Thursday, August 21, 2025
No menu items!
HomeNewsCorteva Agriscience Scholarship-ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್ ನಡಿ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

Corteva Agriscience Scholarship-ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್ ನಡಿ ₹35,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

2025-2026 ನೇ ಸಾಲಿನ “ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್” ಕಾರ್ಯಕ್ರಮದ(Scholarship Application) ಅಡಿಯಲ್ಲಿ ಕೊರ್ಟೆವಾ ಅಗ್ರಿಸೈನ್ಸ್ ಸೀಡ್ಸ್ ಪ್ರೈವೇಟ್ ಲಿಮಿಟೆಡ್‌ ವತಿಯಿಂದ ಅರ್ಹ ವಿದ್ಯಾರ್ಥಿಗಳು ₹35,000 ವಿದ್ಯಾರ್ಥಿವೇತನವನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೊರ್ಟೆವಾ ಅಗ್ರಿಸೈನ್ಸ್ ಸೀಡ್ಸ್ ಪ್ರೈವೇಟ್ ಲಿಮಿಟೆಡ್‌ ಈ ಯೋಜನೆಯ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ(Corteva Agriscience Scholarship Apply) ಸಹಾಯದವನ್ನು ನೀಡುವುದರ ಉದ್ದೇಶದಿಂದ ವಿದ್ಯಾಭ್ಯಾಸ ಮುಂದುವರೆಸಲು ಹಣದ ಅಡಚಣೆ ಎದುರಿಸುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಯೋಜನೆಯು ಬೆಂಬಲವನನ್ನು ನೀಡುತ್ತದೆ.

ಇದನ್ನೂ ಓದಿ: Car Subsidy Application-ವಾಹನ/ಟ್ಯಾಕ್ಸಿ ಖರೀದಿಗೆ ರೂ 4.00 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಲು ಯಾರೆಲ್ಲ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಈ ಯೋಜನೆಯ ಉದ್ದೇಶವೇನು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಆನ್ಲೈನ್ ಮೂಲಕ ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Last Date-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2025

Scholarship Amount-ಈ ಯೋಜನೆಯಡಿ ಎಷ್ಟು ವಿದ್ಯಾರ್ಥಿವೇತನ ನೀಡಲಾಗುತ್ತದೆ?

ಪದವಿಪೂರ್ವ ವಿದ್ಯಾರ್ಥಿಗಳಿಗೆ: ₹25,000 ರೂಗಳು

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ: ₹35,000 ರೂಗಳು

ಇದನ್ನೂ ಓದಿ: BSF constable requirement 2025-SSLC ಅಥವಾ ITI ಪಾಸಾದವರು ಕೂಡ ಅರ್ಜಿ ಹಾಕಬಹುದು!

Who Can Apply For This Scholorship-ಈ ಯೋಜನೆಯಡಿ ಅರ್ಜಿಯನ್ನು ಸಲ್ಲಿಸಲು ಯಾರು ಅರ್ಹರು:

ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಅಥವಾ ರಾಜ್ಯ ಕೃಷಿ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಕೃಷಿ ಮತ್ತು ಸಂಬಂಧಿತ ಕೋರ್ಸ್‌ಗಳಲ್ಲಿ ಯಾವುದೇ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಹಿಳಾ ವಿದ್ಯಾರ್ಥಿನಿಯರಿಗೆ ಮುಕ್ತವಾಗಿದೆ.

ಅರ್ಜಿದಾರ ಅಭ್ಯರ್ಥಿಯು ಭಾರತೀಯ ನಿವಾಸಿಯಾಗಿರಬೇಕು.

ಸರ್ಕಾರಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಅಖಿಲ ಭಾರತ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರು.

ವಿದ್ಯಾರ್ಥಿಯ ವಾರ್ಷಿಕ ಕುಟುಂಬದ ಆದಾಯ ₹6,00,000 ಅಥವಾ ಅದಕ್ಕಿಂತ ಕಡಿಮೆ ಇರಬೇಕು.

ಕಾರ್ಟೆವಾ ಅಗ್ರಿಸೈನ್ಸ್ ಮತ್ತು ಬಡ್ಡಿ4ಸ್ಟುಡಿ ಉದ್ಯೋಗಿಗಳ ಮಕ್ಕಳು ಅರ್ಹರಲ್ಲ.

ಇದನ್ನೂ ಓದಿ: Scholorship Application-SSLC-PUC ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಈಗಲೇ ಅರ್ಜಿ ಹಾಕಿ!

ಸೂಚನೆ:

ವಿದ್ಯಾರ್ಥಿವೇತನ ನಿಧಿಯನ್ನು ಶೈಕ್ಷಣಿಕ ವೆಚ್ಚಗಳಿಗೆ ಮಾತ್ರ ಬಳಸಿಕೊಳ್ಳಬಹುದು, ಇದರಲ್ಲಿ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ, ಆಹಾರ, ಪ್ರಯಾಣ, ಪುಸ್ತಕಗಳು, ಲೇಖನ ಸಾಮಗ್ರಿಗಳು, ಸಂಶೋಧನಾ ಕಾರ್ಯಗಳು ಇತ್ಯಾದಿ ಸೇರಿವೆ.

Required Documents-ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು?

ವಿದ್ಯಾರ್ಥಿಯ ಆಧಾರ್ ಕಾರ್ಡ/Aadhar

ಶಾಲಾ-ಕಾಲೇಜು ಪ್ರವೇಶ ದೃಡೀಕರಣ/Study Certificate

ಆದಾಯ ಪ್ರಮಾಣ ಪತ್ರ/Income Certificate

ಪೋಟೋ/Photo

ಅಂಕಪಟ್ಟಿ/Markscard

ಮೊಬೈಲ್ ನಂಬರ್/Mobile Number

ಇ-ಮೇಲ್ ವಿಳಾಸ/Email

ಇದನ್ನೂ ಓದಿ: Cattle Subsidy scheme-ಹಸು-ಎಮ್ಮೆ ಖರೀದಿ ಮಾಡಲು ಶೇ 50 ರಷ್ಟು ಸಹಾಯಧನಕ್ಕೆ ಅರ್ಜಿ!

How To Apply–ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿವೆ:

ಕೊರ್ಟೆವಾ ಅಗ್ರಿಸೈನ್ಸ್ ಸೀಡ್ಸ್ ಪ್ರೈವೇಟ್ ಲಿಮಿಟೆಡ್‌ ಈ ಯೋಜನೆಯ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Police Constable Training-ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ!

ಇದನ್ನೂ ಓದಿ: Land Ownership Scheme-ಭೂಮಿ ಖರೀದಿಸಲು 25 ಲಕ್ಷ ರೂ ಸಹಾಯಧನ! ಇಲ್ಲಿದೆ ಸಂಪೂರ್ಣ ಮಾಹಿತಿ!

Step-1: ಮೊದಲಿಗೆ ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ ವಿದ್ಯಾರ್ಥಿವೇತನದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ನಂತರ ಈ ಪೇಜ್ ನಲ್ಲಿ ಕಾಣುವ “Apply Now” ಬಟನ್ ಮೇಲೆ ಕ್ಲಿಕ್ ಮಾಡಬೇಕು ಇಲ್ಲಿ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅನುಸಾರಗಾಗಿ ಒಂದು ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Create an Account” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಖಾತೆಯನ್ನು ರಚಿಸಿಕೊಳ್ಳಬೇಕು ನಂತರ “Login” ಬಟನ್ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.

Step-3: ಲಾಗಿನ್ ಆದ ಬಳಿಕ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಅವಶ್ಯವಿರುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ ತೋರಿಸುವ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯಾ? ಚೆಕ್ ಮಾಡಿ!

Helpline-ಸಹಾಯವಾಣಿ: 011-430-92248
More Information-ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ: Click Here

RELATED ARTICLES
- Advertisment -

Most Popular

Recent Comments