Thursday, July 31, 2025
No menu items!
HomeNewsInfosys Scholarship-ಇನ್ಫೋಸಿಸ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು 15 ಸೆಪ್ಟೆಂಬರ್ ಕೊನೆಯ ದಿನಾಂಕ!

Infosys Scholarship-ಇನ್ಫೋಸಿಸ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ ಪಡೆಯಲು 15 ಸೆಪ್ಟೆಂಬರ್ ಕೊನೆಯ ದಿನಾಂಕ!

2025-2026 ನೇ ಸಾಲಿನ ವಿದ್ಯಾರ್ಥಿಗಳು ಇನ್ಫೋಸಿಸ್(Infosys Scholarship Apply)ಫೌಂಡೇಶನ್ STEM ಸ್ಟಾರ್ಸ್ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳು ಅವರ ಪದವಿ ಪೂರ್ವ ಶಿಕ್ಷಣವನ್ನು ಮುಂದುವರಿಸಲು 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವಿದ್ಯಾರ್ಥಿವೇತನವು ಹಿಂದುಳಿದ ಕುಟುಂಬಗಳ(Infosys Foundation Scholarship)ವಿದ್ಯಾರ್ಥಿಗಳು ಯಾವುದೇ ಅಡಚಣೆ ಇಲ್ಲದೆ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲು ಆರ್ಥಿಕ ಸಹಾಯವನ್ನು ಮಾಡುವುದರ ಉದ್ದೇಶವಾಗಿದೆ.

ಇದನ್ನೂ ಓದಿ: PM Yasasvi Scholarship-ಪ್ರೌಢಶಾಲೆ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಇಂದಿನ ಈ ಲೇಖನದಲ್ಲಿ ಇನ್ಫೋಸಿಸ್ ಫೌಂಡೇಶನ್ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು? ಅರ್ಜಿಯನ್ನು ಸಲ್ಲಿಸುವ ವಿಧಾನ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿಗೆ ಸಂಬಂದಿಸಿದ ದಾಖಲಾತಿಗಳಾವುವು? ಇನ್ನೂ ಹೆಚ್ಚಿನ ವಿವರವನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Last Date For Scholorship-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15-08-2025

scholorship Amount-ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ಇನ್ಫೋಸಿಸ್ ಫೌಂಡೇಶನ್ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಕೋರ್ಸ್‌ನ ಅವಧಿಗೆ ವರ್ಷಕ್ಕೆ ₹1,00,000 ವರೆಗೆ ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Scholarships-ಹೀರೋ ಗ್ರೂಪ್‌ನಿಂದ ಪದವಿ ವಿದ್ಯಾಭ್ಯಾಸಕ್ಕೆ ₹5.5 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ!

For Information-ಹೆಚ್ಚಿನ ಮಾಹಿತಿಗಾಗಿ:

ವಿದ್ಯಾರ್ಥಿವೇತನವು ಬೋಧನಾ ಶುಲ್ಕಗಳು, ಅಧ್ಯಯನ ಸಾಮಗ್ರಿಗಳು ಮತ್ತು ಜೀವನ ವೆಚ್ಚಗಳನ್ನು ಒಳಗೊಂಡಿರುತ್ತದೆ.
ಈ ವಿದ್ಯಾರ್ಥಿವೇತನ ಬದ್ಧತೆಯು STEM ಕೋರ್ಸ್‌ನ ಗರಿಷ್ಠ ನಾಲ್ಕು ವರ್ಷಗಳವರೆಗೆ ಇರುತ್ತದೆ.

Who Can Apply For Scholorship-ವಿದ್ಯಾರ್ಥಿವೇತನ ಪಡೆಯಲು ಯಾರು ಅರ್ಜಿ ಸಲ್ಲಿಸಲು ಅರ್ಹರು?

ವಿದ್ಯಾರ್ಥಿಯು ಭಾರತದ ಖಾಯಂ ಪ್ರಜೆಯಾಗಿರಬೇಕು.

ವಿದ್ಯಾರ್ಥಿಯು 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.

ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹8,00,000 ಮೀರಿರಬಾರದು.

ಸರ್ಕಾರಿ ಕಾಲೇಜುಗಳಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿನಿಯರು ಸಹ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು STEM-ಸಂಬಂಧಿತ ಕೋರ್ಸ್‌ಗಳಲ್ಲಿ ಪ್ರತಿಷ್ಠಿತ (NIRF-ಮಾನ್ಯತೆ ಪಡೆದ) ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪದವಿಪೂರ್ವ ಕೋರ್ಸ್‌ಗಳಿಗೆ ದಾಖಲಾಗಿರಬೇಕು. ಅಲ್ಲದೆ, ಎರಡನೇ ವರ್ಷದ ಬಿ.ಆರ್ಕ್ ಅಥವಾ ಐದು ವರ್ಷಗಳ ಇಂಟಿಗ್ರೇಟೆಡ್/ಡ್ಯುಯಲ್ ಪದವಿ ಕೋರ್ಸ್‌ಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: RTC Aadhar Link Status-ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ!ಲಿಂಕ್ ಅಗಿರುವುದನ್ನು ಈಗಲೇ ಪರಿಶೀಲಿಸಿ!

Documents Required-ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು?

ವಿದ್ಯಾರ್ಥಿಯ ಆಧಾರ್ ಕಾರ್ಡ್/Aadhar card

12ನೇ ತರಗತಿಯ ಅಂಕಪಟ್ಟಿ/12 Marks Card

ಸಿಇಟಿ/ನೀಟ್ ಅಂಕಪಟ್ಟಿ/NEET Marks Card

ಪ್ರವೇಶದ ಶುಲ್ಕ ರಶೀದಿ/Admission Fee Recept

ಆದಾಯ ಪ್ರಮಾಣಪತ್ರ/Income Certificate

6 ತಿಂಗಳ ವಿದ್ಯುತ್ ಬಿಲ್‌/Electric current bill

ಪೋಟೊ/Photo Copy

ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Family tree certificate-ವಂಶವೃಕ್ಷ ಪ್ರಮಾಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ!

How To Apply For Scholorship-ವಿದ್ಯಾರ್ಥಿವೇತನ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?

ಅರ್ಹ ವಿದ್ಯಾರ್ಥಿಗಳು ಕೆಳಗೆ ತಿಳಿಸಿರುವ ವಿಧಾನಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 8 ದಿನ ಬಾಕಿ!

infosys scholorship

ಇದನ್ನೂ ಓದಿ: Karnataka Labour Scheme-ಕಾರ್ಮಿಕ ಮಂಡಳಿಯಿಂದ ಪರಿಹಾರ ಧನ 8 ಲಕ್ಷಕ್ಕೆ ಏರಿಕೆ!

Step-1: ಪ್ರಥಮದಲ್ಲಿ ಈ ಲಿಂಕ್ “Infosys Scholorship” ಮೇಲೆ ಕ್ಲಿಕ್ ಮಾಡಿ ಅಧಿಕೃತ www.buddy4study.com ಜಾಲತಾಣವನ್ನು ಪ್ರವೇಶ ಮಾಡಬೇಕು.

Step-2: ಅಧಿಕೃತ ವೆಬ್ಸೈಟ್ ಭೇಟಿ ಮಾಡಿದ ನಂತರ ಅದೇ ಪೇಜ್ ಬಲಬದಿಯಲ್ಲಿ ಕಾಣುವ “Apply Now” ಬಟನ್ ಮೇಲೆ ಕ್ಲಿಕ್ ಮಾಡಬೇಕು,

Step-3: ತದನಂತರ ಮೊದಲ ಬಾರಿಗೆ ಈ ವೆಬ್ಸೈಟ್ ಅನ್ನು ಭೇಟಿ ಮಾಡುತ್ತಿರುವವರು “Create an Account” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ಸಿದ್ದ ಪಡಿಸಿಕೊಂಡು ನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಗೆ ಅಗತ್ಯ ವಿವರಗಳನ್ನು ಹಾಕಿ ಲಾಗಿನ್ ಆಗಬೇಕು.

Step-4: ನಂತರ ಅರ್ಜಿ ನಮೂನೆ Open ಆಗುತ್ತದೆ ಬಳಿಕ ಅಲ್ಲಿ ಕೇಳುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Karnataka Weather-ಜು.27 ರವರೆಗೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ! ಇಲ್ಲಿದೆ ರಾಜ್ಯ ಮಳೆ ಮುನ್ಸೂಚನೆ!

For More Information- ಈ ವಿದ್ಯಾರ್ಥಿವೇತನದ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Read Now

RELATED ARTICLES
- Advertisment -

Most Popular

Recent Comments