ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಗಣಿಗಾರಿಕೆ ಪ್ರದೇಶದಲ್ಲಿ ವಾಸವಾಗಿರುವ ಸಂತ್ರಸ್ತರಿಗೆ ಇಲಾಖೆಯ ಸಬ್ಸಿಡಿ ಯೋಜನೆಯಡಿ ಹಸು ಮತ್ತು ಎಮ್ಮೆ ಹಾಗೂ ಮೇವು ಕತ್ತರಿಸುವ ಯಂತ್ರವನ್ನು(Chaff Cutter Subsidy) ವಿತರಣೆ ಮಾಡಲು ಅರ್ಹ ಫಲಾನುಭವಿಯನ್ನು ಗುರುತಿಸಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಗ್ರಾಮೀಣ ಭಾಗದ ರೈತರು ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆಯನ್ನು(Dairy Farming) ಮಾಡಿಕೊಂಡು ಹೋಗುವುದರಿಂದ ಉಪ ಆದಾಯವನ್ನು ಪಡೆಯಲು ಅವಕಾಶವಿದ್ದು ಇದಕ್ಕೆ ಪೂರಕವಾಗಿ ಅವಶ್ಯವಿರುವ ಹೈನು ರಾಸು ಹಾಗೂ ವಿವಿಧ ಬಗ್ಗೆಯ ಯಂತ್ರಗಳನ್ನು ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಸಹಾಯಧನದಲ್ಲಿ ಖರೀದಿಸಲು ಅವಕಾಶವಿರುತ್ತದೆ.
ಈ ಅಂಕಣದಲ್ಲಿ ಹೈನುಗಾರಿಕೆಯಿಂದಾಗುವ ಪ್ರಯೋಜನಗಳೇನು? ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿದ ಮಾನದಂಡಗಳು, ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ದಾಖಲಾತಿ? ಇಲಾಖೆಯಿಂದ ಎಷ್ಟು ಸಬ್ಸಿಡಿಯನ್ನು(Dairy Farming Subsidy Yojana)ನೀಡಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: NLM Yojana-ಕೋಳಿ ಕುರಿ ಮೇಕೆ ಸಾಕಾಣಿಕೆಗೆ ಜಾನುವಾರು ಮಿಷನ್ ಯೋಜನೆಯಡಿ ₹25.00 ಲಕ್ಷ ಸಬ್ಸಿಡಿ!
Dairy Farm Benefits–ಹೈನುಗಾರಿಕೆಯು ಕೃಷಿಕರಿಗೆ ಉಪ ಆದಾಯದ ಮೂಲ:
ಹೈನುಗಾರಿಕೆ: ರೈತರಿಗೆ ಸ್ಥಿರ ಆದಾಯದ ಮೂಲ
ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವು ರೈತರಿಗೆ ನಿರಂತರವಾಗಿ ಆದಾಯವನ್ನು ನೀಡುವ ಮಹತ್ವಪೂರ್ಣ ಮೂಲವಾಗಿದೆ. ಇದು ವರ್ಷದ ಎಲ್ಲಾ ಕಾಲಗಳಲ್ಲಿ ಸ್ಥಿರ ಆದಾಯವನ್ನು ಒದಗಿಸುತ್ತದೆ. ಕೃಷಿಯಿಂದ ಉಂಟಾಗುವ ನಷ್ಟ-ಲಾಭದ ಅಸ್ಥಿರತೆಯನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತಾ, ಕೃಷಿಕನ ಆರ್ಥಿಕ ಸ್ಥಿತಿಗತಿಗೆ ಭದ್ರತೆಯನ್ನು ನೀಡುತ್ತದೆ.
ಕೃಷಿ-ಪೂರಕವಾದ ಹೈನುಗಾರಿಕೆ:
ಹೈನುಗಾರಿಕೆಯೊಂದಿಗಿನ ಮತ್ತೊಂದು ಲಾಭವೆಂದರೆ, ಹಸುಗಳಿಂದ ಪಡೆಯುವ ಜೈವ ಗೊಬ್ಬರವನ್ನು ಬೆಳೆಗಳಿಗೆ ಬಳಸಬಹುದಾಗಿದೆ. ಇದು ರಾಸಾಯನಿಕ ಗೊಬ್ಬರದ ಅವಲಂಬನೆಯನ್ನು ಕಡಿಮೆ ಮಾಡಿ, ಕೃಷಿ ವೆಚ್ಚವನ್ನು ತಗ್ಗಿಸಲು ಸಹಕಾರಿ ಆಗುತ್ತದೆ.
ಇದನ್ನೂ ಓದಿ: Bele Vime-ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!
ಬಹುಮೂಲ್ಯ ಉತ್ಪನ್ನಗಳು ಮತ್ತು ಮೌಲ್ಯವರ್ಧನೆ:
ಹಾಲನ್ನು ಮಾತ್ರವಲ್ಲದೆ, ಅದರಿಂದ ಮೊಸರು, ತುಪ್ಪ, ಪನ್ನೀರು, ಚೀಸ್ ಮುಂತಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಬಹುದು. ಇದರಿಂದ ಗ್ರಾಮೀಣ ವ್ಯಾಪಾರದ ವಿಸ್ತರಣೆಗೂ ಅವಕಾಶ ಸಿಗುತ್ತದೆ.
ಸ್ಥಳೀಯ ಉದ್ಯೋಗ ಮತ್ತು ಮಹಿಳಾ ಸಬಲೀಕರಣ:
ಹೈನುಗಾರಿಕೆ ಕುಟುಂಬದ ಎಲ್ಲಾ ಸದಸ್ಯರಿಗೆ, ವಿಶೇಷವಾಗಿ ಮಹಿಳೆಯರಿಗೆ, ಮನೆಮಟ್ಟದ ಉದ್ಯೋಗ ಅವಕಾಶಗಳನ್ನು ಒದಗಿಸುತ್ತದೆ. ಇದು ಗ್ರಾಮೀಣ ಮಹಿಳೆಯರಿಗೆ ಆರ್ಥಿಕ ಸಬಲೀಕರಣವನ್ನು ನೀಡುವ ಮೂಲಕ ಅವರ ಬದುಕಿನಲ್ಲಿ ಪ್ರಗತಿಗೆ ದಾರಿ ಒದಗಿಸುತ್ತದೆ.
ಮಾರುಕಟ್ಟೆ ಇಳಿವು ಇಲ್ಲದ ಬೇಡಿಕೆ:
ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಸದಾ ಬೇಡಿಕೆ ಇರುತ್ತದೆ. ಈ ನಿರಂತರ ಬೇಡಿಕೆ ರೈತರಿಗೆ ಭರವಸೆಯ ಮಾರುಕಟ್ಟೆಯನ್ನು ಒದಗಿಸುತ್ತದೆ ಮತ್ತು ಉತ್ಪನ್ನ ವಿತರಣೆಯಲ್ಲಿ ನಂಬಿಕೆಯನ್ನು ಹುಟ್ಟಿಸುತ್ತದೆ.
ಇದನ್ನೂ ಓದಿ: Uchita Holige Yantra-ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಇನ್ನು 2 ದಿನ ಬಾಕಿ!
Who Can Apply- ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು:
ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅರ್ಜಿದಾರರು ಅಭ್ಯರ್ಥ್ಯಿಯು ಕೃಷಿಯ ಕುಟುಂಬದವರಾಗಿರಬೇಕು.
ಅರ್ಜಿದಾರರು ಕಳೆದ ವರ್ಷಈ ಯೋಜನೆಯ ಪ್ರಯೋಜನವನ್ನು ಪಡೆದಿರಬಾರದು.
ಗಣಿಗಾರಿಕೆ ಪ್ರದೇಶದಲ್ಲಿ ವಾಸವಾಗಿರುವ ಹಾನಿಗೊಳಗಾದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಇದನ್ನೂ ಓದಿ: Karmika Card-ಕಾರ್ಮಿಕ ಮಂಡಳಿಯಿಂದ ಪ್ರತಿ ತಿಂಗಳಿಗೆ ರೂ ₹2000/- ಪಿಂಚಣಿ!

ಇದನ್ನೂ ಓದಿ: Mysore Dasara-2025: ಸರ್ಕಾರದಿಂದ ಈ ಬಾರಿಯ ಮೈಸೂರು ದಸರಾ ಆಚರಣೆಗೆ ಕುರಿತು ಮಹತ್ವದ ಮಾಹಿತಿ ಪ್ರಕಟ!
ಯಾವ ಯಾವ ಜಿಲ್ಲೆಗಳಲ್ಲಿ ಅರ್ಜಿಯನ್ನು ಕರೆಯಲಾಗಿದೆ:
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ವಿಜಯನಗರ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಅರ್ಜಿಯನ್ನು ಕರೆಯಲಾಗಿದ್ದು, ಹೈನುರಾಸು ಹಾಗೂ ಮೇವು ಕತ್ತಿರಿಸುವ ಯಂತ್ರಗಳನ್ನು ಅರ್ಹ ಫಲಾನುಭವಿಗಳಿಗೆ ಒದಗಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
Subsidy Amount-ಈ ಯೋಜನೆಯ ಅಡಿಯಲ್ಲಿ ಎಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ:
ಒಟ್ಟೂ ಘಟಕದ ವೆಚ್ಚ- ರೂ 1,20,000/-
ಹೈನುರಾಸು ಘಟಕ- ಹಸು ಮತ್ತು ಎಮ್ಮೆ
ಸಾಮಾನ್ಯ ವರ್ಗದ ರೈತರಿಗೆ- ರೂ 72,000/- (ಶೇ 60% ಸಹಾಯಧನ)
SC/ST ವರ್ಗದ ರೈತರಿಗೆ – ರೂ 1,08,000/- (ಶೇ 90% ಸಹಾಯಧನ)
ಇದನ್ನೂ ಓದಿ: BMTC Package Tour-ಬಿಎಂಟಿಸಿಯಿಂದ ಅತೀ ಕಡಿಮೆ ಬೆಲೆಯಲ್ಲಿ ಟೂರ್ ಪ್ಯಾಕೇಜ್!
How To Apply-ಮೇವು ಕತ್ತರಿಸುವ ಯಂತ್ರಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಅಭ್ಯರ್ಥಿಗಳು ನಿಮ್ಮ ತಾಲೂಕಿನ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಕಚೇರಿಗೆ ಅರ್ಜಿಗೆ ಸಂಬದಿಸಿದ ಅಗತ್ಯ ದಾಖಲೆಗಳ ಸಮೇತ ನೇರವಾಗಿ ಭೇಟಿ ಮಾಡಿ ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
Documents-ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲಾತಿಗಳು:
ಅರ್ಜಿದಾರರ ಆಧಾರ್ ಕಾರ್ಡ/Aadhar card
ರೇಶನ್ ಕಾರ್ಡ/Ration card
ಜಾತಿ ಪ್ರಮಾಣ ಪತ್ರ/Cast Certificate
ಆದಾಯ ಪ್ರಮಾಣ ಪತ್ರ/Income Certificate
ಬ್ಯಾಂಕ್ ಪಾಸ್ ಬುಕ್/Bank Passbook
ಪೋಟೋ/Photocopy
ಮೊಬೈಲ್ ನಂಬರ್/Mobile number
ಇದನ್ನೂ ಓದಿ: Free Computer Training-ಕೆನರಾ ಬ್ಯಾಂಕ್‍ನಿಂದ ಉಚಿತ ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ!
For More Information-ಈ ಯೋಜನೆಯ ಬಗ್ಗೆ ಹೆಚ್ಚಿನ ಉಪಯುಕ್ತ ಮಾಹಿತಿಯನ್ನು ಪಡೆಯಲು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ:
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಅಧಿಕೃತ ವೆಬ್ಸೈಟ್- Click Here