಸಂಬಂಧಿಸಿದ ದಾಖಲೆಗಳು (ಅಗತ್ಯವಿದ್ದಲ್ಲಿ)
ಇದನ್ನೂ ಓದಿ: Labour Scholorship-ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?
Step-1: ಮೊದಲಿಗೆ ಈ ಲಿಂಕ್ ಮೇಲೆ Apply Now ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
ಇದನ್ನೂ ಓದಿ: Constable Recruitment 2025-SSLC & ITI ಪಾಸಾದವರಿಗೆ 3,588 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ!
ಇದನ್ನೂ ಓದಿ: PM Surya Ghar Scheme-ಪಿಎಂ ಸೂರ್ಯ ಘರ್ ಯೋಜನೆಯಡಿ ಎಲ್ಲರಿಗೂ ಉಚಿತ ವಿದ್ಯುತ್ ಮತ್ತು ಸಬ್ಸಿಡಿಗೆ ಅರ್ಜಿ!
Step-2: ಈ ಪೇಜ್ ನಲ್ಲಿ “ಅರ್ಜಿ ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಆಧಾರ್ ನಲ್ಲಿರುವಂತೆ ನಿಮ್ಮ ಹೆಸರನ್ನು ಹಾಕಿ ಕೆಳಗೆ ಕಾಣುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ “Proceed” ಬಟನ್ ಮೇಲೆ ಕ್ಲಿಕ್ ಮಾಡಿದರೆ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
Step-3: ಅರ್ಜಿ ನಮೂನೆ ತೆರೆದುಕೊಂಡ ಬಳಿಕ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.