ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಅಡಿಯಲ್ಲಿ ಕುರಿ(Sheep farming)ಮೇಕೆ,ಕೋಳಿ(Poultry farming),ಹಂದಿ ಸಾಕಾಣಿಕೆ ಹಾಗೂ ರಸಮೇವು ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲು ₹ 25.00 ಲಕ್ಷ ಸಬ್ಸಿಡಿಯನ್ನು ಪಡೆಯಲು ಅವಕಾಶವಿದ್ದು ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಭಾರತವು ಕೃಷಿ ಮತ್ತು ಗ್ರಾಮೀಣ ಆರ್ಥಿಕತೆಯ ಮೇಲೆ ಆಧಾರಿತ ದೇಶವಾಗಿದ್ದು, ಇದರಲ್ಲಿ ಜಾನುವಾರು ಸಾಕಣೆಯ ಪ್ರಾಮುಖ್ಯತೆ ಅಪಾರವಾಗಿದೆ. ಈ ಯೋಜನೆಯು ಬಡ ಹಾಗೂ ಮಧ್ಯಮ ವರ್ಗದ ಕುಟುಂಬದವರಿಗೆ ಆರ್ಥಿಕ ನೆರವು ನೀಡುವ ಯೋಜನೆಯಾಗಿದ್ದು, ಗ್ರಾಮೀಣ ಆದಾಯವನ್ನು ಹೆಚ್ಚಿಸಲು ಮತ್ತು ಜೀವನೋಪಾಯವನ್ನು ಶಾಶ್ವತಗೊಳಿಸಲು ನೆರವಾಗುತ್ತದೆ.
ಭಾರತ ಸರ್ಕಾರವು ರಾಷ್ಟ್ರೀಯ ಜಾನುವಾರು ಮಿಷನ್ (National Livestock Mission – NLM) ಯೋಜನೆಯನ್ನು 2014-15 ರಲ್ಲಿ ಜಾರಿಗೆ ತಂದಿದ್ದು, ಗ್ರಾಮೀಣ ಆರ್ಥಿಕತೆಗೆ ಹೊಸ ಉತ್ಥಾನವನ್ನು ತಂದಿದೆ. 2021-22 ರಿಂದ ಈ ಯೋಜನೆಯನ್ನು ಪುನರ್ನಿರ್ಮಾಣ ಮಾಡಲಾಗಿದೆ. ಇದು ಉದ್ಯೋಗ ಸೃಷ್ಟಿ, ಉದ್ಯಮಶೀಲತೆಯ ಅಭಿವೃದ್ಧಿ ಮತ್ತು ಪ್ರತಿ ಜಾನುವಾರಿನ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: Bele Vime-ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!
ಪ್ರಸ್ತುತ ಈ ಲೇಖನದಲ್ಲಿ ಈ ಯೋಜನೆಯ ಅಡಿಯಲ್ಲಿ ಎಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ? ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಈ ಯೋಜನೆಯ ಪ್ರಯೋಜನಗಳೇನು? ಪ್ರಯೋಜನವನ್ನು ಪಡೆಯಲು ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು? ಅರ್ಜಿಯನ್ನು ಸಲ್ಲಿಸುವ ವಿಧಾನ? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ. ಈ ಮಾಹಿತಿಯು ಉಪಯುಕ್ತವೆನಿಸಿದ್ದಲ್ಲಿ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.
National Livestock Mission Scheme-ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ಉದ್ದೇಶವೇನು?
ಗ್ರಾಮೀಣ ಭಾರತದಲ್ಲಿ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮತ್ತು ರೈತರ ಜೀವನ ಮಟ್ಟವನ್ನು ಸುಧಾರಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ, ಕೋಳಿ ಸಾಕಣೆ, ಕುರಿ-ಮೇಕೆ ಸಾಕಣೆ, ಹಂದಿ ಸಾಕಣೆ ಮತ್ತು ರಸ ಮೇವು ಉತ್ಪಾದನೆಯಂತಹ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ.
2023ರ ಒಂದು ಅಧ್ಯಯನದ ಪ್ರಕಾರ, ಈ ಯೋಜನೆಯಿಂದ ಗ್ರಾಮೀಣ ಜನರ ಜೀವನೋಪಾಯದಲ್ಲಿ ಸರಾಸರಿ 15% ಏರಿಕೆಯಾಗಿದ್ದು, ಇದಲ್ಲದೆ ಈ ಯೋಜನೆಯು ಮಾಂಸ, ಮೊಟ್ಟೆ ಮತ್ತು ಉಣ್ಣೆಯ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ದೇಶದ ಆಹಾರ ಭದ್ರತೆಗೂ ಕೂಡ ಕೊಡುಗೆ ನೀಡುತ್ತದೆ.
ಇದನ್ನೂ ಓದಿ: Uchita Holige Yantra-ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಇನ್ನು 2 ದಿನ ಬಾಕಿ!
NLM Scheme Benefits-ಈ ಯೋಜನೆಯ ಪ್ರಯೋಜನಗಳು?
- ಗ್ರಾಮೀಣ ಭಾಗದಲ್ಲಿರುವ ಯುವಜನರಿಗೆ ಉದ್ಯೋಗದ ಅವಕಾಶಗಳನ್ನು ಒದಗಿಸಿ ಕೊಡುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಈ ಯೋಜನೆಯನ್ನು ಜಾರಿಗೆ ತಂದಿದ್ದರಿಂದ 2022 ರಲ್ಲಿ ಜಾನುವಾರು ಉತ್ಪಾದನೆಯಲ್ಲಿ 20% ಏರಿಕೆಯಾಗಿರುವುದನ್ನು ಕಾಣಬಹುದು.
- ರೈತರ ಆದಾಯವನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಉತ್ತೇಜನವನ್ನು ನೀಡುತ್ತದೆ.
- ಇದಲ್ಲದೆ ಮಾಂಸ, ಮೊಟ್ಟೆ ಮತ್ತು ಉಣ್ಣೆಯ ಉತ್ಪಾದನೆಯನ್ನು ಹೆಚ್ಚಿಸಿ ದೇಶದ ಆಹಾರ ಭದ್ರತೆಗೆ ಕೊಡುಗೆ ನೀಡುತ್ತದೆ.
- ರಸ ಮೇವು ಉತ್ಪಾದನೆಯು ಪರಿಸರ ಸ್ನೇಹಿ ಕೃಷಿ ವಿಧಾನಗಳನ್ನು ಉತ್ತೇಜಿಸುತ್ತದೆ.
A) ಗ್ರಾಮೀಣ ಕೋಳಿ ಉದ್ದಿಮೆ(1000 ದೇಶಿ ಮಾತೃಕೋಳಿ ಘಟಕ+ ಹ್ಯಾಚರಿ ಘಟಕ+ ಮರಿಗಳ ಸಾಕಾಣಿಕೆ ಘಟಕ)Rural Poultry Entrepreneurship programme):
ಕೋಳಿ ಮರಿ ಉತ್ಪಾದನಾ ಘಟಕವನ್ನು ಆರಂಭಿಸಲು ಈ ಯೋಜನೆಯಡಿ ಗರಿಷ್ಥ ಯೋಜನಾ ವೆಚ್ಚ:- 50 ಲಕ್ಷಕ್ಕೆ ಶೇ 50 ರಷ್ಟು ಸಹಾಯಧನವನ್ನು ನೀಡಲಾಗುತ್ತದೆ ಅಥವಾ ಒಂದು ಘಟಕಕ್ಕೆ ಗರಿಷ್ಟ ರೂ 25.00 ಲಕ್ಷದ ವರೆಗೆ ಸಬ್ಸಿಡಿಯನ್ನು ಅರ್ಜಿದಾರರು ಪಡೆಯಬಹುದು.
ಇದನ್ನೂ ಓದಿ: Karmika Card-ಕಾರ್ಮಿಕ ಮಂಡಳಿಯಿಂದ ಪ್ರತಿ ತಿಂಗಳಿಗೆ ರೂ ₹2000/- ಪಿಂಚಣಿ!
B) ಕುರಿ-ಮೇಕೆ ತಳಿ ಸಂವರ್ಧನಾ ಘಟಕ(Sheep and Goat farming):
500+25 ಘಟಕಕ್ಕೆ- ಗರಿಷ್ಥ ಯೋಜನಾ ವೆಚ್ಚ:- 1 ಕೋಟಿ, ಸಹಾಯಧನ:- ಶೇ 50 ಗರಿಷ್ಟ ರೂ 50 ಲಕ್ಷ ಸಹಾಯಧನ ಪಡೆಯಲು ಅವಕಾಶವಿರುತ್ತದೆ.
400+20 ಘಟಕಕ್ಕೆ- ಗರಿಷ್ಥ ಯೋಜನಾ ವೆಚ್ಚ:- 80 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 40 ಲಕ್ಷ ಸಹಾಯಧನ
300+15 ಘಟಕಕ್ಕೆ- ಗರಿಷ್ಥ ಯೋಜನಾ ವೆಚ್ಚ:- 60 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 30 ಲಕ್ಷ ಸಹಾಯಧನ
200+10 ಘಟಕಕ್ಕೆ- ಗರಿಷ್ಥ ಯೋಜನಾ ವೆಚ್ಚ:- 40 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 20 ಲಕ್ಷ ಸಹಾಯಧನ
) 100+5 ಘಟಕಕ್ಕೆ- ಗರಿಷ್ಥ ಯೋಜನಾ ವೆಚ್ಚ:- 20 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 10 ಲಕ್ಷ ಸಹಾಯಧನ
C) ಹಂದಿ ತಳಿ ಸಂವರ್ಧನಾ ಘಟಕ(Pig farm subsidy):
ಹಂದಿ ತಳಿ ಸಂವರ್ಧನಾ ಘಟಕ ಆರಂಭಿಸಲು ನಿಗದಿಪಡಿಸಿದ ಸಬ್ಸಿಡಿ ವಿವರ ಈ ಕೆಳಗಿನಂತಿದೆ.
100+10 ಗರಿಷ್ಥ ಯೋಜನಾ ವೆಚ್ಚ:- 60 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 30 ಲಕ್ಷ ಸಹಾಯಧನವನ್ನು ಒದಗಿಸಲಾಗುತ್ತದೆ.
50+5 ಗರಿಷ್ಥ ಯೋಜನಾ ವೆಚ್ಚ:- 30 ಲಕ್ಷ, ಸಹಾಯಧನ:- ಶೇ 50 ಗರಿಷ್ಟ ರೂ 15 ಲಕ್ಷ ಸಹಾಯಧನವನ್ನು ಒದಗಿಸಲಾಗುತ್ತದೆ.
ಇದನ್ನೂ ಓದಿ: Mysore Dasara-2025: ಸರ್ಕಾರದಿಂದ ಈ ಬಾರಿಯ ಮೈಸೂರು ದಸರಾ ಆಚರಣೆಗೆ ಕುರಿತು ಮಹತ್ವದ ಮಾಹಿತಿ ಪ್ರಕಟ!
D) ರಸಮೇವು ಉತ್ಪಾದನಾ ಘಟಕ, ಮೇವು ಬ್ಲಾಕ್ ತಯಾರಿಕಾ ಘಟಕ/ ಟಿಎಂಆರ್ ಪ್ಲಾಂಟ್ ಸ್ಥಾಪನೆ ಘಟಕ(ವಾರ್ಷಿಕ 2000-2500 ಮೆಟ್ರಿಕ್ ಟನ್ ಉತ್ಪಾದನೆ-(Silage making unit for entrepreneurs(producation capacity 2000-2500 MT per annum)
ಗರಿಷ್ಥ ಯೋಜನಾ ವೆಚ್ಚ:- 1 ಕೋಟಿ, ಸಹಾಯಧನ:- ಶೇ 50 ಗರಿಷ್ಟ ರೂ 50 ಲಕ್ಷ ಸಹಾಯಧನ ಒದಗಿಸಲಾಗುತ್ತದೆ.
NLM Yojana Online Application-ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ಈ ಕೆಳಗೆ ವಿವರಿಸಿರಿವ ಹಂತಗಳನ್ನು ಅನುಸರಿಸಿ ಅಧಿಕೃತ NLM ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
Step-1: ಮೊದಲಿಗೆ ಇಲ್ಲಿ ಕ್ಲಿಕ್ Apply Now ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.
ಇದನ್ನೂ ಓದಿ: Free Computer Training-ಕೆನರಾ ಬ್ಯಾಂಕ್ನಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ!

ಇದನ್ನೂ ಓದಿ: BMTC Package Tour-ಬಿಎಂಟಿಸಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಟೂರ್ ಪ್ಯಾಕೇಜ್!
Step-2: ತದನಂತರ ಈ ಪೇಜ್ ನಲ್ಲಿ “Login As Entrepreneur” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ನಂಬರ್ ಅನ್ನು ನಮೂದಿಸಿ “Request OTP” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.
Step-3: ಇದಾದ ಬಳಿಕ ಇಲ್ಲಿ ನಮೂದಿಸಿದ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ ಒಟಿಪಿಯನ್ನು ಹಾಕಿ “VERIFY OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ನಂತರ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
For More Information- ಹೆಚ್ಚಿನ ಮಾಹಿತಿ ಪಡೆಯಲು ಉಪಯುಕ್ತ ಲಿಂಕ್ ಗಳು:
NLM Yojana Website- ಜಾನುವಾರು ಮಿಷನ್ ಯೋಜನೆ ವೆಬ್ಸೈಟ್: Click Here