Wednesday, January 7, 2026
No menu items!
HomeNewsGlaxoSmith Scholarship-ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ! ಇನ್ನೂ10 ದಿನ ಬಾಕಿ!

GlaxoSmith Scholarship-ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ ವತಿಯಿಂದ 1 ಲಕ್ಷ ವಿದ್ಯಾರ್ಥಿವೇತನ! ಇನ್ನೂ10 ದಿನ ಬಾಕಿ!

ಜಿಎಸ್‌ಕೆ ಸ್ಕಾಲರ್ಸ್ ಪ್ರೋಗ್ರಾಂ ಗ್ಲಾಕ್ಸೊ ಸ್ಮಿತ್‌ಕ್ಲೈನ್ ​​ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (GSK Programme) ನ ಅಡಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ದಾಖಲಾಗಿರುವ ಪ್ರಥಮ ವರ್ಷದ MBBS ವಿದ್ಯಾರ್ಥಿಗಳು 4.5 ವರ್ಷಗಳವರೆಗೆ ವರ್ಷಕ್ಕೆ 1 ಲಕ್ಷ ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಗ್ಲಾಕ್ಸೊಸ್ಮಿತ್‌ಕ್ಲೈನ್ ​​ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ವತಿಯಿಂದ(GlaxoSmithKline Pharmaceuticals Scholarship application) ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶಿಕ್ಷಣವನ್ನು ಪೂರ್ತಿ ಮಾಡಲು ಆರ್ಥಿಕ ಸಹಾಯಧನ ಪಡೆಯಲು ಸಹಾಯಕಾರಿಯಾಗಿದೆ.

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

ಈ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಕೊನೆಯ ದಿನಾಂಕ ಯಾವುದು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Scholorship Amount-ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ?

ಗ್ಲಾಕ್ಸೊಸ್ಮಿತ್‌ಕ್ಲೈನ್ ​​ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಶಿಕ್ಷಣವನ್ನು ಮುಂದುವರಿಸಲು 4.5 ವರ್ಷಗಳವರೆಗೆ ವರ್ಷಕ್ಕೆ 1 ಲಕ್ಷ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Milk Payment Status-ನಿಮ್ಮ ಹಾಲಿನ ಲೆಕ್ಕ ಈಗ ನಿಮ್ಮ ಬೆರಳ ತುದಿಯಲ್ಲಿ! ಇಲ್ಲಿದೆ ಮೊಬೈಲ್ ಅಪ್ಲಿಕೇಶನ್!

Ending Date for application-ಅರ್ಜಿ ಸಲ್ಲಿಕೆಯ ಮುಕ್ತಾಯದ ದಿನಾಂಕ ಯಾವುದು?
ದಿನಾಂಕ: 11 ಜನವರಿ 2026

Eligibility critiria-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ ಅಭ್ಯರ್ಥಿಗಳು ಭಾರತದ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಬಿಎಸ್ ವಿಭಾಗದಲ್ಲಿ ದಾಖಲಾಗಿರಬೇಕು.

ಅರ್ಜಿದಾರ ಅಭ್ಯರ್ಥಿಯು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕನಿಷ್ಠ 65% ಅಂಕಗಳನ್ನು ಗಳಿಸಿರಬೇಕು.

ಅರ್ಜಿದಾರ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷ ಮೀರಿರಬಾರದು.

GSK ಫಾರ್ಮಾ ಮತ್ತು Buddy4Study ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಇದನ್ನೂ ಓದಿ: Survey Number-ಮೊಬೈಲ್ ನಲ್ಲಿ ಜಮೀನಿನ ಸರ್ವೆ ನಂಬರ್ ಮಾಹಿತಿ ತಿಳಿಯುವುದು ಹೇಗೆ?

What are the documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

ಅರ್ಜಿದಾರರ ಆಧಾರ್ ಕಾರ್ಡ/Aadhar Card

ಪ್ರಸ್ತುತ ವರ್ಷದ ಕಾಲೇಜು ಪ್ರವೇಶ ಪತ್ರ/Entrance receipt

ಮೊದಲ ವರ್ಷದ MBBS ಎಲ್ಲಾ ಪಾವತಿಸಿದ ಶುಲ್ಕ ರಶೀದಿಗಳು/Admission receipt

10 ಮತ್ತು 12ನೇ ತರಗತಿಯ ಅಂಕಪಟ್ಟಿ/10 & 12 Marks Card

ಆದಾಯ ಪ್ರಮಾಣ ಪತ್ರ/Income Certificate

ಬ್ಯಾಂಕ್ ಪಾಸ್ ಪುಸ್ತಕ/Bank Passbook

ಇದನ್ನೂ ಓದಿ: Ashraya Vasati Yojana-ಆಶ್ರಯ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ 2.0 ಲಕ್ಷ ಸಹಾಯಧನ!

ಇದನ್ನೂ ಓದಿ: Land Conversion-ಕೃಷಿ ಭೂಮಿ ಪರಿವರ್ತನೆ ಇನ್ನು ತುಂಬಾ ಸರಳ! ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ!

Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ಗ್ಲಾಕ್ಸೊಸ್ಮಿತ್‌ಕ್ಲೈನ್ ​​ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಅಡಿಯಲ್ಲಿ ಆಯ್ಕೆಯಾದ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲಿಗೆ ಈ ಲಿಂಕ್ “Click Here” ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.

Step-2: ನಂತರ ಅದೇ ಪುಟದಲ್ಲಿ ಯೋಜನೆವಾರು ಅರ್ಜಿ ಸಲ್ಲಿಸಲು ಲಿಂಕ್ ಗಳಲ್ಲಿ ಪದವಿ ವ್ಯಾಸಂಗ ವಿದ್ಯಾರ್ಥಿವೇತನ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ID ಮತ್ತು Password ಅನ್ನು ಸಿದ್ದ ಮಾಡಿಕೊಂಡು ಲಾಗಿನ್ ಆಗಬೇಕು.

Step-3: ಲಾಗಿನ್ ಆದ ಬಳಿಕ ಅರ್ಜಿ ಸಲ್ಲಿಸುವ ಪ್ರತಿಯು ಓಪನ್ ಆಗುತ್ತದೆ. ಅಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Solar Pumpset Helpline-ಸೋಲಾರ್ ಪಂಪ್ ಸೆಟ್ ಸಹಾಯಧನ ಪಡೆಯಲು ಸಹಾಯವಾಣಿ ಸ್ಥಾಪನೆ!

For More Information-ಹೆಚ್ಚಿನ ಮಾಹಿತಿಗಾಗು ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ: Click Here

RELATED ARTICLES
- Advertisment -

Most Popular

Recent Comments