Saturday, July 5, 2025
No menu items!
HomeNewsE-Khatha-ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

E-Khatha-ಮನೆಯಲ್ಲೇ ಕುಳಿತು ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ! ಬೆಂಗಳೂರು ನಗರ ಮಹಾನಗರ ಪಾಲಿಕೆ ಪ್ರದೇಶದ(E-Khatha registration)ಆಸ್ತಿ ಮಾಲೀಕರಿಗೆ ಇ-ಖಾತಾ ವನ್ನು ಆನ್ಲೈನ್ ಮೂಲಕ ತಮ್ಮ ಮೊಬೈಲ್ ನಲ್ಲೇ ಪಡೆದುಕೊಳ್ಳಲು ಸರ್ಕಾರವು ಈ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಅರ್ಹ ಅಭ್ಯರ್ಥಿಗಳು ಈ ಪ್ರಯೋಜನವನ್ನು ಪಡೆದುಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ವ್ಯವಸ್ಥೆಯು ಆಸ್ತಿ ವಹಿವಾಟುಗಳಲ್ಲಿ ಸುರಕ್ಷತೆ, ಸರಳತೆ, ಮತ್ತು ದಕ್ಷತೆಯನ್ನು ತಂದಿದ್ದು, ಬಿಬಿಎಂಪಿಯು ಆಸ್ತಿ ದಾಖಲೆಗಳನ್ನು(Online Khatha) ಡಿಜಿಟಲೀಕರಣಗೊಳಿಸುವ ಮೂಲಕ ಆಡಳಿತವನ್ನು ಜನಸಾಮಾನ್ಯರಿಗೆ ಇ-ಖಾತಾ ವ್ಯವಸ್ಥೆಯನ್ನು ಪರಿಚಯಿಸಲು ಇನ್ನಷ್ಟು ಸುಲಭಗೊಳಿಸಲು ಹೊಸ ದಾರಿಯನ್ನು ತಂದಿದ್ದು, ಇದರ ಮೂಲಕ ಆಸ್ತಿ ಮಾಲಿಕರಿಗೆ ತಮ್ಮ ಮೊಬೈಲ್ ನಲ್ಲೇ ಇ-ಖಾತಾವನ್ನು ಪಡೆದುಕೊಳ್ಳವ ಸೌಲಭ್ಯವನ್ನು ಜಾರಿಗೆ ತಂದಿದೆ.

ಇದನ್ನೂ ಓದಿ: E-Swattu-ನಿಮ್ಮ ಮೊಬೈಲ್ ನಲ್ಲೇ ಉಚಿತವಾಗಿ ಇ-ಸ್ವತ್ತು ಪಡೆಯಲು ಅರ್ಜಿ!

ಪ್ರಸ್ತುತ ಈ ಲೇಖನದಲ್ಲಿ ಮೊಬೈಲ್ ನಲ್ಲೇ ಇ-ಖಾತಾ ವನ್ನು ಪಡೆಯುವ ವಿಧಾನ? ಇ-ಖಾತಾ ವನ್ನು ಪಡೆಯಲು ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅದಕ್ಕೆ ಬೇಕಾದ ದಾಖಲೆಗಳೇನು? ಇ-ಖಾತಾ ದ ಪ್ರಯೋಜನಗಳೇನು? ಇನ್ನಿತರ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

What Is E-Khatha-ಇ-ಖಾತಾ ಎಂದರೇನು?

ಈ ತಂತ್ರಾಂಶವು ಆಸ್ತಿಯ ಡಿಜಿಟಲ್ ದಾಖಲೆಯಾಗಿದ್ದು,ಇದು ಆಸ್ತಿಯ ಮಾಲೀಕತ್ವ, ಗಾತ್ರ, ಸ್ಥಳ, ಮತ್ತು ತೆರಿಗೆ ವಿವರಗಳನ್ನು ಒಳಗೊಂಡಿರುವ ಒಂದು ಕಾನೂನುಬದ್ಧವಾದ ದಾಖಲೆ ಇದಾಗಿದೆ. ಇ-ಖಾತಾವು ಆಸ್ತಿ ವಹಿವಾಟುಗಳಲ್ಲಿ ಸ್ಪಷ್ಟತೆಯನ್ನು ಹೊಂದಿದ್ದು, ಆಸ್ತಿಯಲ್ಲಾಗುವ ವಂಚನೆಯನ್ನು ತಡೆಗಟ್ಟಲು ಮತ್ತು ಆಸ್ತಿ ದಾಖಲೆಗಳನ್ನು ಸುಲಭವಾಗಿ ಪ್ರವೇಶಿಸುವಂತೆ ಮಾಡಲು ರೂಪಿಸಲಾದ ಡಿಜಿಟಲ್ ವ್ಯವಸ್ಥೆ ಇದಾಗಿದೆ.

ಇದನ್ನೂ ಓದಿ: Free Eye Checkup-ಆಶಾಕಿರಣ ಯೋಜನೆಯಡಿ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಣೆ!

Benefits of e-account-ಇ-ಖಾತಾದ ಪ್ರಯೋಜನಗಳು?

  • ಡಿಜಿಟಲ್ ರೂಪದಲ್ಲಿ ಇ-ಖಾತಾ ಆಸ್ತಿ ದಾಖಲೆಗಳನ್ನು ನೀಡುವುದರಿಂದ ಆಸ್ತಿ ವಿಚಾರದಲ್ಲಾಗುವ ತಪ್ಪುಗಳು ಕಡಿಮೆಯಾಗುತ್ತವೆ. ಇದರಿಂದ ಆಸ್ತಿಯ ಮಾಲೀಕತ್ವದ ವಿವರಗಳನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಪಡೆಯಬಹುದು.
  • ಆಸ್ತಿ ಮಾಲೀಕರು ತಮ್ಮ ದಾಖಲೆಗಳನ್ನು ಯಾವುದೇ ಸಮಯದಲ್ಲಾದರು ವೀಕ್ಷಿಸಬಹುದು,ಇದರಿಂದ ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿರುವುದಿಲ್ಲ.
  • ಇ-ಖಾತಾವು ಕಾಗದರಹಿತ ವ್ಯವಸ್ಥೆಯಾಗಿರುತ್ತದೆ.
  • ಇ-ಖಾತಾ ಅರ್ಜಿಯನ್ನು ಸಲ್ಲಿಸಿದ 48 ಗಂಟೆಗಳ ಒಳಗೆ ಅಂತಿಮ ಇ-ಖಾತಾವನ್ನು ಪಡೆಯಲು ಸಹಾಯಕಾರಿಯಾಗಿದೆ.
  • ಇ-ಖಾತಾವು ಆಸ್ತಿಯ ಕಾನೂನುಬದ್ಧ ಮಾಲೀಕತ್ವವನ್ನು ದೃಢೀಕರಿಸುತ್ತದೆ, ಹಾಗೆ ಇದನ್ನು ಸಾಲ ಪಡೆಯುವಾಗ, ಆಸ್ತಿ ಮಾರಾಟ, ಅಥವಾ ಸರ್ಕಾರಿ ಸೇವೆಗಳಲ್ಲಿ ಅರ್ಜಿಯನ್ನು ಸಲ್ಲಿಸುವಾಗ ಇ-ಖಾತಾ ವನ್ನು ಅತ್ಯಂತ ಅವಶ್ಯಕಾರಿಯಾಗಿದೆ.

ಇದನ್ನೂ ಓದಿ: Agri Diploma Admission-ಕೃಷಿ ಡಿಪ್ಲೊಮಾ ವಿಶ್ವವಿದ್ಯಾಲಯದಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

ಮನೆ ಬಾಗಿಲಿಗೆ ಇ-ಖಾತಾ ವಿತರಣೆ?

ಬಿಬಿಎಂಪಿಯು 2025 ರ ಫೆಬ್ರವರಿಯಿಂದ ಇ-ಖಾತಾದ ಕರಡು ಪ್ರತಿಗಳನ್ನು ಆಸ್ತಿ ಮಾಲೀಕರ ಮನೆ ಬಾಗಿಲಿಗೆ ವಿತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಈ ಯೋಜನೆಯು ಸುಮಾರು 23 ಲಕ್ಷ ಆಸ್ತಿ ಮಾಲೀಕರಿಗೆ ಪ್ರಯೋಜನವನ್ನು ಒದಗಿಸಿದೆ, ವಿಶೇಷವಾಗಿ ತಾಂತ್ರಿಕ ತೊಂದರೆಗಳಿಂದಾಗಿ ಅಥವಾ ಜಾಗೃತಿಯ ಕೊರತೆಯಿಂದ ತಮ್ಮ ಇ-ಖಾತಾವನ್ನು ಡೌನ್‌ಲೋಡ್ ಮಾಡದಿರುವವರಿಗೆ. ಈ ಸೇವೆಯು ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಮತ್ತು ಎಲ್ಲರಿಗೂ ಇ-ಖಾತಾವನ್ನು ಪಡೆಯಲು ಈ ಯೋಜನೆಯ ಉದ್ದೇಶವಾಗಿದೆ.

What are the qualifications to get an e-account-ಇ-ಖಾತಾ ಪಡೆಯಲು ಯಾವೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು?

  • ಅರ್ಜಿದಾರರು ಬೆಂಗಳೂರು ನಗರ ವ್ಯಾಪ್ತಿಯ ನಿವಾಸಿಗಳಾಗಿರಬೇಕು.
  • ಆಸ್ತಿಯು ಬಿಬಿಎಂಪಿ ವ್ಯಾಪ್ತಿಯೊಳಗೆ ಇರಬೇಕು.
  • ವಸತಿ, ವಾಣಿಜ್ಯ, ಕೈಗಾರಿಕ, ಅಥವಾ ಮಿಶ್ರ-ಬಳಕೆಯ ಆಸ್ತಿಗಳು ಅರ್ಹವಾಗಿರುತ್ತವೆ.
  • ಆಸ್ತಿ ಮಾಲೀಕರು, ಜಂಟಿ ಮಾಲೀಕರು, ಕಾನೂನು ಉತ್ತರಾಧಿಕಾರಿಗಳು, ಅಧಿಕೃತ ಕಂಪನಿಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಅರ್ಜಿಯನ್ನು ಸಲ್ಲಿಸಲು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
  • ಅರ್ಜಿದಾರರು ಬ್ಯಾಂಕ್ ಖಾತೆಯನ್ನು ಹೊಂದಿರಬೇಕು.

ಇದನ್ನೂ ಓದಿ: Home Loan Schems-PMAY 2.0 ಯೋಜನೆಯಡಿ ₹ 2.50 ಲಕ್ಷ ಸಹಾಯಧನಕ್ಕೆ ಅರ್ಜಿ! 

Documents-ಇ-ಖಾತಾ ಪಡೆಯಲು ಅಗತ್ಯ ದಾಖಲಾತಿಗಳು?

  1. ಆಧಾರ್ ಕಾರ್ಡ್ ಪ್ರತಿ/Aadhar Card Copy
  2. ಪಾನ್ ಕಾರ್ಡ್ ಪ್ರತಿ/PAN Card Copy
  3. ಆಸ್ತಿಯ ಮಾಲೀಕತ್ವ ಮಾರಾಟದ ಒಪ್ಪಂದ/Property Ownership Sale Agreement
  4. ಇಸಿ ಸರ್ಟಿಫಿಕೇಟ್/EC Certificate
  5. ಆಸ್ತಿ ತೆರಿಗೆ ರಸೀದಿ/Property Tax Receipt
  6. ಆಸ್ತಿಯ ಫೋಟೋ/Photo of the Property

Online Apply Method-ಇ-ಖಾತಾವನ್ನು ಆನ್‌ಲೈನ್‌ನಲ್ಲಿ ಪಡೆಯುವ ವಿಧಾನ:

Step-1: ಮೊದಲಿಗೆ ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕೃತ ಜಾಲತಾಣವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: E Khata-ಸರ್ಕಾರದಿಂದ ಮನೆ ಬಾಗಿಲಿಗೆ ಇ-ಖಾತಾ ವಿತರಿಸುವ ಯೋಜನೆ ಜಾರಿ!

e khatha application

ಇದನ್ನೂ ಓದಿ: Free Fodder cutter-ಪಶುಪಾಲನಾ ಇಲಾಖೆಯಿಂದ ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ!

Step-2: ನಂತರ ರಿಜಿಸ್ಟರ್ ಮಾಡಬೇಕಾದ ಮೊಬೈಲ್ ನಂಬರ್ ಅನ್ನು ಹಾಕಬೇಕು. ರಿಜಿಸ್ಟರ್ ಮಾಡಿದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಆ ಒಟಿಪಿ ಯನ್ನು ಹಾಕಿ ಲಾಗಿನ್ ಮಾಡಬೇಕು.

Step-3: ಲಾಗಿನ್ ಆದ ಬಳಿಕ ಆಸ್ತಿ ವಾರ್ಡ ಸಂಖ್ಯೆಯನ್ನು ಆಯ್ಕೆ ಮಾಡಿ ನೀವು ಪಾವತಿಸುವ ಆಸ್ತಿ ತೆರಿಗೆ ಬಿಲ್ಲಿನಲ್ಲಿರುವ ಸಂಖ್ಯೆಯನ್ನು ಹಾಕಬೇಕು. ನಂತರ ಅಲ್ಲಿ ತೋರಿಸುವ 5 ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬೇಕು. ಅಂದರೆ ದಾಖಲೆಗಳಲ್ಲಿರುವಂತೆ ಆಯ್ಕೆ ಮಾಡಬೇಕು.

Step-4: ಬಳಿಕ ಈ ಪೇಜ್ ನಲ್ಲಿ ಎಲ್ಲಾ ಅಗತ್ಯ ವಿವರ ಮತ್ತು ದಾಖಲಾತಿಗಳನ್ನುಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: NLM Yojana-ಕೋಳಿ ಕುರಿ ಮೇಕೆ ಸಾಕಾಣಿಕೆಗೆ ಜಾನುವಾರು ಮಿಷನ್ ಯೋಜನೆಯಡಿ ₹25.00 ಲಕ್ಷ ಸಬ್ಸಿಡಿ!

For More Information-ಹೆಚ್ಚಿನ ಉಪಯುಕ್ತ ಸಂಪೂರ್ಣ ಮಾಹಿತಿಯನ್ನು ಪಡೆಯಲು ಬಿಬಿಎಂಪಿ ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ: Click Here

RELATED ARTICLES
- Advertisment -

Most Popular

Recent Comments