Friday, August 1, 2025
No menu items!
HomeNewsGanga Kalyana Scheme-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 8 ದಿನ ಬಾಕಿ!

Ganga Kalyana Scheme-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 8 ದಿನ ಬಾಕಿ!

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ(Karnataka Arya Vaishya Nigama)ನಿಗಮದ ಅಡಿಯಲ್ಲಿ 2025-2026 ನೇ ಸಾಲಿನ ವಾಸವಿ ಜಲ ಶಕ್ತಿ/ಗಂಗಾ ಕಲ್ಯಾಣ ಯೋಜನೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿಯನ್ನು ಮಾಡಲು ಇದರ ಅಡಿಯಲ್ಲಿ ಶೇ.4 ರ ಬಡ್ಡಿದರದಲ್ಲಿ ₹2.75 ಲಕ್ಷ ಸಾಲ ಹಾಗೂ ಸಹಾಯಧನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ(Ganga Kalyana Scheme)ಉದ್ಯಮಿಗಳು ಸ್ವಂತ ಉದ್ಯೋಗವನ್ನು ಆರಂಭಿಸಲು ಹಾಗೂ ತೋಟಗಾರಿಕೆ ಮತ್ತು ಕೃಷಿ ಬೆಳೆಗಳನ್ನು ಬೆಳೆಯಲು ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳಲು ಕರ್ನಾಟಕ ಸರ್ಕಾರವು ಅವಕಾಶವನ್ನು ಕಲ್ಪಿಸಲಾಗಿದೆ.

ಇದನ್ನೂ ಓದಿ: Karnataka Labour Scheme-ಕಾರ್ಮಿಕ ಮಂಡಳಿಯಿಂದ ಪರಿಹಾರ ಧನ 8 ಲಕ್ಷಕ್ಕೆ ಏರಿಕೆ!

ಈ ಯೋಜನೆಯಡಿ, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಕೊಳವೆಬಾವಿ, ಪಂಪ್‌ಸೆಟ್ ಅಳವಡಿಸಲು ಸಾಲ ಮತ್ತು ಸಹಾಯಧನವನ್ನು ನೀಡಲಾಗುತ್ತಿದ್ದು, ಪ್ರಸ್ತುತ ಈ ಲೇಖನದಲ್ಲಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಅಗತ್ಯ ದಾಖಲೆಗಳೇನು? ಈ ಯೋಜನೆಯ ಉದ್ದೇಶವೇನು? ಅರ್ಜಿಯನ್ನು ಸಲ್ಲಿಸಲು ವಿಧಾನ? ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Scheme Subsidy-ಗಂಗಾ ಕಲ್ಯಾಣ ಯೋಜನೆಯಡಿ ಎಷ್ಟು ಸಹಾಯಧನ ನೀಡಲಾಗುತ್ತದೆ?

ಈ ಯೋಜನೆಯ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಕೊಳವೆ ಬಾವಿಯನ್ನು ಕೊರೆಸಲು ಅತೀ ಬಡ್ಡಿದರ ಶೇ.4 ರಂತೆ ಗರಿಷ್ಠ 2.00 ಲಕ್ಷ ಸಾಲ ಹಾಗೂ ವಿದ್ಯುದ್ದೀಕರಣಕ್ಕೆ ರೂ.75,000/-ಗಳ ಸಹಾಯಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Karnataka Weather-ಜು.27 ರವರೆಗೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ! ಇಲ್ಲಿದೆ ರಾಜ್ಯ ಮಳೆ ಮುನ್ಸೂಚನೆ!

Last Date-ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31-07-2025

Who Can Apply For This Scheme-ಅರ್ಜಿಯನ್ನು ಸಲ್ಲಿಸಲು ಯಾರೆಲ್ಲ ಅರ್ಹರು:

ಅರ್ಜಿದಾರ ರೈತರು ಕರ್ನಾಟಕ ರಾಜ್ಯದ ಖಾಯಂ ಪ್ರಜೆಯಾಗಿರಬೇಕು.

ಅರ್ಜಿದಾರರು ಕನಿಷ್ಠ 2 ಎಕರೆ ಮತ್ತು ಗರಿಷ್ಠ 15 ಎಕರೆ ಜಮೀನು ಹೊಂದಿರಬೇಕು.

ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದಲ್ಲಿರುವವರಿಗೆ ₹98,000 ಮೀರಿರಬಾರದು.

ಹಾಗೂ ನಗರ ಪ್ರದೇಶದವರಿಗೆ ₹1.20 ಲಕ್ಷ ಮೀರಿರಬಾರದು.

ಅರ್ಜಿದಾರರ ವಯಸ್ಸು 21 ರಿಂದ 45 ವರ್ಷ ಮೀರಿರಬಾರದು.

ಎಲ್ಲಾ ವರ್ಗದ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿದಾರರಿಗೆ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡುವ ಆಸಕ್ತಿಯನ್ನು ಹೊಂದಿರಬೇಕು.

ಅರ್ಜಿದಾರರು ಅಥವಾ ಕುಟುಂಬದ ಸದಸ್ಯರು ಯಾವುದೆ ಸರ್ಕಾರಿ ಕೆಲಸದಲ್ಲಿ ಕೆಲಸ ಮಾಡುತ್ತಿದ್ದರೆ ಅರ್ಜಿಯನ್ನು ಸಲ್ಲಿಸಲು ಅರ್ಹರಿರುವುದಿಲ್ಲ.

ಇದನ್ನೂ ಓದಿ: Bharti Airtel Scholarship-ಏರ್‌ಟೆಲ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನೂ 11 ದಿನ ಬಾಕಿ!

How To Apply For This Scheme-ಅರ್ಜಿಯನ್ನು ಎಲ್ಲಿ ಸಲ್ಲಿಸುವುದು?

ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅರ್ಜಿಗೆ ಸಂಬಂದಿಸಿದ ಅಗತ್ಯ ದಾಖಲಾತಿಗಳನ್ನು ಸಮೇತ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳಿಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Documents-ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲೆಗಳು?

  • ಆಧಾರ್ ಕಾರ್ಡ್/Aadhar card
  • ಬ್ಯಾಂಕ್ ಪಾಸ್‌ಬುಕ್/Bank Passbook
  • ರೈತರ FRUITS ID ನಂಬರ್/ID number
  • ರೇಷನ್ ಕಾರ್ಡ್/Ration card
  • ಜಾತಿ ಪ್ರಮಾಣ ಪತ್ರ/Cast Certificate
  • ಆದಾಯ ಪ್ರಮಾಣ ಪತ್ರ/Income Certificate
  • ಜಮೀನಿನ ದಾಖಲೆಗಳು/RTC
  • ಫೋಟೊ/Photo copy
  • ಮೊಬೈಲ್ ನಂಬರ್/Mobile number

ಇದನ್ನೂ ಓದಿ: Aadhar Update-7 ವರ್ಷ ಮೀರಿದ ಮಕ್ಕಳಿಗೆ ಆಧಾರ್ ಕಾರ್ಡ ಬಯೋಮೆಟ್ರಿಕ್ ಕಡ್ಡಾಯ!

How To Apply For This Scheme-ಅರ್ಜಿಯನ್ನು ಸಲ್ಲಿಸುವ ವಿಧಾನ:

ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಡಿಯಲ್ಲಿ ಜಲಶಕ್ತಿ ಯೋಜನೆಗೆ ಅರ್ಹ ಫಲಾನುಭವಿಗಳು ಅರ್ಜಿಯನ್ನು ಸಲ್ಲಿಸಲು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Free Hostel Application-ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ!

ganga kalyana ilake

ಇದನ್ನೂ ಓದಿ: PM Dhan Dhanya Yojana-ಕೇಂದ್ರದಿಂದ ಪಿಎಂ ಧನ್ ಧಾನ್ಯ ಕೃಷಿ ನೂತನ ಯೋಜನೆ ಜಾರಿ!

Step-1: ಮೊದಲು ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ ವಾಸವಿ ಜಲಶಕ್ತಿ ಯೋಜನೆ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “Apply Online” ಬಟನ್ ಮೇಲೆ ಕ್ಲಿಕ್ ಮಾಡಿ “ವಾಸವಿ ಜಲಶಕ್ತಿ ಯೋಜನೆ” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ತದನಂತರ ಈ ಪೇಜ್ ನಲ್ಲಿ ಕೆಳಗೆ “Click To Proceed” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಗೆ ಪ್ರವೇಶ ಪಡೆಯಬೇಕು. ಈ ಪೇಜ್ ನಲ್ಲಿ ಅರ್ಜಿದಾರರು ತಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಮೊಬೈಲ್ ನಂಬರ್ ಗೆ ಬರುವ OTP ಆನ್ನು ನಮೂದಿಸಿ ಲಾಗಿನ್ ಅಗಬೇಕು.

ಇದನ್ನೂ ಓದಿ: Banking Job-ಸರ್ಕಾರಿ ಬ್ಯಾಂಕ್‌ಗಳಲ್ಲಿ 6,215 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

Step-4: ಲಾಗಿನ್ ಅದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳಿರುವ ಅಗತ್ಯ ವಿವರಗಳು ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

RELATED ARTICLES
- Advertisment -

Most Popular

Recent Comments