ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಯೋಜನೆಯು(Gruhalakshmi Scheme) ಒಂದಾಗಿದ್ದು, ಇದರ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮುಖ್ಯ ಗೃಹಿಣಿಯರಿಗೆ ಒಂದು ಖುಷಿಯ ಸುದ್ದಿ, 20ನೇ ಕಂತಿನ ₹2,000 ಹಣವನ್ನು 09 ಜೂನ್ 2025 ರಂದು ವರ್ಗಾವಣೆ ಮಾಡಲಾಗಿದ್ದು ಈ ಹಣದ ಜಮಾ ವಿವರವನ್ನು ಮಹಿಳೆಯರು ತಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಈ ಯೋಜನೆಯಿಂದ ರಾಜ್ಯದ ಲಕ್ಷಾಂತರ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಜವಾಬ್ದಾರಿಯನ್ನು ಯಾವುದೇ ಅಡಚಣೆಗಳಿಲ್ಲದೆ ಧೈರ್ಯದಿಂದ ನಿಭಾಯಿಸಲು ನೆರವು ನೀಡುತ್ತದೆ. ಈ ಹಣವು ಕೇವಲ ಹಣಕಾಸಿನ ನೆರವು ಮಾತ್ರವಲ್ಲ, ಮಹಿಳೆಯರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಒಂದು ಶಕ್ತಿಯಾಗಿದ್ದು, ಈ ಯೋಜನೆಯಡಿಯಲ್ಲಿ, ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ,1.28 ಕೋಟಿ ಮಹಿಳೆಯರಿಗೆ ಈ ನೆರವನ್ನು ಪಡೆಯುತ್ತಿದ್ದಾರೆ.
ಇದನ್ನೂ ಓದಿ: Car Subsidy- ಕಾರು ಖರೀದಿ ಮಾಡಲು ಶೇ.50% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!
ಈ ಯೋಜನೆಯ 20ನೇ ಕಂತಿನ ₹2,000 ಹಣವನ್ನು ಜೂನ್ 09, 2025ರಂದು ಬಿಡುಗಡೆ ಮಾಡಲಾಗಿದ್ದು, ತಮ್ಮ ಮೊಬೈಲ್ ನಲ್ಲೆ ಹಣ ಜಮಾದ ವಿವರವನ್ನು ಚೆಕ್ ಮಾಡುವ ವಿಧಾನ ಹೇಗೆ? ಗೃಹಲಕ್ಷ್ಮಿ ಯೋಜನೆಯ ಇನ್ನಿತರ ಅಗತ್ಯ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ.
Objective of the Grihalakshmi Yojana-ಗೃಹಲಕ್ಷ್ಮಿ ಯೋಜನೆಯ ಮುಖ್ಯ ಉದ್ದೇಶ:
ಆರ್ಥಿಕ ಸ್ವಾತಂತ್ರ್ಯ: ಕುಟುಂಬದ ಯಜಮಾನಿಯರಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು ನೀಡುವ ಮೂಲಕ ಅವರಿಗೆ ಆರ್ಥಿಕ ಸ್ವಾವಲಂಬನೆಯನ್ನು ಒದಗಿಸುವುದು.
ಜೀವನಮಟ್ಟ ಉನ್ನತೀಕರಣ: ಮಹಿಳೆಯರಿಗೆ ಆರ್ಥಿಕ ಬೆಂಬಲವನ್ನು ನೀಡುವ ಮೂಲಕ ಕುಟುಂಬದ ದೈನಂದಿನ ಅಗತ್ಯಗಳು, ಮಕ್ಕಳ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಇತರ ಅಗತ್ಯ ವೆಚ್ಚಗಳಿಗೆ ಸಹಾಯ ಮಾಡುವುದು.
ಮಹಿಳಾ ಸಬಲೀಕರಣ: ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುವ ಮೂಲಕ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಅವರ ಪಾತ್ರವನ್ನು ಬಲಪಡಿಸುವುದು.
ಗ್ರಾಮೀಣ ಮತ್ತು ನಗರ ಬಡತನ ನಿರ್ಮೂಲನೆ: ಗ್ರಾಮೀಣ ಮತ್ತು ನಗರ ಪ್ರದೇಶಗಳ ಕಡಿಮೆ ಆದಾಯದ ಕುಟುಂಬಗಳ ಮಹಿಳೆಯರಿಗೆ ಆರ್ಥಿಕ ನೆರವು ಒದಗಿಸಿ, ಅವರ ಜೀವನದ ಗುಣಮಟ್ಟವನ್ನು ಉನ್ನತಗೊಳಿಸುವುದು.
ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ: ಈ ಯೋಜನೆಯ ಹಣವನ್ನು ಸಣ್ಣ ಉದ್ಯಮಗಳ ಆರಂಭಕ್ಕೆ ಅಥವಾ ಆದಾಯ ತರುವ ಚಟುವಟಿಕೆಗಳಿಗೆ ಬಳಸಲು ಮಹಿಳೆಯರಿಗೆ ಸಹಾಯ ಮಾಡುವುದು.
ಇದನ್ನೂ ಓದಿ: MSP Price list-2025: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೇಂದ್ರದಿಂದ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!
Importance of the Grihalakshmi scheme-ಗೃಹಲಕ್ಷ್ಮಿ ಯೋಜನೆಯ ಮಹತ್ವವೇನು?
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉದ್ದೇಶಿಸಿ ರೂಪುಗೊಂಡಿದೆ. ಕುಟುಂಬದ ಆರ್ಥಿಕ ಹೊಣೆಗಾರಿಕೆಯನ್ನು ಭುಜಸಿದ ಮಹಿಳೆಯರಿಗೆ ನಿರಂತರವಾಗಿ ಹಣಕಾಸಿನ ಬೆಂಬಲವನ್ನು ನೀಡುವ ಮೂಲಕ ಈ ಯೋಜನೆ ಶಕ್ತಿಯುಳ್ಳ ಹಿರಿತನವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಯೋಜನೆಯಿಂದ ಲಭಿಸುವ ಸಹಾಯಧನವನ್ನು ಮಹಿಳೆಯರು ಮಕ್ಕಳ ಶಿಕ್ಷಣ, ದಿನನಿತ್ಯದ ಗೃಹಚಟುವಟಿಕೆಗಳು, ಆರೋಗ್ಯ ಸೇವೆ ಹಾಗೂ ಸಣ್ಣ ಉದ್ಯಮ ಆರಂಭದಂತಹ ನಾನಾ ಕ್ಷೇತ್ರಗಳಲ್ಲಿ ಬಳಸಿಕೊಂಡು ತಮ್ಮ ಜೀವನಮಟ್ಟವನ್ನು ಮೇಲಕ್ಕೆತ್ತುತ್ತಿದ್ದಾರೆ. ಈ ಮೂಲಕ ಮಹಿಳೆಯರು ಆತ್ಮವಿಶ್ವಾಸದಿಂದ ಜೀವನ ನಡೆಸುತ್ತಿರುವಂತೆಯೇ, ತಮ್ಮ ಕುಟುಂಬದ ಸಮಗ್ರ ಅಭಿವೃದ್ಧಿಗೂ ಇದೊಂದು ಮೂಲಸ್ಥಂಭವಾಗಿದೆ.
ಇದನ್ನೂ ಓದಿ: Rain Forecast-ರಾಜ್ಯದಲ್ಲಿ ಈ ದಿನದಿಂದ ಮತ್ತೆ ಮುಂಗಾರು ಚುರುಕು ಸಾಧ್ಯತೆ!
ಈಗಾಗಲೆ ಖಾತೆಗೆ ಜಮ ಮಾಡಿರುವ 20ನೇ ಕಂತಿನ ಗೃಹಲಕ್ಷ್ಮಿ ಹಣದ ವಿವರಗಳು:
ಕರ್ನಾಟಕ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯಡಿ, 20ನೇ ಕಂತಿನ ಹಣವನ್ನಾಗಿ ಜೂನ್ 09, 2025ರಂದು ಬಿಡುಗಡೆ ಮಾಡಿದೆ. ಈ ಬಾರಿ ಸುಮಾರು 1.28 ಕೋಟಿ ಮಹಿಳೆಯರ ಬ್ಯಾಂಕ್ ಖಾತೆಗೆ ₹2,000ರಷ್ಟು ಮೊತ್ತವನ್ನು DBT(Direct Benefit Transfer)ಮೂಲಕ ನೇರವಾಗಿ ಜಮಾ ಮಾಡಲಾಗಿದೆ.
ಈ ಹಂತದ ಬಿಡುಗಡೆ ನಂತರ, ಗೃಹಲಕ್ಷ್ಮಿ ಯೋಜನೆಯ ಒಟ್ಟು ವೆಚ್ಚವು ₹33,000 ಕೋಟಿಗಳನ್ನು ದಾಟಿದ್ದು, ಇದು ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದ ಗಟ್ಟಿದೃಢವಾದ ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಪ್ರತಿಯೊಂದು ಹಂತದಲ್ಲಿಯೂ ಪಾರದರ್ಶಕತೆ ಮತ್ತು ಪರಿಣಾಮಕಾರಿತ್ವಕ್ಕೆ ಆದ್ಯತೆ ನೀಡುತ್ತಿರುವ ಸರ್ಕಾರ, ಈ ಯೋಜನೆಯ ಮೂಲಕ ಲಕ್ಷಾಂತರ ಮಹಿಳೆಯರ ಬದುಕಿಗೆ ಹೊಸ ಬೆಳಕು ನೀಡುತ್ತಿದೆ.
ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಈ ಯೋಜನೆ, ಕುಟುಂಬದ ಸಮಗ್ರ ಅಭಿವೃದ್ಧಿಗೆ ದಿಕ್ಕು ತೋರಿಸುತ್ತಿದ್ದು, ಶಿಕ್ಷಣ, ಆರೋಗ್ಯ, ದೈನಂದಿನ ಖರ್ಚು ಮತ್ತು ಸಣ್ಣ ಉದ್ಯಮ ಆರಂಭಿಸುವಂತಹ ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಈ ಹಣವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ.
ಇದನ್ನೂ ಓದಿ: Free Tailoring Machine-ಉಚಿತ ಟೈಲರಿಂಗ್ ಯಂತ್ರ ಪಡೆಯಲು ಅರ್ಜಿ ಆಹ್ವಾನ!
ಕಂತುಗಳ ಬಿಡುಗಡೆ ದಿನಾಂಕಗಳು ಹೀಗಿವೆ:
ಡಿಸೆಂಬರ್ 2024 (17ನೇ ಕಂತು): ಹಣವನ್ನು ಮಾರ್ಚ್ 11, 2025 ರಂದು ಜಮಾ ಮಾಡಲಾಗಿದೆ.
ಜನವರಿ 2025 (18ನೇ ಕಂತು): ಹಣವನ್ನು ಮಾರ್ಚ್ 30, 2025 ರಂದು ಜಮಾ ಮಾಡಲಾಗಿದೆ.
ಫೆಬ್ರವರಿ 2025 (19ನೇ ಕಂತು): ಹಣವನ್ನು ಮೇ 19, 2025 ರಂದು ಜಮಾ ಮಾಡಲಾಗಿದೆ.
ಮಾರ್ಚ್-2025(20 ನೇ ಕಂತು): 09 ಜೂನ್ 2025 ಜಮಾ ಮಾಡಲಾಗಿದೆ.
ಇದನ್ನೂ ಓದಿ: Scholorship Application-ಮಿರೇ ಅಸೆಟ್ ಫೌಂಡೇಶನ್ ನಿಂದ ₹50,000 ಸ್ಕಾಲರ್‌ಶಿಪ್ ಪಡೆಯಲು ಅರ್ಜಿ!
How To Apply-ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ತಮ್ಮ ಮೊಬೈಲ್‌ನಲ್ಲಿ ಗೃಹಲಕ್ಷ್ಮಿ ಹಣದ ಜಮಾ ವಿವರವನ್ನು ಚೆಕ್ ಮಾಡುವ ವಿಧಾನ:
Step-1: ಮೊದಲು ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ ಅಧಿಕೃತ DBT ಕರ್ನಾಟಕ ಆಪ್ಲಿಕೇಶನ್ ಅನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.
ಇದನ್ನೂ ಓದಿ: Ration Card List-ಪರಿಷ್ಕೃತ ಅನರ್ಹ ರೇಷನ್ ಕಾರ್ಡ್‌ದಾರರ ಪಟ್ಟಿ ಬಿಡುಗಡೆ!

Step-2: ಡೌನ್ಲೋಡ್ ಮಾಡಿಕೊಂಡ ನಂತರ ಅಭ್ಯರ್ಥಿಯ 12 ಅಂಕಿ ಸಂಖ್ಯೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, OTP ಯನ್ನು ಪಡೆದುಕೊಂಡು ID ಮತ್ತು Password ಅನ್ನು ಸಿದ್ದಪಡಿಸಿಕೊಂಡು DBT ಕರ್ನಾಟಕ ಆಪ್ಲಿಕೇಶನ್ ಅನ್ನು ಲಾಗಿನ್ ಆಗಬೇಕು.
Step-3: ತದನಂತರ ಸಿದ್ದಪಡಿಸಿರುವ Password ಅನ್ನು ಬಳಸಿ ಲಾಗಿನ್ ಆದ ನಂತರ, “Payment Status” ಬಟನ್ ಮೇಲೆ ಕ್ಲಿಕ್ ಮಾಡಬೇಕು. ಇದಾದ ನಂತರ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಜಮಾ ಅಗಿರುವ ಹಣ ಜಮಾ ಸ್ಥಿತಿಯ ವಿವರವು ಕಾಣಿಸುತ್ತದೆ.