ಪಿ. ಎಂ. ಯಂಗ್ ಅಚೀವರ್ಸ್ ಸ್ಕಾಲರ್ಶಿಪ್ ಅವಾರ್ಡ್ ಸ್ಕೀಮ್ ಫಾರ್ ವೈಬ್ರೆಂಟ್ ಇಂಡಿಯಾ(PM Yasasvi Scholarship)ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಅರ್ಹ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ವಿದ್ಯಾರ್ಥಿವೇತನದ ಅಡೀಯಲ್ಲಿ ಮಧ್ಯಮ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ (PM YASASVI Scholarship Yojane) ಅನ್ನು ಪ್ರಾರಂಭಮಾಡಿದ್ದು, ಪ್ರಸ್ತುತ ಈ ಯೋಜನೆಯ ಅಡಿಯಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಇದನ್ನೂ ಓದಿ: Scholarships-ಹೀರೋ ಗ್ರೂಪ್‌ನಿಂದ ಪದವಿ ವಿದ್ಯಾಭ್ಯಾಸಕ್ಕೆ ₹5.5 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!
ಪ್ರಸ್ತುತ ಈ ಲೇಖನದಲ್ಲಿ ಪಿಯಂ ಯಶಸ್ವಿ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಅರ್ಜಿಗೆ ಸಂಬಂದಿಸಿದ ದಾಖಲಾತಿಗಳಾವುವು? ಈ ಯೋಜನೆಯಡಿ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ? ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
PM Yasasvi Yojane-ಪಿಎಂ ಯಶಸ್ವಿ ವಿದ್ಯಾರ್ಥಿವೇತನ ಯೋಜನೆ:
ಪಿಎಂ ಯಶಸ್ವಿ (YASASVI – Young Achievers Scholarship Award Scheme for Vibrant India) ವಿದ್ಯಾರ್ಥಿವೇತನ ಯೋಜನೆ, ಹಿಂದುಳಿದ ವರ್ಗದ (OBC, EBC, DNT) ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ನೀಡುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ನೀಡುವುದರ ಉದ್ದೇಶವಾಗಿದೆ.
ಇದನ್ನೂ ಓದಿ: RTC Aadhar Link Status-ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ!ಲಿಂಕ್ ಅಗಿರುವುದನ್ನು ಈಗಲೇ ಪರಿಶೀಲಿಸಿ!
ಈ ಯೋಜನೆಯ ಮೂಲಕ ವಿದ್ಯಾರ್ಥಿಗಳು ಮೆಟ್ರಿಕ್ಯುಲೇಷನ್ ಪೂರ್ವ ಅಥವಾ ಮಾಧ್ಯಮಿಕ ಹಂತದ ಶಿಕ್ಷಣವನ್ನು ನಿರಂತರವಾಗಿ ಮುಂದುವರಿಸಬಹುದಾಗಿದೆ. ಯೋಜನೆಯಡಿಯಲ್ಲಿ ವಿದ್ಯಾರ್ಥಿಗೆ ಸೇರಿದ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಿಂದಲೇ ಈ ಧನಸಹಾಯ ದೊರೆಯುತ್ತದೆ.
Last Date-ಅರ್ಜಿಯನ್ನು ಸಲ್ಲಿಸಲು ಪ್ರಮುಖ ದಿನಾಂಕಗಳು:
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ- 31-08-2025
ಅರ್ಜಿಯನ್ನು ಪರಿಶೀಲನೆ ಮಾಡುವ ದಿನಾಂಕ-15-09-2025
ಈ ಯೋಜನೆಯ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ?
9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ-₹75,000 ರೂಪಾಯಿಗಳು 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ-₹1,25,000 ಪ್ರತಿ ವರ್ಷ ನೀಡಲಾಗುತ್ತದೆ.
ಇದನ್ನೂ ಓದಿ: Family tree certificate-ವಂಶವೃಕ್ಷ ಪ್ರಮಾಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ!
Who Can Apply-ಪಿಎಂ ಯಶಸ್ವಿ ವಿದ್ಯಾರ್ಥಿವೇತನಕ್ಕೆ ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು?
- ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು ಹಾಗೂ ನಿವಾಸಿಯಾಗಿರಬೇಕು.
- ವಿದ್ಯಾರ್ಥಿಯು OBC,EBC,DNT ವರ್ಗದವರು ಅರ್ಜಿಯನ್ನು ಸಲ್ಲಿಸಲು ಅರ್ಹರಿರುತ್ತಾರೆ.
- ವಿದ್ಯಾರ್ಥಿಯ ಪೋಷಕರ ವಾರ್ಷಿಕ ಆದಾಯವು ₹2.5 ಲಕ್ಷ ಮೀರಿರಬಾರದು.
- ವಿದ್ಯಾರ್ಥಿಯು ಭಾರತದ ಮಾನ್ಯತೆ ಪಡೆದ ಶಾಲೆಗಳಲ್ಲಿ 9ನೇ ಅಥವಾ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- Post-Matric Scholarship for OBC, EBC and DNT Students,Top Class School Education for OBC,EBC and DNT Students,Top Class College Education for OBC, EBC and DNT Students
- Construction of Hostel for OBC Boys and Girls ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.
ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 8 ದಿನ ಬಾಕಿ!
Documents Required-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?
- ವಿದ್ಯಾರ್ಥಿಯ ಆಧಾರ್ ಕಾರ್ಡ್/Aadhar Card
- ಜಾತಿ ಪ್ರಮಾಣ ಪತ್ರ /Caste Certificate
- ಆದಾಯ ಪ್ರಮಾಣಪತ್ರ/Income Certificate
- ಅಂಕಪಟ್ಟಿ/Markscard
- ನಿವಾಸಿ ದೃಡೀಕರಣ ಪ್ರಮಾಣಪತ್ರ/Residential certificate
- ಇ-ಮೇಲ್ ಐಡಿ/E-mail
- ಬ್ಯಾಂಕ್ ಪಾಸ್ ಬುಕ್/Pass Book
- ಫೋಟೋ/Photo copy
- ಮೊಬೈಲ್ ಸಂಖ್ಯೆ/Mobile
ಇದನ್ನೂ ಓದಿ: Karnataka Labour Scheme-ಕಾರ್ಮಿಕ ಮಂಡಳಿಯಿಂದ ಪರಿಹಾರ ಧನ 8 ಲಕ್ಷಕ್ಕೆ ಏರಿಕೆ!
How To Apply For Scholorship-ಈ ಯೋಜನೆಯಡಿ ವಿದ್ಯಾರ್ಥಿವೇತನವನ್ನು ಪಡೆಯುವುದು ಹೇಗೆ?
ಪಿಎಂ ಯಶಸ್ವಿ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳುವ ಅರ್ಹ ವಿದ್ಯಾರ್ಥಿಗಳು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
Step-1: ಮೊದಲು ಈ ಲಿಂಕ್ “Click Here” ಮೇಲೆ ಕ್ಲಿಕ್ ಮಾಡಿ ಅಧಿಕೃತ scholarships.gov.in ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
ಇದನ್ನೂ ಓದಿ: Karnataka Weather-ಜು.27 ರವರೆಗೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ! ಇಲ್ಲಿದೆ ರಾಜ್ಯ ಮಳೆ ಮುನ್ಸೂಚನೆ!

ಇದನ್ನೂ ಓದಿ: Bharti Airtel Scholarship-ಏರ್‌ಟೆಲ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನೂ 11 ದಿನ ಬಾಕಿ!
Step-2: ನಂತರ ಅದೇ ಪೇಜ್ ನಲ್ಲಿ ಕಾಣುವ “New user? Register yourself” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ OTR ಸಂಖ್ಯೆಯನ್ನು ಸಿದ್ದ ಮಾಡಿಕೊಳ್ಳಬೇಕು.
Step-3: OTR ಸಂಖ್ಯೆಯನ್ನು ಸಿದ್ದ ಮಾಡಿಕೊಂಡ ನಂತರ ಪುನಃ “Login with OTR” ಪುಟವನ್ನು ಭೇಟಿ ಮಾಡಿ Enter OTR (One Time Registration) no ಕಾಲಂ ನಲ್ಲಿ ನಿಮ್ಮ OTR ಸಂಖ್ಯೆಯನ್ನು ನಮೂದಿಸಿದ ನಂತರ ಪಾಸ್ವರ್ಡ ಅನ್ನು ಹಾಕಿ “Captcha”ಅನ್ನು ಹಾಕಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.
Step-4: ಲಾಗಿನ್ ಆದ ನಂತರ ಅರ್ಜಿ ನಮೂನೆ Open ಆಗುತ್ತದೆ ಇಲ್ಲಿ ವಿದ್ಯಾರ್ಥಿವೇತನ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ: Aadhar Update-7 ವರ್ಷ ಮೀರಿದ ಮಕ್ಕಳಿಗೆ ಆಧಾರ್ ಕಾರ್ಡ ಬಯೋಮೆಟ್ರಿಕ್ ಕಡ್ಡಾಯ!
ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಪಿಎಂ ಯಶಸ್ವಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ-Read More
PM Yasasvi Website-ಪಿಎಂ ಯಶಸ್ವಿ ಯೋಜನೆಯ ಅನುಷ್ಠಾನ ಇಲಾಖೆಯ ವೆಬ್ಸೈಟ್-Click Here