Wednesday, December 11, 2024
HomeBlogಸ್ವಂತ ಉದ್ಯೋಗ ಪ್ರಾರಂಭಿಸಲು ಯೋಚಿಸುತ್ತಿದ್ದರೆ ‌ಇಂದೇ ಅರ್ಜಿ ಸಲ್ಲಿಸಿ ಸರ್ಕಾರವೇ ಕೊಡುತ್ತೆ 5 ಲಕ್ಷ ಸಹಾಯಧನ

ಸ್ವಂತ ಉದ್ಯೋಗ ಪ್ರಾರಂಭಿಸಲು ಯೋಚಿಸುತ್ತಿದ್ದರೆ ‌ಇಂದೇ ಅರ್ಜಿ ಸಲ್ಲಿಸಿ ಸರ್ಕಾರವೇ ಕೊಡುತ್ತೆ 5 ಲಕ್ಷ ಸಹಾಯಧನ

ಜನೌಷಧಿ ಆರಂಭಿಸುವುದಕ್ಕೆ ಸಾಮಾನ್ಯರಿಗೆ 5 ಲಕ್ಷಗಳ ಸಹಾಯಧನ (subsidy Loan) ವನ್ನು ಸರ್ಕಾರವು ನೀಡುತ್ತದೆ.


ಭಾರತವು ಔಷಧಿಗಳ (medicine) ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ ,ಅದರಲ್ಲೂ ಜನರಿಕ್ ಔಷಧಗಳನ್ನು (generic medicine) ವಿದೇಶಗಳಿಗೂ ಕೂಡ ರಫ್ತು ಮಾಡುವಷ್ಟು ಔಷಧ ಕ್ಷೇತ್ರದಲ್ಲಿ ನಮ್ಮ ದೇಶ ಮುಂದುವರೆದಿದೆ.

ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ (PM Narendra Modiji) ಅವರು ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅಗತ್ಯ ಇರುವ ಸಂದರ್ಭದಲ್ಲಿ ಔಷಧಿಗಳು ಅತಿ ಕಡಿಮೆ ಬೆಲೆಗೆ ಸಿಗಬೇಕು (medicine price is less) ಎನ್ನುವ ಕಾರಣಕ್ಕೆ ಜನರಿಕ್ ಔಷಧಗಳನ್ನ ಹೊಂದಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ರಾಜ್ಯಾದ್ಯಂತ ಸ್ಥಾಪಿಸುವ ಯೋಜನೆಯನ್ನು ಪರಿಚಯಿಸಿದ್ದಾರೆ.
ಜನ ಔಷಧಿ ಕೇಂದ್ರಗಳಲ್ಲಿ ಜನರಿಕ್ ಮೆಡಿಸಿನ್ (medicines in Janaushadhi center) ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು, ನೀವು ಅದೇ ಔಷಧಗಳನ್ನ ಬೇರೆ ಕಡೆ ಖರೀದಿ ಮಾಡಿದ್ರೆ ಒಂದಕ್ಕೆ ಎರಡರಷ್ಟು ಹೆಚ್ಚಿನ ಹಣ ನೀಡಬೇಕು.

ಜನರಿಕ್ ಔಷಧ ವಿತರಣೆ ಮಾಡುವ ಜನ ಔಷಧಿ ಕೇಂದ್ರದ ಬಳಕೆಯೂ ಕೂಡ ಹೆಚ್ಚಾಗುತ್ತಿದ್ದು, ದೇಶದಲ್ಲಿ ಸುಮಾರು 25 ಸಾವಿರ ಜನ ಔಷಧಿ ಕೇಂದ್ರಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ.
ಜನೌಷಧಿ ಕೇಂದ್ರಗಳು ಇನ್ನು ಮುಂದೆ ಜಾಸ್ತಿ ಆಗಲಿದ್ದು, ಯುವಕರು ತಮ್ಮ ಗ್ರಾಮದಲ್ಲಿ ಅಥವಾ ನಗರ ಪ್ರದೇಶಗಳಲ್ಲಿ ಜನೌಷಧಿ ಕೇಂದ್ರ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಈ ಕೇಂದ್ರಗಳಲ್ಲಿ ಔಷಧಿಗಳ ಮೇಲೆ ಶೇಕಡ 20 % ನಷ್ಟು ಮಾಲೀಕರು ಹಣ ಗಳಿಸಬಹುದು, ಇದರಿಂದಾಗಿ ಜನೌಷಧಿ ಕೇಂದ್ರ ಆರಂಭಿಸಿದ್ರೆ, ಜನರಿಗೂ ಉಪಯೋಗವಾಗುತ್ತೆ ಜೊತೆಗೆ ಕೇಂದ್ರದ ಮಾಲೀಕರಿಗೂ ಹೆಚ್ಚು ಹಣ ಸಂಪಾದನೆ ಮಾಡಲು ಸಾಧ್ಯ.

ಜನೌಷಧಿ ಕೇಂದ್ರವನ್ನು ಯಾರೇಲ್ಲ ಆರಂಭಿಸಬಹುದು? (Who can Can apply)

  • B.Pharm ಅಥವಾ D.Pharm ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
    *ವೈದ್ಯಕೀಯ ಕಾಲೇಜುಗಳು (Medical College) , ಸರ್ಕಾರಿ ಆಸ್ಪತ್ರೆಗಳು, ಎಂಜಿಓ ಸಂಸ್ಥೆಗಳು, ಸಹಕಾರಿ ಸಂಘಗಳು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
    *ಒಂದು ಕಿಲೋಮೀಟರ್ ಅಂತರದಲ್ಲಿ ಮತ್ತೊಂದು ಜನೌಷಧಿ ಕೇಂದ್ರ ಇದ್ದರೆ ಆ ಸ್ಥಳದಲ್ಲಿ ಜನೌಷಧಿ ಕೇಂದ್ರ ಆರಂಭಿಸಲು ಅವಕಾಶ ಇರುವುದಿಲ್ಲ.
    *ಜನೌಷಧಿ ಔಷಧ ಅಂಗಡಿ ಆರಂಭಿಸಲು 120 ಅಡಿಯ ಜಾಗ ಬೇಕು.
    ಜನೌಷಧಿ ಆರಂಭಿಸುವುದಕ್ಕೆ ಸಾಮಾನ್ಯರಿಗೆ 5 ಲಕ್ಷಗಳ ಸಹಾಯಧನ (subsidy) ವನ್ನು ಸರ್ಕಾರ ನೀಡುತ್ತದೆ. ಮಹಿಳೆ, ವಿಕಲಚೇತನರು, ಈಶಾನ್ಯ ದೇಶದವರು, ಗುಡ್ಡಗಾಡು ಪ್ರದೇಶದವರು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು 112 ಜಿಲ್ಲೆಗಳಲ್ಲಿ ವಾಸಿಸುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಿದರೆ 2 ಲಕ್ಷ ರೂಪಾಯಿಗಳ ಹೆಚ್ಚುವರಿ ಸಹಾಯಧನ ಪಡೆಯಬಹುದು.

ಜನೌಷಧಿ ಕೇಂದ್ರ ಆರಂಭಿಸಲು http://onlineapp.pmbi.co.in/ ಅಧಿಕೃತ ವೆಬ್ಸೈಟ್ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕೇಳಲಾದ ಸ್ವ ವಿವರಗಳ ಮಾಹಿತಿ ನೀಡಿ ನಂತರ ಅಗತ್ಯ ಇರುವ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಶುಲ್ಕ 5000 ರೂ. ಹಾಗಾದ್ರೆ ಇನ್ಯಾಕೆ ತಡ ನೀವು ನಿಮ್ಮ ಸ್ವಂತ ಉದ್ಯಮ ಆರಂಭಿಸಬೇಕು ಎಂದುಕೊಂಡಿದ್ದರೆ ಫಾರ್ಮಸಿ ಅಧ್ಯಯನ ಮಾಡಿದ್ರೆ ನೀವು ಕೂಡ ತಕ್ಷಣವೇ ಜನರಿಕ್ ಔಷಧಗಳನ್ನು ಹೊಂದಿರುವ ಜನೌಷಧಿ ಕೇಂದ್ರವನ್ನ ಆರಂಭಿಸಬಹುದು. ಕೈ ತುಂಬಾ ಹಣ ಸಂಪಾದನೆ ಮಾಡಬಹುದು.

RELATED ARTICLES
- Advertisment -
Google search engine

Most Popular

Recent Comments