ರಾಜ್ಯ ಸರಕಾರದಿಂದ SDRF ಮಾರ್ಗಸೂಚಿ ಪ್ರಕಾರ ರೈತರ ಖಾತೆಗೆ ಕಂದಾಯ ಇಲಾಖೆಯಿಂದ ನೇರ ನಗದು ವರ್ಗಾವಣೆ ಮೂಲಕ ₹297 ಕೋಟಿ ಪರಿಹಾರವನ್ನು(Parihara farmer list) ಬಿಡುಗಡೆ ಮಾಡಿ ಹಣ ಜಮಾ ಅಗಿರುವ ರೈತರ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.
ರೈತರು ತಮ್ಮ ಮೊಬೈಲ್ ನಲ್ಲೇ ಅಧಿಕೃತ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಿ ಹಂಗಾಮುವಾರು ಪರಿಹಾರ ಪಡೆದ ನಿಮ್ಮ ಹಳ್ಳಿಯ ರೈತರ ಪಟ್ಟಿಯನ್ನು(bele parihara) ಪಡೆಯಬಹುದಾಗಿದ್ದು ಈ ಪಟ್ಟಿಯಲ್ಲಿ ನಿಮಗೆ ಎಷ್ಟು ಮೊತ್ತದ ಪರಿಹಾರ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ನೋಡಬಹುದಾಗಿದೆ.
ಪರಿಹಾರ ವೆಬ್ಸೈಟ್ ಅನ್ನು ಭೇಟಿ ಮಾಡಿ ರೈತರು ತಮ್ಮ ಮೊಬೈಲ್ ನಲ್ಲೇ ಹಣ ಜಮಾ ವಿವರವನ್ನು(Bele Parihara status) ಪಡೆಯುವುದು ಹೇಗೆ ಎಂದು ಚೆಕ್ ಮಾಡುವು ವಿಧಾನದ ಮಾಹಿತಿ ಹಾಗೂ ಈ ವರ್ಷ ಬಿಡುಗಡೆ ಮಾಡಿರುವ ಒಟ್ಟು ಪರಿಹಾರದ ಅನುದಾನದ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
Parihara Status Check- ಪರಿಹಾರದ ಹಣ ಜಮಾ ಇರುವ ಹಳ್ಳಿವಾರು ರೈತರ ಪಟ್ಟಿಯನ್ನು ಮೊಬೈಲ್ ನಲ್ಲಿ ಪಡೆಯುವ ವಿಧಾನ:
ರೈತರು ತಮಗೆ ಎಷ್ತು ಮೊತ್ತದ ಪರಿಹಾರದ ಹಣ ಜಮಾ ಅಗಿದೆ? ಮತ್ತು ಹಳ್ಳಿವಾರು ಪರಿಹಾರದ ಹಣ ಪಡೆದ ರೈತರ ಪಟ್ಟಿಯನ್ನು ತಮ್ಮ ಮೊಬೈಲ್ ನಲ್ಲೇ ಈ ಕೆಳಗಿನ ಹಂತವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದಾಗಿದೆ.
Step-1: ಮೊದಲು ಇಲ್ಲಿ ಕ್ಲಿಕ್ Parihara farmer list ಮಾಡಿ ಅಧಿಕೃತ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಬೇಕು.
Step-2: ತದನಂತರ ಈ ಪೇಜ್ ನಲ್ಲಿ ಮೊದಲು ವರ್ಷ/Select Year ಕಾಲಂ ನಲ್ಲಿ “2024-25” ಎಂದು ಸೆಲೆಕ್ಟ್ ಮಾಡಬೇಕು. ನಂತರ ಪಕ್ಕದಲ್ಲಿ ಕಾಣುವ ಋತು/Season, ವಿಪತ್ತಿನ ವಿಧ/Calamity type , ಜಿಲ್ಲೆ/District ತಾಲ್ಲೂಕು?Taluk, ಹೋಬಳಿ/Hobli, ಗ್ರಾಮದ/Village ಅನ್ನು ಆಯ್ಕೆ ಮಾಡಿಕೊಂಡು “Get Report/ವರದಿ ಪಡೆಯಿರಿ” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಯಾರಿಗೆಲ್ಲ ಬೆಳೆ ಹಾನಿ ಪರಿಹಾರದ ಹಣ ಜಮಾ ಅಗಿದೆ ಎನ್ನುವ ಮಾಹಿತಿ ಸಹಿತ ರೈತರ ಪಟ್ಟಿ ತೋರಿಸುತ್ತದೆ.
ಈ ಪಟ್ಟಿಯಲ್ಲಿ ರೈತರ ಆಧಾರ್ ಕಾರ್ಡಿನ ಕೊನೆಯ ನಾಲ್ಕು ಸಂಖ್ಯೆ ಮತ್ತು ರೈತರ ಹೆಸರು, ಬೆಳೆ ಹಾನಿಯಾದ ಜಮೀನಿನ ಸರ್ವೆ ನಂಬರ್, ವಿಸ್ತೀರ್ಣ, ಜಮಾ ಅದ ಒಟ್ಟು ಪರಿಹಾರದ ಹಣದ ವಿವರ ತೋರಿಸುತ್ತದೆ.
ಇದನ್ನೂ ಓದಿ: Ration card-ರೇಷನ್ ಕಾರ್ಡಗೆ ಹೊಸ ಸದಸ್ಯರನ್ನು ಸೇರ್ಪಡೆ ಮಾಡಲು ಅರ್ಜಿ ಸಲ್ಲಿಸಲು ಅವಕಾಶ!
2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮತ್ತು ಹಿಂಗಾರು ಮಳೆಯಿಂದ ಹಾನಿಯಾದ ವಾಸದ ಮನೆಗಳಿಗೆ ಮತ್ತು ಬೆಳೆ ಹಾನಿ ಈ ಕೆಳಗಿನಂತೆ ಪರಿಹಾರವನ್ನು ನೀಡಲಾಗಿರುತ್ತದೆ:
ಮನೆ ಹಾನಿ ಪ್ರಮಾಣ | ಪಾವತಿಸಬೇಕಾದ ಮೊತ್ತ(ಲಕ್ಷಗಳಲ್ಲಿ) |
ಅತೀ ಸಣ್ಣ ಪ್ರಮಾಣದ ಮನೆ ಹಾನಿ(ಶೇ 15-20%) | ರೂ 6,500 |
ಮದ್ಯಮ ಪ್ರಮಾಣದ ಹಾನಿ(ಶೇ 20-50%) | ರೂ 30,000 |
ಹೆಚ್ಚು ಪ್ರಮಾಣದ ಹಾನಿ(ಶೇ 50-75%) | ರೂ 50,000 |
ಸಂಪೂರ್ಣ ಹಾನಿ ಅಧಿಕೃತ ಮನೆ(ಶೇ 75-100%) | ರೂ 1,20,000 |
ಸಂಫೂರ್ಣ ಹಾನಿ ಅನಧಿಕೃತ ಮನೆ | ರೂ 1,00,000 |
ಪೂರ್ವ ಮುಂಗಾರು-2024:
ಹಾನಿಯ ವಿವರಗಳು | ಒಟ್ಟು ಹಾನಿ | ಪಾವತಿಸಿರುವ ಪರಿಹಾರದ ಮೊತ್ತ(ಲಕ್ಷಗಳಲ್ಲಿ) |
ಮಾನವ ಹಾನಿ | 57 | ರೂ 285.00 |
ಜಾನುವಾರು ಹಾನಿ | 469 | ರೂ 86.49 |
ಮನೆ ಹಾನಿ | 1362 | ರೂ 216.14 |
ಬೆಳೆ ಹಾನಿ | 2591(ಹೆ) | ರೂ 439.14 |
ಮುಂಗಾರು-2024:
ಹಾನಿಯ ವಿವರಗಳು | ಒಟ್ಟು ಹಾನಿ | ಪಾವತಿಸಿರುವ ಪರಿಹಾರದ ಮೊತ್ತ(ಲಕ್ಷಗಳಲ್ಲಿ) |
ಮಾನವ ಹಾನಿ | 100 | ರೂ 285.00 |
ಜಾನುವಾರು ಹಾನಿ | 522 | ರೂ 87.75 |
ಮನೆ ಹಾನಿ | 15851 | ರೂ 6217.88 |
ಬೆಳೆ ಹಾನಿ | 77339(ಹೆ) | ರೂ 9493.57 |
ಇದನ್ನೂ ಓದಿ: Gold Rate-ದೇಶದ ವಿವಿಧ ನಗರಗಳಲ್ಲಿ ಇಂದಿನ ಚಿನ್ನದ ದರ!
ಹಿಂಗಾರು-2024:
ಹಾನಿಯ ವಿವರಗಳು | ಒಟ್ಟು ಹಾನಿ | ಪಾವತಿಸಿರುವ ಪರಿಹಾರದ ಮೊತ್ತ(ಲಕ್ಷಗಳಲ್ಲಿ) |
ಮಾನವ ಹಾನಿ | 33 | ರೂ 165 |
ಜಾನುವಾರು ಹಾನಿ | 192 | ರೂ 32.69 |
ಮನೆ ಹಾನಿ | 4964 | ರೂ 1916.61 |
ಬೆಳೆ ಹಾನಿ | 82449(ಹೆ) | ರೂ 9145.94 |