Saturday, August 30, 2025
No menu items!
HomeAgricultureHorticulture Department-MIDH ಯೋಜನೆಯಡಿ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!

Horticulture Department-MIDH ಯೋಜನೆಯಡಿ ವೀಡ್ ಮ್ಯಾಟ್ ಖರೀದಿಸಲು 1 ಲಕ್ಷ ಸಹಾಯಧನ!

ರಾಜ್ಯ ಸರ್ಕಾರವು MIDH ಯೋಜನೆಯ ಅಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ(Weed Mat Subsidy Application)ರೈತರ ಬೆಳೆಗಳಿಗೆ ಸಹಾಯಕಾರಿಯಾಗಲು ವೀಡ್ ಮ್ಯಾಟ್ ಅನ್ನು ಖರೀದಿಸಲು 1 ಲಕ್ಷ ಸಹಾಯಧನವನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯ ಅಡಿಯಲ್ಲಿ ತೋಟಗಾರಿಕೆಯಲ್ಲಿ ಸಸ್ಯ ಸಂರಕ್ಷಣೆ,(Horticulture Department)ಕೃಷಿ ಉತ್ಪಾದನೆ ಹೆಚ್ಚಿಸುವುದು ಮತ್ತು ಕೃಷಿಕರ ಆದಾಯವನ್ನು ಹೆಚ್ಚಿಸುವುದೇ ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳು ಪ್ರಯೋಜನವನ್ನು ಪಡೆಯಲು ಆದೇಶವನ್ನು ಹೊರಡಿಸಿದೆ.

ಇದನ್ನೂ ಓದಿ: Scholorship Application-NEET ಅಭ್ಯರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

ಪ್ರಸ್ತುತ ಈ ಯೋಜನೆಯ ಅಡಿಯಲ್ಲಿ ವೀಡ್ ಮ್ಯಾಟ್ ಉಪಯೋಗಿಸುವುದರಿಂದ ರೈತರಿಗೆ ಅನುಕೂಲಗಳೇನು? ವೀಡ್ ಮ್ಯಾಟ್ ಎಂದರೇನು? ವೀಡ್ ಮ್ಯಾಟ್ ಪಡೆಯಲಿ ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಅದಕ್ಕೆ ಸಂಬಂದಿಸಿದ ದಾಖಲಾತಿಗಳೇನು? ಯೋಜನೆಯಡಿ ಎಷ್ಟು ಸಬ್ಸಿಡಿ ನೀಡಲಾಗುತ್ತದೆ? ಇನ್ನಿತರ ಹೆಚ್ಹಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Weed Mat-ಏನಿದು ವೀಡ್ ಮ್ಯಾಟ್?

ವೀಡ್ ಮ್ಯಾಟ್ ಎಂಬುದು ಸಸ್ಯಗಳ ಸುತ್ತಲಿನ ಹುಲ್ಲುಹಾಕುಗಳನ್ನು ತಡೆಯಲು ಬಳಸುವ ಪ್ಲಾಸ್ಟಿಕ್‌ ಅಥವಾ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾದ ಹಿತಪದಾರ್ಥ. ಇದರಿಂದ ನೀರಿನ ಶೋಷಣೆಯು ಕಡಿಮೆಯಾಗುತ್ತದೆ.

ಇದನ್ನೂ ಓದಿ: Ration Card-ರೇಶನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

Weed Mat Susbidy-ಈ ಯೋಜನೆಯಡಿ ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ತೋಟಗಾರಿಕೆ ಇಲಾಖೆಯ ವತಿಯಿಂದ MIDH ಯೋಜನೆಯ ಅಡಿಯಲ್ಲಿ ಅರ್ಹ ರೈತರು ವೀಡ್ ಮ್ಯಾಟ್ ಅನ್ನು ಪಡೆಯಲು ಒಂದು ಚದರ ಮೀಟರ್ ವೀಡ್ ಮ್ಯಾಟ್ ಗೆ ರೂ 50/- ಸಹಾಯಧನದಂತೆ ಅಂದರೆ ಗರಿಷ್ಟ 1.0 ಲಕ್ಷದ ವರೆಗೆ ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ.

Benefits For Farmers-ವೀಡ್ ಮ್ಯಾಟ್ ಬಳಕೆಯ ಲಾಭಗಳು:

1. ಕಳೆ ನಿಯಂತ್ರಣ:

ವೀಡ್ ಮ್ಯಾಟ್ ಸಸ್ಯದ ಸುತ್ತಲಿನ ಭಾಗದಲ್ಲಿ ಕಳೆಗಳ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಇದು ಸೂರ್ಯನ ಬೆಳಕು ನೆಲದ ಮೇಲೆ ಬೀರದಂತೆ ತಡೆಯುವುದರಿಂದ ಕಳೆಗಳು ಬೆಳೆಯುವುದಿಲ್ಲ. ಇದರಿಂದ ರೈತರಿಗೆ ಕಳೆಯ ತೆಗೆಯುವ ಶ್ರಮ ಮತ್ತು ಸಮಯ ಗಣನೀಯವಾಗಿ ಉಳಿತಾಯವಾಗುತ್ತದೆ. ಜೊತೆಗೆ, ರಾಸಾಯನಿಕ ಕಳೆನಾಶಕಗಳ ಅವಲಂಬನೆ ಕಡಿಮೆಯಾಗುತ್ತಿದ್ದು, ಇದು ಪರಿಸರ ಸ್ನೇಹಿ ವಿಧಾನವಾಗಿರುತ್ತದೆ.

2. ಮಣ್ಣಿನ ತೇವಾಂಶ ರಕ್ಷಣೆ:

ವೀಡ್ ಮ್ಯಾಟ್ ಮಣ್ಣಿನಲ್ಲಿ ತೇವಾಂಶ ಉಳಿಯುವಂತೆ ಮಾಡುತ್ತದೆ. ಇದು ನೀರಿನ ಅವಶೋಷಣೆಯನ್ನು ತಡೆಯುತ್ತದೆ, ನೀರಿನ ಬಳಕೆಯ ಅವಶ್ಯಕತೆ ಕಡಿಮೆಯಾಗುತ್ತದೆ. ಬರಪೀಡಿತ ಪ್ರದೇಶಗಳಲ್ಲಿ ಇದೊಂದು ಉತ್ತಮ ಪರಿಹಾರವಾಗಿದ್ದು, ಗಿಡಗಳಿಗೆ ಸ್ಥಿರವಾದ ತೇವಾಂಶ ಒದಗಿಸಿ ಉತ್ತಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ.

3. ಮಣ್ಣಿನ ತಾಪಮಾನ ನಿಯಂತ್ರಣ: ವೀಡ್ ಮ್ಯಾಟ್ ಮಣ್ಣಿನ ತಾಪಮಾನವನ್ನು ಸಮತೋಲನದಲ್ಲಿರಿಸುತ್ತದೆ. ಬೇಸಿಗೆಯಲ್ಲಿ ಅತಿಯಾಗಿ ಬಿಸಿಯಾಗುವುದು ಹಾಗೂ ಚಳಿಯಲ್ಲಿ ತೀವ್ರ ತಂಪಾಗುವುದನ್ನು ತಡೆಯುತ್ತದೆ. ಇದು ಬೆಳೆಗಳ ಹಿತಕರ ಬೆಳವಣಿಗೆಗೆ ಅನುಕೂಲವಾಗುತ್ತದೆ.

ಇದನ್ನೂ ಓದಿ: Muskaan Scholarship-ಪ್ರೌಢ ಶಾಲಾ & ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಅಹ್ವಾನ!

4. ಮಣ್ಣಿನ ಸವೆತ ತಡೆ:

ಗಾಳಿ ಅಥವಾ ಮಳೆಯಿಂದ ಉಂಟಾಗುವ ಮಣ್ಣಿನ ಸವೆತವನ್ನು ವೀಡ್ ಮ್ಯಾಟ್ ತಡೆಯುತ್ತದೆ. ಇದರಿಂದ ಮಣ್ಣಿನ ಫಲವತ್ತತೆಯು ಉಳಿಯುತ್ತದೆ ಮತ್ತು ನೆಲದ ಗುಣಮಟ್ಟ ಕಾಯ್ದುಕೊಳ್ಳಬಹುದು.

5. ಕೀಟ-ರೋಗಗಳ ನಿಯಂತ್ರಣ:

ಕಳೆಗಳ ಕೊರತೆಯಿಂದಾಗಿ ಕೆಲವು ಕೀಟಗಳು ಮತ್ತು ರೋಗಗಳ ಹರಡುವಿಕೆ ತಡೆಯಲಾಗುತ್ತದೆ. ಮಣ್ಣಿನ ಶುಚಿತ್ವವೂ ಕಾಪಾಡಲಾಗುತ್ತದೆ, ಇದರಿಂದ ಬೆಳೆಗಳು ಆರೋಗ್ಯಕರವಾಗಿರುತ್ತವೆ.

6. ಉತ್ತಮ ಬೆಳೆ ಗುಣಮಟ್ಟ ಮತ್ತು ಇಳುವರಿ:

ಕಳೆಗಳ ಸ್ಪರ್ಧೆ ಇಲ್ಲದಿರುವುದರಿಂದ ಬೆಳೆಗೆ ಬೇಕಾದ ಪೋಷಕಾಂಶ ಮತ್ತು ನೀರಿನ ಲಭ್ಯತೆ ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಬೆಳೆಯ ಗುಣಮಟ್ಟ ಉತ್ತಮವಾಗಿದ್ದು, ಇಳುವರಿಯೂ ಹೆಚ್ಚಾಗುತ್ತದೆ.

7. ಕಡಿಮೆ ಶ್ರಮ ಮತ್ತು ವೆಚ್ಚ:

ಕೈಯಿಂದ ಕಳೆಯ ತೆಗೆಯುವ ಅಗತ್ಯ ಕಡಿಮೆಯಾದ ಕಾರಣ ಕಾರ್ಮಿಕ ವೆಚ್ಚವು ಹಗ್ಗವಾಗುತ್ತದೆ. ಜೊತೆಗೆ ರಾಸಾಯನಿಕ ಬಳಕೆಯೂ ಕಡಿಮೆಯಾಗುವುದರಿಂದ ಇತರ ಕೃಷಿ ವೆಚ್ಚಗಳಲ್ಲಿಯೂ ಉಳಿತಾಯ ಸಾಧ್ಯವಾಗುತ್ತದೆ.

8. ದೀರ್ಘಕಾಲೀನ ಹೂಡಿಕೆ:

ಉತ್ತಮ ಗುಣಮಟ್ಟದ ವೀಡ್ ಮ್ಯಾಟ್‌ಗಳನ್ನು 3 ರಿಂದ 5 ವರ್ಷಗಳವರೆಗೆ ಬಳಸಬಹುದಾಗಿದೆ. ಇದರಿಂದ ಒಂದು ಬಾರಿ ಮಾಡಿದ ಹೂಡಿಕೆ ದೀರ್ಘಾವಧಿಯ ಲಾಭವನ್ನು ನೀಡುತ್ತದೆ.

ಇದನ್ನೂ ಓದಿ: Kuri Sakanike-ಉಚಿತ ವೈಜ್ಞಾನಿಕ ಕುರಿ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

Who Can Apply-ಅರ್ಜಿ ಸಲ್ಲಿಸಲು ಯರೆಲ್ಲ ಅರ್ಹರು?

  • ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು.
  • ಅರ್ಜಿದಾರರರು ಅವರ ಹೆಸರಿನಲ್ಲಿ ಜಮೀನ ಅನ್ನು ಹೊಂದಿರಬೇಕು.
  • ಒಂದು ವೇಳೆ ಖಾತೆಯು ಜಂಟಿಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು್.
  • ತಂದೆ ಅಥವಾ ತಾಯಿ ಹೆಸರಿನಲ್ಲಿ ಜಮೀನಿದ್ದು, ಅವರು ಮರಣ ಹೊಂದಿದಲ್ಲಿ ಮಾತ್ರ ಮರಣ ಪತ್ರವನ್ನು ಸಲ್ಲಿಸಬೇಕು.
  • ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ.
  • ಅಧಿಕೃತ ಆದೇಶದ ಪ್ರಕಾರ, ಮನೆಯ ಖಾತೆ (ಹಕ್ಕುಪತ್ರ) ಮಹಿಳೆಯ ಹೆಸರಿನಲ್ಲಿ ಇದ್ದ ಸಂದರ್ಭದಲ್ಲಿ, ಕುಟುಂಬದ ಇತರ ಪುರುಷ ಸದಸ್ಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದಾದರೂ, ಇಂತಹ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡಬಾರದು ಎಂದು ಸೂಚಿಸಲಾಗಿದೆ. ಮಹಿಳೆಯ ಹೆಸರು ದಾಖಲಾದ ದಾಖಲೆಗಳಿದ್ದರೆ, ಅರ್ಜಿಯು ಅವರ ಹೆಸರಿನಲ್ಲಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: Mohan T Advani Scholorship-ಬ್ಲೂ ಸ್ಟಾರ್ ಫೌಂಡೇಶನ್‌ನ ವತಿಯಿಂದ 1ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

weed mat subsidy order copy

ಇದನ್ನೂ ಓದಿ: Infosys Foundation Scholarship-ಇನ್ಫೋಸಿಸ್ ಫೌಂಡೇಶನ್ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

How To Apply-ಅರ್ಜಿಯನ್ನು ಸಲ್ಲಿಸುವ ವಿಧಾನ:

ಈ ಯೋಜನೆಯ ಅಡಿಯಲ್ಲಿ ಪ್ರಯೋಜನವನ್ನು ಪಡೆಯಲು ಅರ್ಹ ರೈತರು ಅರ್ಜಿಗೆ ಸಂಬಂದಿಸಿದ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನೇರವಾಗಿ ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  1. ಆಧಾರ್ ಕಾರ್ಡ/Aadhar Card
  2. ತೋಟಗಾರಿಕೆ ಬೆಳೆ ದೃಡೀಕರಣ ಪತ್ರ/Crop certificate
  3. ಜಮೀನಿನ ಪಹಣಿ/RTC
  4. ಬ್ಯಾಂಕ್ ಪಾಸ್ ಬುಕ್ ಪ್ರತಿ/Bank pass book
  5. ಮೊಬೈಲ್ ನಂಬರ್/Mobile number
  6. ಪೋಟೋ-2/Photo

ಇದನ್ನೂ ಓದಿ: PMMVY Yojana-ಮಾತೃವಂದನಾ ಯೋಜನೆಯಡಿ ಗರ್ಭಿಣಿಯರಿಗೆ ₹11,000 ರೂ ಸಹಾಯಧನ!

For More Information-ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ತೋಟಗಾರಿಕೆ ಇಲಾಖೆಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ-Click Here

RELATED ARTICLES
- Advertisment -

Most Popular

Recent Comments