Sunday, December 22, 2024
No menu items!
HomeAgricultureKMF Milk Subsidy-ಹಾಲಿನ ಪ್ರೋತ್ಸಾಹಧನ ಬಿಡುಗಡೆ! ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿ?

KMF Milk Subsidy-ಹಾಲಿನ ಪ್ರೋತ್ಸಾಹಧನ ಬಿಡುಗಡೆ! ನಿಮ್ಮ ಖಾತೆಗೆ ಹಣ ಜಮಾ ಆಗಿದೆಯೇ ಚೆಕ್ ಮಾಡಿ?

ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ  ಭಾರತವು ಸಹ ಒಂದಾಗಿದ್ದು ದೇಶದ ಕೃಷಿ ವಲಯವು ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ರೈತರು ನಮ್ಮ ದೇಶದ ಬೆನ್ನೆಲುಬು(Farmers are the backbone of our country) ರೈತರು ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹೈನುಗಾರಿಕೆಯಿಂದಲ್ಲು ಸಹ ಉತ್ತಮ ಆದಾಯವನ್ನು ಪಡೆಯುತ್ತಿದ್ದಾರೆ.

ರೈತರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ತಮ್ಮ ಮನೆಗಳಲ್ಲಿ ಹಸುಗಳನ್ನು ಕೂಡ ಸಾಗುತ್ತಾರೆ. ಈ ಹಸುಗಳನ್ನು ಕೇವಲ ಅವರ ದುಡಿಮೆಗಾಗಿ ಬಳಸಿಕೊಳ್ಳದೆ ಅವುಗಳನ್ನು ದೇವರೆಂದು ಪೂಜಿಸುವವರನ್ನು ನಾವು ನೋಡಬಹುದು . ತಮ್ಮ ಆರ್ಥಿಕ ನೆರವಿಗಾಗಿ ಈ ಹಸುವಿನಿಂದ ಬರುವಂತಹ ಹಾಲನ್ನು ಡೈರಿಗೆ(KMF Milk Subsidy) ಪೂರೈಸುತ್ತಾರೆ ಹಾಗೆ ಹಸುವಿನ ಸಗಣಿಯನ್ನು ಗೊಬ್ಬರವಾಗಿ ಬಳಸುವುದರಿಂದ ಮಣ್ಣಿನ ಫಲವತ್ತತೆಯು ಸಹ ಸುಧಾರಣೆ ಆಗುತ್ತದೆ, ಇದರಿಂದ ಬೆಳೆಗಳು ಉತ್ತಮವಾಗಿ ಬೆಳೆಯುತ್ತವೆ.

ಇದನ್ನೂ ಓದಿ: Sheep farming loan Subsidy-ಕುರಿ ಸಾಕಾಣಿಕೆ ಆರಂಭಿಸಲು ಶೇ 50% ರಷ್ಟು ಸಬ್ಸಿಡಿ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

ರೈತರಿಗೆ ನೀಡಬೇಕಾದ ಹಾಲಿನ ಪ್ರೋತ್ಸಾಹ ಧನವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕರ್ನಾಟಕದ ಹಾಲು ಮಂಡಳಿಗೆ ಹಾಲನ್ನು ಸರಬರಾಜು ಮಾಡುವ ರೈತರಿಗೆ ರಾಜ್ಯ ಸರ್ಕಾರದಿಂದ ಪ್ರತಿ ಲೀಟರಿಗೆ ₹5 ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಇದರ ಕುರಿತು ಈ ಅಂಕಣದಲ್ಲಿ ವಿವರಿಸಲಾಗಿದು ರೈತರ ಖಾತೆಗೆ ಪ್ರತಿ ತಿಂಗಳು ಜಮಾ ಆದ ಹಣ ಎಷ್ಟು? ಇದನ್ನು ತಮ್ಮ ಮೊಬೈಲ್ ನಲ್ಲೇ ಹೇಗೆ ಚೆಕ್ ಮಾಡಿಕೊಳ್ಳುವುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಕೆಎಂಎಫ್ (Karnataka Milk Federation) ಕರ್ನಾಟಕ ಸರ್ಕಾರದ ಸಹಕಾರಿ ವಲಯ ಮಾಲಿಕತ್ವದ ಹಾಲು ಉತ್ಪಾದಕರ ಒಕ್ಕೂಟ ಇದರಿಂದ ನಂದಿನಿ ಎನ್ನುವ ಹೆಸರಿನಲ್ಲಿ ನಂದಿನಿ ಬ್ರಾಂಡ್‌ನಡಿ ಹಾಲು ಮತ್ತು ಹಾಲು ಉತ್ಪನ್ನಗಳನ್ನು ಮಾರುಕಟ್ಟೆಗೆ ಹೊರತರುವ ಮೂಲಕ, ಕರ್ನಾಟಕ ರಾಜ್ಯದ ಹಾಲು ಉತ್ಪಾದಕರಿಗೆ ಉತ್ತಮ ಬೆಲೆ ನೀಡಲು ಸಹಕಾರ ಮಾಡುತ್ತದೆ.

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ಹಳ್ಳಿಗಳಲ್ಲಿ ನಾವು ಹಾಲು ಉತ್ಪಾದಕರ ಸಹಕಾರಿ ಸಂಘಗಳನ್ನು ನೋಡಬಹುದು. ಸಂಘಗಳಲ್ಲಿ ಸದಸ್ಯರಾಗಿರುವ ರೈತರಿಂದ ಹಾಲನ್ನು ಸಂಗ್ರಹಿಸಲಾಗುತ್ತದೆ. ರೈತರಿಗೆ ಆರ್ಥಿಕವಾಗಿ ಸಹಾಯವಾಗಲೆಂದು ಕೆಎಂಎಫ್ ಡೈರಿಗಳಿಗೆ ಹಾಲನ್ನು ಪೂರೈಸುವ ರೈತರಿಗೆ ಪ್ರತಿ ಲೀಟರಿಗೆ ₹5 ರೂ ಗಳನ್ನೂ ನೀಡಲಾಗುತ್ತಿದೆ.

ಇದನ್ನೂ ಓದಿ: Best Insurance Plan-2024: ಸಾರ್ವಜನಿಕರಿಗೆ ಭರ್ಜರಿ ಆಫರ್! ಕೇವಲ ₹599ರೂಗೆ ₹5 ಲಕ್ಷ ವಿಮೆ ಪಡೆಯಲು ಅರ್ಜಿ!

kmf milk subsidy

How to check milk subsidy credited to your bank account-ಹಾಲಿನ ಪ್ರೋತ್ಸಾಹ ಧನ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವುದನ್ನು ತಿಳಿಯುವುದು ಹೇಗೆ?

ರಾಜ್ಯ ಸರ್ಕಾರದಿಂದ ನೇರ ನಗದು DBT(Direct Benefit Transfer) ವರ್ಗಾವಣೆ ಮೂಲಕ  ಹಣವನ್ನು ವರ್ಗಾಯಿಸಲಾಗುತ್ತಿದ್ದು ಆದರೆ ಇತ್ತೀಚಿನ ದಿನಗಳಲ್ಲಿ ರೈತರಿಗೆ ಈ ಪ್ರೋತ್ಸಾಹ ಧನ ಬರುತ್ತಿಲ್ಲ. ಹಾಗೆಯೇ ಹಣ ಬ್ಯಾಂಕ್ ಖಾತೆಗೆ ಜಮಾ ಆದರೂ ಎಷ್ಟು ಲೀಟರ್ ಗೆ ಹಣ ಎಷ್ಟು ಜಮಾ ಆಗಿದೆ ಯಾವ ತಿಂಗಳಿನಲ್ಲಿ ಹಣ ಜಮಾ ಆಗಿದೆ ಎಂಬ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳುವುದು ಎಂದು ಹಲವಾರು ರೈತರಿಗೆ ತಿಳಿದಿರುವುದಿಲ್ಲ ಈ ಎಲ್ಲಾ ಮಾಹಿತಿಯನ್ನು ಕೇವಲ ಆಧಾರ್ ಕಾರ್ಡ್ ನಂಬರ್ ನ ಸಹಾಯದಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಇದನ್ನೂ ಓದಿ: Snake bite-ಹಾವು ಕಚ್ಚಿದಾಗ ಯಾವ ಕ್ರಮ ಅನುಸರಿಸಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ!

1)ಮೊಬೈಲ್ ಆಪ್ ನ ಮೂಲಕ:
2)ಅಧಿಕೃತ ವೆಬ್ಸೈಟ್ ಮೂಲಕ:

ವಿಧಾನ-1: ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಚೆಕ್ ಮಾಡಬಹುದು:

DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ರೈತರು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೇ ಹಾಲಿನ ಪ್ರೋತ್ಸಾಹ ಧನದ ಜಮಾ ವಿವರವನ್ನು ಪಡೆಯಬಹುದು.

Step-1: ಮೊದಲಿಗೆ Milk Subsidy status check ಇಲ್ಲಿ ಕ್ಲಿಕ್ ಮಾಡಿ ಅಧಿಕೃತ DBT ಕರ್ನಾಟಕ ಮೊಬೈಲ್ application ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ತದನಂತರ ಇಲ್ಲಿ ನಿಮ್ಮ ಆಧಾರ್ ಕಾರ್ಡ ನಂಬರ್ ಅನ್ನು ಹಾಕಿ ನಿಮ್ಮ ಮೊಬೈಲ್ ನಂಬರ್ ಗೆ OTP ಯನ್ನು ಪಡೆದು ಅದನ್ನು ನಮೂದಿಸಿ ಈ ಅಪ್ಲಿಕೇಶನ್ open ಮಾಡಲು ನಾಲ್ಕು ಅಂಕಿಯ Log in ಮತ್ತು Password ಅನ್ನು ಸಿದ್ದ ಮಾಡಿಕೊಂಡು ಅದನ್ನು ನಮೂದಿಸಿ Log in  ಅಗಬೇಕು.

Step-3: ಲಾಗಿನ್ ಅದ ನಂತರ ಇಲ್ಲಿ ಕಾಣುವ “ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ” ಬಟನ್ ಮೇಲೆ ಕ್ಲಿಕ್ ಮಾಡಿ ಯಾವ ಯಾವ ತಿಂಗಳು ಎಷ್ಟು? ಹಣ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: Digital Ration Card-ಅಧಿಕೃತ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಅಪ್ಲಿಕೇಶನ್ ಬಿಡುಗಡೆ!

ಇಲ್ಲಿ ಯಾವ ಬ್ಯಾಂಕ್ ಖಾತೆಗೆ ಹಣ ಜಮಾ ಅಗಿದೆ? ಹಣ ಜಮಾ ಅದ ದಿನಾಂಕ, UTR ಸಂಖ್ಯೆ ಎಲ್ಲಾ ಮಾಹಿತಿ ತೋರಿಸುತ್ತದೆ.

milk incentive

ವಿಧಾನ-2: ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಹಣ ಜಮಾ ಆದ ಮಾಹಿತಿಯನ್ನು ಪಡೆಯಬಹುದು:

ರಾಜ್ಯ ಸರಕಾರದ ಅಧಿಕೃತ ಕ್ಷೀರಸಿರಿ ಹಾಲಿನ ಪ್ರೋತ್ಸಾಹ ಧನ ನಿರ್ವಹಣಾ ಜಾಲತಾಣವನ್ನು ಪ್ರವೇಶ ಮಾಡಿ ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಹಣ ಜಮಾ ವಿವರವನ್ನು ಪಡೆಯಬಹುದು.

Step-1: Milk Incentive status ಇಲ್ಲಿ click ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ಅಂತಿಮವಾಗಿ ನಿಮ್ಮ ನಂಬರ್ ಅನ್ನು ನಮೂದಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಜಮಾ ಅಗಿರುವ ಹಾಲಿನ ಪ್ರೋತ್ಸಾಹ ಧನ ಸಂಪೂರ್ಣ ವಿವರ ತೋರಿಸುತ್ತದೆ.

ಇದನ್ನೂ ಓದಿ: Free Scooty Yojana Fact Check-ಕೇಂದ್ರದಿಂದ ಹೆಣ್ಣು ಮಕ್ಕಳಿಗೆ ಸ್ಕೂಟಿ ಯೋಜನೆ! ಇಲ್ಲಿದೆ ಅಧಿಕೃತ ಮಾಹಿತಿ!

RELATED ARTICLES
- Advertisment -

Most Popular

Recent Comments