ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಜಾತಿಗಣತಿ ಸಮೀಕ್ಷೆ ಅತ್ಯಂತ ಪ್ರಮುಖವಾಗಿದ್ದು,(Karnataka caste survey 2025) ಈಗಾಗಲೆ ಎಲ್ಲಾ ಕಡೆ ಸಮೀಕ್ಷೆಯು ಪ್ರಾರಂಭವಾಗಿದ್ದು, ಸಾರ್ವಜನಿಕರೂ ಮನೆಯಿಂದಲೇ ನಿಮ್ಮ ಮೊಬೈಲ್ ಮೂಲಕವೇ ಸುಲಭವಾಗಿ ಜಾತಿಗಣತಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ವ್ಯವಸ್ಥೆಯನ್ನು ಸರ್ಕಾರವು ಪ್ರಾಂರಭ ಮಾಡಿ ವೆಬ್ಸೈಟ್ ಲಿಂಕ್ ಬಿಡುಗಡೆ ಮಾಡಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಸರ್ಕಾರವು ನಾಗರಿಕರಿಗೆ ಹೆಚ್ಚು ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಜಾತಿಗಣತಿ ಸಮೀಕ್ಷೆಯನ್ನು ಮೊಬೈಲ್(caste census mobile app)ಮೂಲಕ ಮಾಡಲು ಅವಕಾಶ ನೀಡಿದ್ದು, ಸರ್ಕಾರ ನೂತನ ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಿದ್ದು, ಯಾವುದೇ ಕಚೇರಿಗಳಿಗೂ ಭೇಟಿ ಮಾಡದೆ ಮನೆಯಲ್ಲಿ ಕುಳಿತು ವೆಬ್ಸೈಟ್ ಲಿಂಕ್ ಬಳಸಿ ಮಾಹಿತಿ ನಮೂದಿಸಬಹುದು.
ಇದನ್ನೂ ಓದಿ: Azim Premji Foundation-ಅಜೀಂ ಪ್ರೇಮ್ಜಿ ಫೌಂಡೇಶನ್ ವತಿಯಿಂದ ₹30,000 ಸ್ಕಾಲರ್ಶಿಪ್ ಪಡೆಯಲು ಅರ್ಜಿ!
ಈ ಲೇಖನದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲೇ ಸಮೀಕ್ಷೆಯನ್ನು ಮಾಡುವುದು ಹೇಗೆ? ಸಮೀಕ್ಷೆಯನ್ನು ಮಾಡಲು ಯಾವೆಲ್ಲ ದಾಖಲೆಗಳು ಅವಶ್ಯಕ? ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
Last Date For Survey-ಸಮೀಕ್ಷೆಯನ್ನು ಮಾಡಲು ಕೊನೆಯ ದಿನಾಂಕ:
ಜಾತಿಗಣತಿ ಸಮೀಕ್ಷೆಯನ್ನು ಮಾಡಲು ಕೊನೆಯ ದಿನಾಂಕ: 07 ಅಕ್ಟೋಬರ್ 2025
ಈ ಜಾತಿಗಣತಿ ಸಮೀಕ್ಷೆಯನ್ನು ಮಾಡುವುದ ಮಹತ್ವವೇನು?
ಜಾತಿಗಣತಿ ಸಮೀಕ್ಷೆ ಮೂಲಕ ಸಮಾಜದ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಬಹುದು. ಯಾವ ಜಾತಿ/ವರ್ಗದ ಜನರಿಗೆ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಸಾಮಾಜಿಕ ಸೌಲಭ್ಯಗಳು ತಲುಪುತ್ತಿವೆ ಹಾಗೂ ತಲುಪುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರಿಂದ ಭವಿಷ್ಯದ ನೀತಿಗಳನ್ನು ರೂಪಿಸಲು ಸರ್ಕಾರಕ್ಕೆ ಸಹಾಯವಾಗುತ್ತದೆ.
ಇದನ್ನೂ ಓದಿ: Udyogini Scheme-ಸ್ವಂತ ವ್ಯವಹಾರ ಆರಂಭಿಸಲು ಉದ್ಯೋಗಿನಿ ಯೋಜನೆಯಡಿ ಸಾಲ ಪಡೆಯಲು ಅರ್ಜಿ!
Documents-ಸಮೀಕ್ಷೆಯನ್ನು ಮಾಡಲು ಅವಶ್ಯಕ ದಾಖಲಾತಿಗಳಾವುವು?
ಜಾತಿಗಣತಿ ಸಮೀಕ್ಷೆಯನ್ನು ಮಾಡಲು ಈ ಕೆಳಗೆ ತಿಳಿಸಿರುವ ದಾಖಲಾತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.
ಆಧಾರ್ ಕಾರ್ಡ/Aadhar Card
ರೇಶನ್ ಕಾರ್ಡ/Ration Card
ಮನೆಯ ಸದಸ್ಯರ ಆಧಾರ್ ಕಾರ್ಡ/Aadhar card of family members
ಮೊಬೈಲ್ ನಂಬರ್/Mobile Number
ಇದನ್ನೂ ಓದಿ: IDFC First Bank Scholarship-IDFC First ಬ್ಯಾಂಕ್ ನಿಂದ ₹1ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

ಇದನ್ನೂ ಓದಿ: Solar Power Subsidy-ಸೋಲಾರ್ ಪವರ್ ಜನರೇಟರ್ ಅಳವಡಿಕೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
Caste Survey Online Process Link-ಮೊಬೈಲ್ ನಲ್ಲಿ ಜಾತಿಗಣತಿ ಸಮೀಕ್ಷೆ ಮಾಡುವುದು ಹೇಗೆ?
Step-1: ಮೊದಲು ಈ ಲಿಂಕ್ ಮೇಲೆ “Click Here” ಕ್ಲಿಕ್ ಮಾಡಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
Step-2: ನಂತರ ಅದೇ ಪೇಜ್ ನಲ್ಲಿ ಕಾಣುವ ಸುದ್ದಿ ಮತ್ತು ಘಟನೆಗಳು ಕಾಲಂ ನಲ್ಲಿ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾಗರಿಕರು ಸ್ವಇಚ್ಚೆಯಿಂದ ಪಾಲ್ಗೊಳ್ಳುವ ಲಿಂಕ್” ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
Step-3: ತದನಂತರ ಅಲ್ಲಿ ಎರಡು ಆಯ್ಕೆಗಳು ಕಾಣಿಸುತ್ತವೆ ಸಮೀಕ್ಷೆದಾರ / Enumerator ಮತ್ತು ನಾಗರಿಕ / Citizen ಈ ಎರಡು ಆಯ್ಕೆಯಲ್ಲಿ “ನಾಗರಿಕ / Citizen” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ: Scholorship Application-DXC ಟೆಕ್ನಾಲಜಿಯ ವತಿಯಿಂದ ₹50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Step-4: ಬಳಿಕ ಇಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ OTP ಅನ್ನು ನಮೂದಿಸಿದರೆ ಅಧಿಕೃತ ಅರ್ಜಿ ನಮೂನೆ ಒಪನ್ ಆಗುತ್ತದೆ. ಇಲ್ಲಿ ಕೇಳಿರುವ ಅಗತ್ಯವಿರುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಪೂರ್ಣಗೊಳ್ಳುತ್ತದೆ.