ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ(Labour Insurance Scheme)ಕಾರ್ಮಿಕ ಇಲಾಖೆಯ ಅಡಿಯಲ್ಲಿ ಸಹಾಯಧನವನ್ನು 1.5 ಲಕ್ಷಕ್ಕೆ ಏರಿಕೆ ಮಾಡಲಾಗಿದ್ದು, ಪರಿಹಾರ ಮೊತ್ತವನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಆದೇಶವು 2025 ರಲ್ಲಿ ಜಾರಿಗೆ ಬಂದಿದ್ದು, ಈ ಯೋಜನೆಯಡಿಯಲ್ಲಿ ನೋಂದಾಯಿತ(Labour Department)ಫಲಾನುಭವಿಗಳು ಮರಣ ಹೊಂದಿದಲ್ಲಿ ನೀಡಲಾಗುತ್ತಿದ್ದ ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ ಸಹಾಯಧನವನ್ನು ₹75000 ರೂಪಾಯಿಗಳಿಂದ ₹150000 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ: PM Surya Ghar Scheme-ಪಿಎಂ ಸೂರ್ಯ ಘರ್ ಯೋಜನೆಯಡಿ ಎಲ್ಲರಿಗೂ ಉಚಿತ ವಿದ್ಯುತ್ ಮತ್ತು ಸಬ್ಸಿಡಿಗೆ ಅರ್ಜಿ!
ಪ್ರಸ್ತುತ ಕಾರ್ಮಿಕ ಇಲಾಖೆಯಡಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿಯನ್ನು ಸ್ಲಲಿಸಬೇಕು? ಈ ಯೋಜನೆಯ ಉದ್ದೇಶವೇನು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಅರ್ಜಿಯನ್ನು ಸಲ್ಲಿಸುವ ವಿಧಾನಗಳು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
What is the purpose of this scheme-ಈ ಯೋಜನೆಯ ಉದ್ದೇಶವೇನು?
- ಕಾರ್ಮಿಕರ ಕುಟುಂಬದ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಸ್ಥಿರತೆ ಒದಗಿಸುವುದು.
- ಕಾರ್ಮಿಕರ ಪರಿಹಾರ ಧನವನ್ನು ₹75000 ದಿಂದ ₹1.5 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಕಾರ್ಮಿಕ
- ಕುಟುಂಬಗಳಿಗೆ ಹೆಚ್ಚಿನ ಸಹಾಯ ಮಾಡುವ ಉದ್ದೇಶ ಈ ಯೋಜನೆಯದ್ದಾಗಿದೆ.
- ಕಾರ್ಮಿಕರು ಕೆಲಸದ ಸಮಯದಲ್ಲಿ ಅಪಘಾತಕ್ಕೆ ಒಳಗಾದರೆ ಅಥಚ ಸವನ್ನಪ್ಪಿದರೆ ಕಾರ್ಮಿಕರ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸುವುದರ ಉದ್ದೇಶ.
- ಕಾರ್ಮಿಕರು ಆಪತ್ತಿಗೊಳಗಾದ ಸಂದರ್ಭಗಳಲ್ಲಿ ಅವರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕದಂತೆ ಭದ್ರತೆಯನ್ನು ಒದಗಿಸುವುದು.
- ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ, ಅವರ ಕಲ್ಯಾಣವನ್ನು ವೃದ್ಧಿಪಡಿಸುವುದು.
ಇದನ್ನೂ ಓದಿ: Birth & Death Certificate-ಜನನ & ಮರಣ ಪ್ರಮಾಣ ಪತ್ರ ಪಡೆಯುವುದು ಇನ್ನೂ ಭಾರಿ ಸುಲಭ!
Benifits Of This Scheme-ಈ ಪರಿಹಾರ ಸಹಾಯಧನವನ್ನು ಏರಿಕೆ ಮಾಡಲು ಕಾರಣಗಳು?
ಕರ್ನಾಟಕದಲ್ಲಿ ಉದ್ಯೋಗ ಅವಕಾಶಗಳ ಭಾಗವಾಗಿ ನಿರ್ಮಾಣ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದ್ದು, ಅದೇ ಸಮಯದಲ್ಲಿ ಇದು ಅತ್ಯಂತ ಅಪಾಯಕಾರಿಯಾದ ಕ್ಷೇತ್ರವೂ ಆಗಿದೆ. ಇತ್ತೀಚಿನ ವರದಿಯ ಪ್ರಕಾರ, ಪ್ರತಿದಿನವೂ ಸರಾಸರಿ 38 ಕಾರ್ಮಿಕರು ಅಪಘಾತಗಳಿಂದ ಜೀವಹಾನಿಗೆ ಒಳಗಾಗುತ್ತಿದ್ದಾರೆ.
2023ರಲ್ಲಿ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO) ನೀಡಿದ ವರದಿಯ ಪ್ರಕಾರ, ಭಾರತದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಸಾವಿನ ಪ್ರಮಾಣವು ಜಾಗತಿಕ ಸರಾಸರಿಗಿಂತ 20% ಹೆಚ್ಚುವಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ಮನಗಂಡು, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KBOCWWB) ಹೊಸ ಆದೇಶವನ್ನು ಜಾರಿ ಮಾಡಿದ್ದು, ಕಾರ್ಮಿಕರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಬೆಂಬಲ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.
ಇದನ್ನೂ ಓದಿ: Infosys Scholarship-ಇನ್ಫೋಸಿಸ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು 15 ಸೆಪ್ಟೆಂಬರ್ ಕೊನೆಯ ದಿನಾಂಕ!
Who Can Apply For This Scheme-ಈ ಯೋಜನೆಯಡಿ ಯಾರು ಅರ್ಜಿಯನ್ನು ಸಲಿಸಬಹುದು?
ಅರ್ಜಿದಾರರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅಸಂಘಟಿತ ಕ್ಷೇತ್ರದ ನೋಂದಾಯಿತ ಕಾರ್ಮಿಕರು ಅರ್ಜಿಯನ್ನು ಸಲ್ಲಿಸಬಹುದು.
ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕನಾಗಿರಬೇಕು.
ಅಪಘಾತ, ಅನಾಹುತದಿಂದ ಮೃತಪಟ್ಟ ಕಾರ್ಮಿಕರ ಕುಟುಂಬ ಸದಸ್ಯರು ಅರ್ಜಿಯನ್ನು ಸಲ್ಲಿಸಬಹುದು.
ವ್ಯಕ್ತಿಯು ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಅಥವಾ ಗಾಯಗೊಂಡಿದ್ದರೆ, ತದನಂತರ ಸಿದ್ಧ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: PM Yasasvi Scholarship-ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!
Where To Apply For This Scheme-ಯೋಜನೆಯಡಿ ಅರ್ಜಿ ಎಲ್ಲಿ ಸಲ್ಲಿಸಬೇಕು?
ಕಾರ್ಮಿಕ ಇಲಾಕೆಯ ಅಡಿಯಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳು ನಿಮ್ಮ ತಾಲ್ಲೂಕಿನಲ್ಲಿರುವ ಕರ್ನಾಟಕ ಕಾರ್ಮಿಕ ಇಲಾಖೆ ಅಥವಾ ಕಾರ್ಮಿಕರ ಕಲ್ಯಾಣ ಮಂಡಳಿಯ ಕಚೇರಿಗೆ ಅಗತ್ಯ ದಾಖಲಾತಿಗಳೊಂದಿಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಅಥವಾ ಅಧಿಕೃತ ಕರ್ನಾಟಕ ಕಾರ್ಮಿಕ ಇಲಾಖೆಯ ವೆಬ್‌ಸೈಟ್ ಭೇಟಿ ಮಾಡಿ ಆನ್ಲೈನ್ ಮೂಲಕವೂ ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
How To Apply For This Scheme-ಅರ್ಜಿಯನ್ನು ಸಲ್ಲಿಸುವ ಹಂತಗಳು?
ಕಾರ್ಮಿಕ ಮಂಡಳಿಯಿಂದ ಪ್ರಯೋಜನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಕೆಳಗೆ ತಿಳಿಸಿರುವ ಹಂತಗಳನ್ನು ಪಾಲನೆ ಮಾಡಿ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.
Step-1: ಪ್ರಥಮದಲ್ಲಿ ಈ ಲಿಂಕ್ “Apply Now” ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಾರ್ಮಿಕ ಮಂಡಳಿಯ ಜಾಲತಾಣವನ್ನು ಭೇಟಿ ಮಾಡಬೇಕು.
ಇದನ್ನೂ ಓದಿ: Scholarships-ಹೀರೋ ಗ್ರೂಪ್‌ನಿಂದ ಪದವಿ ವಿದ್ಯಾಭ್ಯಾಸಕ್ಕೆ ₹5.5 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!

ಇದನ್ನೂ ಓದಿ: RTC Aadhar Link Status-ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ!ಲಿಂಕ್ ಅಗಿರುವುದನ್ನು ಈಗಲೇ ಪರಿಶೀಲಿಸಿ!
Step-2: ನಂತರ ಇಲ್ಲಿ ಕನ್ನಡ/English ಎರಡು ಆಯ್ಕೆಯಲ್ಲಿ ನಿಮಗೆ ಯಾವುದು ಸೂಕ್ತವೋ ಅದರಲ್ಲಿ ಒಂದನ್ನು ಸೆಲೆಕ್ಟ್ ಮಾಡಿಕೊಂಡು ಮಂಡಳಿಯ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಯೋಜನೆವಾರು ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಇವುಗಳಲ್ಲಿ ಒಂದರ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.
Required Documents-ಯೋಜನೆಯಡಿ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳಾವುವು?
- ಆಧಾರ್ ಕಾರ್ಡ/Aadhar Card
- ನೋಂದಣಿ ಕಾರ್ಡ್ ಪ್ರತಿ/ Registration Certificate
- ವೈದ್ಯಕೀಯ ಪ್ರಮಾಣ ಪತ್ರ/Medical Certificate
- ಮರಣ ಪ್ರಮಾಣ ಪತ್ರ (ಮರಣವಾಗಿದ್ದರೆ)/Death Certificate
- ರೇಶನ್ ಕಾರ್ಡ/Ration Card
- ಬ್ಯಾಂಕ್ ಖಾತೆ ಪುಸ್ತಕ/Bank Passbook
- ಮೊಬೈಲ್ ನಂಬರ್/Mobile Number
ಇದನ್ನೂ ಓದಿ: Family tree certificate-ವಂಶವೃಕ್ಷ ಪ್ರಮಾಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ!
For More Information- ಕಾರ್ಮಿಕ ಮಂಡಳಿಯ ಬಗ್ಗೆ ಹೆಚ್ಚಿನ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here
ಕಾರ್ಮಿಕ ಸಹಾಯವಾಣಿ: 155214