Wednesday, December 11, 2024
HomeBlogFree cylinder Scheme- ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅವಕಾಶ! ಇಲ್ಲಿದೆ ಅರ್ಜಿ ಸಲ್ಲಿಸುವ...

Free cylinder Scheme- ಮಹಿಳೆಯರು ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅವಕಾಶ! ಇಲ್ಲಿದೆ ಅರ್ಜಿ ಸಲ್ಲಿಸುವ ವಿಧಾನ!

ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉಜ್ವಲ ಯೋಜನೆಯ(Ujjwala yojana) ಮೂಲಕ ಸಿಹಿ ಸುದ್ದಿಯನ್ನು ನೀಡಲಾಗಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಉಜ್ವಲ 2.0 ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಮತ್ತು ಸ್ಟವ್(Free cylinder Scheme application) ಹಾಗೂ 300 ರೂಪಾಯಿ ಗ್ಯಾಸ್ ಸಿಲಿಂಡರ್ ಖರೀದಿಗಾಗಿ ಸಬ್ಸಿಡಿ(Gas subsidy) ಹಣವನ್ನು ನೀಡಲಾಗುತ್ತಿದ್ದು ಪ್ರತಿಯೊಬ್ಬ ಮಹಿಳೆಯರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.

ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಅನ್ನು ಪಡೆಯುವ ಅವಕಾಶದಿಂದ ವಂಚಿತರಾಗಿರುವ B P L ಕಾರ್ಡ್ದಾರರಿಗೆ ಮತ್ತೆ ಸಂಪರ್ಕ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿದ್ದು. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಉಚಿತ L P G ಗ್ಯಾಸ್ ಸಿಲಿಂಡರ್ ವಿತರಣೆ ಮಾಡಲಾಗುತ್ತಿದ್ದು ಆಸಕ್ತಿ ಇರುವಂತಹ ಮಹಿಳೆಯರು ನೇರವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: SSP scholarship 2024-ವಿದ್ಯಾರ್ಥಿ ವೇತನ ಪಡೆಯಲು ಈ ಕೆಲಸ ಮಾಡುವುದು ಕಡ್ಡಾಯ!

ಈ ಯೋಜನೆ 2016 ರಲ್ಲಿ ಹಿಂದುಳಿದ ವರ್ಗದವರಿಗಾಗಿ ಮತ್ತು ಬಡವರಿಗೆ ಹಾಗೂ ಹಳ್ಳಿಗಳಲ್ಲಿ ವಾಸ ಮಾಡುತ್ತಿರುವ ಜನರಿಗಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಕೇಂದ್ರ ಸರ್ಕಾರ ಪರಿಚಯ ಮಾಡಿತ್ತು.ಈಗಾಗಲೇ ಪ್ರಧಾನಮಂತ್ರಿ ಉಜ್ವಲ್ ಯೋಜನೆ ಅಡಿ ದೇಶದಲ್ಲೇ ದೊಡ್ಡ ಸಂಖ್ಯೆ ಗ್ರಾಹಕರಿಗೆ ಅನಿಲ ಸಂಪರ್ಕವನ್ನು ಕಲ್ಪಿಸಲಾಗಿದ್ದು. ಆಸಕ್ತಿ ಇರುವಂತಹ ಮಹಿಳೆಯರು ಹಾಗೂ ಹೊಸದಾಗಿ ಮದುವೆಯಾದಂತಹ ಕುಟುಂಬಗಳು ಅರ್ಜಿಯನ್ನು ಸಲ್ಲಿಸಬಹುದು.

Free cylinder

Ujjwala scheme benefits-ಈ ಯೋಜನೆಯ ಲಾಭಗಳು:

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳಿಗೆ ಉಚಿತ LPG ಗ್ಯಾಸ್ ಸಿಲಿಂಡರ್ ಕನೆಕ್ಷನ್ ನೀಡಲಾಗುತ್ತದೆ ಹಾಗೆ ಜೊತೆಗೆ ಉಚಿತವಾಗಿ ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ನೀಡಲಾಗುತ್ತದೆ.

ಇದನ್ನೂ ಓದಿ: Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್!

Cylinder Subsidy amount-ಸಬ್ಸಿಡಿದಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್!

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದಂತ ಫಲಾನುಭವಿಗಳಿಗೆ ಪ್ರತಿ ತಿಂಗಳು LPG ಗ್ಯಾಸ್ ಸಿಲಿಂಡರ್ ದೊರೆಯುತ್ತಿದ್ದು. ಪ್ರಸ್ತುತವಾಗಿಯೇ ಕೇಂದ್ರ ಸರ್ಕಾರದಿಂದ ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು LPG ಗ್ಯಾಸ್ ಸಿಲಿಂಡರನ್ನು ಖರೀದಿಸಿದರೆ 300 ರೂಪಾಯಿಗಳು ಒಂದು ಎಲ್ಪಿಜಿ ಗ್ಯಾಸ್ ಸಿಲಿಂಡರಿಗೆ ಸಬ್ಸಿಡಿ ನೀಡಲಾಗುತ್ತದೆ.

Gas Cylinder Insurance-ಅಪಘಾತ ವಿಮೆ:-

ಈ ಒಂದು ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದಂತ ಫಲಾನುಭವಿಗಳು ಆಕಸ್ಮಿಕವಾಗಿ ಅಥವಾ ಯಾವುದೇ ಕಾರಣದಿಂದ ಸಿಲಿಂಡರ್ ಸ್ಫೋಟಗೊಂಡರೆ ಅಂತ ಸಂದರ್ಭದಲ್ಲಿ ಈ ಒಂದು ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ಅಪಘಾತ ವಿಮೆ ಸಿಗುತ್ತದೆ.

ಇದನ್ನೂ ಓದಿ: Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್!

Free cylinder Scheme

Who can apply for Free cylinder Scheme-ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು:

1 ) ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅರ್ಜಿದಾರರು ಅರ್ಜಿದಾರರಿಗೆ 18 ರ್ಷ ತುಂಬಿರಬೇಕು.

2) ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತ ಎಲ್ ಪಿ ಜಿ ಗ್ಯಾಸ್ ಸ್ಟವ್ ಪಡೆಯಲು ಬಯಸುವ ಅರ್ಜಿದಾರರು ಈ ಹಿಂದೆ ಯಾವುದೇ ಉಚಿತ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಅನ್ನು ಪಡೆದಿರಬಾರದು.

3) ಈ ಒಂದು ಯೋಜನೆಗೆ ಹೊಸದಾಗಿ ಮದುವೆಯಾದಂತಹ ಕುಟುಂಬಗಳು ಹಾಗೂ ರೇಷನ್ ಕಾರ್ಡ್ ಹೊಂದಿರುವವರು ಅರ್ಜಿಯನ್ನು ಸಲ್ಲಿಸಬಹುದು.

ಇದನ್ನೂ ಓದಿ: Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ!

Ujjwala yojana online application-ಅರ್ಜಿಯನ್ನು ಸಲ್ಲಿಸುವ ವಿಧಾನ:

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತ ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಯ ಕಚೇರಿಯನ್ನು ಕಚೇರಿ ಸಮಯದಲ್ಲಿ ನೇರವಾಗಿ ಭೇಟಿ ಮಾಡಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಅಧಿಕೃತ ವೆಬ್ಸೈಟ್: click here

RELATED ARTICLES
- Advertisment -
Google search engine

Most Popular

Recent Comments