ರಾಜ್ಯ ಸರ್ಕಾರದ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ(Annabhagya amount) ಕುಟುಂಬಗಳಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಬದಲಿಗೆ ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮಾಡುವ ಮೂಲಕ ಕುಟುಂಬಗಳ ಆರ್ಥಿಕ ನೆರವಿಗೆ ಈ ಯೋಜನೆಯು ಸಹಾಯಕಾರಿಯಾಗಿದೆ.
“ಅನ್ನಭಾಗ್ಯ ಹಣ” ಈ ಯೋಜನೆ ಇದು ಸರ್ಕಾರದ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದ್ದು, ಬಡ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡುವುದ ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಆಹಾರ ಭದ್ರತೆಯನ್ನು ಒದಗಿಸುವುದಾಗಿದೆ.
ಇದನ್ನೂ ಓದಿ: Ayushman Bharat- ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಆಹ್ವಾನ! ಯಾರೆಲ್ಲಾ ಅರ್ಜಿ ಸಲ್ಲಿಸಬಹುದು!
ಅನ್ನಭಾಗ್ಯ ಯೋಜನೆಯಡಿ (Annabhagya DBT Status) ಫಲಾನುಭವಿಗಳಿಗೆ ಒದಗುವ ಹಣವನ್ನು ಜನವರಿ-2025 ರ ಕೊನೆಯ ವಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯ ಅಭ್ಯರ್ಥಿಗಳಿಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಜಮಾ ಮಾಡಲಾಗಿರುತ್ತದೆ ಎಂದು ತಿಳಿಸಲಾಗಿದೆ.
ಹೌದು ಇದೀಗ ಅನ್ನ ಭಾಗ್ಯ ಯೋಜನೆ (Annabhagya) ಈ ತಿಂಗಳ ಅಕ್ಕಿಯ ಹಣ ಬಿಡುಗಡೆ ಆಗಿದ್ದು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಡಿ ಲಿಂಕ್ ಬಿಡುಗಡೆ ಮಾಡಿದ್ದು ನಿಮ್ಮ ಮೊಬೈಲ್ ನಲ್ಲೆ ಚೆಕ್ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ.
ಇದನ್ನೂ ಓದಿ: Milk Rate- ಭರ್ಜರಿ ಗುಡ್ ನ್ಯೂಸ್! ಹಾಲಿನ ದರ ಹೆಚ್ಚಳ ಮಾಡಿದ KMF!
Annabhagya amount- ಅನ್ನಭಾಗ್ಯ ಯೋಜನೆಯಡಿ ಎಷ್ಟು ಅರ್ಥಿಕ ನೆರವು ನೀಡಲಾಗುತ್ತದೆ?
ರಾಜ್ಯ ಸರ್ಕಾರದ ಹೊಸ ಘೋಷಣೆಯ ಅನ್ವಯದಲ್ಲಿ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದ್ದು, ಇದರನ್ವಯ ಕೇವಲ 5 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಉಳಿದ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಕೆಜೆ ಅಕ್ಕಿಗೆ ₹34 ರೂ ರಂತೆ ಒಟ್ಟು ₹170 ರೂ ಹಣವನ್ನು ನೇರವಾಗಿ ಹಣವನ್ನು ಖಾತೆಗೆ ಜಮಾ ಮಾಡಲಗುತ್ತದೆ.
ಇದನ್ನೂ ಓದಿ: Ration shop- ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ!

Annabhagya DBT Status- ಅನ್ನಭಾಗ್ಯ ಯೋಜನೆಯ ಹಣ ಚೆಕ್ ಮಾಡುವ ವಿಧಾನ:
ರಾಜ್ಯ ಸರಕಾರದಿಂದ ಪ್ರತಿ ತಿಂಗಳು ನೇರವಾಗಿ ಹಣ ವರ್ಗಾವಣೆ ಮಾಡಿದ್ದು, ಅರ್ಹ ಪಡಿತರ ಚೀಟಿದಾರರಿಗೆ ಜಮಾ ಮಾಡುವ ಅಕ್ಕಿ ಹಣದ ವಿವರವನ್ನು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಮಾಹಿತಿಯನ್ನು ಚೆಕ್ ಮಾಡಬಹುದು.
Step-೧: ಮೊದಲು ಇಲ್ಲಿ ಕ್ಲಿಕ್ Annabhagya Status ಮಾಡಿ ಅಧಿಕೃತ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು Google Playstore ಗೆ ಭೇಟಿ ಮಾಡಿ Download ಮಾಡಬೇಕು.
Step-೨: ನಂತರ ಈ ಅಪ್ಲಿಕೇಶನ್ ಅನ್ನು ಒಪನ್ ಮಾಡಿ ಅರ್ಜಿದಾರರ 12 ಅಂಕಿಯ Aadhar card number ಅನ್ನು ಹಾಕಿ ನಿಮ್ಮ ಮೊಬೈಲ್ ನಂಬರ್ ಗೆ ಬರುವ OTP ಅನ್ನು ಹಾಕಿ ಬಳಕೆದಾರ ಐಡಿಯನ್ನು ನೊಂದಣಿ ಮಾಡಿಕೂಂಡು ಈ ಅಪ್ಲಿಕೇಶನ್ ಅನ್ನು Log in ಅಗಲು Password ಅನ್ನು ಸಿದ್ದ ಮಾಡಿಕೊಳ್ಳಿ.
ಇದನ್ನೂ ಓದಿ: LPG Gas- ಇಳಿಕೆಯತ್ತ LPG ಸಿಲಿಂಡರ್ ಬೆಲೆ! ಇಲ್ಲಿದೆ ಬೆಲೆ ವಿವರ!
Step-೩: ನಂತರ ಬಳಕೆದಾರ ID & Password ಅನ್ನು ರಚನೆ ಮಾಡಿಕೊಂಡ ನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ರಚನೆ ಮಾಡಿಕೊಂಡಿರುವ ಪಾಸ್ವರ್ಡ ಅನ್ನು ಹಾಕಿ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಲಾಗಿನ್ ಅಗಬೇಕು.
Step-೪: “Login” ಅದ ನಂತರ ಈ ಅಪ್ಲಿಕೇಶನ್ ಪುಟದ ಎಡಬದಿಯಲ್ಲಿ ಮೇಲೆ ಕಾಣುವ “ಪಾವತಿ ಸ್ಥಿತಿ” ಬಟನ್ ಮೇಲೆ ಕ್ಲಿಕ್ ಮಾಡಿ “ಅನ್ನಭಾಗ್ಯ ಯೋಜನೆ” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಜನವರಿ-2025 ತಿಂಗಳ ಅನ್ನಭಾಗ್ಯ ಹಣ ಜಮಾ ವಿವರ ಕಾಣಿಸುತ್ತದೆ.
ಇದನ್ನೂ ಓದಿ: e-shram card-ಇ-ಶ್ರಮ್ ಕಾರ್ಡ ಪಡೆಯುವುದು ಹೇಗೆ? ಇದರ ಪ್ರಯೋಜನಗಳೇನು?