ಈಗಾಗಲೇ ಚಳಿಗಾಲವು ಆರಂಭವಾಗಿದ್ದು ಬಹುತೇಕ ಜನರಿಗೆ ಈ ಸೀಸನ್ ತುಂಬಾ ಪ್ರಿಯವಾದದ್ದು,(winter season)ಇದೇ ರೀತಿ ಕೆಲವರಿಗೆ ಈ ಸೀಸನ್ ಎಂದರೆ ಕಷ್ಟಕರವಾದ ದಿನ ಏಕೆಂದರೆ ಈ ಸಮಯದಲ್ಲಿ ಚರ್ಮ ಮತ್ತು ಕೂದಲಿನ(Skin and hair fall)ಸಮಸ್ಯೆಗಳು ಸಾಕಷ್ಟು ಜನರನ್ನು ಕಾಡುತ್ತದೆ.
ಇನ್ನು ಹೇಳುವುದಾದರೆ ಚಳಿಗಾಲದಲ್ಲಿ ತ್ವಚೆ ಸಮಸ್ಯೆಯಿಂದ ಅನೇಕ ಜನರು ಬಳಲುತ್ತಿರುತ್ತಾರೆ. ಈ ಸೀಸನ್ ನಲ್ಲಿ ಬೀಸುವಂತಹ ತಣ್ಣನೆಯ ಗಾಳಿಯು ಚರ್ಮದಿಂದ ತೇವಾಂಶವನ್ನು ತೆಗೆದುಹಾಕಿ ಚರ್ಮವು ಒಣಗುವಂತೆ ಮಾಡುತ್ತದೆ ಇದರಿಂದ ಕೆಲವರಿಗೆ ತುರಿಕೆಯ ಸಮಸ್ಯೆಯು ಸಹ ಉಂಟಾಗುತ್ತದೆ.
ಇದನ್ನೂ ಓದಿ: Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
ಚಳಿಗಾಲದಲ್ಲಿ ಒಣ ತ್ವಚೆಯ ಸಮಸ್ಯೆ ನಿರ್ಮೂಲನೆ ಅಥವಾ ಚೇತರಿಸಿಕೊಳ್ಳಲು ಒಂದಿಷ್ಟು ಮನೆಮದ್ದುಗಳ ಮಾಹಿತಿ:
Bathing in lukewarm water-ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು:
ಚಳಿಗಾಲದಲ್ಲಿ ತುಂಬಾ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಆನಂದ ಕರವಾಗಿರಬಹುದು ಆದರೆ ಇದು ನಿಮ್ಮ ಚರ್ಮದಲ್ಲಿರುವ ಉಪಯುಕ್ತ ಆಯಿಲ್(oil) ಅಂಶವನ್ನು ತೆಗೆದು ಹಾಕುತ್ತದೆ ಮತ್ತು ಚರ್ಮಕ್ಕೆ ಇನ್ನಷ್ಟು ಹಾನಿಯನ್ನು ಉಂಟುಮಾಡುತ್ತದೆ ಆದ್ದರಿಂದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದರ ಬದಲು ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಬೇಕು.
ಇದನ್ನೂ ಓದಿ: Yashaswini yojana-ಯಶಸ್ವಿನಿ ಯೋಜನೆಯಡಿ 5 ಲಕ್ಷದ ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ! ರಾಜ್ಯ ಸರಕಾರದಿಂದ ಹೊಸ ಆದೇಶ ಪ್ರಕಟ!
Coconut oil-ತೆಂಗಿನ ಎಣ್ಣೆಯ ಬಳಕೆ:
ತೆಂಗಿನ ಎಣ್ಣೆಯು ಬಹು ಮುಖ್ಯವಾದ ಆರೋಗ್ಯಕರ ಉತ್ಪನ್ನವಾಗಿದೆ,ತೆಂಗಿನ ಎಣ್ಣೆಯು ಚರ್ಮವನ್ನು ತೇವಾಂಶದಿಂದ ಸುರಕ್ಷಿಸುತ್ತದೆ, ತೆಂಗಿನ ಎಣ್ಣೆಯಲ್ಲಿರುವ anti aging ಅಂಶವು ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಆದ್ದರಿಂದ ಸ್ನಾನ ಮಾಡುವ ಮುನ್ನ ಒಂದಿಷ್ಟು ತೆಂಗಿನ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಸ್ನಾನ ಮಾಡುವುದು ಉತ್ತಮ.
Honey and Milk Mask-ಜೇನುತುಪ್ಪ ಮತ್ತು ಹಾಲಿನ ಮಾಸ್ಕ್:
ಜೇನುತುಪ್ಪ ಮತ್ತು ಹಾಲು ಇವೆರಡು ನಮಗೆ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ. ಹಾಲು ಲ್ಯಾಕ್ಟಿಕ್(lactic)ಆಮ್ಲವನ್ನು ಹೊಂದಿದ್ದು ಚರ್ಮದ ಮೇಲಿನ ಡೆಡ್ ಸೆಲ್ಸ್(dead cells) ಗಳನ್ನು ತೆಗೆದು ಹಾಕಿ ಹೊಸ ಸೆಲ್ಸ್ ಗಳು ಉತ್ಪತ್ತಿಯಾಗಲು ಸಹಾಯ ಮಾಡುತ್ತದೆ. ಇದರಿಂದ ಚರ್ಮದ ತ್ವಚೆಯು ಒಳಪಾಗಿಸಲು ಸಹಾಯಮಾಡುತ್ತದೆ ಹಾಗೆಯೇ ಜೇನುತುಪ್ಪವು ಚರ್ಮದ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಜೇನುತುಪ್ಪ ಮತ್ತು ಹಾಲಿನ ಮಾಸ್ಕ್ ಅನ್ನು ಮುಖಕ್ಕೆ ಹಚ್ಚುವುದು.
ಇದನ್ನೂ ಓದಿ: Free cylinder scheme-ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!
ಜೇನುತುಪ್ಪ ಮತ್ತು ಹಾಲಿನ ಮಾಸ್ಕ್ ತಯಾರಿಸುವ ವಿಧಾನ :
ಒಂದು ಚಮಚ ಜೇನುತುಪ್ಪ ಮತ್ತು ಅರ್ಧ ಚಮಚ ಹಾಲಿನೊಂದಿಗೆ ಕಲಸಿಕೊಂಡು ಮುಖಕ್ಕೆ ಹಚ್ಚಬೇಕು ನಂತರ 15 ರಿಂದ 20 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಬೇಕು.
Rose Water and Glycerin-ರೋಜ್ ವಾಟರ್ ಮತ್ತು ಗ್ಲಿಸರಿನ್ :
ಚರ್ಮದ ತ್ವಚೆಯನ್ನು ನೈಸರ್ಗಿಕವಾಗಿಡಲು ರೋಸ್ ವಾಟರ್ ಮತ್ತು ಗ್ಲಿಸರಿನ್ ಮನೆ ಮದ್ದಾಗಿದೆ. ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚುವುದರಿಂದ ರಾತ್ರಿ ಬಿಡಿ ನಿಮ್ಮ ತ್ವಚೆಗೆ ಅಗತ್ಯವಿರುವ ತೇವಾಂಶವನ್ನು ನೀಡುತ್ತದೆ ರೋಜ್ anti inflammatory ಗುಣವನ್ನು ಹೊಂದಿದ್ದು ಚರ್ಮವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
Healthy Skin with Oil Ingredients-ಎಣ್ಣೆ ಪದಾರ್ಥಗಳಿಂದ ಆರೋಗ್ಯಕರ ಚರ್ಮ:
ಈ ದಿನಗಳಲ್ಲಿ ಎಣ್ಣೆಯಲ್ಲಿ ಕರೆದ ಪದಾರ್ಥಗಳು ಮತ್ತು ತೈಲ ಪದಾರ್ಥ ಹೆಚ್ಚಿರುವ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು. ಆದಷ್ಟು ಹಣ್ಣು ತರಕಾರಿಗಳನ್ನು ಹೆಚ್ಚಿನದಾಗಿ ಸೇವಿಸಬೇಕು.