ಗ್ರಾಮೀಣ ಭಂಡಾರಣ್ ಯೋಜನೆಯ ಅಡಿಯಲ್ಲಿ ರೈತ ಮಿತ್ರರಿಗೆ ಸಿಹಿ ಸುದ್ದಿ, ಗ್ರಾಮೀಣ ಪ್ರದೇಶಗಳಲ್ಲಿ(Godown Subsidy) ಗೋಡೌನ್ ನಿರ್ಮಾಣ ಮಾಡಲು ಶೇ 33% ಸಹಾಯಧನವನ್ನು ನೀಡಲಾಗಿದ್ದು, ಅರ್ಹ ಫಲಾನುಭವಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ತಮ್ಮ ಉತ್ಪಾದಿಸಿದ ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿ(Godown Subsidy Scheme) ಸಂಗ್ರಹಿಸಿಕೊಳ್ಳಲು ಗೋಡೌನ್ ನಿರ್ಮಾಣ ಮಾಡುವುದು ಅತ್ಯಂತ ಮುಖ್ಯವಾಗಿದ್ದು, ಬೆಳೆಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದೆ ಹೋದರೆ ಅವು ಹಾಳಾಗುವ ಸಾಧ್ಯತೆ ಹೆಚ್ಚಿನದಾಗಿರುತ್ತದೆ. ಆದ್ದರಿಂದ ರೈತರ ಹಿತಾದೃಷ್ಠಿಯಿಂದ ಬೆಳೆದ ಬೆಳೆಗಳನ್ನು ಶೇಖರಣೆ ಮಾಡಿ ಉತ್ತಮ ದರದಲ್ಲಿ ಮಾರಾಟ ಮಾಡಲು ಸಹಾಯಕಾರಿಯಾಗಿದೆ.
ಇದನ್ನೂ ಓದಿ: Scholorship Application-DXC ಟೆಕ್ನಾಲಜಿಯ ವತಿಯಿಂದ ₹50,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
ಪ್ರಸ್ತುತ ಲೇಖನದಲ್ಲಿ ಗ್ರಾಮೀಣ ಭಂಡಾರಣ್ ಯೋಜನೆ(Nabard) ಅಡಿಯಲ್ಲಿ ಸಹಾಯಧನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?ಎಷ್ಟು ಸಬ್ಸಿಡಿ ಪಡೆಯಲು ಅವಕಾಶವಿದೆ?ಗೋಡೌನ್ ನಿರ್ಮಾಣಕ್ಕೆ ಸಬ್ಸಿಡಿ ದರಗಳ ವಿವರ ಸೇರಿದಂತೆ ಅರ್ಜಿ ಯನ್ನು ಸಲ್ಲಿಸುವುದರ ಕುರಿತು ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.
PurPose Of This Scheme-ಈ ಯೋಜನೆಯ ಪ್ರಮುಖ ಉದ್ದೇಶಗಳು:
ಗ್ರಾಮೀಣ ಪ್ರದೇಶದಲ್ಲಿ ಭದ್ರವಾದ ಸಂಗ್ರಹಣಾ ವ್ಯವಸ್ಥೆ ಕಲ್ಪಿಸಲು ಸಹಾಯವಾಗುತ್ತದೆ.
ರೈತರ ಬೆಳೆಗಳ ಬೆಳೆಗೆ ಉಂಟಾಗುವ ನಷ್ಟವನ್ನು ತಡೆಯುವ ಉದ್ದೇಶದಿಂದ.
ಮಾರುಕಟ್ಟೆ ಬೆಲೆ ಏರಿಳಿತಗಳಿಂದ ರೈತರಿಗೆ ರಕ್ಷಣೆ ನೀಡುವುದು.
ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು.
ರೈತರಿಗೆ ಹೆಚ್ಚಿನ ಆದಾಯ ಪಡೆಯಲು ಸಹಕಾರಿ.
ಇದನ್ನೂ ಓದಿ: Karmika Card Benefits-ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯಡಿ ಪ್ರಯೋಜನ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ!
Godown Subsidy Amount-ಈ ಯೋಜನೆಯಡಿ ಎಷ್ಟು ಸಬ್ಸಿಡಿಯನ್ನು ಪಡೆಯಬಹುದು?
ಗ್ರಾಮೀಣ ಭಂಡಾರಣ್ ಯೋಜನೆ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಆಸಕ್ತ ಇರುವ ಫಲಾನುಭವಿಗಳು ವರ್ಗವನ್ನು ಅವಲಂಬಿಸಿ ಒಟ್ಟು ಯೋಜನೆಯ ವೆಚ್ಚಕ್ಕೆ ಅನುಗುಣವಾಗಿ 15% ರಿಂದ 33.33% ವರೆಗೆ ಸಹಾಯಧನವನ್ನು ಪಡೆಯುವ ಅವಕಾಶವಿರುತ್ತದೆ.
Subsidy Yojana Details-ಗೋಡೌನ್ ನಿರ್ಮಾಣಕ್ಕೆ ಸಹಾಯಧನ ವಿವರ:
ಎಸ್‌ಸಿ/ಎಸ್‌ಟಿ ಉದ್ಯಮಿಗಳು ಮತ್ತು ಸಹಕಾರಿ ಸಂಸ್ಥೆಗಳು: ಬಂಡವಾಳ ವೆಚ್ಚದ 33.33%, ₹3 ಕೋಟಿಗಳವರೆಗೆ
ರೈತರು, ಕೃಷಿ ಪದವೀಧರರು ಮತ್ತು ಸಹಕಾರಿ ಸಂಸ್ಥೆಗಳು: ಬಂಡವಾಳ ವೆಚ್ಚದ 25%, ₹2.25 ಕೋಟಿಗಳವರೆಗೆ
ವ್ಯಕ್ತಿಗಳು, ಕಂಪನಿಗಳು ಮತ್ತು ನಿಗಮಗಳು: ಬಂಡವಾಳ ವೆಚ್ಚದ 15%, ₹1.35 ಕೋಟಿಗಳವರೆಗೆ
ಇದನ್ನೂ ಓದಿ: Cotton MSP-ಹತ್ತಿ ಬೆಳೆಗಾರರಿಗೆ ಸಿಹಿ ಸುದ್ದಿ! ಪ್ರತಿ ಕ್ವಿಂಟಾಲ್‌ಗೆ ₹8,110/- ರಂತೆ ಹತ್ತಿ ಖರೀದಿಗೆ ನೋಂದಣಿ ಆರಂಭ!
Who Can Apply-ಈ ಯೋಜನೆ ಅಡಿಯಲ್ಲಿ ಸಹಾಯಧನ ಪಡೆಯಲು ಯಾರೆಲ್ಲ ಅರ್ಹರು?
ರೈತರು ಮತ್ತು ರೈತ ಗುಂಪುಗಳು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (APMC)
ವ್ಯಕ್ತಿಗಳು ಮತ್ತು ಪಾಲುದಾರಿಕೆ ಸಂಸ್ಥೆಗಳು
ಸರ್ಕಾರೇತರ ಸಂಸ್ಥೆಗಳು (NGO)
ಸ್ವಸಹಾಯ ಗುಂಪುಗಳು (SHG Groups)
ಸಹಕಾರಿ ಸಂಘಗಳು
ಕೃಷಿ ಸಂಸ್ಕರಣಾ ನಿಗಮಗಳು
How To Apply For This Scheme-ಅರ್ಜಿಯನ್ನು ಹೇಗೆ ಸಲ್ಲಿಸುವುದು?
ಗೋದಾಮು ನಿರ್ಮಿಸಲು ಯೋಜಿಸಿರುವ ಫಲಾನುಭವಿಗಳು, ಈ ಯೋಜನೆಯ ಸೌಲಭ್ಯ ಪಡೆಯಲು ತಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ನಬಾರ್ಡ್ ಸಂಸ್ಥೆಯ ಅಧಿಕಾರಿಯನ್ನು ನೇರವಾಗಿ ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.
ಇದನ್ನೂ ಓದಿ: U-Go Scholarship-ಯು-ಗೋ ವಿದ್ಯಾರ್ಥಿವೇತನ ಅಡಿಯಲ್ಲಿ ₹60,000 ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಇದನ್ನೂ ಓದಿ: Degree Scholarship 2025-ಪದವಿ ವಿದ್ಯಾಭ್ಯಾಸಕ್ಕೆ 5.5 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ! ಇನ್ನೂ 2 ದಿನ ಬಾಕಿ!
For More Information-ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಳಗೆ ತಿಳಿಸಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ:
Rural Godown Scheme-ಗ್ರಾಮೀಣ ಭಂಡಾರಣ್ ಯೋಜನೆಯ ಅಧಿಕೃತ ವೆಬ್‌ಸೈಟ್-Click Here
Rural Godown Scheme Guidelines-ಗ್ರಾಮೀಣ ಗೋಡೌನ್ ಯೋಜನೆಯ ಮಾರ್ಗಸೂಚಿ- Download Now
NABARD-ನಬಾರ್ಡ್ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಪೋರ್ಟಲ್-Read More
Required Documents-ಅವಶ್ಯಕ ದಾಖಲಾತಿಗಳಾವುವು?
- ಆಧಾರ್ ಕಾರ್ಡ ಪ್ರತಿ
- ಗೋದಾಮಿನ ಗಾತ್ರ ಮತ್ತು ನಿರ್ಮಾಣ ವೆಚ್ಚವನ್ನು ವಿವರಿಸುವ ಯೋಜನಾ ಪ್ರಸ್ತಾವನೆ
- ಗೋದಾಮು ನಿರ್ಮಾಣಕ್ಕಾಗಿ ಭೂಮಿಯ ಮಾಲೀಕತ್ವದ ದಾಖಲೆಗಳು
- ಬ್ಯಾಂಕಿನ ಸಾಲ ಅನುಮೋದನೆ ದಾಖಲೆಗಳು
- ಸಹಕಾರಿ ಸಂಸ್ಥೆಗಳ ನೋಂದಣಿ ವಿವರಗಳು
ಇದನ್ನೂ ಓದಿ: Labour Marriage Subsidy-ಕಾರ್ಮಿಕ ಇಲಾಖೆಯಡಿ ಮದುವೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!
- ಸಬ್ಸಿಡಿ ಕ್ಲೈಮ್‌ಗಳಿಗೆ ಅನ್ವಯವಾಗಿದ್ದರೆ ಅಫಿಡವಿಟ್
- ಪೋಟೋ
- ಬ್ಯಾಂಕ್ ಪಾಸ್ ಬುಕ್