Wednesday, July 2, 2025
No menu items!
HomeNewsE Khata-ಸರ್ಕಾರದಿಂದ ಮನೆ ಬಾಗಿಲಿಗೆ ಇ-ಖಾತಾ ವಿತರಿಸುವ ಯೋಜನೆ ಜಾರಿ!

E Khata-ಸರ್ಕಾರದಿಂದ ಮನೆ ಬಾಗಿಲಿಗೆ ಇ-ಖಾತಾ ವಿತರಿಸುವ ಯೋಜನೆ ಜಾರಿ!

ಕರ್ನಾಟಕ ಸರ್ಕಾರವು ಸಾರ್ವಜನಿಕರ ಆಸ್ತಿ ರಕ್ಷಣೆ ಮತ್ತು ದಾಖಲೆಗಳ ಸುರಕ್ಷತೆಗಾಗಿ(Online e-Khata) ಒಂದು ಭವ್ಯ ಯೋಜನೆಯನ್ನು ಕೈಗೆತ್ತಿಕೊಂಡಿದೆ. “ಮನೆ ಬಾಗಿಲಿಗೆ ಇ-ಖಾತಾ” ಎಂಬ ಈ ಯೋಜನೆಯು ರಾಜ್ಯದ ಆಸ್ತಿದಾರರಿಗೆ ತಮ್ಮ ಆಸ್ತಿ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಒದಗಿಸುವ ಮೂಲಕ ಒಂದು ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದ್ದು ಇದರ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಇರುವ ಸುಮಾರು 25 ಲಕ್ಷ ಆಸ್ತಿದಾರರಿಗೆ ಈ ಸೌಲಭ್ಯ ಲಭಿಸಲಿದೆ. ಈಗಾಗಲೇ 5.51 ಲಕ್ಷ ಆಸ್ತಿದಾರರಿಗೆ ಅಂತಿಮ ಇ-ಖಾತಾ ವಿತರಿಸಲಾಗಿದ್ದು, ಉಳಿದವರಿಗೆ ಮುಂದಿನ 100 ದಿನಗಳ ಒಳಗೆ ಕರಡು ಇ-ಖಾತಾವನ್ನು ತಲುಪಿಸುವ ಗುರಿ ಇರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಈ ಲೇಖನದಲ್ಲಿ ಇ-ಖಾತಾ ಪಡೆಯುವುದರ ಕುರಿತು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳೇನು? ಆನ್ಲೈನ್ ಮೂಲಕ ಇ-ಖಾತಾ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಹೇಗೆ?ಇ-ಖಾತಾಯ ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳು ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Scholorship Application-ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

e-Khata Benefits-ಇ-ಖಾತಾಯ ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳು:

“ಮನೆ ಬಾಗಿಲಿಗೆ ಇ-ಖಾತಾ” ಯೋಜನೆಯ ಮೂಲ ಉದ್ದೇಶ ಆಸ್ತಿ ದಾಖಲೆಗಳ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ಜನರಿಗೆ ಸುಲಭವಾಗಿ ಪ್ರವೇಶಿಸುವ ಸೌಲಭ್ಯ ಒದಗಿಸುವುದು. ಹಿಂದೆ, ಆಸ್ತಿ ಸಂಬಂಧಿತ ದಾಖಲೆಗಳನ್ನು ಕಾಗದದಲ್ಲಿ ಸಂಗ್ರಹಿಸುತ್ತಿದ್ದು, ಇದರಿಂದ ದಾಖಲೆಗಳು ಕಳೆದುಹೋಗುವ ಅಥವಾ ಹಾನಿಗೊಳಗಾಗುವ ಸಾಧ್ಯತೆ ಇತ್ತು. ಆದರೆ ಈಗ ಡಿಜಿಟಲ್ ಇ-ಖಾತಾವು ಆ ಚಿಂತೆಯನ್ನು ದೂರ ಮಾಡಿದೆ. ಇ-ಖಾತಾದ ಮೂಲಕ, ಆಸ್ತಿದಾರರು ತಮ್ಮ ಆಸ್ತಿ ವಿವರಗಳನ್ನು ಯಾವುದೇ ಸಮಯದಲ್ಲಿ ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು, ಇದು ಸಮಯ ಮತ್ತು ಶ್ರಮ ಉಳಿಸುತ್ತದೆ.

ಈ ಯೋಜನೆಯ ಜಾರಿಗೆ ಇನ್ನೊಂದು ಪ್ರಮುಖ ಉದ್ದೇಶವೆಂದರೆ, ಆಸ್ತಿ ತೆರಿಗೆ ಪಾವತಿ ಮತ್ತು ಇತರ ಸರ್ಕಾರಿ ಸೇವೆಗಳಲ್ಲಿ ಸುಧಾರಣೆ ತರುವುದು. ಡಿಜಿಟಲೀಕರಣದಿಂದಾಗಿ ತೆರಿಗೆ ಸಂಗ್ರಹಣೆಯಲ್ಲಿ ಪಾರದರ್ಶಕತೆ ಹೆಚ್ಚಾಗುತ್ತದೆ ಮತ್ತು ಅಕ್ರಮಗಳ ಸಾಧ್ಯತೆ ಕಡಿಮೆಯಾಗುತ್ತದೆ. ವಿಶ್ವ ಬ್ಯಾಂಕ್‌ನ 2021ರ ವರದಿಗಳ ಪ್ರಕಾರ, ಆಸ್ತಿ ದಾಖಲೆಗಳ ಡಿಜಿಟಲೀಕರಣವು ತೆರಿಗೆ ಪಾವತಿ ಸಂಬಂಧಿತ ಅಕ್ರಮಗಳನ್ನು 30%ರಷ್ಟು ಕಡಿಮೆ ಮಾಡಬಹುದು. ಇದು ಕರ್ನಾಟಕದಂತಹ ರಾಜ್ಯಗಳಿಗೆ ಒಂದು ಮಾದರಿಯಾಗಿ ಮಾರ್ಪಡಿಸಬಹುದಾದ ಸಾಮರ್ಥ್ಯವನ್ನು ಹೊಂದಿದೆ.

ಇದನ್ನೂ ಓದಿ: Free Fodder cutter-ಪಶುಪಾಲನಾ ಇಲಾಖೆಯಿಂದ ಉಚಿತ ಮೇವು ಕತ್ತರಿಸುವ ಯಂತ್ರ ಪಡೆಯಲು ಅರ್ಜಿ!

e-Khata Yojana-ಯೋಜನೆಯ ಪ್ರಗತಿ ಮತ್ತು ಗುರಿ:

ಈಗಾಗಲೇ 5.51 ಲಕ್ಷ ಆಸ್ತಿದಾರರಿಗೆ ಅಂತಿಮ ಇ-ಖಾತಾ ವಿತರಿಸಲಾಗಿದೆ ಎಂಬುದು ಈ ಯೋಜನೆಯ ಯಶಸ್ಸಿನ ಪ್ರತೀಕ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಂಬಂಧ ತಮ್ಮ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದು, ಉಳಿದ 19.49 ಲಕ್ಷ ಆಸ್ತಿದಾರರಿಗೆ ಮುಂದಿನ 100 ದಿನಗಳ ಒಳಗೆ ಕರಡು ಇ-ಖಾತಾವನ್ನು ತಲುಪಿಸುವ ಗುರಿಯನ್ನು ಇರಿಸಲಾಗಿದೆ. ಈ ಗುರಿಯನ್ನು ಸಾಧಿಸಲು ಸರ್ಕಾರವು ತಂತ್ರಜ್ಞಾನ ಮತ್ತು ಸಿಬ್ಬಂದಿಗಳ ಸಹಾಯದಿಂದ ತೀವ್ರ ಪ್ರಯತ್ನ ಮಾಡುತ್ತಿದೆ. ಇದರೊಂದಿಗೆ, ಜನರಿಗೆ ಈ ಸೌಲಭ್ಯದ ಬಗ್ಗೆ ಅರಿವು ಮೂಡಿಸುವುದು ಮತ್ತು ತಾಂತ್ರಿಕ ಸಹಾಯ ಒದಗಿಸುವುದು ಕೂಡ ಮುಖ್ಯ ಆದ್ಯತೆಯಾಗಿದೆ.

ಈ ಯೋಜನೆಯನ್ನು ಯಶಸ್ವೀಗೊಳಿಸಲು ಕರ್ನಾಟಕ ಸರ್ಕಾರವು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡರ್ನೈಜೇಷನ್ ಪ್ರೋಗ್ರಾಂ (DILRMP) ಯಂತಹ ರಾಷ್ಟ್ರೀಯ ಯೋಜನೆಗಳೊಂದಿಗೆ ಸಹಯೋಗ ಮಾಡಿಕೊಂಡಿದೆ. ಇದರಿಂದ ಭೂ ದಾಖಲೆಗಳ ಡಿಜಿಟಲೀಕರಣವು ಒಂದು ಸಮಗ್ರ ವ್ಯವಸ್ಥೆಯಾಗಿ ರೂಪುಗೊಳ್ಳುತ್ತದೆ. ಇ-ಆಸ್ಥಿ (e-Aasthi) ವ್ಯವಸ್ಥೆಯು ಈ ಯೋಜನೆಯ ಭಾಗವಾಗಿ ಆಸ್ತಿ ತೆರಿಗೆ ಮತ್ತು ದಾಖಲೆ ನಿರ್ವಹಣೆಯಲ್ಲಿ ಒಂದು ಪ್ರಮುಖ ಪಾತ್ರ ವಹಿಸುತ್ತಿದೆ.

ಇದನ್ನೂ ಓದಿ: NLM Yojana-ಕೋಳಿ ಕುರಿ ಮೇಕೆ ಸಾಕಾಣಿಕೆಗೆ ಜಾನುವಾರು ಮಿಷನ್ ಯೋಜನೆಯಡಿ ₹25.00 ಲಕ್ಷ ಸಬ್ಸಿಡಿ!

e khata

ಇದನ್ನೂ ಓದಿ: Bele Vime-ತೋಟಗಾರಿಕೆ ಬೆಳೆಗಳಿಗೆ ವಿಮೆ ಮಾಡಿಸಲು ಅರ್ಜಿ ಆಹ್ವಾನ!

E-khata Online Application-ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

ಆಸ್ತಿಯ ಮಾಲೀಕರು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಅಧಿಕೃತ ಬಿಬಿಎಂಪಿಯ ಇ-ಖಾತಾ ಜಾಲತಾಣವನ್ನು ಪ್ರವೇಶ ಮಾಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Apply Now ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ ಈ ಪೇಜ್ ನಲ್ಲಿ ಲಾಗಿನ್ ಕಾಲಂ ನಲ್ಲಿ ನಿಮ್ಮ ಮೊಬೈಲ್ ನಂಬರ್ ಮತ್ತು OTP ಅನ್ನು ಹಾಕಿ ಅಗತ್ಯ ವಿವರವನ್ನು ಭರ್ತಿ ಮಾಡಿ “Login” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಮೇಲಿನ ಹಂತ ಪೂರ್ಣಗೊಳಿಸಿ ಲಾಗಿನ್ ಅದ ಬಳಿಕ “e-khata” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಪಟ್ಟಿ ತೋರಿಸುತ್ತದೆ ಇಲ್ಲಿ ನಿಮ್ಮ ವಾರ್ಡ ಅನ್ನು ಹುಡುಕಿ ನಂತರ ಆಸ್ತಿಯ ಮಾಲೀಕರ ಹೆಸರನ್ನು ಸರ್ಚ್ ಮಾಡಿ ಮುಂದಿನ ಪುಟಕ್ಕೆ ಭೇಟಿ ಮಾಡಬೇಕು.

Step-4: ತದ ನಂತರ ಈ ಪುಟದಲ್ಲಿ “Submit Information For ekhata” ಕಾಲಂ ನಲ್ಲಿ ಕೆಳಗೆ ತೋರಿಸುವ Click Here ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿ ಸ್ವೀಕೃತಿಯಾಗಿ ಕೊನೆಯಲ್ಲಿ ಸ್ವೀಕೃತಿ ರಶೀದಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇ-ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನದ ವಿಡಿಯೋ- Watch Now

ಇದನ್ನೂ ಓದಿ: Uchita Holige Yantra-ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಇನ್ನು 2 ದಿನ ಬಾಕಿ!

Documents required for E-Khata-ಇ-ಖಾತಾ ಪಡೆಯಲು ಅವಶ್ಯಕ ದಾಖಲೆಗಳು:

ಇ-ಖಾತಾ ಪಡೆಯಲು ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸುವುದು ಅವಶ್ಯಕವಾಗಿದೆ.

  • ಮಾಲೀಕರ ಆಧಾರ್ ಕಾರ್ಡ
  • ಆಸ್ತಿ ತೆರಿಗೆ ಎಸ್ ಎ ಎಸ್ ಸಂಖ್ಯೆ
  • ಮಾರಾಟ ಅಥವಾ ನೋಂದಾಯಿತ ಪತ್ರ
  • ಆಸ್ತಿಯ ಜಿಪಿಎಸ್ ಸ್ಥಳ
  • ಮಾಲೀಕರು ಜಾಗದಲ್ಲಿ ನಿಂತಿರುವ ಪೋಟೋ
  • ಆಸ್ತಿಗೆ ಸಂಬಂಧಪಟ್ಟ ದಾಖಲೆಗಲು/ಕ್ರಯಪತ್ರ/ವಿಭಾಗ ಪತ್ರ
    ಮೊಬೈಲ್ ನಂಬರ್

E-Khata Helpline Number-ಹೆಚ್ಚಿನ ಮಾಹಿತಿಗಾಗಿ:

Helpline Number-ಸಹಾಯವಾಣಿ-080 4920 3888
E Khata Website-ಇ-ಖಾತಾಗೆ ಸಂಬಂಧಪಟ್ಟ ಅಧಿಕೃತ ವೆಬ್ಸೈಟ್-Click Here

RELATED ARTICLES
- Advertisment -

Most Popular

Recent Comments