ಪರಿಶಿಷ್ಟ ಜಾತಿಯವರ ಆರ್ಥಿಕ ಅಭಿವೃದ್ದಿಗಾಗಿ ಕಲ್ಯಾಣ ಯೋಜನೆಗಳು 2025-2026 ನೇ (Vehicle subsidy application)ಸಾಲಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಉದ್ಯಮಶೀಲತಾ ಅಭಿವೃದ್ದಿ ಯೋಜನೆಯ ಸಹಯೋಗದಲ್ಲಿ ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ವಾಹನ/ಟ್ಯಾಕ್ಸಿ ಖರೀದಿಗೆ ಘಟಕದ ವೆಚ್ಚದ ಶೇ.75 ರಷ್ಟು ಅಥವಾ ಗರಿಷ್ಟ ರೂ. 4.00 ಲಕ್ಷ ಸಹಾಯಧನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯಡಿ ಯುವಕ-ಯುವತಿಯರಿಗೆ(Government vehicle scheme)ಸ್ವಯಂ ಉದ್ಯೋಗದ ಅವಕಾಶ ಕಲ್ಪಿಸುವ ಉದ್ದೇಶದಿಂದ ಸ್ವಾವಲಂಬಿ ಸಾರಥಿ ಯೋಜನೆಯನ್ನು ಜಾರಿಗೆ ತಂದಿದ್ದು, ನಿರುದ್ಯೋಗಿ ಯುವಕರಿಗೆ ಆರ್ಥಿಕ ಸ್ವಾವಲಂಬನೆ ಮತ್ತು ಸ್ಥಿರ ಜೀವನದ ಗುರಿಯನ್ನು ಸಾಧಿಸಲು ಸಹಾಯ ಮಾಡುವ ಒಂದು ಪ್ರಮುಖ ಯೋಜನೆಯಾಗಿದೆ.
ಇದನ್ನೂ ಓದಿ: BSF constable requirement 2025-SSLC ಅಥವಾ ITI ಪಾಸಾದವರು ಕೂಡ ಅರ್ಜಿ ಹಾಕಬಹುದು!
ಈ ಯೋಜನೆಯಡಿ, ಸರಕು ಸಾಗಾಣಿಕೆ ವಾಹನ, ಟ್ಯಾಕ್ಸಿ, ಅಥವಾ ಹಳದಿ ಬೋರ್ಡ್ ವಾಹನಗಳ ಖರೀದಿಗೆ ಗರಿಷ್ಠ ರೂ. 4.00 ಲಕ್ಷದವರೆಗೆ ಸಹಾಯಧನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದ ಒಳಗಾಗಿ ಅರ್ಜಿಯನ್ನು ಸಲ್ಲಿಸಲು ಕೋರಿದೆ.
ಪ್ರಸ್ತುತ ಈ ಲೇಖನದಲ್ಲಿ ಸಬ್ಸಿಡಿಯನ್ನು ಪಡೆಯಲು ಯಾರು ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಈ ಯೋಜನೆ ಜಾರಿಗೆ ತರಲು ಉದ್ದೇಶವೇನು? ಅರ್ಜಯನ್ನು ಹೇಗೆ ಸಲ್ಲಿಸಬೇಕು? ಇತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಈ ಯೋಜನೆಯಡಿ ಯಾವೆಲ್ಲ ವಾಹನಗಳನ್ನು ಖರೀದಿಸಬಹುದು?
ಈ ಯೋಜನೆಯಡಿ ಕೆಳಗಿನ ವಾಹನಗಳನ್ನು ಸಬ್ಸಿಡಿಯೊಂದಿಗೆ ಕೆಳಗೆ ತಿಳಿಸಿರುವ ವಾಹನ ಖರೀದಿಸಬಹುದು:
ಟ್ಯಾಕ್ಸಿ
ಸರಕು ಸಾಗಾಣಿಕೆ ವಾಹನ
ನಾಲ್ಕು ಚಕ್ರದ ವಾಹನ
ಆಟೋ ರಿಕ್ಷಾ
Last Date To Apply-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 10-09-2025
ಇದನ್ನೂ ಓದಿ: Scholorship Application-SSLC-PUC ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಈಗಲೇ ಅರ್ಜಿ ಹಾಕಿ!
Who Can Apply This Scheme-ಯೋಜನೆಯಡಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು?
- ಸ್ವಾವಲಂಬಿ ಸಾರಥಿ ಯೋಜನೆಯಡಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಅರ್ಜಿದಾರ ಅಭ್ಯರ್ಥಿಯು ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿರಬೇಕು.
- ಅಭ್ಯರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.
- ಅರ್ಜಿದಾರರ ವಯಸ್ಸು ಕನಿಷ್ಟ 21 ರಿಂದ 60 ವರ್ಷ ಮೀರಿರಬಾರದು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ ರೂ. 1,50,000/- ಮೀರಿರಬಾರದು.
- ನಗರ ಪ್ರದೇಶದವರಿಗೆ ರೂ. 2,00,000/- ಮಿತಿಯೊಳಗಿರಬೇಕು.
- ಅರ್ಜಿದಾರರು ಲಘು ವಾಹನದ ಚಾಲನಾ ಪರವಾನಗಿ (Driving License) ಕಡ್ಡಾಯವಾಗಿ ಹೊಂದಿರಬೇಕು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ಉದ್ಯೋಗವನ್ನು ಹೊಂದಿರಬೇಕು.
- ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಯಾವುದೇ ಇಲಾಖೆ/ನಿಗಮದಿಂದ ಸೌಲಭ್ಯ ಪಡೆದಿರಬಾರದು.
ಇದನ್ನೂ ಓದಿ: Cattle Subsidy scheme-ಹಸು-ಎಮ್ಮೆ ಖರೀದಿ ಮಾಡಲು ಶೇ 50 ರಷ್ಟು ಸಹಾಯಧನಕ್ಕೆ ಅರ್ಜಿ!
Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?
- ಆಧಾರ್ ಕಾರ್ಡ್/Aadhar Card
- ಬ್ಯಾಂಕ್ ಪಾಸ್‌ಬುಕ್/Bank Passbook
- ಜಾತಿ ಪ್ರಮಾಣ ಪತ್ರ/Caste Certificate
- ಆದಾಯ ಪ್ರಮಾಣ ಪತ್ರ/Income Certificate
- ಡ್ರೈವಿಂಗ್ ಲೈಸೆನ್ಸ್/Driving licence
- ರೇಶನ್ ಕಾರ್ಡ್/Ration Card
- ಇತ್ತೀಚಿನ ಫೋಟೋ/Photocopy
- ಮೊಬೈಲ್ ಸಂಖ್ಯೆ/Mobile Number
ಇದನ್ನೂ ಓದಿ: Police Constable Training-ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ!
Where To Apply-ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ನಿಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳಿಗೆ ನೇರವಾಗಿ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸೇವಾಸಿಂಧು ಪೋರ್ಟಲ್ ಗೆ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Online Application Process-ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
Step-1: ಮೊದಲಿಗೆ ಈ ಲಿಂಕ್ ಮೇಲೆ Apply Now ಕ್ಲಿಕ್ ಮಾಡಿ ಅಧಿಕೃತ ಸೇವಾಸಿಂಧು ಪೋರ್ಟಲ್ ಗೆ ಭೇಟಿ ಮಾಡಬೇಕು.
ಇದನ್ನೂ ಓದಿ: Land Ownership Scheme-ಭೂಮಿ ಖರೀದಿಸಲು 25 ಲಕ್ಷ ರೂ ಸಹಾಯಧನ! ಇಲ್ಲಿದೆ ಸಂಪೂರ್ಣ ಮಾಹಿತಿ!
ಇದನ್ನೂ ಓದಿ: PM Kisan Amount-ಪಿಎಂ ಕಿಸಾನ್ ಯೋಜನೆಯ 20 ನೇ ಕಂತಿನ ಹಣ ನಿಮ್ಮ ಖಾತೆಗೆ ಬಂದಿದೆಯಾ? ಚೆಕ್ ಮಾಡಿ!
Step-2: ವೆಬ್ಸೈಟ್ ಗೆ ಭೇಟಿ ಮಾಡಿದ ನಂತರ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ಹಾಕಿ ಲಾಗಿನ್ ಮಾಡಬೇಕು. ಲಾಗಿನ್ ಆದ ನಂತರ “ಅರ್ಜಿ ಸಲ್ಲಿಸಿ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
Step-3: ನಂತರ ಪುಟದಲ್ಲಿ ಕಾಣುವ “ಸಮಾಜ ಕಲ್ಯಾಣ ಇಲಾಖೆ” ವಿಭಾಗದಲ್ಲಿ “ಸ್ವಾವಲಂಬಿ ಸಾರಥಿ ಯೋಜನೆ” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಅಗತ್ಯ ಇರುವ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಪೋಡ್ ಮಾಡಬೇಕು.
Step-4: ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ ಕ್ಯಾಪ್ಚಾ ಕೋಡ್ ನಮೂದಿಸಿ “ಸಲ್ಲಿಸು” ಬಟನ್ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ: PMSBY Scheme-ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ವರ್ಷಕ್ಕೆ ₹12 ರೂ ಗೆ ₹2 ಲಕ್ಷ ವಿಮೆ!
More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Read More
ಸಹಾಯವಾಣಿ: 9482300400