Friday, August 1, 2025
No menu items!
HomeNewsFamily tree certificate-ವಂಶವೃಕ್ಷ ಪ್ರಮಾಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ!

Family tree certificate-ವಂಶವೃಕ್ಷ ಪ್ರಮಾಣ ಪತ್ರ ಪಡೆಯುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ!

ವಂಶವೃಕ್ಷ ಪ್ರಮಾಣ ಪತ್ರ(Family Tree Certificate)ಇದು ಕುಟುಂಬದ ಸದ್ಯಸರ ಸಂಬಂಧವನ್ನು ದೃಢೀಕರಿಸುವ ಅಗತ್ಯ ಮಹತ್ವದ ಒಂದು ದಾಖಲೆಯಾಗಿದ್ದು, ಈ ವ್ವಂಶವೃಕ್ಷ ಪ್ರಮಾಣ ಪತ್ರವನ್ನು ಆನ್ಲೈನ್ ಮೂಲಕ ಪಡೆಯುವುದು ಹೇಗೆ ಎನ್ನುವುದನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ಮಾಹಿತಿಯು ಉಪಯುಕ್ತ ಎನಿಸಿದ್ದಲ್ಲಿ ನಿಮ್ಮ ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಿ.

ಪ್ರಮುಖವಾಗಿ ಈ ಪ್ರಮಾಣ ಪತ್ರವು ಆಸ್ತಿ ವಿಂಗಡಣೆ, ಬ್ಯಾಂಕ್ ಖಾತೆ ವರ್ಗಾವಣೆ,(vamsharuksh aapplication)ಕಾನೂನು ವಿಷಯಗಳು, ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವಾಗ, ಅಥವಾ ಕುಟುಂಬದ ಇತಿಹಾಸವನ್ನು ದಾಖಲಿಸಲು ಉಪಯೋಗಿಸಲಾಗುತ್ತದೆ. ನೀವು ಕುಟುಂಬದ ವಾರಸುದಾರರ ಪಟ್ಟಿ ಸಿದ್ಧಪಡಿಸಲು ಯೋಚಿಸುತ್ತಿದ್ದೀರಾ? ಹಾಗಾದರೆ ತಪ್ಪದೇ ಈ ಲೇಖನವನ್ನು ಓದಿ.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 8 ದಿನ ಬಾಕಿ!

ಹಾಗೇಯೆ ಕುಟುಂಬದ ಪ್ರಮುಖ ವ್ಯಕ್ತಿಯು ಮರಣವಾದ ನಂತರ ಅವರ(property) ಆಸ್ತಿಯ ಹಕ್ಕನ್ನು ನಿರ್ಧರಿಸುವ ವೇಳೆ ಈ ಪ್ರಮಾಣ ಪತ್ರ ಮುಖ್ಯ ಪಾತ್ರ ವಹಿಸುತ್ತದೆ. ಈ ದಾಖಲಾತಿಯು ಇಲ್ಲದಿದ್ದರೆ, ಆಸ್ತಿಯ ಹಕ್ಕು ನಿರ್ಧಾರದಲ್ಲಿ ಗೊಂದಲ ಉಂಟಾಗಬಹುದು. ಹಾಗಾಗಿ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವಿಧಾನದಲ್ಲಿ ವಂಶವೃಕ್ಷ ಪ್ರಮಾಣ ಪತ್ರವನ್ನು ಪಡೆಯುವುದು ಅತ್ಯಂತ ಅಗತ್ಯವಾಗಿದೆ.

ಪ್ರಸ್ತುತ ಈ ಲೇಖನದಲ್ಲಿ ವಂಶವೃಕ್ಷ ಪ್ರಮಾಣ ಪತ್ರವನ್ನು ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನಗಳು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಕೆಗೆ ಸಂಬಂದಿಸಿದ ಅಗತ್ಯ ದಾಖಲಾತಿಗಳು? ಇತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Karnataka Labour Scheme-ಕಾರ್ಮಿಕ ಮಂಡಳಿಯಿಂದ ಪರಿಹಾರ ಧನ 8 ಲಕ್ಷಕ್ಕೆ ಏರಿಕೆ!

What Is Family tree certificate-ವಂಶವೃಕ್ಷ ಪ್ರಮಾಣ ಪತ್ರ ಎಂದರೇನು?

ವಂಶವೃಕ್ಷ ಪ್ರಮಾಣ ಪತ್ರ ಇದು ಕುಟುಂಬದ ಎಲ್ಲಾ ಸದಸ್ಯರ ಸಂಬಂಧವನ್ನು ತೋರಿಸುವ ಸರ್ಕಾರಿ ದಾಖಲೆಯಾಗಿದ್ದು, ಇದು ಕುಟುಂಬದ ಮುಖ್ಯಸ್ಥ, ಅವರ ಪತಿ/ಪತ್ನಿ, ಮಕ್ಕಳು, ಅಕ್ಕ/ತಂಗಿ, ಅಣ್ಣ/ತಮ್ಮ ಹಾಗೂ ಇತರ ಸಂಬಂಧಿಕರ ವಿವರಗಳನ್ನು ಒಳಗೊಂಡಿರುತ್ತದೆ. ಈ ದಾಖಲೆಯನ್ನು ಸಾಮಾನ್ಯವಾಗಿ ತಹಶೀಲ್ದಾರ್ ಕಚೇರಿ ಅಥವಾ ಗ್ರಾಮಾಡಳಿತ ಅಧಿಕಾರಿಗಳಿಂದ ಪಡೆಯಬಹುದು.

Uses Of Family tree certificate-ವಂಶವೃಕ್ಷ ಪ್ರಮಾಣ ಪತ್ರವನ್ನು ಯಾವ ಸಂದರ್ಭದಲ್ಲಿ ಉಪಯೋಗವಾಗುತ್ತದೆ?

  1. ಆಸ್ತಿ ವಿಂಗಡಣೆ ಮಾಡುವ ಸಂದರ್ಭದಲ್ಲಿ ಆಸ್ತಿಯ ವಾರಸುದಾರರನ್ನು ಗುರುತಿಸಲು ಈ ಪತ್ರವನ್ನು ಉಪಯೋಗಿಸಲಾಗುತ್ತದೆ.
  2. ಕುಟುಂಬದ ಹಿರಿಯ ವ್ಯಕ್ತಿಯು ಮರಣದ ನಂತರ ಆಸ್ತಿಯನ್ನು ವಾರಸುದಾರರಿಗೆ ಹಂಚುವ ವೇಳೆ, ಹಕ್ಕುದಾರರನ್ನು ಗುರುತಿಸಲು ಅಗತ್ಯವಾಗುತ್ತದೆ.
  3. ಸರ್ಕಾರಿ ನೌಕರರ ಪಿಂಚಣಿ ಅಥವಾ ಸೇವಾ ಲಾಭಗಳನ್ನು ಕುಟುಂಬದ ಸದಸ್ಯರಿಗೆ ವರ್ಗಾವಣೆ ಮಾಡಲಿ ಪ್ರಮಾಣ ಪತ್ರವನ್ನು ಬಳಸಲಾಗುತ್ತದೆ.
  4. ಮೃತ ಪಟ್ಟ ವ್ಯಕ್ತಿಯ ಬ್ಯಾಂಕ್ ಖಾತೆ, ಫಿಕ್ಸ್‌ಡ್ ಡೆಪಾಸಿಟ್ ಅಥವಾ ಲಾಕ್‌ರ್‌ಗಳಿಗೆ ಸಂಬಂಧಿಸಿದ ಹಕ್ಕು ಸ್ಥಾಪನೆಗೆ ಬಳಸಲಾಗುತ್ತದೆ.
  5. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಶಾಲಾ ದಾಖಲಾತಿ, ಪಾಸ್‌ಪೋರ್ಟ್ ಅರ್ಜಿ ಮೊದಲಾದಲ್ಲಿ ಕುಟುಂಬದ ಶ್ರೇಣಿಯನ್ನು ತೋರಿಸಲು ಬಳಸಲಾಗುತ್ತದೆ.

ಇದನ್ನೂ ಓದಿ: Karnataka Weather-ಜು.27 ರವರೆಗೆ ಈ ಜಿಲ್ಲೆಗಳಲ್ಲಿ ಉತ್ತಮ ಮಳೆ! ಇಲ್ಲಿದೆ ರಾಜ್ಯ ಮಳೆ ಮುನ್ಸೂಚನೆ!

Application Fee-ವಂಶವೃಕ್ಷ ಪ್ರಮಾಣ ಪತ್ರವನ್ನು ಪಡೆಯಲು ಅರ್ಜಿಯ ಶುಲ್ಕ ಮತ್ತು ಸಮಯವೆಷ್ಟು?

ಪ್ರಮಾಣ ಪತ್ರವನ್ನು ಪಡೆಯಲು ₹50 ರಿಂದ ₹200 ವರೆಗೆ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.

ಹಾಗೂ ಆನ್ಲೈನ್ ಮೂಲಕ 7 ರಿಂದ 15 ದಿನಗಳ ಒಳಗೆ ಪ್ರಮಾಣ ಪತ್ರವನ್ನು ಪಡೆಯಬಹುದು.

Documents Required-ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲಾತಿಗಳು?

ವಂಶವೃಕ್ಷ ಪ್ರಮಾಣ ಪತ್ರ ಪಡೆಯಲು ಈ ಕೆಳಗೆ ತಿಳಿಸಿರುವ ಎಲ್ಲಾ ದಾಖಲಾತಿಗಳು ಕಡ್ಡಾಯವಾಗಿರುತ್ತದೆ.

  • ಅರ್ಜಿದಾರರ ಆಧಾರ್ ಕಾರ್ಡ್/Aadhar Card
  • ವೋಟರ್ ಐಡಿ/ಪಾಸ್‌ಪೋರ್ಟ್/Voter ID
  • ರೇಷನ್ ಕಾರ್ಡ್/Ration Card
  • ಜನನ ಪ್ರಮಾಣ ಪತ್ರ/Birth Certificate
  • ಮದುವೆ ಪ್ರಮಾಣ ಪತ್ರ/Marriage Certificate
  • ಮರಣ ಪ್ರಮಾಣ ಪತ್ರ (ಮರಣಹೊಂದಿದ್ದರೆ)/Death Certificate
  • ಕುಟುಂಬದ ಆಸ್ತಿಯ ದಾಖಲೆಗಳು( ದಾಖಲಾತಿ ಇದ್ದರೆ)/Family property records
  • ಅರ್ಜಿ ನಮೂನೆ ಫಾರಂ/Application Form
  • ಫೋಟೋ/PhotoCopy

ಇದನ್ನೂ ಓದಿ: Bharti Airtel Scholarship-ಏರ್‌ಟೆಲ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನೂ 11 ದಿನ ಬಾಕಿ!

family free

ಇದನ್ನೂ ಓದಿ: Aadhar Update-7 ವರ್ಷ ಮೀರಿದ ಮಕ್ಕಳಿಗೆ ಆಧಾರ್ ಕಾರ್ಡ ಬಯೋಮೆಟ್ರಿಕ್ ಕಡ್ಡಾಯ!

How To Apply-ವಂಶವೃಕ್ಷ ಪ್ರಮಾಣ ಪತ್ರ ಪಡೆಯುವ ವಿಧಾನಗಳಾವುವು?

ವಂಶವೃಕ್ಷ ಪ್ರಮಾಣ ಪತ್ರವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ಗ್ರಾಮದ ಗ್ರಾಮ ಲೆಕ್ಕಿಗ (Village Accountant) ಅಥವಾ ತಹಶೀಲ್ದಾರ್ ಕಚೇರಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Free Hostel Application-ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ!

Step-1: ಪ್ರಥಮದಲ್ಲಿ ಈ ಲಿಂಕ್ “Apply Now” ಮೇಲೆ ಕ್ಲಿಕ್ ಮಾಡಿ ಅಧಿಕೃತ ನಾಡಕಚೇರಿ ವೆಬ್ಸೈಟ್ ಗೆ ಭೇಟಿ ಮಾಡಬೇಕು.

Step-2: ನಂತರ ಈ ಪೇಜ್ ನಲ್ಲಿ ಮೇಲೆ ಎಡಬದಿಯಲ್ಲಿ ಕಾಣುವ “Online Application” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಬಳಿಕ “Apply Online” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ಮತ್ತು ಒಟಿಪಿ ಅನ್ನು ನಮೂದಿಸಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಲಾಗಿನ್ ಆದ ಬಳಿಕ ಅಧಿಕಿತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ. ಇಲ್ಲಿ ಕೇಳುವ ಅಗತ್ಯ ವಿವರಗಳು ಮತ್ತು ಅವಶ್ಯಕ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: PM Dhan Dhanya Yojana-ಕೇಂದ್ರದಿಂದ ಪಿಎಂ ಧನ್ ಧಾನ್ಯ ಕೃಷಿ ನೂತನ ಯೋಜನೆ ಜಾರಿ!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ನಾಡಕಚೇರಿ ವೆಬ್‌ಸೈಟ್-https://nadakacheri.karnataka.gov.in
ಸೇವಾ ಸಿಂಧು ಪೊರ್ಟಲ್-https://sevasindhu.karnataka.gov.in

RELATED ARTICLES
- Advertisment -

Most Popular

Recent Comments