Friday, October 10, 2025
No menu items!
HomeNewsCotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ! ಪ್ರತಿ ಕ್ವಿಂಟಾಲ್‌ಗೆ ₹8,110/- ರಂತೆ ಹತ್ತಿ ಖರೀದಿಗೆ ನೋಂದಣಿ...

Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ! ಪ್ರತಿ ಕ್ವಿಂಟಾಲ್‌ಗೆ ₹8,110/- ರಂತೆ ಹತ್ತಿ ಖರೀದಿಗೆ ನೋಂದಣಿ ಆರಂಭ!

2025-2026 ನೇ ಸಾಲಿನ ಕರ್ನಾಟಕ ಸರ್ಕಾರದ ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ(Krishi Marata Mandali) ಸಹಯೋಗದಲ್ಲಿ ಭಾರತೀಯ ಹತ್ತಿ ನಿಗಮ (CCI) ಬೆಂಬಲ ಬೆಲೆಯಲ್ಲಿ(Bembala Bele) ಹತ್ತಿ ಖರೀದಿಗೆ ರೈತರಿಂದ ನೋಂದಣಿ ಪ್ರಕ್ತಿಯೆಯನ್ನು ಅರ್ಹ ರೈತರಿಂದ ಅರ್ಜಿಯನ್ನು ಸಲ್ಲಿಸಲು ಆಹ್ವಾನಿಸಲಾಗಿದೆ.

ಈ ನೋಂದಣಿ ಪ್ರಕ್ತಿಯೆಯು ರೈತರ ಹಿತಾಸಕ್ತಿಯನ್ನು ಕಾಪಾಡಲು ರೈತರಿಗೆ ಬೆಳೆಗಳಲ್ಲಿ ನಷ್ಟವಾಗದಂತೆ ಬೆಳೆಗಳಿಗೆ ಸರಿಯಾದ ಬೆಲೆ ನೀಡುವಂತೆ ಮಾಡುವುದು ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಪ್ರತಿ ವರ್ಷದಂತೆ ಇಂದಿನ ವರ್ಷವೂ ಸಹ ಕನಿಷ್ಟ ಬೆಂಬಲ ಬೆಲೆಯನ್ನು(Minimum Support Price)ನಿಗದಿಪಡಿಸಲಾಗುತ್ತದೆ. ಈ ಮಾಹಿತಿಯು ಉಪಯುಕ್ತ ಎನಿಸಿದ್ದಲ್ಲಿ ನಿಮ್ಮ ವ್ಯಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: U-Go Scholarship-ಯು-ಗೋ ವಿದ್ಯಾರ್ಥಿವೇತನ ಅಡಿಯಲ್ಲಿ ₹60,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಪ್ರಸ್ತುತ ಇಂದಿನ ಈ ಅಂಕಣದಲ್ಲಿ ಹತ್ತಿ ಮಾರಾಟ ಮಾಡಲು ನೋಂದಣಿಯನ್ನು ಹೇಗೆ ಮಾಡಿಕೊಳ್ಳಬೇಕು? ನೋಂದಣಿ ಮಾಡಲು ಅರ್ಜಿಯನ್ನು ಸಲ್ಲಿಸುವ ಹಂತಗಳಾವುವು? ಬೆಂಬಲ ಬೆಲೆಯಲ್ಲಿ ಎಷ್ಟು ಹಣವನ್ನು ನಿಗದಿಪಡಿಸಲಾಗಿದೆ? ಅರ್ಜಿಯನ್ನು ಸಲ್ಲಿಸಲು ಸಲ್ಲಿಸಬೇಕಾದ ದಾಖಲಾತಿಗಳಾವುವು? ಕೊನೆಯ ದಿನಾಂಕ ಯಾವುದು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

Cotton MSP-ಹತ್ತಿ ಬೆಂಬಲ ಬೆಲೆ 2025-26 ರಲ್ಲಿ ಎಷ್ಟು ಹಣ ನಿಗದಿಪಡಿಸಲಾಗಿದೆ?

ಮಧ್ಯಮ ಎಳೆ ಹತ್ತಿ: ₹7,710/- ಪ್ರತಿ ಕ್ವಿಂಟಾಲ್

ಉದ್ದ ಎಳೆ ಹತ್ತಿ: ₹8,110/- ಪ್ರತಿ ಕ್ವಿಂಟಾಲ್

Important Dates for msp price-ನೋಂದಣಿ ಮಾಡಲು ಪ್ರಮುಖ ದಿನಾಂಕಗಳಾವುವು?

ಅರ್ಜಿಯ ಪ್ರಾರಂಭ: 01 ಸೆಪ್ಟೆಂಬರ್ 2025

ಕೊನೆಯ ದಿನಾಂಕ: 30 ಸೆಪ್ಟೆಂಬರ್ 2025

ಇದನ್ನೂ ಓದಿ: Degree Scholarship 2025-ಪದವಿ ವಿದ್ಯಾಭ್ಯಾಸಕ್ಕೆ 5.5 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ! ಇನ್ನೂ 2 ದಿನ ಬಾಕಿ!

Who Can Apply For This Scheme-ನೋಂದಣಿ ಮಾಡಲು ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು?

ಅರ್ಜಿದಾರ ರೈತರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಹತ್ತಿಯನ್ನು ಸ್ವತಃ ಬೆಳೆದ ರೈತರು ಮಾತ್ರ ನೋಂದಣಿ ಮಾಡಿಕೊಳ್ಳಬಹುದು.

ಜಮೀನಿನ ಖಾತೆ ಯಾರ ಹೆಸರಿನಲ್ಲಿ ಇದೆಯೋ, ಆ ರೈತನ ಹೆಸರಿನಲ್ಲೇ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಮಧ್ಯವರ್ತಿಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Labour Marriage Subsidy-ಕಾರ್ಮಿಕ ಇಲಾಖೆಯಡಿ ಮದುವೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

Documents Required-ನೋಂದಣಿ ಮಾಡಿಕೊಳ್ಳಲು ಯಾವೆಲ್ಲ ದಾಖಲೆಗಳನ್ನು ಸಲ್ಲಿಸಬೇಕು?

ಆಧಾರ್ ಕಾರ್ಡ್/Aadhar Card

ರೇಷನ್ ಕಾರ್ಡ್/Ration Card

ಜಮೀನು ದಾಖಲೆಗಳು/RTC / ಪಹಣಿ

ಬ್ಯಾಂಕ್ ಪಾಸ್‌ಬುಕ್/Bank Passbook

ಮೊಬೈಲ್ ನಂಬರ್/Mobile Number

ಹತ್ತಿ ಬೆಳೆ ವಿವರ/Description of cotton crop

ಫೋಟೋ/Photo Copy

cotton price

ಇದನ್ನೂ ಓದಿ: Reliance Foundation Scholarship-ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ₹2 ಲಕ್ಷ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

How To Register Online Process-ನೋಂದಣಿ ಮಾಡುವ ಹಂತಗಳಾವುವು?

ಹತ್ತಿ ಮಾರಾಟ ಮಾಡಲು ಆಸಕ್ತ ಇರುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಕೊನೆಯ  ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

Step-1: ಅರ್ಜಿ ಸಲ್ಲಿಸಲು ಆಸಕ್ತ ಇರುವ ಅರ್ಹ ರೈತರು ಮೊದಲಿಗೆ ಈ ಲಿಂಕ್ ಮೇಲೆ “App Donwload Link” ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಗೆ ಪ್ರವೇಶ ಮಾಡಿ “Kapas Kisan” ಅಪ್ಲಿಕೇಶನ್ ಅನ್ನು Download ಮಾಡಿಕೊಳ್ಳಬೇಕು.

Step-2: ನಂತರ ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಹಾಗೂ ಜಮೀನಿನ ವಿವರಗಳನ್ನು ಭರ್ತಿ ಮಾಡಿ ಕೊನೆಯಲ್ಲಿ ಸ್ವಯಂ ಘೋಷಣೆ/Self Declaration ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು.

ಇದನ್ನೂ ಓದಿ: Subsidy Loan-ಮಹಿಳಾ ಸ್ವ-ಸಹಾಯ ಸಂಘಗಳಿಗೆ ₹1.5 ಲಕ್ಷ ಸಹಾಯಧನ ಸಾಲ! ಇಂದೇ ಅರ್ಜಿ ಸಲ್ಲಿಸಿ!

ಸಹಾಯಕ್ಕಾಗಿ ಸಂಪರ್ಕಿಸಬಹುದಾದ ವಿಳಾಸ (Helpline):

ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ
#16, 2ನೇ ರಾಜಭವನ ರಸ್ತೆ, ಬೆಂಗಳೂರು – 560001
ದೂರವಾಣಿ: 080-22867369

RELATED ARTICLES
- Advertisment -

Most Popular

Recent Comments