Wednesday, August 6, 2025
No menu items!
HomeNewsPM Kisan Amount-ಪಿಎಂ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯಾ?...

PM Kisan Amount-ಪಿಎಂ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯಾ? ಚೆಕ್ ಮಾಡಿ!

ಕೇಂದ್ರ ಸರ್ಕಾರದ ರೈತಪರ ಪ್ರಮುಖ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ದೇಶದಾದ್ಯಂತ 9.7 ಕೋಟಿ ರೈತರಿಗೆ(PM Kisan 20th Iinstallment)20ನೇ ಕಂತಿನ ₹2,000 ಹಣವನ್ನು ರೈತರ ಖಾತೆಗೆ ಹಣವನ್ನು ಜಮ ಮಾಡಲಾಗಿದ್ದು, ನಿಮ್ಮ ಖಾತೆಗೆ ಹಣ ಜಮಾ ಆಗಿದಿಯಾ? ಇಲ್ಲವಾ? ಚೆಕ್ ಮಾಡಿ.

ಈ ಯೋಜನೆಯ ಈ ಹಣ ಸಹಾಯಧನವು ಲಕ್ಷಾಂತರ ರೈತರಿಗೆ ಆರ್ಥಿಕ ನೆರವಿಗೆ ಸಹಾಯವಾಗಿದೆ. ಈ ಯೋಜನೆಯ(PM Kisan)ಅಡಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ವರ್ಷದಲ್ಲಿ ಮೂರು ಹಂತಗಳಾಗಿ ತಲಾ ₹2,000 ರಂತೆ ₹6,000 ಹಣವನ್ನು ರೈತರ ಖಾತೆಗೆ ನಗದು ಪಾವತಿ ಮಾಡಲಾಗುತ್ತದೆ.

ಇದನ್ನೂ ಓದಿ: PMSBY Scheme-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ ₹12 ರೂ ಗೆ ₹2 ಲಕ್ಷ ವಿಮೆ!

ಪ್ರಸ್ತುತ ಈ ಲೇಖನದಲ್ಲಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ರೈತರು ತಮ್ಮ ಮೊಬೈಲ್ ನಲ್ಲಿಯೇ 20ನೇ ಕಂತಿನ ₹2,000 ಹಣದ ಜಮಾ ವಿವರವನ್ನು ಚೆಕ್ ಮಾಡುವುದು ಹೇಗೆ? ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮಹತ್ವವೇನು? ಇತರ ಹೆಚ್ಚಿನ ಉಪಯುಕ್ತ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Eligible For PM Kisan-ಪಿಎಂ ಕಿಸಾನ್ ಯೋಜನೆಯ ಹಣವನ್ನು ಪಡೆಯಲು ಯಾರು ಅರ್ಹರು?

ಅರ್ಜಿದಾರ ಅರ್ಹ ರೈತರು ಭಾರತೀಯ ನಾಗರಿಕರಾಗಿರಬೇಕು.

ಅರ್ಜಿದಾರ‍ ಅಭ್ಯರ್ಥಿಯ ಆಧಾರ್ ಕಾರ್ಡ ಸಂಖ್ಯೆಯು ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.

ಅರ್ಜಿದಾರರ e-KYC ಯು ಪೂರ್ಣ ಆಗಿರಬೇಕು.

ಅರ್ಜಿದಾರರ ಜಮೀನಿನ ದಾಖಲಾತಿಗಳು ಸರಿ ಹೊಂದಿರಬೇಕು.

ಅರ್ಜಿದಾರರು ಸಣ್ಣ ಹಾಗೂ ಸೀಮಿತ ಭೂಮಿಯ ರೈತರಾಗಿರಬೇಕು.

ಅರ್ಜಿದಾರರು 5 ಎಕರೆ ಗಿಂತ ಹೆಚ್ಚು ಜಮೀನನ್ನು ಹೊಂದಿದ್ದರೆ ಈ ಯೋಜನೆಯಡಿ ಅರ್ಹರಿರುವುದಿಲ್ಲ.

ಅರ್ಜಿದಾರ ರೈತನ ಹೆಸರಲ್ಲಿ ಭೂಮಿಯು ನೋಂದಾಯಿತವಾಗಿರಬೇಕು. ಇಲ್ಲದಿದ್ದಲ್ಲಿ ಹಣ ಜಮಾ ಆಗುವುದಿಲ್ಲ.

ಇದನ್ನೂ ಓದಿ: Labour Scholorship-ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Documents Required-ಈ ಯೋಜನೆಯಡಿ ಪ್ರಯೋಜನ ಪಡೆಯಲು ಯಾವ ದಾಖಲಾತಿಗಳಿರಬೇಕು?

ರೈತರ ಆಧಾರ್ ಕಾರ್ಡ್/Aadhaar Card

ಬ್ಯಾಂಕ್ ಖಾತೆ ವಿವರ/Bank Account Details

ಭೂಮಿಯ ದಾಖಲೆ/Land Ownership Documents

ಮೊಬೈಲ್ ನಂಬರ್/Mobile Number

ಇ-ಕೆವೈಸಿ/e-KYC

ಇದನ್ನೂ ಓದಿ: Constable Recruitment 2025-SSLC & ITI ಪಾಸಾದವರಿಗೆ 3,588 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ!

PM Kisan Details-ಪಿಎಂ ಕಿಸಾನ್ ಯೋಜನೆಯ ವಿವರ ಈ ಕೆಳಗಿನಂತಿವೆ:

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ರೈತರಿಗೆ ಆರ್ಥಿಕ ಬೆಂಬಲ ನೀಡಲು ಇಂದಿನವರೆಗೆ ಸಾವಿರಾರು ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯ 20ನೇ ಕಂತಿನ ಹಣವನ್ನು ಇತ್ತೀಚಿಗೆ ಬಿಡುಗಡೆ ಮಾಡಲಾಗಿದೆ.

ಇಲ್ಲಿಯವರೆಗೆ ಬಿಡುಗಡೆಯಾದ ಮೊತ್ತ- 3,77,000 ಕೋಟಿ

20ನೇ ಕಂತಿಗೆ ಬಿಡುಗಡೆ ಮಾಡಲಾದ ಮೊತ್ತ- 20,500 ಕೋಟಿ

ಈ ಯೋಜನೆಯಡಿ ಲಾಭ ಪಡೆಯುತ್ತಿರುವ ರೈತರ ಸಂಖ್ಯೆ- 9.7 ಕೋಟಿ

20ನೇ ಕಂತಿನ ಬಿಡುಗಡೆ ದಿನಾಂಕ- 02-08-2025

ಇದನ್ನೂ ಓದಿ: Labour Department-ಕಾರ್ಮಿಕ ಇಲಾಖೆಯಡಿ ಕಾರ್ಮಿಕರ ಪರಿಹಾರ ಮೊತ್ತವು 1.5 ಲಕ್ಷಕ್ಕೆ ಏರಿಕೆ!

20 instalment list

ಇದನ್ನೂ ಓದಿ: PM Surya Ghar Scheme-ಪಿಎಂ ಸೂರ್ಯ ಘರ್ ಯೋಜನೆಯಡಿ ಎಲ್ಲರಿಗೂ ಉಚಿತ ವಿದ್ಯುತ್ ಮತ್ತು ಸಬ್ಸಿಡಿಗೆ ಅರ್ಜಿ!

How To Check PM Kisan Status-ನಿಮ್ಮ ಖಾತೆಗೆ ಬಂದಿರುವ ಹಣವನ್ನು ಚೆಕ್ ಮಾಡುವುದು ಹೇಗೆ?

ಪ್ರಸ್ತುತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಜಮಾ ಮಾಡಿರುವ 20ನೇ ಕಂತಿನ ರೂ 2,000/- ಆರ್ಥಿಕ ನೆರವು ತಮ್ಮ ಬ್ಯಾಂಕ್ ಖಾತೆಗೆ ಜಮಾ ಅಗಿರುವುದನ್ನು ರೈತರು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಹಣ ಜಮಾ ಆಗಿರುವುದನ್ನು ಚೆಕ್ ಮಾಡಬಹುದು.

Step-1: ಮೊದಲಿಗೆ ಈ ಲಿಂಕ್ “PM Kisan status check” ಮೇಲೆ ಕ್ಲಿಕ್ ಮಾಡಿ ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Birth & Death Certificate-ಜನನ & ಮರಣ ಪ್ರಮಾಣ ಪತ್ರ ಪಡೆಯುವುದು ಇನ್ನೂ ಭಾರಿ ಸುಲಭ!

Step-2: ತದನಂತರ ಈ ವೆಬ್ ಪೇಜ್ ನಲ್ಲಿ ನಿಮ್ಮ ಅರ್ಜಿಯ Registration Number ಅನ್ನು ಹಾಕಿ ಪಕ್ಕದಲ್ಲಿರುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ “Get OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಅನ್ನು”Enter OTP” ಕಾಲಂ ನಲ್ಲಿ ನಮೂದಿಸಿ “Get Data” ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ಪೇಜ್ ಕೊನೆಯಲ್ಲಿ 20ನೇ ಕಂತಿನ ಹಣ ಜಮಾ ವಿವರ ಮತ್ತು UTR Details,ಇನ್ನಿತರೆ ಬ್ಯಾಂಕ್ ವಿವರವನ್ನು ಚೆಕ್ ಮಾಡಬಹುದು.

ಇದನ್ನೂ ಓದಿ: Scholarships-ಹೀರೋ ಗ್ರೂಪ್‌ನಿಂದ ಪದವಿ ವಿದ್ಯಾಭ್ಯಾಸಕ್ಕೆ ₹5.5 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!

More Information-ಹೆಚ್ಚಿನ ಉಪಯುಕ್ತ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:

ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್: Click Here
ಪಿಎಂ ಕಿಸಾನ್ ಸಹಾಯವಾಣಿ: 155261, 011-24300606

RELATED ARTICLES
- Advertisment -

Most Popular

Recent Comments