Wednesday, August 6, 2025
No menu items!
HomeNewsPMSBY Scheme-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ ₹12 ರೂ ಗೆ ₹2 ಲಕ್ಷ...

PMSBY Scheme-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ ₹12 ರೂ ಗೆ ₹2 ಲಕ್ಷ ವಿಮೆ!

ಭಾರತೀಯ ಅಂಚೆ ಇಲಾಖೆಯ ವತಿಯಿಂದ ಪ್ರಧಾನ ಮಂತ್ರಿ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳ ಅಡಿಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ(PMSBY)ಯನ್ನು ಜಾರಿಗೆ ತಂದಿದ್ದು,

ಇದನ್ನೂ ಓದಿ: Labour Scholorship-ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಈ ಯೋಜನೆಯಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಅರ್ಜಿಯನ್ನು ಸಲ್ಲಿಸುವ ವಿಧಾನಗಳು? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಈ ಯೋಜನೆಯ ಪ್ರಯೋಜನಗಳೇನು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Pradhan Mantri Bima Yojana-ಏನಿದು ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ?

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(Pradhan Mantri Suraksha Bima Yojana)ಭಾರತ ಸರ್ಕಾರದಿಂದ ಬೆಂಬಲಿತ ಅಪಘಾತ ವಿಮಾ ಯೋಜನೆಯಾಗಿದ್ದು,ಅಪಘಾತದಿಂದಾಗಿ ಸಂಭವಿಸುವ ಅಪಘಾತ ಸಾವು ಅಥವಾ ಅಂಗವೈಕಲ್ಯಕ್ಕೆ ಕಡಿಮೆ-ವೆಚ್ಚದ, ನವೀಕರಿಸಬಹುದಾದ, ಒಂದು ವರ್ಷದ ರಕ್ಷಣೆಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ಭಾಗವಹಿಸುವ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಮೂಲಕ ನಿರ್ವಹಿಸಲಾಗುತ್ತದೆ.

ಈ ಯೋಜನೆಯಲ್ಲಿ ವಾರ್ಷಿಕ ಪ್ರೀಮಿಯಂ ಕೇವಲ ₹12 ರೂ ಗಳನ್ನು ಪಾವತಿ ಮಾಡಬೇಕಾಗುತ್ತದೆ, ಇದರಿಂದ ಸಾಮಾನ್ಯವಾಗಿ ₹2 ಲಕ್ಷವನ್ನು ಒದಗಿಸಲಾಗುತ್ತದೆ. ಇದು ಎಲ್ಲಾ ವಯಸ್ಕರಿಗೂ ಲಭ್ಯವಿದ್ದು, ತಮ್ಮ ಕುಟುಂಬವನ್ನು ಸುರಕ್ಷಿತವಾಗಿಡಲು ಒಂದು ಉತ್ತಮ ಯೋಜನೆಯಾಗಿದೆ.

ಇದನ್ನೂ ಓದಿ: Constable Recruitment 2025-SSLC & ITI ಪಾಸಾದವರಿಗೆ 3,588 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ!

Benifits For This Scheme-ಈ ಯೋಜನೆಯ ಪ್ರಮುಖ ಲಕ್ಷಣಗಳು:

ಅಪಘಾತ ಮರಣ ಮತ್ತು ಅಂಗವೈಕಲ್ಯ ರಕ್ಷಣೆ: ಈ ಯೋಜನೆಯು ಆಕಸ್ಮಿಕ ಮರಣ ಅಥವಾ ಶಾಶ್ವತ ಸಂಪೂರ್ಣ ಅಂಗವೈಕಲ್ಯಕ್ಕೆ ₹2 ಲಕ್ಷ ಮತ್ತು ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ₹1 ಲಕ್ಷ ಮೊತ್ತದ ವಿಮಾ ರಕ್ಷಣೆಯನ್ನು ನೀಡುತ್ತದೆ.

ಕಡಿಮೆ ಪ್ರೀಮಿಯಂ: ವಾರ್ಷಿಕ ಪ್ರೀಮಿಯಂ ಪ್ರತಿ ಸದಸ್ಯರಿಗೆ ಕೇವಲ ₹20 ರೂ ಗಳನ್ನು ಪಾವತಿ ಮಾಡಬೇಕು.

ಸ್ವಯಂಚಾಲಿತ ನವೀಕರಣ: ಖಾತೆದಾರರ ಉಳಿತಾಯ ಅಥವಾ ಚಾಲ್ತಿ ಖಾತೆಯಿಂದ ಸ್ವಯಂ-ಡೆಬಿಟ್ ಮೂಲಕ ಪಾಲಿಸಿಯನ್ನು ಪ್ರತಿ ವರ್ಷ ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ.

ಅರ್ಹತೆ: ಈ ಯೋಜನೆಯು 18 ರಿಂದ 70 ವರ್ಷ ವಯಸ್ಸಿನ ಅರ್ಹತಾ ವಯಸ್ಸಿನ ಎಲ್ಲಾ ವೈಯಕ್ತಿಕ ಉಳಿತಾಯ/ಚಾಲ್ತಿ ಖಾತೆದಾರರಿಗೆ ಮುಕ್ತವಾಗಿದೆ, ಅವರು ಸ್ವಯಂ-ಡೆಬಿಟ್‌ಗೆ ಒಪ್ಪಿಗೆ ನೀಡಿದ್ದಾರೆ.

ನೋಂದಣಿ: ನೋಂದಣಿಯನ್ನು ಭಾಗವಹಿಸುವ ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಮೂಲಕ ಮಾಡಲಾಗುತ್ತದೆ, ಸಾಮಾನ್ಯವಾಗಿ ಒಪ್ಪಿಗೆ ಮತ್ತು ಘೋಷಣೆ ನಮೂನೆಯನ್ನು ಸಲ್ಲಿಸುವ ಮೂಲಕ.

ಪಾಲಿಸಿ ಅವಧಿ: ವಿಮಾ ರಕ್ಷಣೆಯು ಜೂನ್ 1 ರಿಂದ ಮೇ 31 ರವರೆಗೆ ಒಂದು ವರ್ಷದವರೆಗೆ ಇರುತ್ತದೆ.

ಇದನ್ನೂ ಓದಿ: Labour Department-ಕಾರ್ಮಿಕ ಇಲಾಖೆಯಡಿ ಕಾರ್ಮಿಕರ ಪರಿಹಾರ ಮೊತ್ತವು 1.5 ಲಕ್ಷಕ್ಕೆ ಏರಿಕೆ!

Who Can Apply-ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ ಅಭ್ಯರ್ಥಿಯು ಭಾರತದ ಖಾಯಂ ಪ್ರಜೆಯಾಗಿರಬೇಕು.

ಅರ್ಜಿದಾರರ ವಯಸ್ಸು ಕನಿಷ್ಟ 18 ರಿಂದ 70 ವರ್ಷದ ಒಳಗಿನವರಾಗಿರಬೇಕು.

ಅರ್ಜಿದಾರ ಅಭ್ಯರ್ಥಿಯು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಯ ಅಗತ್ಯವಿರುವುದಿಲ್ಲ.

ಇದನ್ನೂ ಓದಿ: PM Surya Ghar Scheme-ಪಿಎಂ ಸೂರ್ಯ ಘರ್ ಯೋಜನೆಯಡಿ ಎಲ್ಲರಿಗೂ ಉಚಿತ ವಿದ್ಯುತ್ ಮತ್ತು ಸಬ್ಸಿಡಿಗೆ ಅರ್ಜಿ!

Documents Required-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳಾವುವು?

ಅರ್ಜಿದಾರರ ಆಧಾರ್ ಕಾರ್ಡ/Aadhar Card

ವೋಟರ್ ಐಡಿ/Voter ID

ಪಾನ್ ಕಾರ್ಡ್/Pan Card

PMSBY ಅರ್ಜಿ ಫಾರ್ಮ್/PMSBY Form

ಬ್ಯಾಂಕ್ ಪಾಸ್ ಬುಕ್/Bank Passbook

ಫೋಟೋ/Photocopy

ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Birth & Death Certificate-ಜನನ & ಮರಣ ಪ್ರಮಾಣ ಪತ್ರ ಪಡೆಯುವುದು ಇನ್ನೂ ಭಾರಿ ಸುಲಭ!

online Application Process-ಅರ್ಜಿಯನ್ನು ಸಲ್ಲಿಸುವ ವಿಧಾನ?

ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ನಿಮ್ಮ ಹತ್ತಿರದಲ್ಲಿರುವ ಅಂಚೆ ಕಚೇರಿಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ನಿಮ್ಮ ಮೊಬೈಲ್ ನಲ್ಲಿಯೇ ಆನ್ಲೈನ್ ಮೂಲಕ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Scholarships-ಹೀರೋ ಗ್ರೂಪ್‌ನಿಂದ ಪದವಿ ವಿದ್ಯಾಭ್ಯಾಸಕ್ಕೆ ₹5.5 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!

ಇದನ್ನೂ ಓದಿ: Infosys Scholarship-ಇನ್ಫೋಸಿಸ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು 15 ಸೆಪ್ಟೆಂಬರ್ ಕೊನೆಯ ದಿನಾಂಕ!

Step-1: ಮೊದಲು ಈ ಲಿಂಕ್ “Apply Now” ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.

Step-2: ನಂತರ ‘Insurance’ or ‘Government Schemes’ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ “Pradhan Mantri Suraksha Bima Yojana (PMSBY)” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ ಅಲ್ಲಿ ಕೇಳುವ ಎಲ್ಲಾ ಅಗತ್ಯ ವಿವರಗಳನ್ನು ಭರ್ತಿ ಮಾಡಿ ‘Submit’ ಬಟನ್ ಮೇಲೆ ಕ್ಲಿಕ್ ಮಾಡಿ ₹20 ಪ್ರೀಮಿಯಂ ಅನ್ನು ಪಾವತಿ ಮಾಡಬೇಕು.

ಇದನ್ನೂ ಓದಿ: PM Yasasvi Scholarship-ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಹೆಚ್ಚಿನ ಮಾಹಿತಿಗಾಗಿ:

ಈ ಯೋಜನೆಯನ್ನು ಪ್ರತಿ ವರ್ಷವೂ ಸಹ ನವೀಕರಿಸಬೇಕು. ಪ್ರೀಮಿಯಂ ಪಾವತಿ ಮಾಡದಿದ್ದಲ್ಲಿ ಯೋಜನೆಯು ಸ್ವಯಂ ರದ್ದಾಗುತ್ತದೆ.

 

 

RELATED ARTICLES
- Advertisment -

Most Popular

Recent Comments