Sunday, June 15, 2025
No menu items!
HomeAgricultureBorewell Subsidy-₹4.25 ಲಕ್ಷ ಸಬ್ಸಿಡಿಯಲ್ಲಿ ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ಅರ್ಜಿ!

Borewell Subsidy-₹4.25 ಲಕ್ಷ ಸಬ್ಸಿಡಿಯಲ್ಲಿ ಲಿಂಗಾಯತ ನಿಗಮದಿಂದ ಬೋರ್ವೆಲ್ ಕೊರೆಸಲು ಅರ್ಜಿ!

2024-2025 ನೇ ಸಾಲಿನಲ್ಲಿ ಕಾರ್ಯರೂಪಕ್ಕೆ ತಂದಿರುವ ಜೀವಜಲ ಯೋಜನೆಯ ಅಡಿಯಲ್ಲಿ ಕರ್ನಾಟಕ ವೀರಶೈವ ಲಿಂಗಾಯುತ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ಉಚಿತವಾಗಿ ಬೋರ್ ವೆಲ್(Borewell Grant)ಕೊರೆಸಲು ಅರ್ಹ ರೈತರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಕೃಷಿಕರಿಗೆ ಕೃಷಿಯಲ್ಲಿ ನೀರಿನ ಅತ್ಯಂತ ಪ್ರಾಮುಖ್ಯತೆಯನ್ನು ಹೊಂದಿದ್ದು, ಕೃಷಿಯು ಮಳೆಗೆ ಅವಲಂಬಿತವಾಗಿದ್ದು,ಜಲಸಂಪತ್ತಿನ ಉತ್ತಮ ಬಳಕೆಯೊಂದಿಗೆ ಇತ್ತೀಚೆಗಿನ ತಂತ್ರಜ್ಞಾನಗಳು ಕೃಷಿಕರಿಗೆ ಸಹಾಯ ಮಾಡುತ್ತಿದ್ದು,ಇಂತಹ ಸಂದರ್ಭದಲ್ಲಿ ನೀರುವ ಅವಶ್ಯಕತೆ ಹೆಚ್ಚಿರುತ್ತದೆ.ಇದರ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಲಿಂಗಾಯತ ಅಭಿವೃದ್ಧಿ(Lingayat Nigama Yojane)ನಿಗಮವು ಲಿಂಗಾಯತ ಸಮುದಾಯದ ರೈತರಿಗಾಗಿ ಮಹತ್ವದ ಯೋಜನೆಯನ್ನು ಘೋಷಣೆ ಮಾಡಿದ್ದು,ಬೋರ್ವೆಲ್ ಕೊರೆಸಲು ₹4.25 ಲಕ್ಷವರೆಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ.

ಇದನ್ನೂ ಓದಿ: Gruhalakshmi Yojana-ಗೃಹಲಕ್ಷ್ಮಿ 20ನೇ ಕಂತಿನ ಹಣ ಬಿಡುಗಡೆ!ಮೊಬೈಲ್ ನಲ್ಲೇ ಜಮಾ ವಿವರ ತಿಳಿಯಿರಿ!

ಈ ಯೋಜನೆಯ ಮೂಲ ಉದ್ದೇಶ ನೀರಿನ ಸೌಲಭ್ಯವಿಲ್ಲದ ಕೃಷಿಕರಿಗೆ ತಮ್ಮ ಭೂಮಿಯಲ್ಲಿ ನೀರಿನ ಮೂಲವನ್ನು ಒದಗಿಸಿ, ಹೊಲದಲ್ಲಿ ನಿರಂತರ ಕೃಷಿ ಚಟುವಟಿಕೆಗಳನ್ನು ನಡೆಸಲು ಸಹಾಯಕಾರಿಯಾಗಿದೆ. ಬೋರ್ವೆಲ್ ಕೊರೆಸುವ ಜೊತೆಗೆ ಪಂಪ್‌ಸೆಟ್ ಮತ್ತು ಪೈಪ್ ಲೈನ್ ವ್ಯವಸ್ಥೆಗಳಿಗೂ ಸಹ ಅನುದಾನದಲ್ಲಿ ಲಭ್ಯವಿರುತ್ತದೆ.

ಪ್ರಸ್ತುತ ಈ ಅಂಕಣದಲ್ಲಿ ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ನೀಡಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ಯಾರೆಲ್ಲ ಅರ್ಜಿಯನ್ನು ಸಲ್ಲಿಸಲು ಅರ್ಹರು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಎಲ್ಲಿ ಅರ್ಜಿಯನ್ನು ಸಲ್ಲಿಸಬೇಕು? ಇದಕ್ಕೆ ಸಂಭದಿಸಿದ ದಾಖಲೆಗಳಾವುವು? ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Car Subsidy- ಕಾರು ಖರೀದಿ ಮಾಡಲು ಶೇ.50% ಸಬ್ಸಿಡಿಯಲ್ಲಿ ಅರ್ಜಿ ಆಹ್ವಾನ!

Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 31-07-2025

How Can Apply- ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು:

  • ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅರ್ಜಿದಾರರಿಗೆ ಕನಿಷ್ಟ 18 ವರ್ಷಗಳಾಗಿರಬೇಕು.
  • ಅರ್ಜಿದಾರರು ವೀರಶೈವ-ಲಿಂಗಾಯತ ಅಂದರೆ 3B ವರ್ಗಕ್ಕೆ ಸೇರಿದವರಾಗಿರಬೇಕು.
  • ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಗ್ರಾಮಾಂತರ ಪ್ರದೇಶದಲ್ಲಿರುವವರಿಗೆ ₹98,000/- ರೂಪಾಯಿಗಳು.
  • ಒಂದು ವೇಳೆ ಅರ್ಜಿದಾರರು ನಗರ ಪ್ರದೇಶದಲ್ಲಿದ್ದರೆ ₹1,20,000/- ಮಿತಿಯ ಒಳಗಿರಬೇಕು.
  • ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.
  • ಈಗಾಗಲೆ ಹಿಂದಿನ ವರ್ಷ ಯೋಜನೆಯ ಸವಲತ್ತನ್ನು ಪಡೆದವರಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: MSP Price list-2025: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಕೇಂದ್ರದಿಂದ 14 ಬೆಳೆಗಳ ಬೆಂಬಲ ಬೆಲೆ ಏರಿಕೆ!

Required Documents -ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಅರ್ಜಿದಾರರ ಆಧಾರ್ ಕಾರ್ಡ/Aadhar
ಜಮೀನಿನ ಪಹಣಿ/RTC
ಬೆಳೆ ದೃಡೀಕರಣ ಪ್ರಮಾಣ ಪತ್ರ/Crop Information
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ ಬುಕ್/Bank Pass Book
ಪೋಟೋ/3 Photo

Subsidy Amount-ಜಿಲ್ಲಾವಾರು ವೆಚ್ಚ ಮತ್ತು ಸಾಲದ ವಿವರಗಳು ಪ್ರಕಟಣೆಗಳು?

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು – ಈ 7 ಜಿಲ್ಲೆಗಳಿಗೆ ಒಟ್ಟು ರೂ. 4,75,000/- ರಷ್ಟು ಘಟಕ ವೆಚ್ಚವನ್ನು ನಿಗದಿ ಪಡಿಸಿದ್ದು, ಇದರಲ್ಲಿ:

ಇದನ್ನೂ ಓದಿ: Rain Forecast-ರಾಜ್ಯದಲ್ಲಿ ಈ ದಿನದಿಂದ ಮತ್ತೆ ಮುಂಗಾರು ಚುರುಕು ಸಾಧ್ಯತೆ!

1) ಬೋರ್ವೆಲ್ ಡ್ರಿಲ್ಲಿಂಗ್ ಮತ್ತು ಪಂಪ್ ಸೆಟ್‌ಗಾಗಿ: ₹3,50,000/-

2) ವಿದ್ಯುತ್ ಸಂಪರ್ಕ ಹಂತದ ವೆಚ್ಚ: ₹75,000/-

3) ಹೆಚ್ಚುವರಿಯಾಗಿ, ಶೇ.4 ಬಡ್ಡಿದರದೊಂದಿಗೆ ₹50,000/- ಸಾಲವನ್ನು ಸಹ ಒದಗಿಸಲಾಗುತ್ತದೆ.

ಇತರೆ 25 ಜಿಲ್ಲೆಗಳು ಅಂದರೆ ಮೇಲ್ಕಂಡ 7 ಜಿಲ್ಲೆಗಳನ್ನು ಹೊರತುಪಡಿಸಿ – ಈ ಜಿಲ್ಲೆಗಳಿಗಾಗಿ ಒಟ್ಟು ರೂ. 3,75,000/- ಘಟಕ ವೆಚ್ಚವನ್ನು ನಿಗದಿಪಡಿಸಲಾಗಿದೆ.

1) ಬೋರ್ವೆಲ್ ಡ್ರಿಲ್ಲಿಂಗ್ ಮತ್ತು ಪಂಪ್ ಸೆಟ್‌ಗಾಗಿ: ರೂ. 2,50,000/-

2) ವಿದ್ಯುತ್ ಸಂಪರ್ಕಕ್ಕೆ: ರೂ. 75,000/-

3) ಹಾಗೂ ಶೇ.4 ಬಡ್ಡಿದರದ ರೂ. 50,000/- ಸಾಲ ಸಹ ಲಭ್ಯವಿದೆ.

ಇದನ್ನೂ ಓದಿ: Free Tailoring Machine-ಉಚಿತ ಟೈಲರಿಂಗ್ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Where To Apply- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್‌ನ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಜೊತೆಗೆ, ತಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ಸಹಾಯದೊಂದಿಗೆ ಅರ್ಜಿ ಸಲ್ಲಿಸುವ ಅವಕಾಶವೂ ಸಹ ಇರುತ್ತದೆ.

ಇದನ್ನೂ ಓದಿ: Scholorship Application-ಮಿರೇ ಅಸೆಟ್ ಫೌಂಡೇಶನ್ ನಿಂದ ₹50,000 ಸ್ಕಾಲರ್‌ಶಿಪ್ ಪಡೆಯಲು ಅರ್ಜಿ!

How To Apply-ಅರ್ಜಿಯನ್ನು ಸಲ್ಲಿಸುವ ಹೇಗೆ?

Step-1: ಮೊದಲು ಈ ಲಿಂಕ್ Click Here ಮೇಲೆ ಕ್ಲಿಕ್ ಮಾಡಿ ಅಧಿಕೃತ ಸೇವಾ ಸಿಂಧು ಪೋರ್ಟಲ್ ತಂತ್ರಾಂಶವನ್ನು ಭೇಟಿ ಮಾಡಬೇಕು.

borewell subsidy application

Step-2: ನಂತರ ಈ ವೆಬ್ಸೈಟ್ ಗೆ ಮೊದಲ ಬಾರಿಗೆ ಭೇಟಿ ಮಾಡುತ್ತಿರುವವರು ಈ ಪೇಜ್ ನಲ್ಲಿ ಕಾಣುವ “Register Here” ಬಟನ್ ಮೇಲೆ ಕ್ಲಿಕ್ ಮಾಡಿ ಬಳಕೆದಾರ ಐಡಿಯನ್ನು ಸಕ್ರಿಯಗೊಳಿಸಬೇಕು. ನಂತರ ಬಳಕೆದಾರ ಐಡಿ ಮತು OTP ಅನ್ನು ನಮೂದಿಸಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅದರೆ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: Ration Card List-ಪರಿಷ್ಕೃತ ಅನರ್ಹ ರೇಷನ್ ಕಾರ್ಡ್‌ದಾರರ ಪಟ್ಟಿ ಬಿಡುಗಡೆ!

Step-3: ತದನಂತರ ಇಲ್ಲಿ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಗೆ ದಾಖಲಾತಿಗಳನ್ನು ಅಪ್ಲೋಡ್ ಮಾಡಿ “Submit” ಬಟನ್ ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ಸಲ್ಲಿಕೆಯು ಪೂರ್ಣಗೊಳ್ಳುತ್ತದೆ.

 

 

RELATED ARTICLES
- Advertisment -

Most Popular

Recent Comments