ಕರ್ನಾಟಕ ಸರ್ಕಾರವು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಗಂಗಾ ಕಲ್ಯಾಣ ಯೋಜನೆಯ(Ganga Kalyana Yojana Application) ಅಡಿಯಲ್ಲಿ ಪರಿಶಿಷ್ಟ ಜಾತಿಯ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಆಯಾ ನಿಗಮಗಳ ಅಡಿಯಲ್ಲಿ ಕೊಳವೆಬಾವಿ ಕೊರೆಸಿ ಪಂಪ್ ಸೆಟ್ ಅಳವಡಿಸಿ, ವಿದ್ಯುದ್ದೀಕರಣಗೊಳಿಸುವ ಮೂಲಕ ನೀರಾವರಿ ಸೌಲಭ್ಯ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಸ್ತುತ ಈ ಅಂಕಣದಲ್ಲಿ ಸಹಾಯಧನವನ್ನು ಪಡೆಯಲು ಅರ್ಜಿಯನ್ನು(Borewell Subsidy Scheme)ಯಾರೆಲ್ಲ ಸಲ್ಲಿಸಲು ಅವಕಾಶವಿರುತ್ತದೆ? ಅರ್ಜಿಯನ್ನು ಸಲ್ಲಿಸುವ ಹಂತಗಳಾವುವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಅರ್ಜಿಯನ್ನು ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಇನ್ನಿತರ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: LIC Recruitment 2025-LIC ಯಲ್ಲಿ ಸರ್ಕಾರಿ ಉದ್ಯೋಗಕ್ಕೆ ಅವಕಾಶ! ಬರೋಬ್ಬರಿ 841 ಹುದ್ದೆಗಳಿಗೆ ಅರ್ಜಿ ಆಹ್ವಾನ!
Last Date For Application-ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಸೆಪ್ಟೆಂಬರ್ 2025
Subsidy Amount-ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ನೀಡಲಾಗುತ್ತದೆ?
ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಭಾವಿ ಕೊರೆಯಲು, ಪಂಪ್ ಸೆಟ್ ಅಳವಡಿಕೆ ಮತ್ತು ವಿದ್ಯುದ್ದೀಕರಣಕ್ಕಾಗಿ ಸಹಾಯಧನವನ್ನು ಒದಗಿಸಲಾಗುತ್ತದೆ. ಸಹಾಯಧನದ ವಿವರಗಳು ಈ ಕೆಳಗಿನಂತಿವೆ:
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು (ಗ್ರಾಮೀಣ/ನಗರ), ತುಮಕೂರು, ರಾಮನಗರ ಜಿಲ್ಲೆಗಳು:
ಘಟಕ ವೆಚ್ಚ: ರೂ. 4.75 ಲಕ್ಷ
ಸಹಾಯಧನ: ರೂ. 4.25 ಲಕ್ಷ
ಅವಧಿ ಸಾಲ: ರೂ. 50,000
ಇತರ ಜಿಲ್ಲೆಗಳು:
ಘಟಕ ವೆಚ್ಚ: ರೂ. 3.75 ಲಕ್ಷ
ಸಹಾಯಧನ: ರೂ. 3.25 ಲಕ್ಷ
ಅವಧಿ ಸಾಲ: ರೂ. 50,000
ಪ್ರತಿ ಕೊಳವೆ ಭಾವಿಗೆ ವಿದ್ಯುದ್ದೀಕರಣಕ್ಕಾಗಿ ರೂ. 75,000 ಸಹಾಯಧನವನ್ನು ಸಂಬಂಧಿತ ಎಸ್ಕಾಂಗೆ ಬಿಡುಗಡೆ ಮಾಡಲಾಗುತ್ತದೆ.
ಇದನ್ನೂ ಓದಿ: Mobile kitchen Subsidy-ಮೊಬೈಲ್ ಕಿಚನ್ ಪ್ರಾರಂಭಿಸಲು ₹4.0 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Who Can Apply This Scheme-ಬೋರ್ವೆಲ್ ಕೊರೆಸಲು ಯಾರೆಲ್ಲ ಅರ್ಹರು?
ಸಮಾಜ ಕಲ್ಯಾಣ ಇಲಾಖೆಯಡಿ ಅರ್ಹ ಫಲಾನುಭವಿಗಳು ಬೋರ್ವೆಲ್ ಅನ್ನು ಕೊರೆಸಲು ಕೆಳಗೆ ತಿಳಿಸಿರುವ ಅರ್ಹತೆಗಳನ್ನು ಹೊಂದಿರಬೇಕು:
- ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅಭ್ಯರ್ಥಿಯು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ಕಳೆದ ವರ್ಷ ಈ ಯೋಜನೆಯ ಅಡಿಯಲ್ಲಿ ಸಬ್ಸಿಡಿಯನ್ನು ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹರಿರುವುದಿಲ್ಲ.
- ಅಭ್ಯರ್ಥಿಯು 1.20 ರಿಂದ 5.00 ಎಕರೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿಸಣ್ಣ ರೈತರು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಅರ್ಜಿದಾರ ವಯಸ್ಸು ಕನಿಷ್ಠ 21 ವರ್ಷಗಳು ಪೂರ್ಣಗೊಂಡಿರಬೇಕು.
- ಅರ್ಜಿದಾರರ ಹಾಗೂ ಕುಟುಂಬದ ಯಾವುದೇ ಸದಸ್ಯರು, ಸರ್ಕಾರಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರಬಾರದು.
- ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಭಾಗದಲ್ಲಿರುವವರಿಗೆ ರೂ 1.5 ಲಕ್ಷ ಮೀರಿರಬಾರದು.
- ನಗರ ಪ್ರದೇಶದಲ್ಲಿರುವವರಿಗೆ ರೂ 2.00 ಲಕ್ಷ ಮೀರಿರಬಾರದು.
- ಒಂದು ವೇಳೆ ಅರ್ಜಿದಾರರು ವಿಕಲಚೇತನರಾಗಿದ್ದಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ಪ್ರಮಾಣ ಪತ್ರ ಸಲ್ಲಿಸಬೇಕು.
ಇದನ್ನೂ ಓದಿ: Muskaan Scholarship-ಮುಸ್ಕಾನ್ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ!
Required Documents-ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳಾವುವು?
- ರೈತರ ಆಧಾರ್ ಕಾರ್ಡ್/Adhar Card
- ಜಾತಿ ಪ್ರಮಾಣಪತ್ರ/Caste Certificate
- ಆದಾಯ ಪ್ರಮಾಣಪತ್ರ/Income Certificate
- ರೇಷನ್ ಕಾರ್ಡ/Ration Card
- ವೋಟರ್ ಐಡಿ/Voter ID
- ಹಿಡುವಳಿ ಪ್ರಮಾಣ ಪತ್ರ/Tenancy Certificate
- ಪಹಣಿ/RTC
- ಅಂಗವಿಕಲ ಪ್ರಮಾಣ ಪತ್ರ(ಅಗತ್ಯವಿದ್ದಲ್ಲಿ)/Disability certificate
- ಪೋಟೋ/Photo copy
- ಮೊಬೈಲ್ ನಂಬರ್/Mobile Number
ಇದನ್ನೂ ಓದಿ: Free Health Checkup-ಬಿಪಿಎಲ್ ಕಾರ್ಡದಾರರಿಗೆ ಗುಡ್ ನ್ಯೂಸ್!ರಾಜ್ಯ ಸರ್ಕಾರದಿಂದ ಉಚಿತ ಯೋಜನೆ ಪ್ರಕಟ!
How To Apply For This Scheme- ಈ ಯೋಜನೆಯಡಿ ಸಹಾಯಧನ ಪಡೆಯಲು ಹೇಗೆ ಅರ್ಜಿ ಸಲ್ಲಿಸಬೇಕು?
Step-1: ಅರ್ಜಿ ಸಲ್ಲಿಸುವ್ ಅರ್ಹ ಫಲಾನುಭವಿಗಳು ಮೊದಲು ಈ ಲಿಂಕ್ ಮೇಲೆ “Online Application” ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ನ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.
Step-2: ತದನಂತರ ಈ ಪೇಜ್ ನಲ್ಲಿ “ಇಲಾಖೆಗಳು ಮತ್ತು ಸೇವೆ/Departments and Service” ಬಟನ್ ಮೇಲೆ ಕ್ಲಿಕ್ ಮಾಡಿ ಬಲಬದಿಯಲ್ಲಿ ಕಾಣುವ ಸರ್ವ್ ಕಾಲಂ ನಲ್ಲಿ “ಗಂಗಾ ಕಲ್ಯಾಣ ಯೋಜನೆ” ಎಂದು ಸರ್ವ್ ಮಾಡಿದರೆ ಅರ್ಜಿ ನಮೂನೆ ಓಪನ್ ಆಗುತ್ತದೆ. ನಂತರ ಆ ಬಟನ್ ಮೇಲೆ ಕ್ಲಿಕ್ ಮಾಡಿ “ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ” ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
Step-3: ನಂತರ ಅರ್ಜಿದಾರರ ID ಮತ್ತು Password ಅನ್ನು ಹಾಕಿ ಲಾಗಿನ್ ಅಗಿ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.
ಇದನ್ನೂ ಓದಿ: Ambedkar Nigam subsidy-ಅಂಬೇಡ್ಕರ್ ನಿಗಮದಿಂದ ತರಕಾರಿ ಮಾರಾಟ ಮಳಿಗೆ ತೆರೆಯಲು ₹50,000 ಸಬ್ಸಿಡಿ!
Ganga Kalyana-ಗಂಗಾ ಕಲ್ಯಾಣ ಇಲಾಖೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Read Now