Thursday, August 21, 2025
No menu items!
HomeNewsLand Ownership Scheme-ಭೂಮಿ ಖರೀದಿಸಲು 25 ಲಕ್ಷ ರೂ ಸಹಾಯಧನ! ಇಲ್ಲಿದೆ ಸಂಪೂರ್ಣ ಮಾಹಿತಿ!

Land Ownership Scheme-ಭೂಮಿ ಖರೀದಿಸಲು 25 ಲಕ್ಷ ರೂ ಸಹಾಯಧನ! ಇಲ್ಲಿದೆ ಸಂಪೂರ್ಣ ಮಾಹಿತಿ!

ಕರ್ನಾಟಕ ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಪರಿಶಿಷ್ಟ ಜಾತಿಯವರ (SC) (Land purchase subsidy) ಆರ್ಥಿಕ ಅಭಿವೃದ್ದಿಗಾಗಿ ಕಲ್ಯಾಣ ಯೋಜನೆಗಳ ವತಿಯಿಂದ 2025- 2026 ನೇ ಸಾಲಿನಲ್ಲಿ ಭೂ ಒಡೆತನ ಯೋಜನೆಯಡಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂಮಿ ಖರೀದಿಸಲು 25 ಲಕ್ಷ ರೂ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

2025-2026 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆಯು ಹಲವು ಯೋಜನೆಗಳನ್ನು(Land Ownership Scheme) ಜಾರಿಗೆ ತಂದಿದ್ದು, ಭೂ ಒಡೆತನ ಯೋಜನೆಯು ಒಂದು ಮಹತ್ವದ ಯೋಜನೆಯಾಗಿದೆ. ಇದರ ಅಡಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರು ಕೃಷಿ ಜಮೀನನ್ನು ಹೊಂದಲು ಜಮೀನು ಖರೀದಿಗೆ ಆರ್ಥಿಕ ನೆರವನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯಾ? ಚೆಕ್ ಮಾಡಿ!

ಪ್ರಸ್ತುತ ಈ ಲೇಖನದಲ್ಲಿ ಸಮಾಜ ಕಲ್ಯಾಣ ಇಲಾಖೆಯಡಿ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಹುದು? ಯೋಜನೆಯ ಉದ್ದೇಶವೇನು? ಅರ್ಜಿಯನ್ನು ಸಲ್ಲಿಸಲು ಅನುಸರಿಸ ಬೇಕಾದ ಹಂತಗಳಾವುವು? ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು? ಅಗತ್ಯ ದಾಖಲಾತಿಗಳಾವುವು? ಇತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Last Date For Application-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್ 2025

ಇದನ್ನೂ ಓದಿ: PMSBY Scheme-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ ₹12 ರೂ ಗೆ ₹2 ಲಕ್ಷ ವಿಮೆ!

ಯೋಜನೆಯ ವಿವರ ಹೀಗಿದೆ:

ಭೂ -ಒಡೆತನ ಯೋಜನೆಯಡಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರದ ಭೂ ಮಾಲೀಕರಿಂದ ಜಮೀನನ್ನು ಖರೀದಿಸಿ, ಪರಿಶಿಷ್ಟ ಜಾತಿಯ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ 27 ಜಿಲ್ಲೆಗಳಿಗೆ ರೂ 20 ಲಕ್ಷ ಮತ್ತು 4 ಜಿಲ್ಲೆಗಳಿಗೆ (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ) ರೂ 25 ಲಕ್ಷಗಳಿಗೆ (ಸಹಾಯಧನ ಶೇ 50 ಮತ್ತು ಸಾಲ ಶೇ 50 ರಷ್ಟು) ಖುಷ್ಕಿ/ತರಿ/ಬಾಗಾಯ್ತು ಜಮೀನನ್ನು ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ. ಮೀ. ವ್ಯಾಪ್ತಿಯೊಳಗೆ ಖರೀದಿಸಿ, ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಒದಗಿಸಲಾಗುವುದು ಮತ್ತು ಸಾಲದ ಮೊತ್ತವನ್ನು 10 ವಾರ್ಷಿಕ ಸಮ ಕಂತುಗಳಲ್ಲಿ ವಾರ್ಷಿಕ ಶೇ 6 ರ ಬಡ್ಡಿ ದರದಲ್ಲಿ ನಿಗಮಕ್ಕೆ ಮರುಪಾವತಿ ಮಾಡ ಬೇಕಾಗಿರುತ್ತದೆ

ಇದನ್ನೂ ಓದಿ: Labour Scholorship-ಕಾರ್ಮಿಕ ಮಕ್ಕಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Who Can Apply-ಸಬ್ಸಿಡಿಯನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?

  • ಅರ್ಜಿದಾರರು ಪರಿಶಿಷ್ಟ ಜಾತಿಯ ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು
  • ಅರ್ಜಿದಾರರು ಭೂ ರಹಿತ ಕೃಷಿ ಕಾರ್ಮಿಕ ಕುಟುಂಬದವರಾಗಿರಬೇಕು.
  • ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು
  • ಭೂಒಡೆತನ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು.
  • ಜಮೀನು ಮಾರಾಟ ಮಾಡುವ ಭೂಮಾಲೀಕರು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು.
  • ಖರೀದಿಸುವ ಜಮೀನು ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ 10 ಕಿ. ಮೀ. ವ್ಯಾಪ್ತಿಯೊಳಗೆ ಇರಬೇಕು

ಯಾವೆಲ್ಲ ನಿಗಮದ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ?

ಸಮಾಜ ಕಲ್ಯಾಣ ಇಲಾಖೆಯಡಿ ಅರ್ಜಿ ಸಲ್ಲಿಸಲು ಪರಿಶಿಷ್ಟ ಜಾತಿ ಸಮುದಾಯದವರು ಈ ಕೆಳಗೆ ತಿಳಿಸಿರುವ ನಿಗಮದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Constable Recruitment 2025-SSLC & ITI ಪಾಸಾದವರಿಗೆ 3,588 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನ!

  • ಡಾ ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
  • ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ
  • ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
  • ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ
  • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
  • ಕರ್ನಾಟಕ ಪರಿಶಿಷ್ಟ ಪಂಗಡದ ಅಲೆಮಾರಿ ಅಭಿವೃದ್ಧಿ ನಿಗಮ
  • ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ

Where To Apply For This Scheme-ಈ ಯೋಜನೆಯಡಿ ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಅಥವಾ ತಾಲೂಕು/ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: PM Surya Ghar Scheme-ಪಿಎಂ ಸೂರ್ಯ ಘರ್ ಯೋಜನೆಯಡಿ ಎಲ್ಲರಿಗೂ ಉಚಿತ ವಿದ್ಯುತ್ ಮತ್ತು ಸಬ್ಸಿಡಿಗೆ ಅರ್ಜಿ!

What are the Documents- ಅಗತ್ಯ ದಾಖಲಾತಿಗಳು:

  1. ಫಲಾನುಭವಿಯ ಆಧಾರ್‌ ಕಾರ್ಡ್‌ ಪ್ರತಿ (ನಿವಾಸದ ಪುರಾವೆ)
  2. ಫಲಾನುಭವಿಯ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
  3. ಫಲಾನುಭವಿಯ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
  4. ಭೂ ರಹಿತ ಕೃಷಿ ಕಾರ್ಮಿಕರ ಪತ್ರ (ತಹಶೀಲ್ದಾರರಿಂದ)
  5. ಫಲಾನುಭವಿಯ ರೇಷನ್ ಕಾರ್ಡ್ (ಪಡಿತರ ಚೀಟಿ)
  6. ಭೂ ಮಾಲೀಕರ ಭೂ ಮಾರಾಟ ಮಾಡಲು ಮುಚ್ಚಳಿಕೆ ಪತ್ರ (ಛಾಪಾ ಕಾಗದದಲ್ಲಿ ನೋಟರಿ ಮಾಡಿಸಿ ಸಲ್ಲಿಸತಕ್ಕದ್ದು.)
  7. ಭೂ ಮಾಲೀಕರ ವಂಶಾವಳಿ (ಗ್ರಾಮ ಲೆಕ್ಕಾಧಿಕಾರಿಗಳಿಂದ ದೃಢೀಕರಿಸಿಕೊಂಡು ಸಲ್ಲಿಸತಕ್ಕದ್ದು.)
  8. ಭೂ ಮಾಲೀಕ ಕುಟುಂಬ ಸದಸ್ಯರ ನಿರಾಕ್ಷೇಪಣಾ ಕಾಗದದಲ್ಲಿ ಪತ್ರ ವಂಶಾವಳಿಯಲ್ಲಿರುವ ಸದಸ್ಯರು ನೋಟರಿ ಮಾಡಿಸಿ ಸಲ್ಲಿಸತಕ್ಕ
  9. ಭೂ ಮಾಲೀಕರಿಂದ ಇತ್ತೀಚಿನ ಪಹಣಿ ಪತ್ರಿಕೆ ಮತ್ತು ಹಕ್ಕು ಬದಲಾವಣೆ ಪ್ರತಿ. (ಮ್ಯೂಟೇಷನ್ ಪ್ರತಿ)
  10. ಭೂ ಮಾಲೀಕರಿಂದ ಕಳೆದ 13 ವರ್ಷಗಳ ಇ.ಸಿ. (ಋಣಭಾರ ರಾಹಿತ್ಯ ಪ್ರಮಾಣ ಪತ್ರ ಸಲ್ಲಿಸತಕ್ಕದ್ದು.)
  11. ಫಲಾನುಭವಿಯ ಭಾವಚಿತ್ರ

ಇದನ್ನೂ ಓದಿ: Birth & Death Certificate-ಜನನ & ಮರಣ ಪ್ರಮಾಣ ಪತ್ರ ಪಡೆಯುವುದು ಇನ್ನೂ ಭಾರಿ ಸುಲಭ!

labour wellfare

Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?

Step-1: ಮೊದಲು ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾಸಿಂಧು ವೆಬ್ಸೈಟ್ ಗೆ ಭೇಟಿ ಮಾಡಬೇಕು.

Step-2: ಭೇಟಿ ಮಾಡಿದ ನಂತರ “ಭೂ ಒಡೆತನ ಯೋಜನೆ” ಯ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಬಳಿಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿದ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: Scholarships-ಹೀರೋ ಗ್ರೂಪ್‌ನಿಂದ ಪದವಿ ವಿದ್ಯಾಭ್ಯಾಸಕ್ಕೆ ₹5.5 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!

More Information-ಹೆಚ್ಚಿನ ಮಾಹಿತಿಗಾಗಿ:

ಹೆಚ್ಚಿನ ಮಾಹಿತಿಯನ್ನು ಪಡೆಯಲು ಸ್ಥಳೀಯ ಸಮಾಜ ಕಲ್ಯಾಣಾಧಿಕಾರಿಗಳನ್ನು ಭೇಟಿ ಮಾಡಿ-Click Here

RELATED ARTICLES
- Advertisment -

Most Popular

Recent Comments