Friday, October 10, 2025
No menu items!
HomeNewsKarmika Card Benefits-ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯಡಿ ಪ್ರಯೋಜನ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

Karmika Card Benefits-ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯಡಿ ಪ್ರಯೋಜನ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ!

ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ಜಲಮಂಡಳಿ ನೈರ್ಮಲ್ಯೀಕರಣ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯ(Annapurna Yojane) ಅಡಿಯಲ್ಲಿ ಸ್ಮಾರ್ಟ್‌ಕಾರ್ಡ್‌ವಿತರಣೆ ಮಾಡಲಾಗಿದ್ದು, ಕಾರ್ಮಿಕರು ಈ ಯೋಜನೆಯ ಪ್ರಯೋಜನವನ್ನು ಹೇಗೆ ಪಡೆಯಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಭಾರತ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರಗಳು ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಕಲ್ಯಾಣಕಾರಿ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದ್ದು, ಅನ್ನಪೂರ್ಣ ಯೋಜನೆಯು ಒಂದಾಗಿದೆ. ಈ ಯೋಜನೆಯಡಿ ವಿಶೇಷವಾಗಿ ಕಾರ್ಮಿಕರು(Labours Department) ಹಾಗೂ ಆರ್ಥಿಕವಾಗಿ ಹಿಂದುಳಿದ ಹಿರಿಯ ನಾಗರಿಕರು ಅವರಿಗೆ ಉಚಿತವಾಗಿ ಅಥವಾ ಅತಿ ಕಡಿಮೆ ದರದಲ್ಲಿ ಆಹಾರಧಾನ್ಯವನ್ನು ವಿತರಿಸಲಾಗುತ್ತದೆ. ಅಂದರೆ ಕಾರ್ಮಿಕರಿಗೆ ಉಪಹಾರಕ್ಕಾಗಿ ಪ್ರತಿದಿನ ₹50 ರಂತೆ ಮಾಸಿಕ ₹1,500ನಷ್ಟು ಹಣವು ಸ್ಮಾರ್ಟ್‌ಕಾರ್ಡ್‌ಮೂಲಕ ನೇರ ವರ್ಗಾವಣೆ ಮಾಡಲಾಗಿದೆ.

ಇದನ್ನೂ ಓದಿ: Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ! ಪ್ರತಿ ಕ್ವಿಂಟಾಲ್‌ಗೆ ₹8,110/- ರಂತೆ ಹತ್ತಿ ಖರೀದಿಗೆ ನೋಂದಣಿ ಆರಂಭ!

ಪ್ರಸ್ತುತ ಇಂದಿನ ಈ ಲೇಖನದಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಹರು? ಅನ್ನಪೂರ್ಣ ಯೋಜನೆ(Annapurna Yojana)ಎಂದರೇನು? ಈ ಯೋಜನೆಯನ್ನು ಜಾರಿಗೆ ತರಲು ಉದ್ದೇಶವೇನು? ಇತರ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

What Is Annapurna Yojane-ಏನಿದು ಅನ್ನಪೂರ್ಣ ಯೋಜನೆ?

ಅನ್ನಪೂರ್ಣ ಯೋಜನೆ (Annapoorna Scheme)ಇದು ರಾಜ್ಯ ಸರ್ಕಾರಗಳ ಸಹಕಾರದಲ್ಲಿ ಈ ಯೋಜನೆ ಜಾರಿಯಲ್ಲಿದ್ದು 2000-01ರಲ್ಲಿ ಕೇಂದ್ರ ಸರ್ಕಾರದಿಂದ ಆರಂಭವಾದ ಒಂದು ಯೋಜನೆಯಾಗಿದ್ದು ಬಡ ಹಿರಿಯ ನಾಗರಿಕರಿಗೆ ಹಾಗೂ ದುಡಿದು ಜೀವನ ಸಾಗಿಸುವ ಕಾರ್ಮಿಕರಿಗೆ ತಿಂಗಳಿಗೆ ಕನಿಷ್ಠ ಆಹಾರ ಸುರಕ್ಷತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇದನ್ನೂ ಓದಿ: U-Go Scholarship-ಯು-ಗೋ ವಿದ್ಯಾರ್ಥಿವೇತನ ಅಡಿಯಲ್ಲಿ ₹60,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Annapurna Yojane

Annapurna Yojane Benefits-ಈ ಯೋಜನೆಯ ಪ್ರಯೋಜನ ಏನು?

2023ರ ಒಂದು ಅಧ್ಯಯನದ ಪ್ರಕಾರ, ಆರ್ಥಿಕ ಸಹಾಯ ಸಿಗುವುದರಿಂದ ಕಾರ್ಮಿಕರ ಆರೋಗ್ಯಕ್ಕೆ ಸಹಾಯವಾಗಿದೆ.ಇದಲ್ಲದೆ, ಈ ಯೋಜನೆಯು ಕಾರ್ಮಿಕರಿಗೆ ಗೌರವ ಮತ್ತು ಉತ್ತಮ ಜೀವನಮಟ್ಟವನ್ನು ಒದಗಿಸುತ್ತದೆ.

ಪ್ರತಿ ತಿಂಗಳು 10 ಕಿಲೋ ಅಕ್ಕಿ ಉಚಿತವಾಗಿ ವಿತರಣೆ (ಹಿರಿಯ ನಾಗರಿಕರಿಗೆ).

ಕಾರ್ಮಿಕರಿಗೆ ಆಹಾರಧಾನ್ಯವನ್ನು ಅತಿ ಕಡಿಮೆ ದರದಲ್ಲಿ ಪಡಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ.

ಕುಟುಂಬದ ಮೂಲಭೂತ ಆಹಾರ ಭದ್ರತೆ ಕಾಪಾಡಿಕೊಳ್ಳಲು ನೆರವಾಗಿದೆ.

ಬಡತನದಿಂದ ಉಂಟಾಗುವ ಹಸಿವಿನ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುವ ಯೋಜನೆ.

ಇದನ್ನೂ ಓದಿ: Degree Scholarship 2025-ಪದವಿ ವಿದ್ಯಾಭ್ಯಾಸಕ್ಕೆ 5.5 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ! ಇನ್ನೂ 2 ದಿನ ಬಾಕಿ!

Who Can Apply For Annapurna Yojane-ಈ ಯೋಜನೆಯ ಪ್ರಯೋಜನ ಪಡೆಯಲು ಯಾರೆಲ್ಲ ಅರ್ಹರು?

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಪ್ರಯೋಜನ ಪಡೆಯಲು ಅವಕಾಶವಿರುತ್ತದೆ.

ಬಡತನ ರೇಖೆ (BPL) ಅಡಿ ಬರುವ ಕಾರ್ಮಿಕರು.

ಯಾವುದೇ ಪಿಂಚಣಿ ಪಡೆಯದವರು (ಹಿರಿಯ ನಾಗರಿಕರಿಗೆ).

ಕಾರ್ಮಿಕರ ಗುರುತಿನ ಚೀಟಿ ಹೊಂದಿರುವವರು.

ರಾಜ್ಯ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತ ಕಾರ್ಮಿಕರು.

Labours Department Website-ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್-Click Here

RELATED ARTICLES
- Advertisment -

Most Popular

Recent Comments