Thursday, July 31, 2025
No menu items!
HomeAgricultureKarnataka Weather-ಜು.27 ರವರೆಗೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ! ಇಲ್ಲಿದೆ ರಾಜ್ಯ ಮಳೆ ಮುನ್ಸೂಚನೆ!

Karnataka Weather-ಜು.27 ರವರೆಗೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ! ಇಲ್ಲಿದೆ ರಾಜ್ಯ ಮಳೆ ಮುನ್ಸೂಚನೆ!

ಕರ್ನಾಟಕದ ಎಲ್ಲಾ ಜಿಲ್ಲೆಗಳ ಮಳೆ ಮುನ್ಸೂಚನೆ ಮಾಹಿತಿಯನ್ನು(Karnataka Weather) ಇಂದಿನ ಈ ಲೇಖನದಲ್ಲಿ ಪ್ರಕಟಿಸಲಾಗಿದ್ದು ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಮುಂಚಿತವಾಗಿ ತಮ್ಮ ಹಳ್ಳಿಯ ಮಳೆ ಮುನ್ಸೂಚನೆ ಮಾಹಿತಿಯನ್ನು(Today Bengaluru Weather) ಪಡೆಯಲು ಲಭ್ಯವಿರುವ ಸಹಾಯವಾಣಿಯ ಕುರಿತು ಸಹ ಇಲ್ಲಿ ಮಾಹಿತಿ ತಿಳಿಸಲಾಗಿದೆ.

ಇಂದು ಹವಾಮಾನ ಇಲಾಖೆಯ(IMD) ಮಳೆ ಮುನ್ಸೂಚನೆ ಮಾಹಿತಿಯ ಪ್ರಕಾರ ರಾಜ್ಯದ ಕರಾವಳಿ & ಕರಾವಳಿ ಜಿಲ್ಲೆಗಳಿಗೆ(Bengaluru Weather) ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಿಗೆ ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಅಲ್ಲಲ್ಲಿ ಅತಿ ಭಾರಿ ಮಳೆ. ಒಳನಾಡು ಜಿಲ್ಲೆಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಹಗುರದಿಂದ ಸಾದಾರಣ ಮಳೆ ಹಾಗೂ ಅಲ್ಲಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: Bharti Airtel Scholarship-ಏರ್‌ಟೆಲ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನೂ 11 ದಿನ ಬಾಕಿ!

ಪ್ರಸ್ತುತ ಲೇಖನದಲ್ಲಿ ರಾಜ್ಯದಲ್ಲಿ(Karnataka Rain Forecast)ಯಾವೆಲ್ಲ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ? ಜಿಲ್ಲಾವಾರು ಮಳೆ ಮುನ್ಸೂಚನೆ ಮಾಹಿತಿ ಮತ್ತು ರೈತರು ಮುಂಚಿತವಾಗಿ ತಮ್ಮ ಹಳ್ಳಿಯ 3 ದಿನ ಮಳೆ ಮಾಹಿತಿಯನ್ನು ಉಚಿತವಾಗಿ ಹೇಗೆ ಪಡೆಯುವುದು ಎನ್ನುವ ಮಾಹಿತಿಯನ್ನು ಸಹ ಈ ಕೆಳಗೆ ಹಂಚಿಕೊಳ್ಳಲಾಗಿದೆ.

Orange Alert-ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್:

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಇಂದು ದಕ್ಷಿಣ ಕನ್ನಡ,ಉಡುಪಿ,ಉತ್ತರಕನ್ನಡ,ಚಿಕ್ಕಮಗಳೂರು,ಹಾಸನ,ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯಾಗುವ(115.5 ರಿಂದ 204.5 ಮಿಲಿ ಮೀಟರ್) ಸಾಧ್ಯತೆಯ ಮುನ್ಸೂಚನೆಯನ್ನು ನೀಡಿದ್ದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜನರು ಮುನ್ನೆಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Aadhar Update-7 ವರ್ಷ ಮೀರಿದ ಮಕ್ಕಳಿಗೆ ಆಧಾರ್ ಕಾರ್ಡ ಬಯೋಮೆಟ್ರಿಕ್ ಕಡ್ಡಾಯ!

Today Bengaluru Weather

Today Karnataka Weather-ಕರ್ನಾಟಕದ ಹವಾಮಾನ ಮುನ್ಸೂಚನೆ :

ಕರಾವಳಿ: ಕಾಸರಗೋಡು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಉಡುಪಿ ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಕಾರ್ಕಳ ಸುತ್ತಮುತ್ತ ಭಾಗಗಳಲ್ಲಿ ಮಳೆ ಮತ್ತೂ ಹೆಚ್ಚಿರುವ ಸಾಧ್ಯತೆಗಳಿವೆ.

ಈಗಿನಂತೆ ಜುಲೈ 22ರಿಂದ ಮಳೆಯ ಪ್ರಮಾಣ ಸ್ವಲ್ಪ ಇಳಿಕೆಯಾಗುವ ಲಕ್ಷಣಗಳಿದ್ದು, ಜುಲೈ 30ರಿಂದ ಬಿಸಿಲು ಕಾಣುವ ಸಾಧ್ಯತೆಗಳಿವೆ.

ಮಲೆನಾಡು: ಕೊಡಗು ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಹಾಸನ ಉತ್ತರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಹೆಚ್ಚಿನ ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ. ಶಿವಮೊಗ್ಗ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಕುದುರೆಮುಖ, ಶಿೃಂಗೇರಿ, ಆಗುಂಬೆ, ಕೊಪ್ಪ, ಬಾಳೆಹೊನ್ನೂರು, ಮೂಡಿಗೆರೆ ಸುತ್ತಮುತ್ತ ಭಾಗಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಸಾಧ್ಯತೆಗಳಿವೆ.
ಈಗಿನಂತೆ ಜುಲೈ 22ರಿಂದ ಮಳೆಯ ಕಡಿಮೆಯಾಗುವ ಲಕ್ಷಣಗಳಿದ್ದು, 29ರಿಂದ ಬಿಸಿಲು ಮೂಡಬಹುದು.

ಇದನ್ನೂ ಓದಿ: Free Hostel Application-ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ!

ಒಳನಾಡು: ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ದಾವಣಗೆರೆ, ಬಳ್ಳಾರಿ, ರಾಯಚೂರು, ವಿಜಯಪುರ, ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ. ರಾಯಚೂರು – ಆಂದ್ರಾ ಗಡಿಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಮೈಸೂರು ಅಲ್ಲಲ್ಲಿ ತುಂತುರು, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು( ಪಾವಗಢ ಸಹಿತ), ಚಿತ್ರದುರ್ಗ ಜಿಲ್ಲೆಗಳ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಬೆಂಗಳೂರು ಉತ್ತರ, ತುಮಕೂರು ಜಿಲ್ಲೆಗಳ ಅಲ್ಲಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ.

ಈಗಿನಂತೆ ದಕ್ಷಿಣ ಒಳನಾಡಿನಲ್ಲಿ ಜುಲೈ 25ರ ತನಕ ಹಾಗೂ ಉತ್ತರ ಒಳನಾಡಿನಲ್ಲಿ ಜುಲೈ ತಿಂಗಳ 27ರ ತನಕ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.

ಇದನ್ನೂ ಓದಿ: PM Dhan Dhanya Yojana-ಕೇಂದ್ರದಿಂದ ಪಿಎಂ ಧನ್ ಧಾನ್ಯ ಕೃಷಿ ನೂತನ ಯೋಜನೆ ಜಾರಿ!

Cyclone Today In Karnataka-ಆಂದ್ರಾ ಕರಾವಳಿಯಲ್ಲಿ ವಾಯುಭಾರ ಕುಸಿತ:

ಆಂದ್ರಾ ಕರಾವಳಿಯಲ್ಲಿ ಸಣ್ಣ ಪ್ರಮಾಣದ ವಾಯುಭಾರ ಕುಸಿತದಂತಹ ತಿರುವಿಕೆ ಉಂಟಾಗಿದ್ದು, ಮುಂದಿನ ಪರಿಣಾಮ ಕಾದು ನೋಡಬೇಕಾಗಿದೆ. ಪ್ರಭಲಗೊಂಡರೆ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.

Varunamitra Helpline-ನಿಮ್ಮ ಹಳ್ಳಿಯ ಮಳೆ ಮುನ್ಸೂಚನೆ ಪಡೆಯಲು ಉಚಿತ ಸಹಾಯವಾಣಿ:

ರೈತರು ಮುಂಚಿತವಾಗಿ ತಮ್ಮ ಹಳ್ಳಿಯ ಮುಂದಿನ 3 ದಿನದ ಮಳೆ ಮುನ್ಸೂಚನೆಯನ್ನು ಪಡೆಯಲು ಉಚಿತ ಈ ವರುಣ ಮಿತ್ರ 9243345433 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ನಿರಂತರವಾಗಿ ಮಳೆ ಮುನ್ಸೂಚನೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

RELATED ARTICLES
- Advertisment -

Most Popular

Recent Comments