ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸುವರ್ಣ ಆರೋಗ್ಯ ಸುರಕ್ಷಾ(Suvarna Arogya Suraksha Trust scheme) ಟ್ರಸ್ಟ್ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡದಾರರಿಗೆ ಉಚಿತ ಕಸಿ ಶಸ್ತ್ರಚಿಕಿತ್ಸೆ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.
ಕರ್ನಾಟಕ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ನಡಿ ಮೂತ್ರಪಿಂಡ, ಹೃದಯ, (Karnataka government free surgery)ಯಕೃತ್ ಮತ್ತು ಬಹು ಅಂಗಾಂಶ ವೈಫಲ್ಯದ ಚಿಕಿತ್ಸೆಗೆ ಉಚಿತ ತಜ್ಞ ಚಿಕಿತ್ಸೆಯನ್ನು ಒದಗಿಸುತ್ತಿದೆ. ₹2 ಲಕ್ಷದಿಂದ ₹22 ಲಕ್ಷದವರೆಗೆ ಖರ್ಚಾಗುವ ಈ ಚಿಕಿತ್ಸೆಯನ್ನು ಈಗ ಬಡತನ ರೇಖೆಯ (Below Poverty Line card) ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಲಭ್ಯವಾಗಲಿದೆ. ಈ ಮಾಹಿತಿಯು ಉಪಯುಕ್ತ ಎನಿಸಿದ್ದಲ್ಲಿ ನಿಮ್ಮ ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ.
ಇದನ್ನೂ ಓದಿ: Ambedkar Nigam subsidy-ಅಂಬೇಡ್ಕರ್ ನಿಗಮದಿಂದ ತರಕಾರಿ ಮಾರಾಟ ಮಳಿಗೆ ತೆರೆಯಲು ₹50,000 ಸಬ್ಸಿಡಿ!
ಪ್ರಸ್ತುತ ಈ ಲೇಖನದಲ್ಲಿ ಈ ಯೋಜನೆಯ ಅಡಿಯಲ್ಲಿ ಸೌಲಭ್ಯವನ್ನು ಪಡೆದುಕೊಳ್ಳಲು ಯಾವೆಲ್ಲಾ ಅರ್ಹತಾ ಮಾನದಂಡಗಳನ್ನು ಅನುಸರಿಸಬೇಕು? ಉಚಿತ ಶಸ್ತ್ರಚಿಕಿತ್ಸೆಯ ವಿವರಗಳು? ಯಾವ ಯಾವ ಅಂಗಾಂಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ? ಇತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Treatment package Amount-ಅಂಗಾಂಗಗಳ ಚಿಕಿತ್ಸಾ ಪ್ಯಾಕೇಜ್ ದರ ನಿಗದಿ ಈ ಕೆಳಗಿನಂತಿದೆ:
ಮೂತ್ರಪಿಂಡ ಚಿಕಿತ್ಸೆಗೆ: ₹2 ಲಕ್ಷ
ಯಕೃತ್ ಕಸಿಗೆ: ₹11 ಲಕ್ಷ
ಶ್ವಾಸಕೋಶ ಕಸಿಗೆ: ₹15 ಲಕ್ಷ
ಹೃದಯ ಮತ್ತು ಶ್ವಾಸಕೋಶ ಕಸಿಗೆ: ₹22 ಲಕ್ಷ
ಇದನ್ನೂ ಓದಿ: Sheep farming Subsidy-ಕುರಿ ಸಾಕಾಣಿಕೆಗೆ ಶೇ 50% ಸಬ್ಸಿಡಿ ಪಡೆಯಲು ಅವಕಾಶ!
How to get this treatment-ಈ ಚಿಕಿತ್ಸೆಯನ್ನು ಪಡೆಯುವುದು ಹೇಗೆ?
ಅರ್ಹ ಫಲಾನುಭವಿಗಳು ಈ ಯೋಜನೆಯ ಅಡಿಯಲ್ಲಿ ಈ ಚಿಕಿತ್ಸೆಯನ್ನು ಪಡೆದುಕೊಳ್ಳಲು ನಿಮ್ಮ ಹತ್ತಿರದ ಸರ್ಕಾರಿ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಗೆ ಭೇಟಿ ಮಾಡಿ ಉಪಯೋಗವನ್ನು ಪಡೆದುಕೊಳ್ಳಬಹುದು. ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಆನ್ಲೈನ್ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಿ ಚಿಕಿತ್ಸೆ ಪಡೆಯಲು ಅವಕಾಶವಿರುತ್ತದೆ.
ಇದನ್ನೂ ಓದಿ: Corteva Agriscience Scholarship-ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್ ನಡಿ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ!
What are the eligibility criteria to free treatment-ಉಚಿತ ಚಿಕಿತ್ಸೆಯನ್ನು ಪಡೆಯಲು ಅರ್ಹತಾ ಮಾನದಂಡಗಳೇನು?
ಪ್ರಸ್ತುತ ರಾಜ್ಯ ಸರ್ಕಾರದಿಂದ ಜಾರಿಗೆ ತಂದಿರುವ ನೂತನ ಯೋಜನೆಯಡಿ ಸಾರ್ವಜನಿಕರು ಪ್ರಯೋಜನವನ್ನು ಪಡೆಯಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಿಗದಿ ಪಡಿಸಿರುವ ಅರ್ಹತಾ ಮಾನದಂಡಗಳ ವಿವರ ಈ ಕೆಳಗಿನಂತಿವೆ:
ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅಭ್ಯರ್ಥಿಯು ಕಡ್ಡಾಯವಾಗಿ BPL ಕಾರ್ಡ್ ಅನ್ನು ಹೊಂದಿರಬೇಕು.
ಮೂತ್ರಪಿಂಡ, ಹೃದಯ, ಯಕೃತ್ ಅಥವಾ ಬಹು ಅಂಗಾಂಶ ವೈಫಲ್ಯದಿಂದ ಬಳಲುತ್ತಿರುವವರು ಅರ್ಹರು.
ಇದನ್ನೂ ಓದಿ: Car Subsidy Application-ವಾಹನ/ಟ್ಯಾಕ್ಸಿ ಖರೀದಿಗೆ ರೂ 4.00 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
ಇದನ್ನೂ ಓದಿ: Scholorship Application-SSLC-PUC ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಈಗಲೇ ಅರ್ಜಿ ಹಾಕಿ!
Documents required-ಅವಶ್ಯಕ ದಾಖಲಾತಿಗಳಾವುವು?
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಡಿ ಉಚಿತ ಅಂಗಾಂಶ ಚಿಕಿತ್ಸೆಯ (ಮೂತ್ರಪಿಂಡ, ಹೃದಯ, ಯಕೃತ್ ಮತ್ತು ಬಹು ಅಂಗಾಂಶ ವೈಫಲ್ಯ)ಚಿಕಿತ್ಸೆ ಪಡೆಯಲು ಅಗತ್ಯವಿರುವ ದಾಖಲೆಗಳ ಪಟ್ಟಿ ಕೆಳಗೆ ತಿಳಿಸಲಾಗಿದೆ:
ರೇಶನ್ ಕಾರ್ಡ/BPL Card
ಆಧಾರ ಕಾರ್ಡ್/Aadhar Card
ವೈದ್ಯಕೀಯ ಪ್ರಮಾಣಪತ್ರ (ಅಂಗಾಂಶ ವೈಫಲ್ಯದ ಸಾಕ್ಷ್ಯ)/Medical certificate
ಆಸ್ಪತ್ರೆಯಿಂದ ಚಿಕಿತ್ಸೆಯ ಪತ್ರ/Hospital treatment letter
ಫೋಟೊ/Photo
ನಿವಾಸಿ ದೃಡೀಕರಣ ಪತ್ರ/Resident confirmation letter
ಇದನ್ನೂ ಓದಿ: BSF constable requirement 2025-SSLC ಅಥವಾ ITI ಪಾಸಾದವರು ಕೂಡ ಅರ್ಜಿ ಹಾಕಬಹುದು!
More Information-ಹೆಚ್ಚಿನ ಮಾಹಿತಿ ಪಡೆಯಲು ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಭೇಟಿ ಮಾಡಿ ಅಥವಾ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here
Helpline Number-ಸಹಾಯವಾಣಿ: 1902