Sunday, August 24, 2025
No menu items!
HomeAgricultureFree Sheep And Poultry Training-ರುಡ್ ಸೆಟ್ ವತಿಯಿಂದ ಉಚಿತ ಕುರಿ ಮತ್ತು ಕೋಳಿ ಸಾಕಾಣಿಕೆ...

Free Sheep And Poultry Training-ರುಡ್ ಸೆಟ್ ವತಿಯಿಂದ ಉಚಿತ ಕುರಿ ಮತ್ತು ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ!

ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ಥಿರತೆಯನ್ನು ಮುಂದುವರಿಸಲು ರುಡ್ ಸೆಟ್ ಸಂಸ್ಥೆಯು(rudseti) ಕೃಷಿಕರಿಗೆ ಒಂದು ಅಮೂಲ್ಯ ಅವಕಾಶವನ್ನು ಒದಗಿಸಿದೆ, ರುಡ್ ಸೆಟ್ ಸಂಸ್ಥೆಯ ವತಿಯಿಂದ ಉಚಿತ ಕುರಿ, ಕೋಳಿ, ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ,

ರುಡ್ ಸೆಟ್ ಸಂಸ್ಥೆಯು ಗ್ರಾಮೀಣ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಮತ್ತು ಕೌಶಲ್ಯ ಅಭಿವೃದ್ಧಿ ಪಡೆಯಲು ಸ್ಥಾಪಿತವಾದ ಒಂದು ಅನನ್ಯ ಸಂಸ್ಥೆಯಾಗಿದೆ. ಈ ತರಬೇತಿಯು ಕೃಷಿಕರಿಗೆ(Free Sheep And Poultry Training) ವೈಜ್ಞಾನಿಕ ಕೃಷಿ ಪದ್ಧತಿಗಳು, ಮಾರುಕಟ್ಟೆ ತಂತ್ರಗಳು ಮತ್ತು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ನೀಡಲಿದ್ದು, ಅರ್ಹ ಫಲಾನುಭವಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆಯಲು ಕೋರಿದೆ.

ಇದನ್ನೂ ಓದಿ: Borewell Subsidy-ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಸಲು ₹4.25 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ!

ಈ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಹರು? ತರಬೇತಿಯು ಯಾವಾಗ(Free Sheep And Poultry Training Application) ಪ್ರಾರಂಭವಾಗುತ್ತದೆ? ಈ ತರಬೇತಿಯ ಲಾಭಗಳೇನು? ತರಬೇತಿ ಪಡೆಯಲು ಎಲ್ಲಿ ಭೇಟಿ ಮಾಡಬೇಕು? ಇನ್ನೂ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Free Sheep And Poultry Training Details-ತರಬೇತಿಯ ವಿವರಗಳು

ರೂಡ್ಸೆಟ್ ಸಂಸ್ಥೆಯು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಹಾಗೂ ಹೈನುಗಾರಿಕೆಗೆ ಸಂಬಂಧಿಸಿದ ಕಿರು-ಅವಧಿಯ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಈ ತರಬೇತಿಗಳು 10 ರಿಂದ 45 ದಿನಗಳ ಅವಧಿಯವರೆಗೆ ನಡೆಯುತ್ತವೆ ಮತ್ತು ಸಂಪೂರ್ಣ ಉಚಿತವಾಗಿರುತ್ತವೆ. ಇದರ ಜೊತೆಗೆ, ತರಬೇತಿಯ ಸಮಯದಲ್ಲಿ ಆಹಾರ ಮತ್ತು ವಸತಿಯ ಸೌಲಭ್ಯವನ್ನು ಕೂಡ ಉಚಿತವಾಗಿ ನೀಡಲಾಗುತ್ತದೆ.

ಇದನ್ನೂ ಓದಿ: LIC Recruitment 2025-LIC ಯಲ್ಲಿ ಸರ್ಕಾರಿ ಉದ್ಯೋಗಕ್ಕೆ ಅವಕಾಶ! ಬರೋಬ್ಬರಿ 841 ಹುದ್ದೆಗಳಿಗೆ ಅರ್ಜಿ ಆಹ್ವಾನ!

Sheep Farming-ಕುರಿ ಸಾಕಾಣಿಕೆ ತರಬೇತಿ

ಕುರಿ ಸಾಕಾಣಿಕೆ ತರಬೇತಿಯು 10 ದಿನಗಳ ಅವಧಿಯಲ್ಲಿ ನಡೆಯುತ್ತದೆ. ಈ ಕಾರ್ಯಕ್ರಮವು ಭಾಗವಹಿಸುವವರಿಗೆ ಕುರಿಗಳ ಆರೈಕೆ, ಆರೋಗ್ಯ ನಿರ್ವಹಣೆ, ಉತ್ತಮ ತಳಿಗಳ ಆಯ್ಕೆ, ಮೇವಿನ ಕೃಷಿ ಮತ್ತು ಮಾರುಕಟ್ಟೆ ತಂತ್ರಗಳ ಬಗ್ಗೆ ಸಮಗ್ರ ತರಬೇತಿಯನ್ನು ಒದಗಿಸುತ್ತದೆ. ಈ ತರಬೇತಿಯು ಕುರಿ ಸಾಕಾಣಿಕೆಯನ್ನು ಲಾಭದಾಯಕ ಉದ್ಯಮವಾಗಿ ರೂಪಿಸಲು ಆಸಕ್ತ ಕೃಷಿಕರಿಗೆ ಸಹಕಾರಿಯಾಗಿದೆ.

Poultry Farming-ಕೋಳಿ ಸಾಕಾಣಿಕೆ ತರಬೇತಿ

ಕೋಳಿ ಸಾಕಾಣಿಕೆ ತರಬೇತಿಯು ಕೋಳಿಗಳ ಆರೈಕೆ, ರೋಗ ನಿರ್ವಹಣೆ, ಆಹಾರ ವ್ಯವಸ್ಥಾಪನೆ ಮತ್ತು ಕೋಳಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಜ್ಞಾನವನ್ನು ಒಳಗೊಂಡಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಉತ್ಪಾದಕತೆಯನ್ನು ಗರಿಷ್ಠಗೊಳಿಸಲು ಈ ತರಬೇತಿಯು ಯುವ ಕೃಷಿಕರಿಗೆ ಮತ್ತು ಉದ್ಯಮಿಗಳಿಗೆ ಸಹಾಯಕವಾಗಿದೆ.

ಇದನ್ನೂ ಓದಿ: Mobile kitchen Subsidy-ಮೊಬೈಲ್ ಕಿಚನ್ ಪ್ರಾರಂಭಿಸಲು ₹4.0 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Dairy Farming-ಡೈರಿ ಫಾರ್ಮಿಂಗ್ ತರಬೇತಿ

ಹೈನುಗಾರಿಕೆ ತರಬೇತಿಯು 6 ರಿಂದ 10 ದಿನಗಳ ಕಾಲ ನಡೆಯುತ್ತದೆ. ಈ ಕಾರ್ಯಕ್ರಮವು ಆಧುನಿಕ ಹೈನುಗಾರಿಕೆ ತಂತ್ರಗಳಾದ ಹೈಬ್ರಿಡ್ ಹಸುಗಳ ಆಯ್ಕೆ, ಕಾಲುವೆ ಆರೈಕೆ, ಕೃತಕ ಗರ್ಭಧಾರಣೆ, ರೋಗ ನಿಯಂತ್ರಣ, ಮೇವಿನ ಕೃಷಿ ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆಯ ಬಗ್ಗೆ ತರಬೇತಿಯನ್ನು ನೀಡುತ್ತದೆ. ಸ್ವಯಂ ಉದ್ಯೋಗವನ್ನು ಆರಂಭಿಸಲು ಇಚ್ಛಿಸುವವರಿಗೆ ಈ ತರಬೇತಿಯು ಒಂದು ಉತ್ತಮ ಅವಕಾಶವನ್ನು ಒದಗಿಸುತ್ತದೆ.

Traning Date-ಈ ತರಬೇತಿಯ ಪ್ರಾರಂಭದ ದಿನಾಂಕ?

ರುಡ್ ಸೆಟ್ ಸಂಸ್ಥೆಯಿಂದ ಆಯೋಜಿಸಲಾಗಿರುವ ಈ ತರಬೇತಿಯು ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದ್ದು, ಆಸಕ್ತಿ ಇರುವ ಅಭ್ಯರ್ಥಿಗಳು ಆಗಸ್ಟ್ 30 ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Muskaan Scholarship-ಮುಸ್ಕಾನ್ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Who Can Apply-ತರಬೇತಿಯಲ್ಲಿ ಯಾರೆಲ್ಲ ಭಾಗವಹಿಸಬಹುದು?

ತರಬೇತಿಯಲ್ಲಿ ಭಾಗವಹಿಸುವ ಯುವಕ-ಯುವತಿಗೆ ಕನಿಷ್ಟ 18 ವರ್ಷ ಹಾಗೂ 45 ವರ್ಷ ಮೀರಿರಬಾರದು.

ಅಭ್ಯರ್ಥಿಗೆ ಕನ್ನಡ ಓದಲು ಹಾಗೂ ಬರೆಯಲು ಕಡ್ಡಾಯವಾಗಿರಬೇಕು.

How To Apply-ಅರ್ಜಿ ಸಲ್ಲಿಸುವುದು ಹೇಗೆ?

ರುಡ್ ಸೆಟ್ ಸಂಸ್ಥೆ ಅರಿಶಿನಕುಂಟೆ,ನೆಲಮಂಗಲ ತಾಲ್ಲೂಕು,ಬೆಂಗಳೂರು ಗ್ರಾಮಾಂತರ ಜಿಲ್ಲೆ ಕೇಂದ್ರದಲ್ಲಿ ಈ ತರಬೇತಿ ನಡೆಯಲಿದ್ದು ಈ 9740982585/ 9241482541/9113880324 ಮೊಬೈಲ್ ನಂಬರ್ ಗೆ ಕರೆ ಮಾಡಿ ಆಸಕ್ತ ಅರ್ಜಿದಾರರು ಅಗತ್ಯ ವಿವರವನ್ನು ನೀಡಿ ತಮ್ಮ ಹೆಸರನ್ನು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: Free Health Checkup-ಬಿಪಿಎಲ್ ಕಾರ್ಡದಾರರಿಗೆ ಗುಡ್ ನ್ಯೂಸ್!ರಾಜ್ಯ ಸರ್ಕಾರದಿಂದ ಉಚಿತ ಯೋಜನೆ ಪ್ರಕಟ!

Documents for Application-ತರಬೇತಿಯಲ್ಲಿ ಭಾಗವಹಿಸಲು ಯಾವೆಲ್ಲ ದಾಖಲಾತಿಗಳಿರಬೇಕು?

  • ಅಭ್ಯರ್ಥಿಯ ಆಧಾರ್ ಕಾರ್ಡ್.
  • ಜಾತಿ ಪ್ರಮಾಣ ಪತ್ರ .
  • ಆದಾಯ ಪ್ರಮಾಣ ಪತ್ರ.
  • ರೇಶನ್ ಕಾರ್ಡ.
  • ಮೊಬೈಲ್ ನಂಬರ್.
RELATED ARTICLES
- Advertisment -

Most Popular

Recent Comments