ಕಾಲು ಸೆಳೆತದಿಂದ(leg cramps) ಬಳಲುತ್ತಿದ್ದೀರಾ? ಅಗಿದ್ದರೆ ತಪ್ಪದೇ ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಮನೆಯಲ್ಲೇ ಕಾಲು ಸೆಳೆತಕ್ಕೆ ಯಾವೆಲ್ಲ ಪರಿಹಾರ ಕ್ರಮಗಳನ್ನು ಅನುಸರಿಸಬಹುದು ಎಂದು ತಿಳಿದುಕೊಳ್ಳಿ.
ರಾತ್ರಿ ಹೊತ್ತು ಕಾಲುಗಳಲ್ಲಿ ಸೆಳೆತ ಕಾಣಿಸಿಕೊಳ್ಳುತ್ತಿದೆಯೇ ಈ ಕಾರಣದಿಂದಾಗಿ ನಿದ್ರೆಗೆ ಆಡಚಣೆ ಉಂಟಾಗುತ್ತಿದೆಯೇ? ಈ ಟಿಪ್ಸ್ ಅನ್ನು ಫಾಲೋ ಮಾಡುವುದರಿಂದ ನಿಮ್ಮ ಕಾಲು ಸೆಳೆತ ಕ್ಷಣಾರ್ಧದಲ್ಲಿ ನೋವು ಮಾಯವಾಗುತ್ತದೆ!
ದಿನವಿಡೀ ಓಡಾಡುವುದು ಅಥವಾ ದಿನಪೂರ್ತಿ ನಿಂತು ಕೆಲಸ ಮಾಡುವುದು(leg cramps home remedies) ಹಾಗೂ ಒಂದೇ ಕಡೆ ಕುಳಿತು ಕೆಲಸ ಮಾಡುವುದರಿಂದ ಕಾಲು ಸೆಳೆತ ಉಂಟಾಗುತ್ತದೆ. ದೈನಂದಿನ ಕೆಲಸದಲ್ಲಿ ತೊಡಗಿರುವವರಿಗೆ ಈ ನೋವುಗಳು ಸರ್ವೆ ಸಾಮಾನ್ಯವಾಗಿಬಿಟ್ಟಿರುತ್ತವೆ.
ಇದನ್ನೂ ಓದಿ: PM Kisan E-kyc list- ಪಿಎಂ ಕಿಸಾನ್ ಇ-ಕೆವೈಸಿ ಆಗದ 4.7 ಲಕ್ಷ ರೈತರ ಪಟ್ಟಿ ಬಿಡುಗಡೆ!
kalu novu mane maddu-ಈ ಮನೆ ಮದ್ದುಗಳು ನಿಮ್ಮ ಕಾಲು ನೋವನ್ನು ಹೋಗಲಾಡಿಸುತ್ತದೆ:
ಸಾಸಿವೆ ಎಣ್ಣೆ ಕಾಲು ನೋವಿನ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಸಾಸುವೆ ಎಣ್ಣೆಯನ್ನು ಉಗುರು ಬೆಚ್ಚಗೆ ಬಿಸಿ ಮಾಡಿ ನೋವು ಇರುವ ಜಾಗಕ್ಕೆ ಹಚ್ಚಿ ನಿಮ್ಮ ಬೆರಳುಗಳ ಸಹಾಯದಿಂದ ಮಸಾಜ್ ಮಾಡುವುದರಿಂದ ನೋವು ಕಡಿಮೆಯಾಗುತ್ತದೆ.
ನಮ್ಮ ದೇಹದಲ್ಲಿ ಆಗುವ ಬದಲಾವಣೆಗಳು ನಮಗೆ ತಿಳಿಯುತ್ತವೆ ಆದರೆ ನಮ್ಮ ನಿರ್ಲಕ್ಷದಿಂದ ಅಪಾಯದ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸಾಮಾನ್ಯವಾಗಿ ಕೈ ಸೆಳೆತ ಕಾಲು ಸೆಳೆತ ಕಾಣಿಸಿಕೊಳ್ಳುವುದು ಸಹಜ ಆದರೆ ಕೆಲಸ ಮಾಡಿ ಸುಸ್ತಾದಾಗ ಅಥವಾ ನರಗಳಲ್ಲಿ ರಕ್ತ ಪರಿಚಲನೆಗೆ ಅಡ್ಡಿ ಉಂಟಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಪದೇ ಪದೇ ಕಾಣಿಸಿಕೊಳ್ಳುವ ಕೈಕಾಲು ಸೆಳೆತದಿಂದ ಅಪಾಯ ಇನ್ನಷ್ಟು ಹೆಚ್ಚಾಗಬಹುದು.
ಪೊಟ್ಯಾಶಿಯಂ ಅಂಶದ ಕೊರತೆ ಉಂಟಾದರೆ ಆಗಾಗ ಕಾಲುಗಳ ಸೆಳೆತ ಕಂಡು ಬರಬಹುದು ಕಾಲುಗಳ ಸೆಳೆತಕ್ಕೆ ಪರಿಹಾರ ಬೇಕು ಅಂದ್ರೆ ಹೆಚ್ಚಿನದಾಗಿ ಪೊಟ್ಯಾಶಿಯಂ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಉದಾಹರಣೆಗೆ ಬಾಳೆ ಹಣ್ಣು, ಸಿಹಿಗೆಣಸು, ಕಲ್ಲಂಗಡಿ, ಎಳನೀರು ಬೀನ್, ಟೊಮೆಟೊ ಆಲೂಗಡ್ಡೆ.
ಇದನ್ನೂ ಓದಿ: Krishi Mela Bengalore- ನಾಳೆಯಿಂದ ಬೆಂಗಳೂರು ಕೃಷಿ ಮೇಳ! ಈ ಬಾರಿಯ ಮೇಳದ ವಿಶೇಷತೆಗಳೇನು?
ಕಾಲಿನ ಭಾಗದಲ್ಲಿ ರಕ್ತ ಸಂಚಾರವನ್ನು ಹೆಚ್ಚುಮಾಡಿ ಕಾಲಿನ ಸೆಳೆತವನ್ನು ಕಡಿಮೆ ಮಾಡಲು ಮ್ಯಾಗ್ನಿಷಿಯಂ ಸಲ್ಫೇಟ್ ಸಹಾಯಕ ಎನ್ನಲಾಗುತ್ತದೆ. ಶುಂಠಿಯಲ್ಲಿ ಈ ಅಂಶ ಹೆಚ್ಚಾಗಿದ್ದು ಕಾಲು ಸೆಳೆತದಿಂದ ಪರಿಹಾರ ನೀಡುತ್ತದೆ.
ನೀವು ಪ್ರತಿ ದಿನ ಶುಂಠಿ ಚಹಾ ಕುಡಿಯುವ ಮೂಲಕ ಶುಂಠಿಯನ್ನು ನೀವು ನಿಮ್ಮ ಆಹಾರದಲ್ಲಿ ಬಳಸಬಹುದು. ಒಂದು ಟೇಬಲ್ ಸ್ಪೂನ್ ತುರಿದ ಶುಂಠಿಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪವನ್ನು ಹಾಕಿ ಮಿಶ್ರಣ ಮಾಡಿ ದಿನಕ್ಕೆ ಒಮ್ಮೆ ಸೇವನೆ ಮಾಡಿದರೆ ಕಾಲು ಸೆಳೆತದ ನೋವನ್ನು ತಗ್ಗಿಸಬಹುದು.
ಐಸ್ ಕ್ಯೂಬ್ ಅನ್ನು ತೆಗೆದುಕೊಂಡು ಒಂದು ಕಾಟನ್ ಬಟ್ಟೆಯಲ್ಲಿ ಈ ಐಸ್ ಕ್ಯೂಬ್ ಅನ್ನು ಸುತ್ತಿಕೊಂಡು ಕಾಲು ಸೆಳೆತ ಉಂಟಾಗಿರುವ ಜಾಗಕ್ಕೆ ಮಸಾಜ್ ಮಾಡುವುದರಿಂದ ಕಾಲು ಸೆಳೆತದ ನೋವನ್ನು ಮತ್ತು ಕಾಲು ಊತವನ್ನು ಸಹ ಕಡಿಮೆ ಮಾಡಬಹುದು.
ಇದನ್ನೂ ಓದಿ: Rice MSP- ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ! ಬೆಲೆ ಎಷ್ಟು ನಿಗದಿ ಮಾಡಲಾಗಿದೆ?