ಕರ್ನಾಟಕ ಸರ್ಕಾರವು 2025–2026ನೇ ಸಾಲಿನಲ್ಲಿ ಕೃಷಿ ಇಲಾಖೆಯ ಮೂಲಕ “ಕೃಷಿ ಭಾಗ್ಯ ಯೋಜನೆ”ಯನ್ನು(Krushi Bhagya Yojana) ಜಾರಿಗೆ ತಂದಿದ್ದು, ಇದರ ಅಡಿಯಲ್ಲಿ ಅರ್ಹ ರೈತರಿಂದ ಕೃಷಿ ಹೊಂಡ (Farm Pond / Krushi Honda) ನಿರ್ಮಾಣಕ್ಕಾಗಿ ಶೇ 90% ಸಹಾಯಧನ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಾಜ್ಯದ ಬಹುತೇಕ ರೈತರು ಮಳೆಯನ್ನೇ ಆಧಾರವಾಗಿ ಅವಲಂಬಿಸಿರುವ ಕೃಷಿ ಪದ್ಧತಿಯನ್ನು(Agriculture Department Karnataka Scheme) ಅನುಸರಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯ ಕೊರತೆ, ಬರಗಾಲ, ನೀರಿನ ಅಭಾವದಿಂದ ಬೆಳೆಗಳಿಗೆ ಹಾನಿಯಾಗುತ್ತಿರುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಉದ್ದೇಶದಿಂದ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: GlaxoSmith Scholarship-ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ! ಇನ್ನೂ10 ದಿನ ಬಾಕಿ!
Purpose of this Scheme-ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು?
ಈ ಯೋಜನೆಯ ಅಡಿಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸಬಹುದು. ಸಂಗ್ರಹಿಸಿದ ನೀರನ್ನು ಅಗತ್ಯ ಸಮಯದಲ್ಲಿ ಬೆಳೆಗಳಿಗೆ ಉಪಯೋಗಿಸುವ ಮೂಲಕ:
ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.
ಬರಗಾಲದ ಸಂದರ್ಭದಲ್ಲಿ ಬೆಳೆಗಳಿಗೆ ಆಗುವಂತಹ ನಷ್ಟವನ್ನು ಕಡಿಮೆ ಮಾಡಬಹುದು.
ರೈತರ ಆದಾಯವನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ.
ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!
Subsidy Amount in this Scheme-ಕೃಷಿ ಹೊಂಡಕ್ಕೆ ಎಷ್ಟು ಸಹಾಯಧನ ನೀಡಲಾಗುತ್ತದೆ?
ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಇಲಾಖೆ ಅರ್ಹ ರೈತರಿಗೆ ಕೆಳಕಂಡಂತೆ ಸಹಾಯಧನವನ್ನು ನೀಡುತ್ತದೆ:
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ರೈತರಿಗೆ–ಶೇ.90% ಸಹಾಯಧನ
ಇತರ ವರ್ಗದ ರೈತರಿಗೆ–ಶೇ.80% ಸಹಾಯಧನ
ಇದಲ್ಲದೆ, ಕೃಷಿ ಹೊಂಡ ನಿರ್ಮಾಣದೊಂದಿಗೆ ಸಂಬಂಧಿಸಿದಂತೆ ಕೆಳಗಿನ ಅಂಶಗಳಿಗೂ ಸಹ ಸಬ್ಸಿಡಿ ನೀಡಲಾಗುತ್ತದೆ:
ಹೊಂಡಕ್ಕೆ ಪಾಲಿಥೀನ್ ಹೊದಿಕೆ (Plastic Lining)
ಲಘು ನೀರಾವರಿ ಘಟಕ (Micro Irrigation System)
ಕೃಷಿ ಹೊಂಡದ ಸುತ್ತ ತಂತಿ ಬೇಲಿ (Fencing)
ನೀರನ್ನು ಜಮೀನಿಗೆ ಪೂರೈಕೆ ಮಾಡಲು ಡೀಸೆಲ್ ಪಂಪ್ ಸೆಟ್
ಇದನ್ನೂ ಓದಿ: Milk Payment Status-ನಿಮ್ಮ ಹಾಲಿನ ಲೆಕ್ಕ ಈಗ ನಿಮ್ಮ ಬೆರಳ ತುದಿಯಲ್ಲಿ! ಇಲ್ಲಿದೆ ಮೊಬೈಲ್ ಅಪ್ಲಿಕೇಶನ್!
Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?
- ಆಧಾರ್ ಕಾರ್ಡ್
- ಪಹಣಿ / RTC
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಪಾಸ್ಪೋರ್ಟ್ ಗಾತ್ರದ ಫೋಟೋ
- ಮೊಬೈಲ್ ಸಂಖ್ಯೆ
ಇದನ್ನೂ ಓದಿ: Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?
ಇದನ್ನೂ ಓದಿ: Ashraya Vasati Yojana-ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 2.0 ಲಕ್ಷ ಸಹಾಯಧನ!
Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಈ ಯೋಜನೆಯಡಿ ಸಹಾಯಧನ ಪಡೆಯಲು ರೈತರು ಈ ಕೆಳಗೆ ತಿಳಿಸಿರುವ ಅರ್ಹತೆಗಳನ್ನು ಹೊಂದಿರಬೇಕು:
ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನನ್ನು ಹೊಂದಿರಬೇಕು.
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಕಳೆದ ವರ್ಷಗಳಲ್ಲಿ ಈ ಯೋಜನೆಯಡಿ ಸಹಾಯಧನ ಪಡೆದಿರಬಾರದು.
ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತ ವರ್ಗಕ್ಕೆ ಸೇರಿದವರಾಗಿರಬೇಕು.
ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!
Where To Apply-ಅರ್ಜಿಯನ್ನು ಎಲ್ಲಿ ಸಲ್ಲಿಸಬಹುದು?
ಕೃಷಿ ಭಾಗ್ಯ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಾಣ ಮಾಡಲು ಆಸಕ್ತ ಅರ್ಹ ಫಲಾನುಭವಿಗಳು ನಿಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರ (RSK) ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅವಶ್ಯಕ ದಾಖಲಾತಿಗಳೊಂದಿಗೆ ನೇರವಾಗಿ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

